ತಮ್ಮ ವೇತನದಿಂದಲೇ 500 ಶೌಚಾಲಯಗಳನ್ನು ನಿರ್ಮಿಸಿ ಬಯಲು ಬಹಿರ್ದೆಸೆಗೆ ಮುಕ್ತಿ ನೀಡಿದ ಮಹಿಳಾ ಅರಣ್ಯಾಧಿಕಾರಿ

ಎರ್ನಾಕುಲಂ ಜಿಲ್ಲೆಯ ಕುಟ್ಟನೆಂಪುಜ್ಹ ಕಾಡಿನ ಬುಡಕಟ್ಟು ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ಬಯಲು ಬಹಿರ್ದೆಸೆಯನ್ನು ನಿರ್ಮೂಲನೆ ಮಾಡಲು ಸುಮಾರು 500 ಶೌಚಾಲಯಗಳನ್ನು ತಮ್ಮ ವೇತನದ ಹಣದಿಂದಲೇ ಪಿ.ಜಿ. ಸುಧಾ ನಿರ್ಮಿಸಿದರು.

ತಮ್ಮ ವೇತನದಿಂದಲೇ 500 ಶೌಚಾಲಯಗಳನ್ನು ನಿರ್ಮಿಸಿ ಬಯಲು ಬಹಿರ್ದೆಸೆಗೆ ಮುಕ್ತಿ ನೀಡಿದ ಮಹಿಳಾ ಅರಣ್ಯಾಧಿಕಾರಿ

Wednesday February 26, 2020,

2 min Read

50 ವಯಸ್ಸಿನ ಮಹಿಳಾ ಅರಣ್ಯ ಅಧಿಕಾರಿಯೊಬ್ಬರ ಕೇರಳವನ್ನು ಬಯಲು ಬಹಿರ್ದೆಸೆಯಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ ಸಂತೋಷವನ್ನು ಕಾಣುತ್ತಿದ್ದಾರೆ, 2016 ರಲ್ಲಿ ರಾಜ್ಯವು ಬಯಲು ಬಹಿರ್ದೆಸೆಯಿಂದ ಮುಕ್ತವಾಗಿದೆ ಎಂದು ಘೋಷಿಸಿದೆ ಮತ್ತು ಇದು ರಾಷ್ಟ್ರ ಮಟ್ಟದಲ್ಲಿ ಬಯಲು ಬಹಿರ್ದೆಸೆಯನ್ನು ಘೋಷಿಸಿದ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.


ಪಿ.ಜಿ. ಸುಧಾ ಎಂಬ ಅರಣ್ಯಾಧಿಕಾರಿ ಈ ಬುಡಕಟ್ಟು ಭೂಮಿಗೆ ಶೌಚಾಲಯಗಳನ್ನು ತರುವ ಯಶಸ್ಸಿನ ಜೊತೆಗೆ ನವೆಂಬರ್ 1, 2016 ರಂದು ಕೇರಳ ಮುಖ್ಯಮಂತ್ರಿಯವರಿಂದ ಬಯಲು ಬಹಿರ್ದೆಸೆ ಮುಕ್ತ ಪ್ರಚಾರ ಪ್ರಶಸ್ತಿಯನ್ನು ಪಡೆದುಕೊಂಡರು. 2006 ರಲ್ಲಿ ಕೇರಳದಲ್ಲಿ ನಡೆದ ಅತ್ಯುತ್ತಮ ಅರಣ್ಯ ರಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.


ಪಿ ಜಿ ಸುಧಾ (ಚಿತ್ರಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)




ಅರಣ್ಯ ಅಧಿಕಾರಿಯಾಗಿರುವುದರಿಂದ ಹಿಡಿದು ರಾಜ್ಯದ ಟ್ರಯಲ್ ಬ್ಲೇಜರ್ ವರೆಗೆ, ಸುಧಾ ಅವರ ಪ್ರಯಾಣವು ಗುರುತರವಾಗಿದೆ.


ಬಯಲು ಬಹಿರ್ದೆಸೆ ಒಂದು ಸುಲಭದ ಆಯ್ಕೆಯಾಗಿದೆ ಎಂದು ತಿಳಿದುಬಂದರೂ, ನೈರ್ಮಲ್ಯ ಮತ್ತು ಮಹಿಳೆಯರ ಸುರಕ್ಷತೆಯು ಇದರಲ್ಲಿ ಕಾಳಜಿಯ ವಿಷಯವಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿ, ಅರಿವಿನ ಕೊರತೆಯಿಂದಾಗಿ, ಸುಲಭವಾದ ಆಯ್ಕೆಯನ್ನು ಆರಿಸುವುದು ಹೆಚ್ಚು ಎಂದು ಅವರು ಹೇಳುತ್ತಾರೆ. ಈ ಪ್ರದೇಶಗಳಲ್ಲಿ ರಸ್ತೆಗಳು, ಸಾರಿಗೆ, ನೀರಿನ ಪ್ರವೇಶ ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆಯಿದೆ ಮತ್ತು ಆದ್ದರಿಂದ ಸ್ವತಃ ಶೌಚಾಲಯವನ್ನು ನಿರ್ಮಿಸುವುದು ದೂರದ ಮಾತಾಗಿತ್ತು. ಯಾರಾದರೂ ಒಬ್ಬರು ಶೌಚಾಲಯ ಕಟ್ಟಬೇಕೆಂದರು ಸಹ, ಈ ಪ್ರದೇಶದ ವಸ್ತುಗಳನ್ನು ಸಾಗಿಸಲು ಕಷ್ಟಕರವಾಗಿದೆ. ಈ ಸಂಧರ್ಭದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳೀಯರು ಕಲ್ಲುಗಳನ್ನು ಖರೀದಿಸಲು ಸಹಾಯ ಮಾಡಿದರು. ಈ ಶೌಚಾಲಯಗಳನ್ನು ನಿರ್ಮಿಸುವಾಗ ಅವರು ಎದುರಿಸಿದ ತೊಂದರೆಗಳ ಬಗ್ಗೆ ಮಾತನಾಡುತ್ತಾ, ಸುಧಾ,


“ದೊಡ್ಡ ಸವಾಲು ನಿರ್ಮಾಣವಲ್ಲ, ವಸ್ತುಗಳನ್ನು ಸಾಗಿಸುವುದಾಗಿದೆ. ಇದಕ್ಕಾಗಿಯೇ ಎಲ್ಲರೂ ಕೆಲಸವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು. ಈ ಬುಡಕಟ್ಟು ಜನವಸತಿ ನಗರದಿಂದ ದೂರದಲ್ಲಿದ್ದು, ಅಲ್ಲಿಗೆ ಹೋಗಲು ಸರಿಯಾದ ರಸ್ತೆಗಳಿಲ್ಲ. ವಾಸ್ತವವಾಗಿ, ಈ ಕೆಲವು ಪ್ರದೇಶಗಳನ್ನು ತಲುಪಲು, ಒಬ್ಬರು 15 ರಿಂದ 20 ಕಿಲೋಮೀಟರ್‌ಗಳಷ್ಟು ನಡೆಯಬೇಕು ಏಕೆಂದರೆ ಬೇರೆ ಮಾರ್ಗಗಳಿಲ್ಲ,” ವರದಿ ಎನ್‌ಡಿಟಿವಿ.


ಈ ಬುಡಕಟ್ಟು ಪ್ರದೇಶಗಳು ಅನೇಕ ಕಾಡು ಪ್ರಾಣಿಗಳು ಮತ್ತು ಕಾಡು ಆನೆಗಳಂತಹ ಪರಭಕ್ಷಕಗಳಿಗೆ ನೆಲೆಯಾಗಿದೆ. ಅರಣ್ಯ ಅಧಿಕಾರಿ ಹೇಳುತ್ತಾರೆ,


"ನಾವು ಬಹಳ ಜಾಗರೂಕರಾಗಿರಬೇಕು. ಕಾರ್ಯಾಚರಣೆ ಸುಗಮವಾಗಿ ನಡೆಯುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಅವುಗಳ ಮುಖಾಮುಖಿಯನ್ನು ತಪ್ಪಿಸಬೇಕಾಗಿತ್ತು," ಎಂದು ಅಭಿಪ್ರಾಯ ಪಟ್ಟಿದ್ದಾರೆ.