ವಿಶಿಷ್ಟವಾಗಿ ನಡೆದ ಈ ಪರಿಸರಸ್ನೇಹಿ ಮದುವೆ

ಪ್ರಾಂಶು ಕಂಕನೆ ಅವರು ಸಹೋದರ ಪ್ರತೀಕ ಅಣ್ಣನ ವಿವಾಹಕ್ಕೆ ಮಡಿಕೆಯಲ್ಲಿ ಬೆಳೆದ‌ ಸಸ್ಯಗಳನ್ನು ಕೊಟ್ಟು ಆಮಂತ್ರಿಸಿದ್ದಾರೆ ಮತ್ತು ಸಮಾರಂಭದಲ್ಲಿ ಆಹಾರವನ್ನು ವ್ಯರ್ಥಗೊಳಿಸದಂತೆ ಮಾಡುವ ಅನೇಕ ವಿಧಾನಗಳನ್ನು ಪರಿಚಯಿಸಿದ್ದಾರೆ.

2nd Dec 2019
  • +0
Share on
close
  • +0
Share on
close
Share on
close

ನಾವು ಹವಾಮಾನ ಬದಲಾವಣೆ ಮತ್ತು ಪರಿಸರ ನಾಶದೊಂದಿಗೆ‌ ಹೋರಾಡುತ್ತಿರುವ ಸಮಯದಲ್ಲಿ,‌ಈ ವಿಷಯಕ್ಕೆ‌‌ ಸಂಬಂಧಿಸಿದ ಪ್ರತಿಯೊಂದು ಸಣ್ಣ ಹೆಜ್ಜೆಯನ್ನು ಪ್ರಶಂಸಿಸಬೇಕು.


ಭೋಪಾಲ್‌ನ ಸುಮಿ ಚೌಧರಿ ಹಾಗೂ ಪ್ರಾಂಶು ಕಂಕರೆ ಅವರ ವಿವಾಹಕ್ಕೆ‌ ಸಾಂಪ್ರದಾಯಿಕ ಕಾರ್ಡ್‌ ಗಳನ್ನು ನೀಡದೆ ಮಡಿಕೆಯಲ್ಲಿ ಬೆಳೆದ ಸಸ್ಯಗಳನ್ನು ಕೊಡುವ ಮೂಲಕ ಆಮಂತ್ರಿಸಲಾಯಿತು. ವರ ಪ್ರಾಂಶು ಕಂಕನೆ ಹಾಗೂ ಅವರ ಸಹೋದರ ಪ್ರತೀಕ್ ಪರಿಸರಸ್ನೇಹಿ ವಿವಾಹದ ಕುರಿತಾಗಿ ಆಸಕ್ತಿ ಹೊಂದಿದ್ದರು. ಆದ್ದರಿಂದ ಪರಿಸರಸ್ನೇಹಿ ಉಪಾಯಗಳನ್ನು‌ ಅಳವಡಿಸಿಕೊಳ್ಳಲು ನಿರ್ಧರಿಸಿದರು.


ವಿವಾಹದ ಆಮಂತ್ರಣಗಳಂತೆ ಕಳುಹಿಸಲಾದ ಮಡಿಕೆಯಲ್ಲಿ ಬೆಳೆದ ಸಸ್ಯಗಳೊಂದಿಗೆ ವಧು-ವರರು (ಚಿತ್ರಕೃಪೆ: ದಿ‌ ಲಾಜಿಕಲ್ ಇಂಡಿಯನ್)


ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಪ್ರತೀಕ್,


"ಇದು ಆಹಾರವನ್ನು ಪೋಲು ಮಾಡುವುದನ್ನು ತಪ್ಪಿಸುವ ಆಲೋಚನೆಯೊಂದಿಗೆ ಪ್ರಾರಂಭವಾಯಿತು. ನಾವು ಕಾಗದದ ಬದಲು ಇ-ಆಹ್ವಾನಗಳನ್ನು ಕಳುಹಿಸುವ ಮೂಲಕ‌ ಪ್ರಾರಂಭಿಸಿದೆವು‌ ಮತ್ತು ಜನರನ್ನು ಆರ್‌ಎಸ್‌ವಿಪಿಗೆ ವಿನಂತಿಸಿದ್ದೇವೆ. ಆದರೆ ಆರ್‌ಎಸ್‌ವಿಪಿ ಆಯ್ಕೆಯು ಆಹಾರ ವ್ಯರ್ಥವಾಗುವುದನ್ನು ತಡೆಯಲು ನಮಗೆ ಸಹಾಯ ಮಾಡಿತು.”


ಆದರೆ ವರನ ತಾಯಿಯು ಆಮಂತ್ರಣ ಪತ್ರಗಳು ವಿವಾಹದ ಪ್ರಮುಖ ಭಾಗವೆಂದು ಭಾವಿಸಿದ್ದರು. ಪ್ರಾಂಶು ಮತ್ತು ಪ್ರತೀಕ್ ಕಾಗದವನ್ನು ಬಳಸಲು ಹಿಂಜರಿಯುತ್ತಿದ್ದರು. ಅದಕ್ಕೆ ಮಡಿಕೆಯಲ್ಲಿ ಬೆಳೆದ ಸಸ್ಯಗಳನ್ನು ಆಹ್ವಾನದಂತೆ ಮುದ್ರಿಸಿದ ಸಂದೇಶದೊಂದಿಗೆ ಕಳುಹಿಸುವ ಹೊಸ ಆಲೋಚನೆಯೊಂದನ್ನು ಮಾಡಿದರು.


ಮಡಿಕೆಯಲ್ಲಿರುವ ಸಸ್ಯಗಳು ಎಂಟರಿಂದ ಹತ್ತು ತಿಂಗಳ ಹಳೆಯ ಒಳಾಂಗಣ ಸಸ್ಯಗಳಾಗಿದ್ದು, ಇವು ಮೂರರಿಂದ ನಾಲ್ಕು ವರ್ಷಗಳ ಜೀವಿತಾವಧಿಯನ್ನು ಹೊಂದಿವೆ.


ಪ್ರತೀಕ್ ದಿ ಲಾಜಿಕಲ್ ಇಂಡಿಯನ್ ನೊಂದಿಗೆ ಮಾತನಾಡುತ್ತ,


"ನಾವು ಪ್ರತಿ ಮನೆಗೆ ಹೋದಾಗ, ಅವರ ಪ್ರತಿಕ್ರಿಯೆಗಳು ವಿಭಿನ್ನವಾಗಿದ್ದವು. ಅವರ ಅಭಿರುಚಿಗೆ ತಕ್ಕಂತೆ ಆಹ್ವಾನದ ಸಸ್ಯಗಳನ್ನು ಆಯ್ದುಕೊಂಡರು. ಸಸ್ಯಗಳನ್ನು ನೋಡಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲು 15-20 ನಿಮಿಷಗಳನ್ನು ಕಳೆಯುತ್ತಿದ್ದೇವು. ಅವರು ಅದನ್ನು ನಮ್ಮಿಂದ ತೆಗೆದುಕೊಂಡ ನಂತರ ಎಸೆಯುವುದು ನಮಗೆ ಬೇಕಾಗಿರಲಿಲ್ಲ."


ಮಡಿಕೆಯಲ್ಲಿನ‌ ಸಸ್ಯಗಳ ಸಂದೇಶವು "ಹೂಗುಚ್ಛಗಳನ್ನು ತರಬೇಡಿ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ಉಪಯೋಗಿಸುವುದನ್ನು ತಪ್ಪಿಸಿ" ಎಂದು ಹೇಳುತ್ತಿತ್ತು. ಮದುವೆಯಲ್ಲಿನ ಅಲಂಕಾರವು ಸಂಪೂರ್ಣವಾಗಿ ಪರಿಸರಸ್ನೇಹಿಯಾಗಿತ್ತು.


ಮಡಿಕೆಯಲ್ಲಿನ ಸಸ್ಯಗಳು (ಚಿತ್ರಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌)
ಖರ್ಚು-ವೆಚ್ಚದ ಕುರಿತಾಗಿ ಮಾತನಾಡಿದ ಪ್ರತೀಕ್,


"ಈ ಉಪಕ್ರಮವು ಅನಗತ್ಯವಾಗಿ ದುಬಾರಿಯಾಗಿರುವುದು ಸರಿಯಲ್ಲ. ಇದು ದುಬಾರಿಯಾಗಿದ್ದರೆ ಜನರು ಈ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಉಪಕ್ರಮದ‌ ಕಾರ್ಯಸಾಧ್ಯತೆಯನ್ನು ಅಳವಡಿಸಿಕೊಳ್ಳುವುದು ನಮ್ಮ ದೊಡ್ಡ ಸವಾಲಾಗಿತ್ತು" ವರದಿ ದಿ ಲಾಜಿಕಲ್ ಇಂಡಿಯನ್.


ಮಡಿಕೆಯ ಆಮಂತ್ರಣವೊಂದಕ್ಕೆ ಸಹೋದರರಿಗೆ 68-70 ರೂಗಳಷ್ಟು ಖರ್ಚಾಗಿದೆ. ಆಹಾರವನ್ನು ಪೋಲು‌ ಮಾಡುವುದನ್ನು ತಪ್ಪಿಸಲು ರಾಬಿನ್ ಹುಡ್ ಸೈನ್ಯದೊಂದಿಗೆ ಕುಟುಂಬವು ಪಾಲುದಾರಿಕೆಯನ್ನು ಹೊಂದಿದ್ದು, ಅವರು ಹೆಚ್ಚುವರಿ ಆಹಾರವನ್ನು ಮನೆಯಿಲ್ಲದ ಮತ್ತು ದೀನ-ದಲಿತರಿಗಾಗಿ ಕೊಂಡೊಯ್ಯುತ್ತಾರೆ.


ಕೊನೆಯಲ್ಲಿ 1,500 ಅತಿಥಿಗಳಲ್ಲಿ ಇಬ್ಬರು ಮಾತ್ರ ಹೂಗುಚ್ಛದೊಂದಿಗೆ ಬಂದಿದ್ದರು, ಮತ್ತು ಕೇವಲ‌ 40-50 ಪ್ಲೇಟಗಳ ಆಹಾರ ಮಾತ್ರ ಉಳಿದಿದೆ. ಇದನ್ನು ಆರ್‌ಎಚ್‌ಎ ನೋಡಿಕೊಂಡಿದೆ.


ಪ್ರತೀಕ್ ಹೇಳುತ್ತಾರೆ,


"ಪರಿಸರದ ಪರವಾಗಿ ಕೆಲಸ ಮಾಡುವುದು ಬಹಳ ಮುಖ್ಯ. ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಂರಕ್ಷಿಸುವ ವಿಧಾನಗಳನ್ನು ಕಂಡುಕೊಳ್ಳಬೇಕು. ನಮಗೆ ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥವಾಗದಂತೆ ನೋಡಿಕೊಳ್ಳಲು ಮದುವೆಯು ಒಂದು ಅವಕಾಶವಾಗಿತ್ತು‌," ವರದಿ ದಿ ಲಾಜಿಕಲ್ ಇಂಡಿಯನ್.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.
  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India