ಆವೃತ್ತಿಗಳು
Kannada

ಬದುಕು ಬಂಗಾರವಾಯ್ತು, SHE ಯಿಂದ ಜೀವನ ಸರಾಗವಾಯ್ತು

ಪೂರ್ವಿಕಾ

AARABHI BHATTACHARYA
23rd Dec 2015
Add to
Shares
1
Comments
Share This
Add to
Shares
1
Comments
Share
image


ಹೈದ್ರಾಬಾದ್​ನಲ್ಲಿ ನೀವು ಯಾವುದೇ ಮೂಲೆಗೆ ಹೋಗಬೇಕು ಅಂದ್ರೆ ಅವ್ರೇ ಬಂದು ನಿಮ್ಮನ್ನ ಡ್ರಾಪ್ ಮಾಡ್ತಾರೆ. ಹೆಣ್ಣಿಗೆ ಹೆಣ್ಣೇ ವೈರಿ ಅನ್ನೋ ಮಾತನ್ನ ಈಗಿನ ಕಾಲದಲ್ಲಿ ಸುಳ್ಳು ಮಾಡ್ತಿದೆ ಷೀ ಕ್ಯಾಬ್ಸ್. ಹೌದು ಕೇರಳದಲ್ಲಿ ಪ್ರಾರಂಭವಾದ ಷೀ ಕ್ಯಾಬ್ ಕೇರಳಾದ ಹಾಗೂ ಅಲ್ಲಿ ಬರುವ ಪ್ರವಾಸಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಆರಂಭ ಮಾಡಲಾಗಿತ್ತು. ಕೇರಳದ ಸಾಮಾಜಿಕ ನ್ಯಾಯ ವಿಭಾಗದಿಂದ ಈ ಷೀ ಕ್ಯಾಬ್ ಅನ್ನ ಪರಿಚಯಿಸಲಾಗಿದ್ದು, ಷೀ ಕ್ಯಾಬ್​ನಿಂದ ನಿರಾಶ್ರಿತ ಹೆಣ್ಣು ಮಕ್ಕಳ ಬಾಳು ಬಂಗಾರವಾಗ್ತಿದೆ.

image


ರಕ್ಷಣೆಯಲ್ಲಿ ನಂಬರ್1 ಷೀ ಕ್ಯಾಬ್ಸ್​​

ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ನಂಬರ್ ಒನ್ ಅನ್ನೋದನ್ನ ಈಗಾಗ್ಲೇ ಪ್ರೂವ್ ಮಾಡಿದೆ ಷೀ ಕ್ಯಾಬ್ಸ್​​. ರೈನ್ ಕನ್ಸೆರ್ಟ್ ಟೆಕ್ನಾಲಜಿಸ್​​ನಿಂದ ಆಪರೇಟಿವ್ ಸಿಸ್ಟಮ್ ಹೊಂದಿರೋ ಷೀ ಕ್ಯಾಬ್​​ನಲ್ಲಿ ನೀವು ಕ್ಯಾಬ್ ಹತ್ತಿದ ತಕ್ಷಣವೇ ನೀವು ಬುಕ್ ಮಾಡಿದ ನಂಬರ್ ಗೆ ಕ್ಯಾಬ್​ನ ಕಂಪ್ಲೀಟ್ ಡೀಟೇಲ್ಸ್ ವಿತ್ ಫೋಟೋಸ್ ಮೆಸೆಜ್ ರೂಪದಲ್ಲಿ ಬರುತ್ತೆ. ಷೀ ಕ್ಯಾಬ್​ನಲ್ಲಿ ಓವರ್ ಸ್ಪೀಡ್, ಸಡನ್ ಬ್ರೇಕ್, ಸಡನ್ ಟರ್ನ್, ಇಂಜಿನ್ ಸೇಫ್ಟೀ, ಹೀಗೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ. ಪರ್ಸನಲ್ ಎಮರ್ಜೆನ್ಸಿ ಬಟನ್ ಕೂಡ ಸೆನ್ಸಾರ್ ರೂಪದಲ್ಲಿ ಅಳವಡಿಸಿದ್ದು ಕ್ಯಾಬ್​ನ ಒಳಗೆ ಅಥವಾ ಹೊರಗಡೆ ಪ್ಯಾಸೆಂಜರ್ ಗೆ ತೊಂದರೆಯಾದಲ್ಲಿ ಹತ್ತಿರವಿರೋ ಪೊಲೀಸ್ ಸ್ಟೇಷನ್ ,ಫೈಯರ್ ಸ್ಟೇಷನ್ ಹಾಗೂ ಆಸ್ಪತ್ರೆಗೆ ಹೈ ಅಲರ್ಟ್ ಮೆಸೆಜ್ ರವಾನೆ ಆಗುತ್ತದೆ. ಇಷ್ಟೇ ಅಲ್ಲದೆ ಆಯಾ ನಗರದಲ್ಲಿ ಮಹಿಳೆಯರ ಸೇಫ್ಟಿಗಾಗಿ ಸೆಕ್ಯೂರಿಟಿಗಳನ್ನು ನೇಮಕ ಮಾಡಲಾಗಿದೆ.

image


ಹೈದ್ರಾಬಾದ್​ಗೂ ಬಂತು ಷೀ ಕ್ಯಾಬ್

ಕೇರಳದಲ್ಲಿ ಫೇಮಸ್ ಆಗಿದ್ದ ಷೀ ಕ್ಯಾಬ್ ಈಗ ಹೈದ್ರಾಬಾದ್​ಗೂ ಎಂಟ್ರಿಕೊಟ್ಟಿದೆ. ಹೈದ್ರಾಬಾದ್‍ನ ಶಾಲಾ ಮಕ್ಕಳು ಹಾಗೂ ಪ್ರವಾಸಿಗಳಿಗೆ, ಮಿಡ್ ನೈಟ್ ನಲ್ಲಿ ಕೆಲಸ ಮುಗಿಸಿ ಬರೋ ಹೆಂಗಸರಿಗೆ ಷೀ ಕ್ಯಾಬ್ ಉಪಯುಕ್ತವಾಗಿದೆ. ಷೀ ಕ್ಯಾಬ್ ನ ವಿಶೇಷ ಅಂದ್ರೆ ಇಲ್ಲಿ ಕ್ಯಾಬ್ ಅನ್ನ ಡ್ರೈವ್ ಮಾಡೋದು ಹೆಣ್ಣುಮಕ್ಕಳೆ. ಇಲ್ಲಿ ಹೆಣ್ಣು ಮಕ್ಕಳೇ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡೋದಕ್ಕೆ ಮುಂದಾಗಿದ್ದಾರೆ. ಇದೇ ಕಾರಣಕ್ಕಾಗಿ ಆಯಾ ರಾಜ್ಯದಲ್ಲಿ ಷೀ ಟ್ರೈನಿಂಗ್ ಸೆಂಟರ್ ಅನ್ನ ತೆರೆದು ಹೆಣ್ಣು ಮಕ್ಕಳಿಗಾಗಿ ಟ್ರೈನಿಂಗ್ ನೀಡಲಾಗ್ತಿದೆ. ಹೈದ್ರಾಬಾದ್ ಹಾಗೂ ಕೇರಳ ಸರ್ಕಾರ ಆರಂಭಿಸಿರೋ ಷೀ ಕ್ಯಾಬ್ ಯಾವುದೇ ಪ್ರಾಫಿಟ್ ಇಲ್ಲದ ಬಿಜಿನೆಸ್ ಆಗಿದೆ. ಲೋನ್ ಮೂಲಕ ಕಾರ್ ಗಳನ್ನ ಪಡೆದು ನಂತ್ರ ಅದಕ್ಕೆ ಮಹಿಳೆಯರನ್ನ ಡ್ರೈವರ್​​ಗಳನ್ನಾಗಿ ನೇಮಕ ಮಾಡಲಾಗುತ್ತಿದೆ. ಇದ್ರಿಂದ ಬರೋ ಹಣವನ್ನ ಷೀ ಕ್ಯಾಬ್ ನಲ್ಲಿ ಕೆಲಸಕ್ಕೆ ಇರೋ ಮಕ್ಕಳಿಗೆ ನೀಡಲಾಗುತ್ತೆ. ಷೀ ಕ್ಯಾಬ್ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಇಲ್ಲಿ ಕೆಲಸ ಮಾಡೋ ಎಲ್ಲಾ ಹೆಣ್ಣು ಮಕ್ಕಳು ನಿರಾಶ್ರಿತರಾಗಿದ್ದು ಅಂತಹ ಹೆಣ್ಣು ಮಕ್ಕಳನ್ನ ಆಯ್ಕೆ ಮಾಡಿ ಅವರಿಗೆ ಡ್ರೈವಿಂಗ್ ಕಲಿಸಿ, ನಂತ್ರ ಅವ್ರನ್ನ ಷೀ ಕ್ಯಾಬ್ಸ್​​ನಲ್ಲಿ ಕೆಲಸಕ್ಕೆ ನೇಮಕ ಮಾಡಲಾಗುತ್ತತದೆ. ಇದರ ಜೊತೆಗೆ ಇಲ್ಲಿ ಬರೋ ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ ಟ್ರೈನಿಂಗ್ ನೀಡಿ ಐದು ಜನರನ್ನ ಹೊಡೆಯೋ ಸಾಮರ್ಥ್ಯ ಹೊಂದಿರುವಂತೆ ಅವ್ರನ್ನ ತಯಾರು ಮಾಡಲಾಗಿದೆ. ಹೈದ್ರಾಬಾದ್ ಹಾಗೂ ಕೇರಳ ಸಂಚಾರಿ ಪೊಲೀಸರಿ ಈ ನಿರಾಶ್ರಿತ ಹೆಣ್ಣು ಮಕ್ಕಳಿಗೆ ಟ್ರೈನಿಂಗ್ ನೀಡೋ ಕೆಲಸವನ್ನ ಮಾಡುತ್ತಿದ್ದಾರೆ.ಪ್ರೀ ಪೇಯ್ಡ್​​​ನಲ್ಲಿ ಈ ಟ್ಯಾಕ್ಸಿ, ಬಾಡಿಗೆಗೆ ಲಭ್ಯವಿದ್ದು ಕಿಲೋ ಮೀಟರ್​ಗೆ 20 ರೂಪಾಯಿಯಂತೆ ಷೀ ಕ್ಯಾಬ್ ಚಾಲನೆಯಾಗುತ್ತೆ. ಮಹಿಳೆಯರಿಗಾಗಿ ಸ್ಪೆಷಲ್ ಆಗಿ ಈ ಷೀ ಕ್ಯಾಬ್ ಅನ್ನೋ ಕಾನ್ಸೆಪ್ಟ್ ಅನ್ನ ಹುಟ್ಟುಹಾಕಿದ್ದು, ಇದರಲ್ಲಿ ಅಳವಡಿಸಿರೋ ಜಿಪಿಆರ್​​ಎಸ್ ಪೊಲೀಸ್ ಕಂಟ್ರೋಲ್ ರೂಮ್​​ ಮೂಲಕ ಕಂಟ್ರೋಲಿಂಗ್ ನಲ್ಲಿರುತ್ತೆ. ಹೆಣ್ಣು ಮಕ್ಕಳ ರಕ್ಷಣೆ,ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಜೀವನ ರೂಪಣೆಯಲ್ಲಿ ಷೀ ಕ್ಯಾಬ್ ಮುಂಚಿಣಿಯಲ್ಲಿರೋದು ಎಲ್ಲಾ ಹೆಣ್ಣು ಮಕ್ಕಳ ಖುಷಿಯ ದಾರಿಯಾಗಿದೆ .

Add to
Shares
1
Comments
Share This
Add to
Shares
1
Comments
Share
Report an issue
Authors

Related Tags