ಹಸಿರು ಸಂರಕ್ಷಣೆಯ ಕಾರ್ಯಕ್ಕಾಗಿ ಯುನೆಸ್ಕೋ ಪ್ರಶಸ್ತಿಯನ್ನು ಪಡೆದ 49 ವರ್ಷದ ಮಹಿಳೆ

ಚಿಕಪಲ್ಲಿ ಅನಸುಯಮ್ಮ ಎರಡು ದಶಲಕ್ಷಕ್ಕೂ ಹೆಚ್ಚು ಸಸ್ಯಗಳನ್ನು ಅನುಪಯುಕ್ತವಾದ ಗುಡ್ಡಗಳ ಮೇಲೆ ಬೆಳೆದಿದ್ದಾರೆ ಮತ್ತು ತೆಲಂಗಾಣದ ಸುತ್ತ ಮುತ್ತಲು ಎರಡು ಡಜನ್ ಕಾಡುಗಳನ್ನು ನೆಟ್ಟಿದ್ದಾರೆ.

ಹಸಿರು ಸಂರಕ್ಷಣೆಯ ಕಾರ್ಯಕ್ಕಾಗಿ ಯುನೆಸ್ಕೋ ಪ್ರಶಸ್ತಿಯನ್ನು ಪಡೆದ 49 ವರ್ಷದ ಮಹಿಳೆ

Friday October 25, 2019,

2 min Read

ಪ್ರಗತಿಯ ಹೆಸರಿನಲ್ಲಿ, ನಾವು ನಮ್ಮ ಪರಿಸರಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ ನಾವು ಇಂದು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಎಂದು ಏನನ್ನು ಕರೆಯುತ್ತೇವೆಯೋ ಅದನ್ನ ಅನುಭವಿಸುತ್ತಿದ್ದೇವೆ.


ಹಲವಾರು ವರ್ಷಗಳಿಂದ, ಈ ಸಮಸ್ಯೆಯ ಕುರಿತು ಆಯಾ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರಲು ವಿಶ್ವದಾದ್ಯಂತ ಲೆಕ್ಕವಿಲ್ಲದಷ್ಟು ಅರ್ಜಿಗಳನ್ನು ನೀಡಲಾಗಿದೆ. ಮತ್ತು ಹಲವಾರು ಆಕ್ರೋಶ ಭರಿತ ಪ್ರತಿಭಟನೆಗಳು ಹಾಗೂ ಮುಷ್ಕರಗಳು ನಡೆದಿವೆ.


ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಮತ್ತು ಈ ವಿಷಯದಲ್ಲಿ ಬದಲಾವಣೆ ತರಲು ತಡವಾಗಿಲ್ಲ ಎಂದು ಅರಿತುಕೊಂಡು, ಅನೇಕ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ಈ ಕಾರಣಕ್ಕಾಗಿ ಒಬ್ಬಂಟಿಯಾಗಿ ಹೋರಾಡುತ್ತಿದ್ದಾರೆ.


ಪರಿಸರವನ್ನು ರಕ್ಷಿಸಲು ತಮ್ಮ ಕೈಲಾದಷ್ಟು ಕೆಲಸವನ್ನು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ನಿವಾಸಿ ಚಿಕಪಲ್ಲಿ ಅನಸೂಯಮ್ಮ ಮಾಡುತ್ತಿದ್ದಾರೆ.


ಪ್ರಾತಿನಿಧ್ಯ ಚಿತ್ರ (ಚಿತ್ರ ಕೃಪೆ: ಮೈ ಟ್ರಾವೆಲ್ಸ್ ಟೆಲ್ಸ)




49 ವರ್ಷದ ಅವರು ಸುಮಾರು ಎರಡು ದಶಲಕ್ಷ ಸಸ್ಯಗಳನ್ನು ಬಂಜರು ಭೂಮಿಯಲ್ಲಿ ನೆಟ್ಟಿದ್ದಾರೆ, ಇದಕ್ಕಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಯುನೆಸ್ಕೋದ ಇಕ್ವೆಟರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ದಿ ಹ್ಯಾನ್ಸ್ ಇಂಡಿಯಾ ವರದಿ ಮಾಡಿದೆ.


ಡೌನ್ ಟು ಅರ್ಥ್ ಜೊತೆ ಮಾತನಾಡಿದ ಅವರು,


"ಇಲ್ಲಿಯವರೆಗೆ, ನಾನು ತ್ಯಾಜ್ಯ ಗುಡ್ಡಗಳ ಮೇಲೆ ಎರಡು ದಶಲಕ್ಷಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಿದ್ದೇನೆ ಮತ್ತು ನೆರೆಹೊರೆಯಲ್ಲಿ ಎರಡು ಡಜನ್ ಕಾಡುಗಳನ್ನು ನೆಟ್ಟಿದ್ದೇನೆ.

ಆದರೆ, ಹಸಿರಿನ ಸಂರಕ್ಷಣೆಯಲ್ಲಿ ಚಿಕಪಲ್ಲಿಯವರ ಈ ಪ್ರಯತ್ನವು ಇದ್ದಕ್ಕಿದ್ದಂತೆ ಪ್ರಾರಂಭವಾಗಲಿಲ್ಲ. ತಮ್ಮ ಗಂಡನಿಂದ ಬೇರ್ಪಟ್ಟ ನಂತರ, ಅವರು ಪುರುಷರು ಮಾಡುವಂತಹ ಕೆಲಸಗಳನ್ನು ಮಾಡುತ್ತಿದ್ದರು. ನಂತರ, ಅವರು ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ (ಡಿಡಿಎಸ್) ಎಂಬ ಮಹಿಳಾ ಗುಂಪಿನ ಸದಸ್ಯರಾದರು, ಆ ಗುಂಪು ಬಂಜರು ಭೂಮಿಯನ್ನು ಕಾಡುಗಳಾಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತದೆ.


ಸಣ್ಣ ನರ್ಸರಿಯಿಂದ ಪ್ರಾರಂಭಿಸಿದ ಚಿಕಪಲ್ಲಿ ಈಗ ತಮ್ಮ ಗ್ರಾಮದ ಸುತ್ತಲಿನ ಬಂಜರು ಭೂಮಿಯನ್ನು ಕಾಡುಗಳಾಗಿ ಪರಿವರ್ತಿಸಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ದೃಢ ನಿಶ್ಚಯಕ್ಕೆ ಧನ್ಯವಾದಗಳು, ಇಂದು 16 ಹಳ್ಳಿಗಳು ಅವರ ಕಾರ್ಯಗಳಿಂದ ಲಾಭ ಪಡೆಯುತ್ತಿವೆ, ಇದರಿಂದಾಗಿ ಅವರು ಈಗ ಗುಬ್ಬಡಿ ಅನಸೂಯಮ್ಮ ಎಂದು ಜನಪ್ರಿಯರಾಗಿದ್ದಾರೆ.


12-16 ಎಕರೆ ಪ್ರದೇಶದಲ್ಲಿ ಹರಡಿರುವ ನೆರೆಹೊರೆಯ ಹಳ್ಳಿಯ ಕಾಡಿನಲ್ಲಿ, ಮರ, ಹಣ್ಣುಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತದೆ.


ಆದಾಗ್ಯೂ, ತೆಲಂಗಾಣದ ಇಂದೂರ್ ಗ್ರಾಮದಲ್ಲಿ ಮಾಡಿದ ಕೆಲಸವು ಅವರ ಸ್ಮರಣೀಯ ಕಾರ್ಯಗಳಲ್ಲಿ ಒಂದು. ಸಿಂಗೂರ್ ಅಣೆಕಟ್ಟು ಯೋಜನೆಯಿಂದ 1990 ರಲ್ಲಿ ಮುಳುಗಿದ 49 ಗ್ರಾಮಗಳಲ್ಲಿ ಈ ಗ್ರಾಮವೂ ಒಂದು. ಸತ್ಯಾಸತ್ಯತೆಯನ್ನು ತಿಳಿದ ನಂತರ, ಚಿಕಪಲ್ಲಿ ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ, ಹತ್ತಿರದ ಗುಡ್ಡವನ್ನು ಸಮುದಾಯಕ್ಕೆ ಆಹಾರ ಮತ್ತು ಜೀವನೋಪಾಯದ ಮೂಲವಾಗಿ ಅಭಿವೃದ್ಧಿಪಡಿಸಬಹುದು ಎಂದು ಬುಡಕಟ್ಟು ಜನಾಂಗದವರಿಗೆ ಮನವರಿಕೆ ಮಾಡಿಕೊಟ್ಟರು.


ಅಷ್ಟೇ ಅಲ್ಲದೆ ಈ ಪರಿಸರ ಹೋರಾಟಗಾರ್ತಿ ಸುಮಾರು 40 ದಲಿತ ಮಹಿಳೆಯರಿಗೆ 28 ​​ಹೆಕ್ಟೇರ್ ಗುಡ್ಡದಲ್ಲಿ ಹರಡಿರುವ ಅರಣ್ಯವನ್ನು ಅಭಿವೃದ್ಧಿಪಡಿಸಲು ತರಬೇತಿ ನೀಡಿದ್ದಾರೆ.


ಚಿಕಪಲ್ಲಿ ಹೇಳುತ್ತಾರೆ,


“ಪ್ರತಿದಿನ, ಮಹಿಳೆಯರು ಭೂಮಿಯನ್ನು ತೇವವಾಗಿಸಲು ತಾಳ್ಮೆಯಿಂದ ನೀರಿನ ಮಡಕೆಗಳನ್ನು ಒಯ್ಯುತ್ತಿದ್ದರು. ಶೀಘ್ರದಲ್ಲೇ, ಅದು ಅರಳಲು ಪ್ರಾರಂಭಿಸಿತು, ಮತ್ತು ಬೆಟ್ಟದ ಒಂದು ಭಾಗವು ಹಸಿರು ಬಣ್ಣಕ್ಕೆ ತಿರುಗಿತು”.

ಇಂದು, ಕಾಡಿನಲ್ಲಿ 0.3 ಮಿಲಿಯನ್ ಮರಗಳಿವೆ, ಇದು ಸಂಪೂರ್ಣ ಅರಣ್ಯವಾಗಿ ಬೆಳೆಯಲು ಐದು ವರ್ಷಗಳನ್ನು ತೆಗೆದುಕೊಂಡಿತು. ಇದು ಇಂಧನ, ಔಷಧೀಯ ಗಿಡಮೂಲಿಕೆಗಳು ಮತ್ತು ಸಮುದಾಯಕ್ಕೆ ಆಹಾರದ ಮೂಲವಾಗಿಯೂ ಹೊರಹೊಮ್ಮಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.