ಬೀಚಿನಲ್ಲಿರುವ ಕಸಕಡ್ಡಿಯನ್ನು ವಿನಿಮಯ ಮಾಡಿಕೊಂಡು ಬಿಯರ್ ಬಾಟಲು ನೀಡುವ ಗೋವಾದ ಪಾಪ್ ಅಪ್ ವೇಸ್ಟ್ ಬಾರ್

ನೆದರ್ ಲ್ಯಾಂಡಿನಲ್ಲಿರುವ ಬಾರುಗಳ ಮಾದರಿಯಲ್ಲಿ ಬೀಚುಗಳನ್ನು ಶುಚಿಯಾಗಿಡಲು ಗೋವಾದ ಪಾಪ್ ಅಪ್ ಬಾರ್ ಪ್ರಯತ್ನಿಸುತ್ತಿದೆ.

ಬೀಚಿನಲ್ಲಿರುವ ಕಸಕಡ್ಡಿಯನ್ನು ವಿನಿಮಯ ಮಾಡಿಕೊಂಡು ಬಿಯರ್ ಬಾಟಲು ನೀಡುವ ಗೋವಾದ ಪಾಪ್ ಅಪ್ ವೇಸ್ಟ್ ಬಾರ್

Sunday August 18, 2019,

2 min Read

ಬೀಚುಗಳನ್ನು ಕಸಕಡ್ಡಿಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಅಪರೂಪದ ವಿಧಾನವೊಂದನ್ನು ಅನುಸರಿಸುತ್ತಿರುವ ಗೋವಾದ ಪಾಪ್ ಅಪ್ ವೇಸ್ಟ್ ಬಾರ್ ಕಸಕಡ್ಡಿಗಳನ್ನು ವಿನಿಮಯ ಮಾಡಿಕೊಂಡು ಉಚಿತವಾಗಿ ಬಿಯರ್ ಬಾಟಲುಗಳನ್ನು ನೀಡುತ್ತಿದೆ. ಇದು ದೃಷ್ಟಿ ಮೆರೈನ್ ಎಂಬ ಖಾಸಗಿ ಬೀಚ್ ನಿರ್ವಹಣಾ ಏಜೆನ್ಸಿಯೊಂದು ನೆದರ್ ಲ್ಯಾಂಡಿನ ನೂತನ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಪ್ರಾರಂಭಿಸಿದ “ತೇರಾ ಮೇರಾ ಬೀಚ್” ಎಂಬ ಆಂದೋಲನದ ಭಾಗವಾಗಿದೆ. ಇದರ ಯೋಜನೆ ಸರಳವಾಗಿದೆ. 20 ಬಿಯರ್ ಬಾಟಲುಗಳ ಮುಚ್ಚಳಗಳು, 20 ಸಿಗರೇಟಿನ ತುಂಡುಗಳು ಅಥವಾ ಐದು ಪ್ಲಾಸ್ಟಿಕ್ ಸ್ಟ್ರಾಗಳನ್ನು ವಿನಿಮಯ ಮಾಡಿಕೊಂಡು ಒಂದು ತಂಪಾದ ಬಿಯರ್ ಬಾಟಲ್ ಅಥವಾ ಕಾಕ್ ಟೈಲೊಂದನ್ನು ಪಡೆಯಬಹುದಾಗಿದೆ.


Get beer in return for trash at the Goa's waste bar

ಗೋವಾದ ತ್ಯಾಜ್ಯ ಬಾರಲ್ಲಿ ಕಸಕ್ಕೆ ಪ್ರತಿಯಾಗಿ ಬಿಯರ್ ಪಡೆಯಿರಿ. ಚಿತ್ರ ಕೃಪೆ: ಪ್ರೊಕೆರಳಾ


ಪಾಪ್ ಅಪ್ ವೇಸ್ಟ್ ಬಾರ್ ಮೊಟ್ಟಮೊದಲಿಗೆ ಜನವರಿ 30 ರಂದು ಬಾಗಾದ ಜಂಜೀಬಾರ್ ಶಾಕ್ ಎಂಬಲ್ಲಿ ಪ್ರಾರಂಭವಾಯಿತು. ಅಂದಿನಿಂದ ಗೋವಾ ರಾಜ್ಯದ ಬಹಳಷ್ಟು ಸ್ಥಳಗಳಲ್ಲಿ ಈ ವೇಸ್ಟ್ ಬಾರಿನ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲಾಗಿದೆ.


ಈ ವೇಸ್ಟ್ ಬಾರ್ ಪರಿಕಲ್ಪನೆಯು ಹೆಚ್ಚುತ್ತಿರುವ ಸಮಸ್ಯೆಗೆ ಸೃಜನಾತ್ಮಕ ಪರಿಹಾರವನ್ನು ಕಂಡುಕೊಳ್ಳುವ ನೂತನ ಯೋಜನೆಯಾಗಿದೆ. ಗೋವಾ ರಾಜ್ಯವು ಪ್ರತಿವರ್ಷ 8 ದಶಲಕ್ಷ ಪ್ರವಾಸಿಗರಿಂದ ವರಮಾನವನ್ನು ಪಡೆಯುತ್ತದೆ ಮತ್ತು ಅವರು ರಾಶಿ ರಾಶಿ ತ್ಯಾಜ್ಯವನ್ನು ಬೀಚುಗಳಲ್ಲಿ ಬಿಸಾಡುತ್ತಾರೆ. ಆದುದರಿಂದ ಈ ನೂತನ ಪರಿಕಲ್ಪನೆಯು ಬೀಚುಗಳನ್ನು ಶುಚಿಯಾಗಿಡುವುದಲ್ಲದೆ ಕಲುಷಿತಗೊಳ್ಳುತ್ತಿರುವ ಬೀಚುಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ. ಬೀಚುಗಳಲ್ಲಿ ಮದ್ಯಪಾನ ಮಾಡಿದರೆ ತೆರಬೇಕಾಗಿರುವ 2,000 ರೂಪಾಯಿಗಳ ದಂಡವನ್ನೂ ಇದು ತಪ್ಪಿಸುತ್ತದೆ.


G

ಚಿತ್ರಕೃಪೆ: ಪ್ರೊಕೆರಳಾ


ರಾಜ್ಯದ ಕಸದಿಂದುಂಟಾಗುತ್ತಿರುವ ಅಪಾಯವನ್ನು ನಿಯಂತ್ರಿಸಲು ಗೋವಾ ಪ್ರವಾಸೋದ್ಯಮ ಸಚಿವಾಲಯದ ಸಹಯೋಗದಲ್ಲಿ ಕೆಲಸ ಮಾಡುತ್ತಿರುವ ದೃಷ್ಟಿ ಮೆರೈನ್ನೊಂದಿಗೆ ಆಂದೋಲನ ಪ್ರಾರಂಭಿಸಿದ ನೊರೀನ್ ವಾನ್ ಹೊಲೆಸ್ಟೈನ್ ಸ್ಟೋರಿ ಪಿಕ್ ನೊಂದಿಗೆ ಮಾತನಾಡುತ್ತಾ,


“ವೇಸ್ಟ್ ಬಾರ್ ಒಂದು ಉಪಯುಕ್ತ ಪರಿಕಲ್ಪನೆ. ಅದು ಬೀಚಿನ ಪ್ರದೇಶಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು ಜನರನ್ನು ಆಕರ್ಷಿಸುತ್ತದೆ. ಸಮಾಜಕ್ಕೆ ಒಂದು ಕೊಡುಗೆ ನೀಡುವುದರೊಂದಿಗೆ ಉಚಿತ ಮದ್ಯವನ್ನು ಪಡೆಯುತ್ತೇವೆಂಬ ಸಂತೃಷ್ಟ ಗ್ರಾಹಕರನ್ನು ಅದು ಹೊಂದಿದೆ.” ಎಂದು ಹೇಳುತ್ತಾರೆ.


ಜಿಕ್ಯೂ ಇಂಡಿಯಾ ದ ಪ್ರಕಾರ ಪಾಪ್ ಅಪ್ ವೇಸ್ಟ್ ಬಾರುಗಳು ಕಲಂಗುಟೆ-ಕಾಂಡೊಲಿಮ್ ಬೀಚಿನಲ್ಲಿ ತಿಂಗಳಿಗೆ ಎರಡು ಬಾರಿ ಸಂಜೆ 4 ರಿಂದ 6 ಗಂಟೆಯವರಗೆ ಕಾರ್ಯ ನಿರ್ವಹಿಸುತ್ತವೆ.


V

ಚಿತ್ರ ಕೃಪೆ: ಪ್ರೊಕೆರಲಾ


ಹೋಲೇಸ್ಟಿನ್ ಮುಂದುವರೆಸಿ ಹೇಳುತ್ತಾರೆ. “ಗೋವಾಕ್ಕೆ ಜನರು ಎರಡು ಉದ್ದೇಶಗಳಿಂದ ಬರುತ್ತಾರೆ. ಒಂದು ಬೀಚು ಮತ್ತು ಇನ್ನೊಂದು ಬಾರು. ಅದರಿಂದಾಗಿ ನಾವು ಅವರು ಸಂಗ್ರಹಿಸಿದ ಕಸಕಡ್ಡಿಗಳಿಗಳನ್ನು ವಿನಿಮಯ ಮಾಡಿಕೊಂಡು ಅವರಿಗೆ ಉಚಿತ ಮದ್ಯವನ್ನು ಕೊಡೊಣ. ಇದರಿಂದಾಗಿ ಅವರಿಗೆ ಬೀಚಿನ ತ್ಯಾಜ್ಯದ ಬಗ್ಗೆ ಅರಿವು ಮೂಡುತ್ತದೆ ಮತ್ತು ಅದು ಬೆಲೆ ಬಾಳುವ ವಸ್ತುವೆಂದು ತಿಳಿಯುತ್ತದೆ. ಅವರು ಗೋವಾದ ಬೀಚನ್ನು ಶುಚಿಗೊಳಿಸಿ ಒಂದು ಸಂತೃಪ್ತ ಮನೋಭಾವದಿಂದ ಮರಳಿ ಹೋಗುತ್ತಾರೆ.”


ವೇಸ್ಟ್ ಬಾರ್ ಪರಿಕಲ್ಪನೆ ಗೋವಾಕ್ಕೆ ಹೊಸದೇನೂ ಅಲ್ಲ. “ತೇರಾ ಮೇರ ಬೀಚ್” ಆಂದೋಲನದ ಬಗ್ಗೆ ದೃಷ್ಟಿ ಮೆರೈನ್ನಿನ ಸಿಇಒ ರವಿಶಂಕರ್ ಸ್ಟೋರಿ ಪಿಕ್ ನೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದರು.

ನಾವು ಕಳೆದ ಬಾರಿ ಪ್ರವಾಸಿಗರು ಬಂದ ಸಮಯದಲ್ಲಿ 150 ದಿನಗಳ ಕಾಲ ಬೀಚಿನ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಮತ್ತು ತ್ಯಾಜ್ಯವನ್ನು ಬೇರ್ಪಡಿಸು6ವ ಬಗ್ಗೆ ಯಶಸ್ವಿಆಂದೋಲನವೊಂದನ್ನು ನಡೆಸಿದೆವು. ಇದರಿಂದಾಗಿ ಮಹತ್ತರವಾದ ಸಕಾರಾತ್ಮಕ ಪರಿಣಾಮ ಉಂಟಾಯಿತು. ನಾವು ಈ ಆಂದೋಲನವನ್ನು ಎಲ್ಲಾ ಸಮಯದಲ್ಲೂ ನಡೆಸಲು ನಿರ್ಧರಿಸಿದ್ದೇವೆ”