ತಮ್ಮ ವೃದ್ಧ ಮನೆ ಕೆಲಸದವರಿಗೆ ಸಹಾಯ ಮಾಡಲು ಮುಂಜಾನೆ ಸಮಯದಲ್ಲಿ ಚಿಕ್ಕ ಹೊಟೇಲ್‌ ನಡೆಸುತ್ತಿದ್ದಾರೆ ಮುಂಬೈನ ದಂಪತಿಗಳು

ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುವ ಈ ಗುಜರಾತಿ ದಂಪತಿಗಳು ಬೆಳಿಗ್ಗೆ 4:00 ಗಂಟೆಗೆ ತಮ್ಮ ಆಹಾರ ಮಳಿಗೆ ಸ್ಥಾಪಿಸಿ ಪೋಹಾ, ಉಪ್ಪಿಟ್ಟು ಪರಾಥಾ ಮತ್ತು ಇಡ್ಲಿಗಳನ್ನು ಮಾರುವ ಮೂಲಕ ಹಣವನ್ನು ಸಂಗ್ರಹಿಸಿದ್ದಾರೆ.

ತಮ್ಮ ವೃದ್ಧ ಮನೆ ಕೆಲಸದವರಿಗೆ ಸಹಾಯ ಮಾಡಲು ಮುಂಜಾನೆ ಸಮಯದಲ್ಲಿ ಚಿಕ್ಕ ಹೊಟೇಲ್‌ ನಡೆಸುತ್ತಿದ್ದಾರೆ ಮುಂಬೈನ ದಂಪತಿಗಳು

Monday October 14, 2019,

2 min Read

ಬಡತನವನ್ನು ನಿಭಾಯಿಸುವಲ್ಲಿ ಸರ್ಕಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಮೂಲಭೂತ ಆರೋಗ್ಯ ರಕ್ಷಣೆಯ ಕೊರತೆಯನ್ನು ಹೋಗಲಾಡಿಸುವಲ್ಲಿ ಮುಂಬೈನ ಈ ಎಂಬಿಎ ದಂಪತಿಗಳಂತೆ ಅನೇಕ ವ್ಯಕ್ತಿಗಳು ಮತ್ತು ಎನ್‌ಜಿಒಗಳು ಇತ್ತೀಚಿನ ದಿನಗಳಲ್ಲಿ ಮುಂದೆ ಬಂದಿವೆ.


ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುವ ಈ ಗುಜರಾತಿ ದಂಪತಿಗಳು ಮುಂಬೈನ ಕಂಡ್ವಲಿ ನಿಲ್ದಾಣದ ಹೊರಗೆ ಬೆಳಿಗ್ಗೆ 4:00 ಗಂಟೆಗೆ ಪೋಹಾ, ಉಪ್ಪಿಟ್ಟು, ಪರಾಠಾ ಮತ್ತು ಇಡ್ಲಿಗಳಂತಹ ತಿಂಡಿಗಳನ್ನು ಮಾರಾಟ ಮಾಡಲು ತಮ್ಮ ಆಹಾರ ಮಳಿಗೆಯನ್ನು ಸ್ಥಾಪಿಸಿದರು.


ದಿ ಲಾಜಿಕಲ್ ಇಂಡಿಯನ್ ಪ್ರಕಾರ, ಅಶ್ವಿನಿ ಶೆಣೈ ಶಾ ಮತ್ತು ಅವರ ಪತಿ ತಮ್ಮ 55 ವರ್ಷದ ವಯಸ್ಸಾದ ಮನೆ ಕೆಲಸದಾಕೆಯ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಪತಿಗೆ ಸಹಾಯ ಮಾಡಲು ಆಹಾರ ಮಳಿಗೆಯನ್ನು ಸ್ಥಾಪಿಸಿದ್ದಾರೆ.


ಪತಿ ಅಂಕುಶ್ ಆಗಮ್ ಷಾ ಅವರೊಂದಿಗೆ ಅಶ್ವಿನಿ ಶೆಣೈ ಶಾ (ಚಿತ್ರಕೃಪೆ: ಫೆಸ್‌ ಬುಕ್)


ದೀಪಾಲಿ ಭಾಟಿಯಾ ಎಂಬ ಫೇಸ್‌ಬುಕ್ ಬಳಕೆದಾರರು ದಂಪತಿಗಳ ಸ್ಟಾಲ್‌ನಲ್ಲಿ ಸ್ವಲ್ಪ ಆಹಾರವನ್ನು ಸೇವಿಸಿ, ತಮ್ಮ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ಅನುಭವವನ್ನು ಹಂಚಿಕೊಂಡಾಗ ಈ ದಂಪತಿಗಳು ಪ್ರಸಿದ್ಧರಾದರು.


ಯಾವಾಗಲೂ ಗಡಿಬಿಡಿಯಲ್ಲೇ ಇರುವ ಮುಂಬೈನಂತಹ ಪ್ರದೇಶದಲ್ಲಿ, ನಾವು ಯೋಚಿಸಲು ವಿರಳವಾಗಿ ಸಮಯವನ್ನು ಹೊಂದಿದ್ದೇವೆ, ಇಲ್ಲಿ ಇಬ್ಬರು ಸೂಪರ್‌ ಹೀರೋಗಳು ತಮ್ಮ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚು ಬೇರೆಯವರ ಬಗ್ಗೆ ಯೋಚಿಸುತ್ತಾರೆ. ಅಕ್ಟೋಬರ್ 2 ರ ಮುಂಜಾನೆ, ಉತ್ತಮ ಆಹಾರವನ್ನು ಹುಡುಕಿಕೊಂಡು ನಾವು ಕಂಡಿವಲಿ ನಿಲ್ದಾಣದ ಹೊರಗೆ ಒಂದು ಪೋಹಾ, ಉಪ್ಮಾ, ಪರಠಾ ಮತ್ತು ಇಡ್ಲಿಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ತಲುಪಿದೆವು. ಅವರು ಗುಜರಾತಿ ಕುಟುಂಬಕ್ಕೆ ಸೇರಿದವರಂತೆ ಕಾಣುವ ಮಾರಾಟಗಾರಂತೆ ಕಂಡರು ಮತ್ತು ಸ್ವಲ್ಪ ಆಹಾರವನ್ನು ರುಚಿ ನೋಡಿದ ನಂತರ, ಅವರು ರಸ್ತೆಯಲ್ಲಿ ಆಹಾರವನ್ನು ಹೇಗೆ ಮಾರಾಟ ಮಾಡುತ್ತಿದ್ದಾರೆ ಎಂದು ನಾನು ಕೇಳಿದೆ. ಅತ್ಯಂತ ಸ್ಪೂರ್ತಿದಾಯಕ ಕತೆಯನ್ನು ಕೇಳಿ ನಾನು ತುಂಬಾ ರೋಮಾಂಚನಗೊಂಡೆ” ಎಂದು ಅವರು ಪೋಸ್ಟ್ನಲ್ಲಿ ಬರೆದು ಹಂಚಿಹೊಂದಿದ್ದಾರೆ.


ಈ ಪೋಸ್ಟ್‌ಗೆ ಇದುವರೆಗೆ 11,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ 4,800 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ನೆಟ್ಟಿಗರು ಸಹ ಕಾಮೆಂಟ್ಗಳ ವಿಭಾಗದಲ್ಲಿ ಅಶ್ವಿನಿಯನ್ನು ಶ್ಲಾಘಿಸಿದ್ದಾರೆ ಮತ್ತು "ಗ್ರೇಟ್ ಜಾಬ್... ಹ್ಯಾಟ್ಸ್ ಆಫ್" ಎಂದು ಹೇಳಿದ್ದಾರೆ.