ಪಿಕ್ಸೆಲ್‌ 5, ಪಿಕ್ಸೆಲ್‌ 4ಎ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆಗೊಳಿಸಿದ ಗೂಗಲ್‌

ಗೂಗಲ್‌ನ ಹೊಸ ಫೋನ್‌ಗಳು ತಂತ್ರಜ್ಞಾನ ವಿಶೇಷತೆಗಳಿಗಿಂತ ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಗುರಿ ಹೊಂದಿವೆ.

ಪಿಕ್ಸೆಲ್‌ 5, ಪಿಕ್ಸೆಲ್‌ 4ಎ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆಗೊಳಿಸಿದ ಗೂಗಲ್‌

Thursday October 01, 2020,

1 min Read

ಗೂಗಲ್‌ 2020ರ ಸಾಲಿನಲ್ಲಿ ಪಿಕ್ಸೆಲ್‌ 4ಎ(5ಜಿ) ಮತ್ತು ಪಿಕ್ಸೆಲ್‌ 5 ಎಂಬ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದು, ಇವುಗಳು ತನ್ನ ತಂತ್ರಜ್ಞಾನ ವಿಶೇಷತೆಗಳಿಗಿಂತ ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಗುರಿ ಹೊಂದಿವೆ.


ಎರಡು ಫೋನ್‌ಗಳಲ್ಲೂ ಸ್ನಾಪ್‌ಡ್ರಾಗನ್‌ 700 ಶ್ರೇಣಿಯ ಪ್ರೊಸೆಸರ್‌ಗಳಿರಲಿದ್ದು, ಇದು ಇವುಗಳನ್ನು ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಒನ್‌ಪ್ಲಸ್‌ ನೋರ್ಡ್‌ ಸ್ಮಾರ್ಟ್‌ಫೋನ್‌ನ ವಿಭಾಗದಲ್ಲಿ ಸೇರಿಸುತ್ತದೆ. ಎರಡು ಫೋನ್‌ಗಳು 5ಜಿ ತಂತ್ರಜ್ಞಾನವನ್ನು ಹೊಂದಿದ್ದು, ಉತ್ತಮ ಸಾಫ್ಟ್‌ವೇರ್‌ ಅನುಭವ ನೀಡಲಿದೆ ಎಂದು ಗೂಗಲ್‌ ತಿಳಿಸಿದೆ.


ಈ ಫೋನ್‌ಗಳು ಭಾರತದಲ್ಲಿ ಯಾವಾಗ ಬರಲಿವೆ ಎಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ, ಆದರೆ ಪಿಕ್ಸೆಲ್‌ 4ಎ ಭಾರತದಲ್ಲಿ ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಗೂಗಲ್‌ ಹೇಳಿದೆ. ಆದರೆ ಗೂಗಲ್‌ ಭಾರತದಲ್ಲಿ ಇದರ ಬೆಲೆಯನ್ನು ಇನ್ನೂ ಗೌಪ್ಯವಾಗಿ ಇಟ್ಟಿದೆ.

ಎಂದಿನಂತೆ ತನ್ನ ಹೊಸ ಫೋನ್‌ಗಳಲ್ಲಿ ಗೂಗಲ್‌ ಕ್ಯಾಮೆರಾ ಮೇಲೆ ಗಮನ ಹರಿಸಿದ್ದು, ಎರಡು ಫೋನ್‌ಗಳಲ್ಲಿ ಎರಡು ಕ್ಯಾಮೆರಾಗಳಿವೆ. ಮುಖ್ಯ ಕ್ಯಾಮೆರಾ 12.2 ಮೆಗಾ ಪಿಕ್ಸೆಲ್‌ ಹೊಂದಿದ್ದು, ದ್ವಿತೀಯ ಕ್ಯಾಮೆರಾ 16 ಎಂ.ಪಿ. ಅಲ್ಟ್ರಾ ವೈಡ್‌ ಲೆನ್ಸ್‌ ಹೊಂದಿದೆ.


ಈ ಎರಡು ಫೋನ್‌ಗಳಲ್ಲೂ ಸೂಪರ್‌ ರೆಸ್‌ ಜೂಮ್‌ ತಂತ್ರಜ್ಞಾನವಿದ್ದು, ಇದು ಜೂಮ್‌ ಮಾಡಿದಾಗಲು ಉತ್ತಮ ವಿವರಗಳನ್ನು ಸೆರೆಹಿಡಿಯುತ್ತದೆ. ಅದಲ್ಲದೆ ಸಿನಿಮ್ಯಾಟಿಕ್‌ ಪ್ಯಾನ್‌ ವೈಶಿಷ್ಟ್ಯತೆ ಇರಲಿದ್ದು, 60 ಎಫ್‌ಪಿಎಸ್‌ನಲ್ಲಿ 4ಕೆ ವಿಡಿಯೋ ಸಾಮರ್ಥ್ಯ ಮತ್ತು ಓಐಎಸ್‌ ಸೌಲಭ್ಯವು ಇದೆ.


ಪಿಕ್ಸೆಲ್‌ 4ಎ ಮತ್ತು ಪಿಕ್ಸೆಲ್‌ 5 ನಲ್ಲಿ 48 ಗಂಟೆಗಳ ವರೆಗೆ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದ್ದು ಕ್ರಮವಾಗಿ 3,885 ಎಮ್‌ಎಎಚ್‌ ಮತ್ತು 4,080 ಎಮ್‌ಎಎಚ್ ಸಾಮಾರ್ಥ್ಯದ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಜತೆಗೆ ಪಿಕ್ಸೆಲ್‌ 5 ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯ ಹೊಂದಿದ್ದು 18 ವೊಲ್ಟ್‌ ಫಾಸ್ಟ್‌ ಚಾರ್ಜರ್‌ ಇರಲಿದೆ.


ಪಿಕ್ಸೆಲ್‌ 5 ನಲ್ಲಿ ರಿವರ್ಸ್‌ ಚಾರ್ಜಿಂಗ್‌ ಸೌಲಭ್ಯವಿದ್ದು, ಇದರಿಂದ ಇತರೆ ಸಾಧನಗಳನ್ನು ಚಾರ್ಜ್‌ ಮಾಡಬಹುದಾಗಿದೆ.