ಆವೃತ್ತಿಗಳು
Kannada

ಮಕ್ಕಳಿಂದ ಪ್ರೇರಣೆ ಪಡೆದ ಫೇಸ್‌ಬುಕ್ ಸಂಸ್ಥೆಯ ಎಂಡಿ ಕೃತ್ತಿಕಾ ರೆಡ್ಡಿಯವರ ಸಾಧನೆಯ ಹಾದಿ

ಟೀಮ್​​ ವೈ.ಎಸ್​​.ಕನ್ನಡ

YourStory Kannada
27th Nov 2015
4+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಭಾರತದ ಫೇಸ್ ಬುಕ್ ಸಂಸ್ಥೆಯ ಎಂ ಡಿ ಕೃತ್ತಿಕಾ ರೆಡ್ಡಿ. ಫಾರ್ಚೂನ್ ಇಂಡಿಯಾ ಮ್ಯಾಗಜಿನ್‌ನ 2011ರ ವರದಿ ಪ್ರಕಾರ 42 ವರ್ಷದ ಕೃತ್ತಿಕಾ ರೆಡ್ಡಿ ಭಾರತದ 50 ಪ್ರಭಾವಶಾಲಿ ಮಹಿಳೆಯರ ಪೈಕಿ ಒಬ್ಬರು. ಕೃತ್ತಿಕಾ ರೆಡ್ಡಿ ತಮ್ಮ ಮನಸ್ಸಿನಲ್ಲೇನಿದೆಯೋ ಅದನ್ನು ಮುಕ್ತವಾಗಿ ಹೇಳಿಕೊಳ್ಳುವಂತಹ ಸ್ವಭಾವದವರು. ಕೃತ್ತಿಕಾರಿಗೆ ಪ್ರಪಂಚ ವಿಶ್ಯುವಲೈಸೇಶನ್‌ ಅನ್ನು ಹೆಚ್ಚಾಗಿ ಅವಲಂಬಿಸುತ್ತಿದೆ ಎಂಬ ನಂಬಿಕೆ ಇದೆ. ಅದು ವೈಯಕ್ತಿಕ ಮಟ್ಟದಲ್ಲಿಯೇ ಇರಲಿ ಅಥವಾ ವೃತ್ತಿಪರವಾಗಿಯೇ ಇರಲಿ. ಇಮೇಜ್‌ಗಳು, ವೀಡಿಯೋಗಳು, ಸ್ಟಿಕ್ಕರ್‌ಗಳು, 3 ಡಿ ಚಿತ್ರಗಳು ಸಂವಹನದ ಮಾಧ್ಯಮಗಳಾಗಿ ಬದಲಾಗುತ್ತಿವೆ.

ಫೇಸ್‌ಬುಕ್‌ ಹೆಡ್‌ಕ್ವಾರ್ಟರ್ಸ್​ನಲ್ಲಿ ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಈ ವಿಷಯದ ಬಗ್ಗೆ ಯಾರೂ ಅಷ್ಟೊಂದು ಆಸಕ್ತಿ ವಹಿಸಲಿಲ್ಲ. ಪ್ರಪಂಚ ಹೇಗೆ ವಿಶ್ಯುವಲೈಸ್ ಆಗುತ್ತಿದೆ ಎಂಬುದನ್ನು ಕೃತ್ತಿಕಾ ರೆಡ್ಡಿಯವರಿಗೆ ತೋರಿಸಿಕೊಟ್ಟವರು ಅವರ ಹೆಣ್ಣುಮಕ್ಕಳು. ಫಿಲ್ಮ್ ಮೇಕಿಂಗ್ ಅನ್ನು ತಮ್ಮ ಹಿರಿಯ ಮಗಳಿಂದ ಕಲಿತವರು ಕೃತ್ತಿಕಾ. ಇಂದು ಫೇಸ್‌ಬುಕ್‌ನಲ್ಲಿ ಪ್ರತಿದಿನವೂ 4 ಬಿಲಿಯನ್ ವೀಡಿಯೋಗಳನ್ನು ವೀಕ್ಷಿಸಲಾಗುತ್ತಿದೆ ಮತ್ತು ಅದರಲ್ಲಿ ಶೇ.75ರಷ್ಟು ಮೊಬೈಲ್ ಮೂಲಕ ಅಪ್‌ಲೋಡ್ ಆದದ್ದಾಗಿದೆ.

ತಮ್ಮ ಮಕ್ಕಳು ತಮಗೆ ಪ್ರಪಂಚ ಎತ್ತ ಸಾಗುತ್ತಿದೆ ಎಂದು ತಿಳಿಸಿಕೊಟ್ಟರು. ತಾವು ಅದನ್ನು ಅಳವಡಿಸಿಕೊಳ್ಳುವಂತೆ ಮಾಡುವ ಮೂಲಕ ತಮ್ಮನ್ನು ಬ್ಯಾಂಡ್‌ ವ್ಯಾಗನ್‌ಗೆ ಪರಿಚಯಿಸಿದರು. ಮಕ್ಕಳು ತಮಗೆ ಅನೇಕ ವಿಚಾರಗಳನ್ನು ವಿವಿಧ ರೀತಿಗಳಲ್ಲಿ ತಿಳಿಸಿಕೊಡುತ್ತಲೇ ಇರುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕೃತ್ತಿಕಾ ರೆಡ್ಡಿ.

image


ಎಲ್ಲಿಯೋ ಇರುವ ತಮ್ಮವರೊಂದಿಗೆ ಸಂಪರ್ಕ ಸಾಧಿಸಲು, ಅವರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಸಂವಹನ ನಡೆಸಲು ಫೇಸ್‌ಬುಕ್‌ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಅದು ಫೇಸ್‌ಬುಕ್‌, ಇನ್‌ಸ್ಟಾ ಗ್ರಾಮ್, ಮೆಸೆಂಜರ್, ವಾಟ್ಸ್‌ ಆ್ಯಪ್ ಹೀಗೆ ಜನರು ಹಲವು ಆ್ಯಪ್‌ಗಳನ್ನು ಬಳಸುತ್ತಲೇ ಇರುತ್ತಾರೆ. ಈವರೆಗೂ ಫೇಸ್‌ಬುಕ್ 152 ಮಿಲಿಯನ್‌ಗೂ ಹೆಚ್ಚು ಜನರನ್ನು ತಲುಪಿದೆ. ಇನ್ನೂ ಬಿಲಿಯನ್‌ಗಟ್ಟಲೆ ಜನರನ್ನು ತಲುಪಬೇಕಿದೆ. ಇದಕ್ಕಾಗಿ ಕೃತ್ತಿಕಾ ಹೊಸ ವಿಚಾರಗಳನ್ನು ತಿಳಿಯಲು, ಕಲಿಯುವುದಕ್ಕಾಗಿ ತೆರೆದ ಮನಸ್ಸಿನವರಾಗಿ ಕಾಯುತ್ತಿರುತ್ತಾರೆ. ಇದರಿಂದ ಅವರಿಗೆ ಈಗಿನ ಯುವಜನತೆ ಏನನ್ನು ಬಯಸುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಚಾರದಲ್ಲಿ ಕೃತ್ತಿಕಾ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಸಿರಾಕ್ಸ್ ಯುನಿವರ್ಸಿಟಿಯಿಂದ ಕಂಪ್ಯೂಟರ್‌ ಇಂಜಿನಿಯರಿಂಗ್ ವಿಚಾರದಲ್ಲಿ ಎಂಎಸ್ ಪದವಿಯನ್ನೂ ಪಡೆದಿದ್ದಾರೆ. ಕೃತ್ತಿಕಾ ಹೇಳುವಂತೆ ಅವರ ಕಲಿಕಾ ಪ್ರಕ್ರಿಯೆ ಇದುವರೆಗೂ ನಿಂತಿಲ್ಲ, ನಿಲ್ಲುವುದೂ ಇಲ್ಲ. ‘ಪೋಷಣೆ ಎಂಬ ವಿಚಾರದಲ್ಲಿ ನನ್ನ ವಿಚಾರ ಏನಿತ್ತೋ ಅದನ್ನು ನನ್ನ ಮಕ್ಕಳೇ ಬದಲಾಯಿಸುತ್ತಿದ್ದಾರೆ. ಅದು ವೃತ್ತಿಪರವಾಗಿಯೂ, ಬಾಳಸಂಗಾತಿಗಾಗಿಯೂ ಮತ್ತು ಎಲ್ಲಾ ತರಹದ ಪಾತ್ರಗಳನ್ನು ನಿಭಾಯಿಸುವಲ್ಲಿ ನನಗೆ ಸಹಾಯ ಮಾಡಿದೆ’ ಎನ್ನುತ್ತಾರೆ ಕೃತ್ತಿಕಾ ರೆಡ್ಡಿ.

ಬೆಳೆದು ಬಂದ ಹಾದಿ

ನಾಗಪುರದಲ್ಲಿ ಜನಿಸಿದ ಕೃತ್ತಿಕಾ ಮಧ್ಯಮ ವರ್ಗದ ಕಠಿಣ ಪರಿಶ್ರಮ ನೀತಿಯ ಮೌಲ್ಯಗಳನ್ನು ಚೆನ್ನಾಗಿ ಅರಿತುಕೊಂಡು ಬೆಳೆದರು. ಅವರ ತಂದೆ ಸರ್ಕಾರಿ ಕೆಲಸದಲ್ಲಿದ್ದ ಕಾರಣ ಕೃತ್ತಿಕಾ ಅವರು ದಾಂಡೇಲಿ, ನಾಂದೇಡ್‌ನಂತಹ ಪ್ರದೇಶಗಳಲ್ಲೂ ತಮ್ಮ ವಿದ್ಯಾಭ್ಯಾಸ ನಡೆಸಿದರು. ನಾಂದೇಡ್‌ನ ಎಂಜಿಎಂ ಕಾಲೇಜ್ ಆಫ್‌ ಇಂಜನಿಯರಿಂಗ್‌ನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದ ಕೃತ್ತಿಕಾ, ನಂತರ ನಾಗಪುರಕ್ಕೆ ಹಿಂತಿರುಗಿ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಸ್ಟರ್‌ ಸಿ ಸ್ಕಿಲ್‌ ವಿಚಾರವಾಗಿ ಸಹಾಯ ಮಾಡುವ ಸಲುವಾಗಿ ಕಾನೆಟ್ಕರ್ ಟ್ಯುಟೋರಿಯಲ್‌ನಲ್ಲಿ ಕೆಲಸಕ್ಕೆ ಸೇರಿದರು.

ಸ್ಟ್ಯಾನ್‌ಪೋರ್ಡ್ ವಿವಿಯಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಚಾರವಾಗಿ ಸ್ನಾತಕೋತ್ತರ ಪದವಿ ಮತ್ತು, ಸಿರಾಕ್ಸ್ ವಿವಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ವಿಚಾರದಲ್ಲಿ ಎಂಎಸ್ ಪದವಿ ಪಡೆದ ಬಳಿಕ ಕೃತ್ತಿಕಾ ಯುಎಸ್ ಮೂಲದ ಫೋನಿಕ್ಸ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿದರು. ಇದೇ ವೇಳೆ ಫೇಸ್‌ ಬುಕ್ ಸಂಸ್ಥೆ ಕೃತ್ತಿಕಾರಿಗೆ ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ನೀಡಿತ್ತು.

ಇತರ ಮಹಿಳಾ ಉದ್ಯೋಗಿಗಳಂತೆ ಕೃತ್ತಿಕಾ ಕೂಡ ವೈಯಕ್ತಿಕ ಹಾಗೂ ವೃತ್ತಿ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಶ್ರಮಿಸಬೇಕಾಯಿತು. ಇಂದು ತಮ್ಮನ್ನು ಸದಾ ಪ್ರಶ್ನಿಸುತ್ತಿದ್ದ ಜನರಿಗೆಲ್ಲಾ ಉತ್ತರ ನೀಡುವಂತೆ ಕೃತ್ತಿಕಾ ಬೆಳೆದಿದ್ದಾರೆ. ತಮ್ಮದೇ ಆದ ಮಾದರಿಯ ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. “ಅಥವಾ” ಪದದ ದಬ್ಬಾಳಿಕೆಯನ್ನೂ, “ಮತ್ತು” ಎಂಬ ಶಬ್ದದ ಶಕ್ತಿಯನ್ನೂ ಚೆನ್ನಾಗಿ ಕಂಡುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಐಎನ್‌ಕೆ ಟಾಕ್ಸ್​​ ಎಂಬ ವೇದಿಕೆಯಲ್ಲಿ ಕೃತ್ತಿಕಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ನನ್ನ ಮಗಳು ಆರಿಯಾ ಜನಿಸಿದ ನಂತರ ಅಂದರೆ 6 ವಾರಗಳ ಮೆಟರ್ನಿಟಿ ಲೀವ್‌ಗಳು ಮುಗಿದ ನಂತರ ಕೆಲಸದ ವಿಚಾರವಾಗಿ ಪ್ರಯಾಣ ಮಾಡುವ ವೃತ್ತಿಪರ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಆದರೆ ಮಗಳನ್ನು ಒಂದು ವರ್ಷಗಳ ಕಾಲ ನೋಡಿಕೊಳ್ಳಲೇಬೇಕಾದ ಅತೀ ಮುಖ್ಯ ಜವಾಬ್ದಾರಿಯೂ ನನ್ನ ಮೇಲಿತ್ತು. ಅದೊಂದು ಯಾತನಾದಾಯಕ ಅವಧಿಯಾಗಿತ್ತು. ಒಂದು ಸಮಯದಲ್ಲಿ ಎಲ್ಲಾ ಹೆಣ್ಣುಮಕ್ಕಳು ವೃತ್ತಿ ಅಥವಾ ವೈಯಕ್ತಿಕ ಜೀವನ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಎಲ್ಲರೂ ಹೇಳುವ ಸಮಯ ಇದೇ ಇರಬಹುದು ಎಂದು ಆಗ ನನಗನ್ನಿಸಿತ್ತು. ಆಗ ಎರಡನ್ನೂ ನಾನು ಆಯ್ದುಕೊಳ್ಳಲೇಬೇಕು ಎಂಬುದರ ಅರಿವು ನನಗಾಯಿತು” ಎಂದು ಹೇಳಿಕೊಳ್ಳುತ್ತಾರೆ ಕೃತ್ತಿಕಾ. ತಾವು ಕೆಲಸದ ವಿಚಾರವಾಗಿ ಪ್ರಯಾಣ ಮಾಡುವ ಸಂದರ್ಭ ಬಂದಾಗಲೆಲ್ಲಾ ಅವರು ತಮ್ಮ ಚಿಕ್ಕ ಮಗಳನ್ನೂ ಸಹ ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಕೃತ್ತಿಕಾ ಅವರು ಉತ್ತಮ ಡೇ ಕೇರ್ ಸೆಂಟರ್‌ ಹುಡುಕಿಕೊಳ್ಳಲು ಅವರ ಸಹೋದ್ಯೋಗಿಗಳು ಸಹಾಯ ಮಾಡಿದರು. ಮೀಟಿಂಗ್‌ಗಳ ನಡುವೆ ಅನೇಕ ಬಾರಿ ತಮ್ಮ ಮಗುವನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಅವರಿಗೆದುರಾಗಿತ್ತು.

ಕೃತ್ತಿಕಾ ತಮ್ಮ ಜೀವನದಲ್ಲಿ ಫಿಲಾಸಫಿಯನ್ನೂ ಅಳವಡಿಸಿಕೊಂಡಿದ್ದಾರೆ. ಅವರ ಬಿಡುವಿಲ್ಲದ ಕೆಲಸಗಳಿಂದ ಅವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಅಸಾಧ್ಯ. ಸಮಾಜಕ್ಕೆ ಏನನ್ನಾದರೂ ವಾಪಸ್ ನೀಡುವುದೂ ಸಹ ಅಸಾಧ್ಯ. ಆದರೆ ಸ್ವಯಂ ಸೇವಕರಂತೆ ಕೆಲಸ ಮಾಡಲು ತಮ್ಮದೇ ಆದ ವಿಧಾನವನ್ನೂ ಅವರು ಕಂಡುಕೊಂಡಿದ್ದಾರೆ. ಮಕ್ಕಳು ಮತ್ತು ಕೃತ್ತಿಕಾ ಸೂಪ್‌ಕಿಚನ್‌ನಲ್ಲಿ ಸಹಾಯಕರಾಗಿರುತ್ತಾರೆ, ಇಂಗ್ಲೀಷ್ ಬೋಧಿಸುತ್ತಾರೆ ಮತ್ತು ಸಸಿಗಳನ್ನು ಪೋಷಿಸುತ್ತಾರೆ. ಇದಲ್ಲದೇ ಇನ್ನೂ ಅನೇಕ ಕಾರ್ಯಗಳಲ್ಲಿ ಸ್ವಲ್ಪ ಸಮಯ ದೊರಕಿದರೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಬದಲಾವಣೆಯಿಂದ ಬೆಳವಣಿಗೆ

ಕೃತ್ತಿಕಾರ ಪತಿ ದೇವ್ ಕೃತ್ತಿಕಾರಿಗೆ ಸಾಕಷ್ಟು ಬೆಂಬಲ ನೀಡುತ್ತಾರೆ. ಕೃತ್ತಿಕಾರ ಕಲಿಯುವಿಕೆ, ಕಲಿಯದಿರುವಿಕೆ, ಮರುಕಲಿಕೆಗಳು ಬದಲಾವಣೆಯನ್ನು ಸದಾ ಸ್ವಾಗತಿಸುತ್ತದೆ. ಬದಲಾವಣೆಯನ್ನು ಎಂದಿಗೂ ತಡೆಯಬಾರದು. ಬದಲಾವಣೆ ಸದಾ ಒಳ್ಳೆಯದು. ಸ್ಫೂರ್ತಿ ಪಡೆದುಕೊಳ್ಳಲು ಸದಾ ತೆರೆದುಕೊಂಡಿರಬೇಕು. ಕೆಲವೊಂದು ನಿರೀಕ್ಷಿತ, ಕೆಲವೊಂದು ಅನಿರೀಕ್ಷಿತ ಬದಲಾವಣೆಗಳು ಸದಾ ಕಾದಿರುತ್ತವೆ. ಕಲಿಯುವಿಕೆಯ ಈ ವಿಧಾನ ಎಲ್ಲೆಡೆಯೂ ಅಳವಡಿಸಲ್ಪಡಬೇಕು. ಕ್ಲಾಸ್‌ ರೂಂಗಳಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದನ್ನು, ಜಿಜ್ಞಾಸೆ ಮಾಡುವುದನ್ನು ಸದಾ ಪ್ರೋತ್ಸಾಹಿಸಬೇಕು ಎಂಬುದು ಕೃತ್ತಿಕಾರ ಅಭಿಪ್ರಾಯ. ಫೇಸ್‌ಬುಕ್ ಸಂಸ್ಥೆಯಲ್ಲಿ ಹ್ಯಾಕಿಂಗ್ ಸಂಸ್ಕೃತಿ ಇದೆ. ಜಾಗತಿಕ ಹ್ಯಾಕ್‌ ಸೆಷನ್‌ಗಳನ್ನೂ ಸಹ ಆಗಾಗ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಅನೇಕ ದೊಡ್ಡ ಬದಲಾವಣೆಗಳೇ ಕಂಡುಬಂದಿವೆ ಎನ್ನುತ್ತಾರೆ ಕೃತ್ತಿಕಾ.

ಲೇಖಕರು: ದೀಪ್ತಿ ನಾಯರ್​​

ಅನುವಾದಕರು: ವಿಶ್ವಾಸ್​​​

4+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags