ಡಿಜಿಟಲ್‌ ಭಾರತಕ್ಕೆ ಗೂಗಲ್‌ನ $10 ಶತಕೋಟಿಯ ನಿಧಿ

ಈಕ್ವಿಟಿ ಹೂಡಿಕೆಗಳು, ಪಾಲುದಾರಿಕೆಗಳು ಮತ್ತು ಕಾರ್ಯಾಚರಣೆ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯ ಹೂಡಿಕೆಗಳ ಮೂಲಕ $10 ಶತಕೋಟಿಯ ನಿಧಿಯನ್ನು ಬಳಸಿಕೊಳ್ಳಲಾಗುವುದು ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದರು.

ಡಿಜಿಟಲ್‌ ಭಾರತಕ್ಕೆ ಗೂಗಲ್‌ನ $10 ಶತಕೋಟಿಯ ನಿಧಿ

Monday July 13, 2020,

1 min Read

ಡಿಜಿಟಲ್‌ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಪೂರ್ಣವಾಗಿ ಭಾರತದ ಮೇಲೆ ಕೇಂದ್ರಿಕರಿಸಲಾಗಿರುವ $10 ಶತಕೋಟಿಯ ನಿಧಿಯನ್ನು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ.


“ಮುಂದಿನ 5 ರಿಂದ 7 ವರ್ಷಗಳಲ್ಲಿ ನಾವು ಭಾರತದ ಮೇಲೆ ಸುಮಾರು ರೂ. 75,000 ಕೋಟಿ ಅಥವಾ $10 ಶತಕೋಟಿಯನ್ನು ಹೂಡಲಿದ್ದೇವೆ. ಈ ಹೂಡಿಕೆ ಈಕ್ವಿಟಿ, ಪಾಲುದಾರಿಕೆಗಳು ಮತ್ತು ಕಾರ್ಯಾಚರಣೆ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯ ಹೂಡಿಕೆಗಳಾಗಿ ವಿಭಜಿಸಲಿದೆ. ಇದು ಭಾರತ ಮತ್ತು ಅದರ ಡಿಜಿಟಲ್‌ ಆರ್ಥಿಕತೆಯ ಮೇಲೆ ನಮಗಿರುವ ವಿಶ್ವಾಸವನ್ನು ತೋರಿಸುತ್ತದೆ,” ಎಂದರು ಗೂಗಲ್‌ ಸಿಇಒ ಸುಂದರ್‌ ಪಿಚೈ.


ಗೂಗಲ್‌ ಫಾರ್‌ ಇಂಡಿಯಾ ಡಿಜಿಟಲೈಜೇಷನ್‌ ಫಂಡ್‌ ಮೂಲಕ ಈ ಕಾರ್ಯ ಆಗಲಿದೆ.


“ಭಾರತದ ಪ್ರಯಾಣ ಸಂಪೂರ್ಣಗೊಳ್ಳುವುದರಿಂದ ಇನ್ನೂ ತುಂಬಾ ದೂರವಿದೆ. ಭಾರತದ ಎಲ್ಲಾ ಭಾಷೆಗಳಿಗೆ ವಾಯ್ಸ್‌ ಇನ್ಪುಟ್ ಮತ್ತು ಕಂಪ್ಯೂಟಿಂಗ್ ಅನ್ನು ಸುಧಾರಿಸುವುದರಿಂದ ಹಿಡಿದು ಹೊಸ ಪೀಳಿಗೆಯ ಉದ್ಯಮಿಗಳನ್ನು ಪ್ರೇರೇಪಿಸುವುದು ಮತ್ತು ಬೆಂಬಲಿಸುವುದರವರೆಗೆ ಕೋಟ್ಯಾಂತರ ಭಾರತೀಯರಿಗೆ ಉಪಯೋಗವಾಗುವಂತೆ ಇಂಟರ್ನೆಟ್‌ ಅನ್ನು ಅಗ್ಗವಾಗಿಸುವ ನಿಟ್ಟಿನಲ್ಲಿ ಬಹಳ ಕೆಲಸ ನಡೆಯಬೇಕಿದೆ,” ಎಂದರು ಪಿಚೈ.


ಗೂಗಲ್ ಸಿಇಒ ಸುಂದರ್ ಪಿಚೈ




ವರ್ಷಗಳಲ್ಲಿ ಗೂಗಲ್ ತನ್ನ ಗ್ರೋವ್ಥ್ ಇಕ್ವಿಟಿ ಹೂಡಿಕೆ ನಿಧಿ ಕ್ಯಾಪಿಟಲ್ ಜಿ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿದೆ.


ಈ ನಿಧಿ ಡಿಜಿಟಲ್‌ ಇಂಡಿಯಾದ 4 ಮುಖ್ಯ ವಲಯಗಳ ಮೇಲೆ ಕೇಂದ್ರಿತವಾಗಿದೆ:

  • ಕನ್ನಡ, ಹಿಂದಿ, ತಮಿಳು, ಪಂಜಾಬಿ ಅಥವಾ ಇನ್ನಾವುದೇ ಭಾರತೀಯ ಭಾಷೆಯಲ್ಲಿಯೆ ಭಾರತೀಯರಿಗೆ ಮಾಹಿತಿಯನ್ನು ಸಕ್ರಿಯಗೊಳಿಸುವುದು.
  • ಭಾರತದ ಅನನ್ಯ ಅಗತ್ಯಗಳಿಗೆ ಪ್ರಸ್ತುತವಾಗುವ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು.
  • ವ್ಯವಹಾರಗಳು ಮುಂದುವರಿಯುತ್ತಿರುವಾಗ ಅಥವಾ ಅವುಗಳ ಡಿಜಿಟಲ್ ರೂಪಾಂತರವನ್ನು ಪಡೆದುಕೊಳ್ಳಲಾರಂಭಿಸಿದಾಗ ಅವುಗಳಿಗೆ ಬಲ ತುಂಬುವುದು.
  • ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಸಾಮಾಜಿಕ ಒಳಿತಿಗಾಗಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದು.
"ನಾವು ಈ ಹೂಡಿಕೆಗಳನ್ನು ಮಾಡುತ್ತ, ಡಿಜಿಟಲ್ ಭಾರತದ ಕನಸನ್ನು ಸಾಕಾರಗೊಳಿಸಲು ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರದ ಜೊತೆಗೆ ಎಲ್ಲಾ ಗಾತ್ರದ ಭಾರತೀಯ ವ್ಯವಹಾರಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ," ಎಂದು ಸುಂದರ್ ಹೇಳಿದರು.