34 ನೇ ವಯಸ್ಸಿನಲ್ಲಿ, ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾದ ಫಿನ್ಲೆಂಡ್‌ನ ಸನ್ನಾ ಮರಿನ್

ಡಿಸೆಂಬರ್ 8 ರಂದು, ಫಿನ್ಲೆಂಡ್‌ನ ಸಾರಿಗೆ ಸಚಿವೆ ಸನ್ನಾ ಮರಿನ್ ಅವರನ್ನು ಸೋಶಿಯಲ್ ಡೆಮಾಕ್ರಟಿಕ್ ಪಕ್ಷವನ್ನು ಮುನ್ನಡೆಸಲು ಆಯ್ಕೆ ಮಾಡಲಾಗಿದ್ದು, ಇದರಿಂದಾಗಿ ಅವರು ದೇಶದ ಮತ್ತು ಜಗತ್ತಿನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗಿದ್ದಾರೆ.

34 ನೇ ವಯಸ್ಸಿನಲ್ಲಿ, ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾದ ಫಿನ್ಲೆಂಡ್‌ನ ಸನ್ನಾ ಮರಿನ್

Tuesday December 10, 2019,

2 min Read

ಫಿನ್ಲೆಂಡ್‌ನ ಪ್ರಸ್ತುತ ಸಾರಿಗೆ ಸಚಿವೆ ಸನ್ನಾ ಮರಿನ್ ಅವರು ಕೇವಲ 34 ನೇ ವಯಸ್ಸಿನಲ್ಲಿ ವಿಶ್ವದ ಕಿರಿಯ ಪ್ರಧಾನಿಯಾಗಲಿದ್ದಾರೆ.


ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ ಶಾಸಕರ ಬೆಂಬಲವನ್ನು ಗೆದ್ದು ಪ್ರಧಾನಿಯಾಗಲಿದ್ದಾರೆ. ಇತ್ತೀಚೆಗಷ್ಟೆ ಡಿಸೆಂಬರ್ ನಲ್ಲಿ ಅಲ್ಲಿನ ಪ್ರಧಾನಿ ಆಂಟಿ ರಿನ್ನೆ ರಾಜೀನಾಮೆ ನೀದಿದ್ದಾರೆ, ರಿನ್ನೇ ಪ್ರಧಾನಿಯಾಗಿ ಕೇವಲ ಆರು ತಿಂಗಳಾಗಿತ್ತು, ಆದರೆ ಅವರ ಮಿತ್ರಪಕ್ಷಗಳು ತಮ್ಮ ಬೆಂಬಲವನ್ನು ವಾಪಸ್ ಪಡೆದ ಪರಿಣಾಮವಾಗಿ ಅವರು ಅಧಿಕಾರದಿಂದ ಕೆಳಗಿಳಿದಿದ್ದಾರೆ.


Q

ಸನ್ನಾ ಮರಿನ್

ಎಜೆನ್ಸ್ ಫ್ರಾನ್ಸ್-ಪ್ರೆಸ್ಸೆ ವರದಿಯ ಪ್ರಕಾರ,


"ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ನಾನು ಎಂದಿಗೂ ಯೋಚಿಸಿಲ್ಲ. ನಾನು ರಾಜಕೀಯಕ್ಕೆ ಬಂದ ಕಾರಣಗಳು ಮತ್ತು ಯಾವ ಕಾರಣಗಳಿಂದ ಮತದಾರರ ವಿಶ್ವಾಸವನ್ನು ನಾವು ಗೆದ್ದಿದ್ದೇವೆ ಎಂಬುದರ ಬಗ್ಗೆ ನಾನು ಯೋಚಿಸುತ್ತೇನೆ,” ಎಂದಿದ್ದಾರೆ ಮರಿನ್.


ಅವರು "ಜನರಲ್ಲಿ ನಂಬಿಕೆಯನ್ನು ಪುನರ್ನಿರ್ಮಿಸಲು ಸಾಕಷ್ಟು ಕೆಲಸಗಳನ್ನು ಮಾಡುವ ಗುರಿಯನ್ನು ಹೊಂದಿದ್ದಾರೆ" ಎಂದು ಸಹ ವರದಿಯಾಗಿದೆ.


ಮರಿನ್ ಪ್ರಧಾನ ಮಂತ್ರಿಯಾದ ನಂತರ, ಫಿನ್‌ಲ್ಯಾಂಡ್‌ನ ಸಂಸತ್ತಿನ ಎಲ್ಲಾ ಐದು ಪ್ರಮುಖ ಪಕ್ಷಗಳ ನೇತೃತ್ವವನ್ನು ಮಹಿಳೆಯರಿಗೆ ವಹಿಸಲಾಗುವುದು, ಅವರಲ್ಲಿ ನಾಲ್ವರು ತಮ್ಮ 30ನೆ ವಯಸ್ಸಿನ ಆಸು ಪಾಸಿನವರು. ಲೆಫ್ಟ್ ಆಲಯನ್ಸ್ ನ 32 ವರ್ಷದ ಲಿ ಆಂಡರ್ಸನ್, ಗ್ರೀನ್ ಲೀಗ್‌ನ 34 ವರ್ಷದ ಮಾರಿಯಾ ಒಹಿಸಾಲೊ, ಸೆಂಟರ್ ಪಾರ್ಟಿಯ 32 ವರ್ಷದ ಕತ್ರಿ ಕುಲ್ಮುನಿ ಮತ್ತು ಸ್ವೀಡಿಷ್ ಪೀಪಲ್ಸ್ ಪಾರ್ಟಿ ಆಫ್ ಫಿನ್‌ಲ್ಯಾಂಡ್‌ನ 55 ವರ್ಷದ ಅನ್ನಾ-ಮಾಜಾ ಹೆನ್ರಿಕ್ಸನ್.


ಹೆಲ್ಸಿಂಕಿಯಲ್ಲಿ ಜನಿಸಿದ ಮರಿನ್ ಉನ್ನತ ಶಿಕ್ಷಣಕ್ಕಾಗಿ ಟ್ಯಾಂಪೆರಿಗೆ ತೆರಳುವ ಮೊದಲು ಎಸ್ಪೂ ಮತ್ತು ಪಿರ್ಕಲಾದಲ್ಲಿ ವಾಸಿಸುತ್ತಿದ್ದರು. ಅವರು ಇಬ್ಬರು ತಾಯಂದಿರ ಜೊತೆ ಬೆಳೆದಿದ್ದಾರೆ, ಮತ್ತು ಅವರ ಸಂಗಾತಿ ಮಾರ್ಕಸ್ ರಾಯ್ಕೊನೆನ್ ಜೊತೆ ತನ್ನದೇ ಆದ ಮಗುವನ್ನು ಹೊಂದಿದ್ದಾರೆ.


ನಾವು ಹೊಸ ದಶಕದತ್ತ ಮುನ್ನಡೆಯುತ್ತಿದ್ದೇವೆ ಈ ಸಮಯದಲ್ಲಿ ಯುವಜನರಿಗೆ ದೇಶವನ್ನು ಮುನ್ನಡೆಸಲು ಮತ್ತು ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡುವುದು ಮುಖ್ಯವಾಗಿದೆ. ಹೊಸ ಆಲೋಚನೆಗಳು ಮತ್ತು ಸಮಸ್ಯೆಗಳ ಬಗ್ಗೆ ಹೆಚ್ಚು ಪ್ರಗತಿಪರ ವಿಧಾನದಿಂದ, ಯುವ ನಾಯಕರು ಪ್ರಪಂಚದಾದ್ಯಂತದ ಜೀವನದ ಗುಣಮಟ್ಟದ ಸುಧಾರಣೆಗೆ ತ್ವರಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಧ್ಯತೆಯಿದೆ.


ನ್ಯೂಜಿಲೆಂಡ್‌ನ 39 ವರ್ಷದ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಅವರು ದೇಶವನ್ನು ಮುನ್ನಡೆಸಿದ 40 ವರ್ಷದೊಳಗಿನ ಏಕೈಕ ಮಹಿಳೆಯಾಗಿದ್ದಾರೆ. ಏಪ್ರಿಲ್ ಮತ್ತು ಅಕ್ಟೋಬರ್ 2017 ರ ನಡುವೆ, 27 ನೇ ವಯಸ್ಸಿನಲ್ಲಿ ವನೆಸ್ಸಾ ಡಿ ಅಂಬ್ರೊಸಿಯೊ ಇಟಲಿಯ ಸಮೀಪದಲ್ಲಿರುವ ಸೂಕ್ಷ್ಮ ರಾಜ್ಯವಾದ ಸ್ಯಾನ್ ಮರಿನೊದ ಕ್ಯಾಪ್ಟನ್ ರೀಜೆಂಟ್ ಆಗಿ ಸೇವೆ ಸಲ್ಲಿಸಿದ್ದರು.