ಆವೃತ್ತಿಗಳು
Kannada

ಉದ್ಯಮ ಅಂದ್ರೆ ಲಾಭವಲ್ಲ...ಉತ್ಪನ್ನ

ಟೀಮ್​​ ವೈ.ಎಸ್​​.ಕನ್ನಡ

27th Nov 2015
Add to
Shares
11
Comments
Share This
Add to
Shares
11
Comments
Share

"ನಾನು ಜನರ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗಲೆಲ್ಲ, ಆತ್ಮವನ್ನು ಕಾಣುತ್ತೇನೆ. ನಿನ್ನ ಕಣ್ಣುಗಳಲ್ಲಿ ನೋಡಿದಾಗ ತಳ ಕಾಣಿಸುವುದಿಲ್ಲ, ಖಾಲಿ ಕುಳಿ, ಸತ್ತ ವಲಯವೇ ಕಣ್ಣಿಗೆ ಬೀಳುತ್ತೆ''. ಈ ಮಾತುಗಳನ್ನು ಯಾರು ಹೇಳಿದ್ದು ಅನ್ನೋದನ್ನು ಊಹಿಸಬಲ್ಲಿರಾ? ನಿಮ್ಮ ಊಹೆ ಕರೆಕ್ಟಾಗೇ ಇರುತ್ತೆ. ಅವರೇ ಜಾನ್ ಸ್ಕಲ್ಲಿ ಅವರ ಪತ್ನಿ, ಆ್ಯಪಲ್ ಸಂಸ್ಥೆಯ ಸಿಇಓ. ಅವರನ್ನು ಖುದ್ದಾಗಿ ಸ್ಟೀವ್ ಜಾಬ್ಸ್ ಅವರೇ ವೈಭವದಿಂದ ಕರೆತಂದಿದ್ರು. ಆ್ಯಪಲ್‍ನಲ್ಲಿ ಸ್ಟೀವ್ ಜಾಬ್ಸ್ ಅವರ ಉಪಸ್ಥಿತಿ ಸಂಸ್ಥೆಯ ಬೆಳವಣಿಗೆಗೆ ಹಾನಿಕರ ಎಂದು ಅಭಿಪ್ರಾಯಪಟ್ಟಿದ್ದ ಸ್ಕಲ್ಲಿ, ನಿರ್ದೇಶಕರ ಮಂಡಳಿಗೂ ಇದನ್ನು ಮನವರಿಕೆ ಮಾಡಿದ್ರು. ಪರಿಣಾಮ ಸಂಸ್ಥೆಯಿಂದ ನಿರ್ಗಮಿಸುವಂತೆ ಸ್ಟೀವ್ ಜಾಬ್ಸ್ ಅವರಿಗೆ ಸೂಚಿಸಲಾಯ್ತು.

ಈ ನಿರ್ಧಾರ ಸ್ಕಲ್ಲಿ ಹಾಗೂ ಜಾಬ್ಸ್ ಇಬ್ಬರ ಮನಸ್ಸನ್ನೂ ಘಾಸಿಗೊಳಿಸಿತ್ತು. ಸಭೆಯ ಬಳಿಕ ಇಬ್ಬರೂ ಕಣ್ಣೀರಿಟ್ಟಿದ್ದು ಸುಳ್ಳಲ್ಲ. ಗೆಲುವು ಅವರದ್ದೇ ಆಗಿದ್ರೂ ರಾಜೀನಾಮೆ ಕೊಡಲು ಸ್ಕಲ್ಲಿ ನಿರ್ಧರಿಸಿದ್ರು. ಜಾಬ್ಸ್ ತಮ್ಮ ಪತಿಗೆ ದ್ರೋಹ ಬಗೆದಿದ್ದಾರೆ, ಅವರನ್ನು ಸ್ಥಾನಪಲ್ಲಟ ಮಾಡಲು ಯತ್ನಿಸಿದ್ದಾರೆಂಭ ಭಾವನೆ ಸ್ಕಲ್ಲಿ ಅವರ ಪತ್ನಿಯಲ್ಲಿತ್ತು. ಜಾಬ್ಸ್ ಅವರನ್ನು ಎದುರಿಸಲು ಸಜ್ಜಾದ ಆಕೆ, ಪಾರ್ಕಿಂಗ್ ಲಾಟ್‍ನಲ್ಲಿ ಅವರನ್ನು ಭೇಟಿ ಮಾಡಿದ್ರು. ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಜಾಬ್ಸ್ ಮಾತನಾಡಲಿಲ್ಲ. ಆಗ ನೇರವಾಗಿ ನೋಡುವಂತೆ ಸೂಚಿಸಿದ ಆಕೆ ನಾನು ಮಾತನಾಡುವಾಗ ನನ್ನ ಕಣ್ಣುಗಳನ್ನು ನೋಡಿ ಎಂದಿದ್ಲು. ಮೇಲೆ ಬರೆದಿರುವ ಮಾತಿನ ಬಾಣವನ್ನು ಜಾಬ್ಸ್​​​ರತ್ತ ಎಸೆದಿದ್ಲು.

image


ಯಶಸ್ಸಿನ ಉತ್ತುಂಗ ತಲುಪಿದ್ದ ಸ್ಟೀವ್ ಜಾಬ್ಸ್, ನಿರ್ದಯಿ, ಹೃದಯಹೀನ, ಮರ್ಯಾದೆ ಇಲ್ಲದವ, ಪ್ರೀತಿ, ಅನುಕಂಪವಿಲ್ಲದ ವ್ಯಕ್ತಿ ಎಂದು ಯಾರು ಬೇಕಾದ್ರೂ ಹೇಳಬಹುದು. ಇದು ಸತ್ಯವೂ ಆಗಿರಬಹುದು. ಆದ್ರೆ ಕೆಲಸದ ವಿಚಾರಕ್ಕೆ ಬಂದ್ರೆ ಅವರೊಬ್ಬ ಅತ್ಯಂತ ಕಠಿಣ ವ್ಯಕ್ತಿ. ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಉತ್ಪನ್ನ ಪರಿಶೀಲನೆ ವೇಳೆ ಅವರು ಮುದ್ರಿಸಬಹುದಾದ ಪದಗಳನ್ನು ಬಳಸಿರುವುದು ತುಂಬಾ ಅಪರೂಪ. ಸಹೋದ್ಯೋಗಿಗಳ ಪಾಲಿಗೆ ಅವರು ಹಿತವೆನಿಸುವ ವ್ಯಕ್ತಿಯಾಗಿರ್ಲಿಲ್ಲ. ಅವರು ನಿಜವಾಗಿ ಪ್ರೀತಿಸಿದ ಏಕೈಕ ವ್ಯಕ್ತಿ ಅಂದ್ರೆ ಟೀನಾ ರೆಡೆಸ್, ಅದನ್ನವರು ಒಪ್ಪಿಕೊಳ್ತಾರೆ. ಆದ್ರೆ ಆಕೆ ಜಾಬ್ಸ್‍ರನ್ನು ಮದುವೆಯಾಗಲು ಒಪ್ಪಿರಲಿಲ್ಲ. ಸ್ಟೀವ್ ಜಾಬ್ಸ್‍ಗೆ ಒಳ್ಳೆಯ ಹೆಂಡತಿಯಾಗಲಾರೆ ಎಂದಿದ್ದರು ಟೀನಾ. "ನಮ್ಮ ವೈಯಕ್ತಿಕ ಮಾತುಕತೆ ಸಂದರ್ಭದಲ್ಲಿ ಜಾಬ್ಸ್ ಅವರ ಕ್ರೌರ್ಯಕ್ಕೆ ಬದ್ಧವಾಗಿರಲು ಸಾಧ್ಯವಿಲ್ಲ, ಅವರಿಗೆ ನೋವುಂಟುಮಾಡುವುದು ನನಗಿಷ್ಟವಿಲ್ಲ, ಹಾಗಂತ ಅವರು ಬೇರೆಯವರನ್ನು ನೋಯಿಸುವ ದೃಶ್ಯಗಳನ್ನು ನಿಂತು ನೋಡಲಾರೆ. ಅದು ತುಂಬಾ ನೋವಿನ ಸಂಗತಿ'' ಅನ್ನೋದು ಟೀನಾ ಅವರ ನೇರ ನುಡಿ. ಜಾಬ್ಸ್ `ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್'ನಿಂದ ಬಳಲುತ್ತಿದ್ದಾರೆಂದು ಟೀನಾರಿಗೆ ಅನಿಸಿತ್ತು.

ಆದ್ರೆ ಸ್ಟೀವ್ ಜಾಬ್ಸ್ ಒಬ್ಬ ಜೀನಿಯಸ್, ಜೀನಿಯಸ್‍ಗಳ್ಯಾರು ಸಾಮಾನ್ಯ ಪುರುಷ, ಮಹಿಳೆಯರ ಜೀವನ ಶೈಲಿಯನ್ನು ಅನುಸರಿಸುವುದಿಲ್ಲ. ಸ್ಟೀವ್ ಜಾಬ್ಸ್ ಬರಿಗಾಲಲ್ಲಿ ನಡೆದಿದ್ರು, ತಮ್ಮ ಕೊನೆ ದಿನಗಳವರೆಗೂ ಕಠಿಣ ಡಯಟ್ ಮಾಡ್ತಾ ಇದ್ರು. ಅವರು ಬರೀ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸ್ತಾ ಇದ್ರು. ವಾರಗಟ್ಟಲೆ ಉಪವಾಸ ಮಾಡಿದ್ದೂ ಇದೆ. ಯಾವಾಗಲೂ ವಿಕಲಚೇತನರಿಗೆ ಮೀಸಲಾಗಿದ್ದ ಜಾಗದಲ್ಲಿ ತಮ್ಮ ಕಾರನ್ನು ನಿಲ್ಲಿಸ್ತಾ ಇದ್ರು. ಒಮ್ಮೆ ಸ್ಟೀವ್ ಜಾಬ್ಸ್‍ರನ್ನು ಡೇ ಶಿಫ್ಟ್‍ನಿಂದ ನೈಟ್ ಶಿಫ್ಟ್‍ಗೆ ಹಾಕಲಾಗಿತ್ತು, ಯಾಕೆ ಗೊತ್ತಾ? ಜಾಬ್ಸ್ ಮೈಯಿಂದ ಗಬ್ಬು ವಾಸನೆ ಬರ್ತಾ ಇತ್ತು ಅನ್ನೋ ಕಾರಣಕ್ಕೆ. ಸ್ಟೀವ್ ಜಾಬ್ಸ್ ಪ್ರತಿದಿನ ಸ್ನಾನ ಮಾಡ್ತಾ ಇರ್ಲಿಲ್ಲ, ಡಿಯೋಡ್ರಂಟ್‍ಗಳನ್ನೂ ಬಳಸುತ್ತಿರಲಿಲ್ಲ. ಬೀದಿಯುದ್ದಕ್ಕೂ ನಡೆಯುತ್ತಿದ್ದ ಅವರು, ಶಾಂತಿ ಮತ್ತು ಶುದ್ಧತೆಯನ್ನು ಅರಸುತ್ತಿದ್ರು. ದೇವರನ್ನು ಪೂಜಿಸುವುದರಲ್ಲಿ ಅವರಿಗೆ ನಂಬಿಕೆ ಇರಲಿಲ್ಲ, ಒಮ್ಮೆಯೂ ಜಾಬ್ಸ್ ಚರ್ಚ್‍ಗೆ ಹೋಗಿಲ್ಲ ಅನೋದನ್ನು ಅವರ ಜೀವನ ಚರಿತ್ರೆಯಲ್ಲಿ ವಾಲ್ಟರ್ ಇಸಾಕ್ಸನ್ ಉಲ್ಲೇಖಿಸಿದ್ದಾರೆ. ಮರಣಶಯ್ಯೆಯಲ್ಲಿದ್ದಾಗ ಇಸಾಕ್ಸನ್ ಅವರನ್ನು ಹತ್ತಿರ ಕರೆದ ಜಾಬ್ಸ್, ದೇವರ ಮೇಲಿನ ನಂಬಿಕೆ ವಿಚಾರದಲ್ಲಿ ತಮ್ಮದು 50-50 ಮನಸ್ಥಿತಿ ಎಂದಿದ್ರು.

ತಾವು ಹುಟ್ಟಿದ್ದು ವಿಶ್ವವನ್ನೇ ಬದಲಾಯಿಸಲು, ಅದನ್ನು ಮಾಡಿಯೇ ತೀರುತ್ತೇನೆ ಎಂಬ ಹಠ ಅವರಲ್ಲಿತ್ತು. ಬಿಲ್ ಗೇಟ್ಸ್‍ರಂತೆ ಲಾಭಕ್ಕಾಗಿ ಹಾತೊರೆಯದ ಏಕೈಕ ಸಿಇಓ ಅಂದ್ರೆ ಸ್ಟೀವ್ ಜಾಬ್ಸ್. ಬಿಲ್ ಗೇಟ್ಸ್ ಸಂಪತ್ತು ಸಂಗ್ರಹಿಸಲು ಇಡೀ ಜೀವನವನ್ನೇ ವೇಸ್ಟ್ ಮಾಡಿದ್ದಾರೆ ಅನ್ನೋದು ಜಾಬ್ಸ್ ಅವರ ಭಾವನೆ. ಹಾಗಂತ ಸ್ಟೀವ್ ಜಾಬ್ಸ್ ಪಾಪರ್ ಏನಲ್ಲ, ಅವರು ಕೂಡ ಸಿರಿವಂತರೇ. ಆದ್ರೆ ಉದ್ಯಮದೆಡೆಗಿನ ಅವರ ತತ್ವ ಮಾತ್ರ ಕ್ರಾಂತಿಕಾರಿಯಾಗಿತ್ತು. ಅವರು ತಯಾರಿಸಿದ ಉತ್ಪನ್ನ ಇಡೀ ಜಗತ್ತನ್ನೇ ಬದಲಾಯಿಸಿತ್ತು. ಬಾಬ್ ಡಿಲಾನ್ ಅವರೇ ಸ್ಟೀವ್ ಜಾಬ್ಸ್‍ಗೆ ಪ್ರೇರಣೆ. ``ನೀವು ಹುಟ್ಟಿನಿಂದ ಬ್ಯುಸಿಯಾಗಿಲ್ಲದಿದ್ರೆ, ಸಾವಿನಲ್ಲಿ ಬ್ಯುಸಿಯಾಗುತ್ತೀರಾ'' ಅನ್ನೋ ಮಾತುಗಳಲ್ಲಿ ನಂಬಿಕೆ ಇಟ್ಟಿದ್ರು. ತಮ್ಮದೇ ಬ್ರ್ಯಾಂಡ್‍ಗಳನ್ನು ಕೊಂದು ಹಾಕುವಂತಹ ಉತ್ಪನ್ನಗಳನ್ನು ತಯಾರಿಸಬೇಕು ಅನ್ನೋದೇ ಅವರ ಗುರಿಯಾಗಿತ್ತು. ``ನಿಮ್ಮನ್ನು ನೀವು ಭಕ್ಷಿಸಲು ಯಾವತ್ತೂ ಹೆದರಬೇಡಿ'' ಅನ್ನೋದೇ ಜಾಬ್ಸ್ ಅವರ ಉದ್ಯಮದ ನಿಯಮ.

ಐಪಾಡ್ ಮೂಲಕ ಸಂಗೀತ ಕ್ಷೇತ್ರದಲ್ಲೇ ಸಂಚಲನ ಎಬ್ಬಿಸಿದ ಜಾಬ್ಸ್, ಬಳಿಕ ಐಫೋನ್ ಮತ್ತು ಐಪಾಡ್‍ಗಳನ್ನು ಸೃಷ್ಟಿಸಿದ್ರು. ಅದು ಇಂಟರ್ನೆಟ್ ಇಂಡಸ್ಟ್ರಿಯನ್ನೇ ಬದಲಾಯಿಸಿತ್ತು. 1997ರಲ್ಲಿ ಸ್ಟೀವ್ ಜಾಬ್ಸ್ ಆ್ಯಪಲ್ ಕಂಪನಿಯ ಸಾರಥ್ಯ ವಹಿಸಿಕೊಂಡಾಗ ಅದು ದಿವಾಳಿಯ ಸನಿಹದಲ್ಲಿತ್ತು. ಆದ್ರೆ 2010ರ ವೇಳೆಗೆ ಆದಾಯ ಗಳಿಕೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಜೊತೆ ಪೈಪೋಟಿಗಿಳಿದಿತ್ತು. ಆದ್ರೀಗ ಆ್ಯಪಲ್, ಇತಿಹಾಸದಲ್ಲೇ ಅತ್ಯಂತ ಮೌಲ್ಯಯುತವಾದ ಬ್ರ್ಯಾಂಡ್. ಇನ್ನೊಂದು ಶತಮಾನ ಕಳೆದ್ರೆ ಎಡಿಸನ್, ಫೋರ್ಡ್‍ರಂತೆ ಸ್ಟೀವ್ ಜಾಬ್ಸ್ ಬಗ್ಗೆಯೂ ಜಗತ್ತಿನಲ್ಲಿ ಚರ್ಚೆಯಾಗುತ್ತೆ ಎನ್ನುತ್ತಾರೆ ಇಸಾಕ್ಸನ್. ಹೊಸ ಉತ್ಪನ್ನ ಸೃಷ್ಟಿಸುವ ಬಗ್ಗೆ ಅವರಿಗಿದ್ದ ಪ್ರೀತಿ, ಎಲ್ಲರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಯೋಚಿಸುವ ಚಾಣಾಕ್ಷತೆ, ಸದಾಕಾಲ ಸಂಶೋಧನೆಯ ಮಂತ್ರವೇ ಅವರ ಯಶಸ್ಸಿನ ಗುಟ್ಟು.

ಇಡೀ ಇಂಡಸ್ಟ್ರಿ ಓಪನ್ ಸಿಸ್ಟಮ್ ಬಗ್ಗೆ ಮಾತನಾಡ್ತಿತ್ತು. ಮೈಕ್ರೋಸಾಫ್ಟ್ ಸಂಸ್ಥೆ ವಿಂಡೋಸ್ ಮೂಲಕ ಲಾಭ ಬಾಚಿಕೊಳ್ತಾ ಇತ್ತು. ಆದ್ರೆ ಸ್ಟೀವ್ ಜಾಬ್ಸ್ ಮಾತ್ರ ತುದಿಯಿಂದ ತುದಿಗೆ ಹಾರ್ಡ್‍ವೇರ್‍ನಿಂದ ಸಾಫ್ಟ್‍ವೇರ್ ಕಂಟೆಂಟ್‍ಗೆ ಏಕೀಕರಣಗೊಳಿಸುವುದರಲ್ಲಿ ನಂಬಿಕೆ ಇಟ್ಟಿದ್ರು. ಜಾಬ್ಸ್ ಅವರಿಗೆ ಉತ್ಪನ್ನಗಳ ತಯಾರಿಕೆ ವಿಜ್ಞಾನ ಮತ್ತು ಕಲೆಯಿದ್ದಂತೆ, ಕೊನೆಯಲ್ಲಿ ಒಂದು ಉದ್ಯಮ ಅನ್ನೋದು ಕೂಡ ಸತ್ಯ. ಐಫೋನ್ ಮತ್ತು ಐಪಾಡ್‍ಗಳು ಸರಳ ತಂತ್ರಜ್ಞಾನ ಹೊಂದಿದ್ದು, ಬಳಕೆದಾರ ಸ್ನೇಹಿ ಉತ್ಪನ್ನಗಳಾಗಿವೆ. ಸೌಂದರ್ಯ ಅವರ ರಕ್ತದಲ್ಲೇ ಇತ್ತು, ಆ ಭವ್ಯತೆಯನ್ನು ಸಾಧಿಸಲು ವಿಫಲರಾದ ತಮ್ಮ ತಂಡವನ್ನು ಉತ್ತೇಜಿಸ್ತಾ ಇದ್ರು. ಹಾಗಾಗಿಯೇ ಅವರನ್ನು ನಿರ್ದಯಿ, ಹೃದಯಹೀನ ಅಂತೆಲ್ಲಾ ಕರೆಯುತ್ತಾರೆ.

image


ಆಧುನಿಕ ಉದ್ಯಮದಲ್ಲಿ ಸೇಲ್ಸ್ ಮಾಡುವವರೇ ರಾಜ-ರಾಣಿ. ಅವರೇ ಇಂಡಸ್ಟ್ರಿಯನ್ನು ಆಳುತ್ತಾರೆ. ಅಂಥವರನ್ನು ಜಾಬ್ಸ್ ದ್ವೇಷಿಸ್ತಾ ಇದ್ರು. ಸೇಲ್ಸ್ ಮಾಡುವವರೇ ಕಂಪನಿ ಮುನ್ನಡೆಸಿದ್ರೆ ಉತ್ಪಾದಕರಿಗೆ ಬೆಲೆ ಇರುವುದಿಲ್ಲ ಎನ್ನುತ್ತಿದ್ರು. ಮೈಕ್ರೋಸಾಫ್ಟ್, ಐಬಿಎಂನಂತಹ ಕಂಪನಿಗಳಿಗೆ ಅವರೇ ಕಾರಣ ಅನ್ನೋದು ಜಾಬ್ಸ್ ಅಭಿಪ್ರಾಯ. ಯಥಾಸ್ಥಿತಿಯ ವಿರುದ್ಧ ಸ್ಟೀವ್ ಜಾಬ್ಸ್ ಹೋರಾಟ ಮಾಡಿದ್ದಾರೆ, ಗ್ರಾಹಕರಿಗೆ ಬೇಕಾದುದನ್ನೇ ಒದಗಿಸಬೇಕೆಂಬ ಇಂಡಸ್ಟ್ರಿಯ ಸಾಮಾನ್ಯ ನಿಯಮವನ್ನು ವಿರೋಧಿಸಿದ್ದಾರೆ. ನೀವು ಹೇಳುವವರೆಗೆ ತಮಗೇನು ಬೇಕು ಎಂಬುದು ಜನರಿಗೆ ಗೊತ್ತಿರುವುದಿಲ್ಲ ಅನ್ನೋದು ಜಾಬ್ಸ್ ಅಭಿಮತ. ಅವರು ಬಿಡುಗಡೆ ಮಾಡಿದ ಪ್ರತಿಯೊಂದು ಉತ್ಪನ್ನವನ್ನೂ ಜಾದೂಗಾರನಂತೆ ಮಾರಾಟ ಮಾಡಿದ್ದಾರೆ. ಅವು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ಜಾಬ್ಸ್ ಒಬ್ಬ ಅಸಾಮಾನ್ಯ ವ್ಯಕ್ತಿ. ತಾನು ಜಗತ್ತನೇ ಬದಲಾಯಿಸಬಲ್ಲೆ ಎಂಬ ಅಸಾಮಾನ್ಯ ಆಲೋಚನೆಯುಳ್ಳವರೇ ಅದನ್ನು ಸಾಧಿಸ್ತಾರೆ. ಹಾಗಾಗಿ ಸ್ಕಲ್ಲಿ ಅವರ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಜಾಬ್ಸ್ ಬಹುತೇಕ ವ್ಯಕ್ತಿಗಳಲ್ಲಿ ಒಬ್ಬರಲ್ಲ. ಶುದ್ಧತೆ ಹಾಗೂ ಪರಿಪೂರ್ಣತೆಯನ್ನು ಅರಸುತ್ತ ಕಣ್ಣು ಮಿಟುಕಿಸದೇ ಸಹೋದ್ಯೋಗಿಗಳನ್ನು ದಿಟ್ಟಿಸಿ ನೋಡಬಲ್ಲ ಅಸಾಮಾನ್ಯ ಸ್ಟೀವ್ ಜಾಬ್ಸ್. 

ಲೇಖಕರು: ಅಶುತೋಶ್​​

ಅನುವಾದಕರು: ಭಾರತಿ ಭಟ್​​​​

Add to
Shares
11
Comments
Share This
Add to
Shares
11
Comments
Share
Report an issue
Authors

Related Tags