94ನೇ ವಯಸ್ಸಿನಲ್ಲಿ ನವೋದ್ಯಮ ಆರಂಭಿಸಿದ ಅಜ್ಜಿ

ತಮ್ಮ ಕನಸುಗಳನ್ನು ಸಾಧಿಸಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಹರ್ಭಜನ್ ಕೌರ್ ಸಾಕ್ಷಿಯಾಗಿದ್ದಾರೆ. ಅವರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ ಇತರರಿಗೂ ಸ್ಫೂರ್ತಿ ನೀಡುತ್ತಿದ್ದಾರೆ.

10th Jan 2020
  • +0
Share on
close
  • +0
Share on
close
Share on
close

94ರ ಇಳಿವಯಸ್ಸಿನ ಹರ್ಭಜನ್‌ ಕೌರ್‌ ನಾಲ್ಕು ವರ್ಷಗಳ ಹಿಂದೆ ತಮ್ಮ ನವೋದ್ಯಮವನ್ನು ಆರಂಭಿಸಿದರು. ನೈಸರ್ಗಿಕವಾದ “ಬೇಸನ್‌ ಬರ್ಫಿ” ಗಳನ್ನು ಅವರು ತಯಾರಿಸಿದರೆ, ಅವರ ಮಗಳು ಸಾವಯವ ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟಮಾಡುತ್ತಾರೆ.


ಒಮ್ಮೆ ಹೀಗೇ ಮಾತನಾಡುವಾಗ, ಹರ್ಭಜನ್‌ ಕೌರ್‌ ತಮ್ಮ ಮಗಳ ಬಳಿ “ನನ್ನ ಜೀವನದಲ್ಲಿ ಒಂದೇ ಒಂದು ರೂಪಾಯಿಯನ್ನೂ ನಾನು ದುಡಿಯಲಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದರಂತೆ. ಅದಕ್ಕೆ ಅವರ ಮಗಳು “ಬೇಸನ್‌ ಕಿ ಬರ್ಫಿ” ತಯಾರಿಸಿ ಮಾರುವಂತೆ ಸಲಹೆ ನೀಡಿದ್ದೆ ಎಂದು ಬಹಿರಂಗಪಡಿಸಿದ್ದಾರೆ.


ಹರ್ಬಜನ್‌ ಕೌರ್‌ ಹಾಗೂ ಅವರ ಬೇಸನ್‌ ಕಿ ಬರ್ಫಿ. (ಚಿತ್ರಕೃಪೆ: ಹಿಂದೂಸ್ಥಾನ್‌ ಟೈಮ್ಸ್)


“ಅವರಿಗೆ ಅದ್ಭುತವಾಗಿ ಆಹಾರವನ್ನ ತಯಾರಿಸಲು ಬರುತ್ತದೆ. ನಮ್ಮ ಚಿಕ್ಕಂದಿನಲ್ಲಿ ನಾವು ಎಂದಿಗೂ ಹೊರಗಿನ ತಿನಿಸುಗಳನ್ನು ತಿಂದಿಲ್ಲ, ಯಾಕೆಂದರೆ, ಅವರು ಸಿಹಿ ತಿನಿಸುಗಳನ್ನು, ಚಾಕೊಲೇಟ್‌ ಹಾಗೂ ಶರಭತ್… ಎಲ್ಲವನ್ನೂ ಮನೆಯಲ್ಲೆ ಮಾಡಿಕೊಡುತ್ತಿದ್ದರು. ಪ್ರತೀ ಚಳಿಗಾಲದಲ್ಲಿ ಅವರು ಇಡೀ ಕುಟುಂಬಕ್ಕೆ ಬೇಸನ್‌ ಕಿ ಬರ್ಫಿ ಮಾಡುತ್ತಿದ್ದರು - ನಮ್ಮ ಊಟದ ಟೇಬಲ್‌ ಸಂಪೂರ್ಣವಾಗಿ ಬರ್ಫಿಮಯವಾಗಿರುತ್ತಿತ್ತು,” ಎನ್ನುತ್ತಾರೆ ಅಜ್ಜಿಯ ಮಗಳು. ಬೇಸನ್‌ ಕಿ ಬರ್ಫಿ ಮಾಡುವುದರಲ್ಲಿ ಹರ್ಭಜನ್‌ ಪರಿಣಿತಿ ಹೊಂದಿದ್ದಾರೆ. ಹಾಗಾಗಿಯೇ ಅವರ ಮಗಳು ಅವರಿಗೆ ಅವುಗಳನ್ನು ತಯಾರಿಸಿ ಮಾರುವಂತೆ ಪ್ರೋತ್ಸಾಹಿಸಿದ್ದು.


ಇವರ ಕಥೆ ಎಲ್ಲರನ್ನು ಗಮನ ಸೆಳೆದದ್ದು, ಮಹೀಂದ್ರ ಸಂಸ್ಥೆಯ ಆನಂದ್‌ ಮಹೀಂದ್ರ ಹರ್ಭಜನ್‌ರನ್ನು ಟ್ಟಿಟರ್‌ನಲ್ಲಿ “ವರ್ಷದ ಉದ್ಯಮಿ” ಎಂದು ಹೇಳಿದಾಗ. ಆನಂದ್‌ ಮಹೀಂದ್ರರಿಗೆ ಡಾ|| ಮಧು ಎಂಬುವವರು ಈ ವಿಷಯದ ಕುರಿತು ವೀಡಿಯೊವೊಂದನ್ನು ಕಳಿಸಿದ್ದರು.


ಟ್ವೀಟ್‌ ಮಾಡಿ ವಿಷಯ ಹಂಚಿಕೊಂಡ ಆನಂದ್‌, "ಸ್ಟಾರ್ಟಪ್ ಎಂಬ ಪದ ಕಿವಿಗೆ ಬಿದ್ದೊಡನೆ ನಮಗೆ ಸಿಲಿಕಾನ್‌ ವ್ಯಾಲಿಯ ಅಥವಾ ಬೆಂಗಳೂರಿನ “ಯುನಿಕಾರ್ನ್”‌ ನಿರ್ಮಿಸಲು ಹೊರಟ ನವೋದ್ಯಮಿಗಳು ನೆನಪಾಗುತ್ತಿದ್ದರು. ಇನ್ನು ಮುಂದೆ ಅವರ ಸಾಲಿಗೆ 94ರ ಅಜ್ಜಿಯೂ ಸೇರಿಸೋಣ,” ಎಂದಿದ್ದಾರೆ.


ಆನಂದ್ ಮಹೀಂದ್ರಾ ಅವರ ಹಲವಾರು ಟ್ವೀಟ್‌ಗಳಂತೆ ಇದೂ ಹೃದಯಸ್ಪರ್ಶಿಯಾಗಿದ್ದು, ಎಲ್ಲರ ಮನ ಗೆದ್ದಿದೆ. ಜನವರಿ 8 ರ ಹೊತ್ತಿಗೆ, ಟ್ವೀಟ್‌ನಲ್ಲಿ 10.7 ಕೆ ಲೈಕ್‌ಗಳು ಮತ್ತು 2,000 ಕ್ಕೂ ಹೆಚ್ಚು ರಿಟ್ವೀಟ್‌ಗಳಾಗಿವೆ. ಇತರ ಟ್ವಿಟರ್ ಬಳಕೆದಾರರು ಸಹ ಮುಂದೆ ಬಂದು ಹರ್ಭಜನ್‌ ಎಲ್ಲರಿಗೂ ಸ್ಪೂರ್ತಿಯಾಗಬಲ್ಲರು ಎಂದಿದ್ದಾರೆ.


ಹರ್ಭಜನ್ ಕೌರ್ ನಿಜವಾಗಿಯೂ ವಯಸ್ಸು ಕನಸುಗಳಿಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸ್ಫೂರ್ತಿ ಮತ್ತು ಪುರಾವೆಯಂತಿದ್ದಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Latest

Updates from around the world

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India