ವಿಶ್ವದ ಅರ್ಧದಷ್ಟು ಆರ್ಥಿಕತೆಯು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ: ಡಬ್ಲ್ಯೂಇಎಫ್ ಅಧ್ಯಯನ

ಜೀವವೈವಿಧ್ಯತೆಯ ನಷ್ಟ ಮತ್ತು ಹವಾಮಾನ ವೈಪರಿತ್ಯವು ಆರ್ಥಿಕತೆಗೆ ದೊಡ್ಡ ಅಪಾಯಗಳನ್ನು ತಂದೊಡ್ಡುತ್ತಿದೆ ಎಂದು ಭಾನುವಾರ ನಡೆದ ಹೊಸ ಡಬ್ಲ್ಯೂಇಎಫ್ ಅಧ್ಯಯನವು ತಿಳಿಸಿದೆ.

ವಿಶ್ವದ ಅರ್ಧದಷ್ಟು ಆರ್ಥಿಕತೆಯು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ: ಡಬ್ಲ್ಯೂಇಎಫ್ ಅಧ್ಯಯನ

Tuesday January 21, 2020,

2 min Read

ಜೀವವೈವಿಧ್ಯತೆಯ ನಷ್ಟ ಮತ್ತು ಹವಾಮಾನ ವೈಪರಿತ್ಯವು ಆರ್ಥಿಕತೆಗೆ ದೊಡ್ಡ ಅಪಾಯಗಳನ್ನು ತಂದೊಡ್ಡುತ್ತಿದೆ ಎಂದು ಭಾನುವಾರ ನಡೆದ ಹೊಸ ಡಬ್ಲ್ಯೂಇಎಫ್ ಅಧ್ಯಯನವು ತಿಳಿಸಿದೆ. ಅದರ ಪ್ರಕಾರ ಆರ್ಥಿಕ ವ್ಯವಹಾರಗಳು ಹೆಚ್ಚಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ, ಅಂದರೆ 44 ಟ್ರಿಲಿಯನ್ ಯುಎಸ್‌ಡಿ ಅಥವಾ ವಿಶ್ವದ ಜಿಡಿಪಿಯ ಅರ್ಧದಷ್ಟು ಮಾನ್ಯತೆ ಹೊಂದಿದೆ ಎಂದು ಅಂದಾಜಿಸಲಾಗಿದೆ.


ನೇಚರ್ ರಿಸ್ಕ್ ರೈಸಿಂಗ್ ವರದಿಯನ್ನು ತನ್ನ 50ನೇ ವಾರ್ಷಿಕ ಸಭೆಗೆ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದ್ದು, ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯೂಇಎಫ್), ಹಲವು ದಶಕಗಳಲ್ಲಿ, ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಗಳಲ್ಲಿ ಸುಮಾರು 25% ಪ್ರತಿಶತದಷ್ಟು ಮಾನವನ ಚಟುವಟಿಕೆಗಳಿಂದ ಬೆದರಿಕೆಗೆ ಒಳಗಾಗಿವೆ ಮತ್ತು ಒಂದು ದಶಲಕ್ಷ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ಹೇಳಿದೆ.


ಚೀನಾ, ಯುರೋಪ್ ಮತ್ತು ಯುಎಸ್ ಪ್ರಕೃತಿ-ಅವಲಂಬಿತ ಕೈಗಾರಿಕೆಗಳಲ್ಲಿ ಅತ್ಯಧಿಕ ಸಂಪೂರ್ಣ ಆರ್ಥಿಕ ಮೌಲ್ಯವನ್ನು ಹೊಂದಿವೆ.


163 ಕೈಗಾರಿಕಾ ಕ್ಷೇತ್ರಗಳು, ಅವುಗಳ ಪೂರೈಕೆ ಸರಪಳಿಗಳ ಮೇಲಿನ ವಿಶ್ಲೇಷಣೆಯೊಂದರ ಪ್ರಕಾರ ವಿಶ್ವದ ಜಿಡಿಪಿಯ ಅರ್ಧದಷ್ಟು ಭಾಗವು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ‌. ಪರಾಗಸ್ಪರ್ಶ, ನೀರಿನ ಗುಣಮಟ್ಟ ಮತ್ತು ರೋಗ ನಿಯಂತ್ರಣ ಪರಿಸರ ವ್ಯವಸ್ಥೆಯು ಒದಗಿಸುವ ಸೇವೆಗಳಿಗೆ ಮೂರು ಉದಾಹರಣೆಗಳಾಗಿವೆ‌.


ವಿಶ್ವದ ಒಟ್ಟು ಜಿಡಿಪಿಯ ಅರ್ಧದಷ್ಟು ಅಂದರೆ 44 ಟ್ರಿಲಿಯನ್ ಯುಎಸ್ ಡಾಲರ್‌ ಆರ್ಥಿಕ ಮೌಲ್ಯ ಉತ್ಪಾದನೆಯಾಗುತ್ತದೆ ಎಂದು ವರದಿ ಹೇಳುತ್ತದೆ. ಇದು ಮಧ್ಯಮ ಮತ್ತು ಹೆಚ್ಚು ಪ್ರಕೃತಿ ಮತ್ತು ಅದರ ಸೇವೆಗಳ ಮೇಲೆ ಅವಲಂಬಿತವಾಗಿದೆ ಮತ್ತು ಇದರ ಪರಿಣಾಮವಾಗಿ, ಪ್ರಕೃತಿಯ ನಷ್ಟದಿಂದ ಉಂಟಾಗುವ ಅಪಾಯಗಳಿಗೆ ಒಡ್ಡಿಕೊಳ್ಳುತ್ತದೆ‌.


ನಿರ್ಮಾಣಕ್ಕೆ(4 ಟ್ರಿಲಿಯನ್ ಯುಎಸ್‌ಡಿ), ಕೃಷಿ(2.5 ಟ್ರಿಲಿಯನ್ ಯುಎಸ್‌ಡಿ) ಮತ್ತು ಆಹಾರ ಮತ್ತು ಪಾನೀಯಗಳು(1.4 ಟ್ರಿಲಿಯನ್ ಯುಎಸ್‌ಡಿ) ಇವು ಪ್ರಕೃತಿಯನ್ನು ಹೆಚ್ಚು ಅವಲಂಬಿಸಿರುವ ಮೂರು ದೊಡ್ಡ ಕೈಗಾರಿಕೆಗಳಾಗಿವೆ. ಇದನ್ನೆಲ್ಲ ಸೇರಿಸಿದರೆ, ಅವುಗಳ ಮೌಲ್ಯವು ಜರ್ಮನ್ ಆರ್ಥಿಕತೆಯ ಸರಿಸುಮಾರು ಎರಡು ಪಟ್ಟಷ್ಟಿದೆ.


ಈ ಕೈಗಾರಿಕೆಗಳು ಅರಣ್ಯ ಮತ್ತು ಸಮುದ್ರಗಳಿಂದ ಸಂಪನ್ಮೂಲಗಳನ್ನು ನೇರವಾಗಿ ಹೊರ ತೆಗೆಯುವುದು ಅಥವಾ ಆರೋಗ್ಯಕರ ಮಣ್ಣಿನಂತಹ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುವುದನ್ನು ಅವಲಂಬಿಸಿವೆ.


ಅಂತಹ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಪ್ರಕೃತಿ ಕಳೆದುಕೊಳ್ಳುವುದರಿಂದ, ಈ ಕೈಗಾರಿಕೆಗಳು ಗಮನಾರ್ಹವಾಗಿ ತೊಂದರೆಗೀಡಾಗಬಹುದು. ಪ್ರಕೃತಿಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಕೈಗಾರಿಕೆಗಳು ಜಾಗತಿಕ ಜಿಡಿಪಿಯ 15%ರಷ್ಟು (13 ಟ್ರಿಲಿಯನ್ ಯುಎಸ್‌ಡಿ) ಉತ್ಪಾದಿಸಿದರೆ, ಮಧ್ಯಮ ಅವಲಂಬಿತ ಕೈಗಾರಿಕೆಗಳು 37% ರಷ್ಟನ್ನು‌ ಉತ್ಪಾದಿಸುತ್ತವೆ.


ಪಿಡಬ್ಲ್ಯೂಸಿ ಯುಕೆ ಸಹಯೋಗದೊಂದಿಗೆ ತಯಾರಿಸಲ್ಪಟ್ಟಿರುವ ಈ ವಿಶ್ವ ಆರ್ಥಿಕ ವೇದಿಕೆ ವರದಿಯು, ಅನೇಕ ಕೈಗಾರಿಕೆಗಳು ಅವುಗಳ ಪೂರೈಕೆ ಸರಪಳಿಯಲ್ಲಿ ಪ್ರಕೃತಿಯ ಮೇಲೆ ಗುಪ್ತ ಅವಲಂಬನೆಗಳನ್ನು ಹೊಂದಿವೆ ಮತ್ತು ನಿರೀಕ್ಷೆಗಿಂತ ಹೆಚ್ಚು ತೊಂದರೆ ಅನುಭವಿರುವ ಅಪಾಯವಿದೆ ಎಂದು ಹೇಳುತ್ತದೆ.


ಉದಾಹರಣೆಗೆ, ಪ್ರಕೃತಿಯ ಮೇಲೆ ಹೆಚ್ಚು ಅವಲಂಬಿತವಾಗಿರುವ ನೇರ ಕೈಗಾರಿಕೆ ಮೌಲ್ಯವರ್ಧನೆಯ (ಜಿವಿಎ) 15% ಕ್ಕಿಂತ ಕಡಿಮೆಯಿರುವ ಆರು ಕೈಗಾರಿಕೆಗಳಿವೆ, ಇನ್ನೂ ಅವರ ಪೂರೈಕೆ ಸರಪಳಿಗಳ 50% ಜಿವಿಎ, ಹೆಚ್ಚು ಅಥವಾ ಮಧ್ಯಮವಾಗಿ ಪ್ರಕೃತಿಯನ್ನು ಅವಲಂಬಿಸಿದೆ. ಅವುಗಳೆಂದರೆ, ರಾಸಾಯಿನಿಕಗಳು ಮತ್ತು ವಸ್ತುಗಳು; ವಾಯುಯಾನ, ಪ್ರಯಾಣ ಮತ್ತು ಪ್ರವಾಸೋದ್ಯಮ; ರಿಯಲ್ ಎಸ್ಟೇಟ್; ಗಣಿಗಾರಿಕೆ ಮತ್ತು ಲೋಹಗಳು; ಪೂರೈಕೆ ಸರಪಳಿ ಮತ್ತು ಸಾರಿಗೆ; ಚಿಲ್ಲರೆ ವ್ಯಾಪಾರ, ಗ್ರಾಹಕ ಸರಕುಗಳು ಮತ್ತು ಜೀವನಶೈಲಿ.


ಜಾಗತಿಕ ಮಾನ್ಯತೆಗೆ ಸಂಬಂಧಿಸಿದಂತೆ, ದೊಡ್ಡ ಆರ್ಥಿಕತೆಗಳು ಪ್ರಕೃತಿ-ಅವಲಂಬಿತ ಕ್ಷೇತ್ರಗಳಲ್ಲಿ ಜಿಡಿಪಿಯ ಅತ್ಯಧಿಕ ಪ್ರಮಾಣವನ್ನು ಹೊಂದಿವೆ. ಚೀನಾದಲ್ಲಿ 2.7 ಟ್ರಿಲಿಯನ್ ಯುಎಸ್‌ಡಿ, ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಲ್ಲಿ 2.4 ಟ್ರಿಲಿಯನ್ ಯುಎಸ್‌ಡಿ, ಮತ್ತು ಅಮೇರಿಕಾ ಸಂಯುಕ್ತ ರಾಷ್ಟ್ರಗಳಲ್ಲಿ 2.1 ಟ್ರಿಲಿಯನ್ ಯುಎಸ್‌ಡಿ ಇದೆ.


ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ನಾವು ಮರುಹೊಂದಿಸಬೇಕಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪಕ ನಿರ್ದೇಶಕ ಡೊಮೆನಿಕ್ ವಾಘ್ರೇ ಹೇಳುತ್ತಾರೆ.


ಆರ್ಥಿಕ ಚಟುವಟಿಕೆಯಿಂದ ಪ್ರಕೃತಿಗೆ ಆಗುವ ಹಾನಿಯನ್ನು ಇನ್ನೂ ಬಾಹ್ಯತೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ವರದಿಯೊಂದು ಹೇಳುತ್ತದೆ.


ಹವಾಮಾನ ಅಪಾಯಗಳನ್ನು ಗುರುತಿಸಲು, ಅಳೆಯಲು ಮತ್ತು ನಿರ್ವಹಿಸಲು ಹಣಕಾಸು ಸ್ಥಿರತೆ ಮಂಡಳಿಯ ಹವಾಮಾನ-ಸಂಬಂಧಿತ ಹಣಕಾಸು ಪ್ರಕಟಣೆಗಳ (ಟಿಸಿಎಫ್‌ಡಿ) ಟಾಸ್ಕ್ ಪೋರ್ಸ್ ಪ್ರಸ್ತಾಪಿಸಿರುವ ಚೌಕಟ್ಟನ್ನು ಅನೇಕ ದೊಡ್ಡ ಉದ್ಯಮಗಳು ಈಗಾಗಲೇ ಅಳವಡಿಸಿಕೊಂಡಿವೆ ಇದನ್ನು ಪ್ರಕೃತಿಯ ಅಪಾಯಗಳನ್ನು ನಿರ್ವಹಿಸಲು ಹೊಂದಿಸಿಕೊಳ್ಳಬಹುದು ಮತ್ತು ಹತೋಟಿಯಲ್ಲಿಡಬಹುದು ಎಂದು ಡಬ್ಲ್ಯೂಇಎಫ್ ಹೇಳಿದೆ.