ಆರೋಗ್ಯ ಮತ್ತು ಶಿಕ್ಷಣದ ಉಪಕ್ರಮಗಳೊಂದಿಗೆ ಜೀವನವನ್ನು ಬದಲಾಯಿಸುತ್ತಿದ್ದಾರೆ ಜಾರ್ಖಂಡ್‌ನ ಈ ಐಎಎಸ್ ಅಧಿಕಾರಿ

ಸಿಂಘ್‌ಭೂಮ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆದಿತ್ಯ ರಂಜನ್ ಅವರು ಅಂಗನವಾಡಿ ವ್ಯವಸ್ಥೆಯನ್ನು ಮಾದರಿಯಾಗಿ ಪರಿವರ್ತಿಸಿದ್ದಾರೆ.

ಆರೋಗ್ಯ ಮತ್ತು ಶಿಕ್ಷಣದ ಉಪಕ್ರಮಗಳೊಂದಿಗೆ ಜೀವನವನ್ನು ಬದಲಾಯಿಸುತ್ತಿದ್ದಾರೆ ಜಾರ್ಖಂಡ್‌ನ ಈ ಐಎಎಸ್ ಅಧಿಕಾರಿ

Saturday February 29, 2020,

2 min Read

ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯವು ಸಹ ಅಭಿವೃದ್ಧಿ ಹೊಂದಬೇಕಾದ ಪ್ರಮುಖ ಕ್ಷೇತ್ರವಾಗಿದ್ದು, ನಾಗರಿಕರು ಇದರ ಅಭಿವೃದ್ಧಿ ಮತ್ತು ಪ್ರಗತಿಗೆ ಕೆಲಸ ಮಾಡಬೇಕು. 


ಜಾರ್ಖಂಡ್‌ನ ಐಎಎಸ್ ಅಧಿಕಾರಿ ಆದಿತ್ಯ ರಂಜನ್ ಜಾರ್ಖಂಡ್‌ನ ಸಿಂಘ್‌ಭೂಮ್‌ ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾರೆ.


ಈ ಜಿಲ್ಲೆಯಲ್ಲಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಸಿ) ಆಗಿ ಆದಿತ್ಯ ರಂಜನ್ ಅಂಗನವಾಡಿ ವ್ಯವಸ್ಥೆಯನ್ನು ಮಾದರಿಯಾಗಿ ಮಾರ್ಪಡಿಸಿದ್ದಾರೆ. ಅಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸಿಗುತ್ತದೆ.


ಆದಿತ್ಯ ರಂಜನ್ (ಚಿತ್ರಕೃಪೆ: ಫೇಸ್‌ಬುಕ್‌)

ಈ ಕೇಂದ್ರಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಆದಿತ್ಯರಿಗೆ ಸಹಾಯ ಮಾಡಿದ ಟಿಟ್ಲಿ ಎಂಬ ಎನ್‌ಜಿಓ ದಿಂದ ಇದನ್ನು ಸಾಧಿಸಲಾಗಿದೆ. ಕೇಂದ್ರಗಳು ಈಗ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲು ಸಜ್ಜುಗೊಂಡಿವೆ ಮತ್ತು ಉಚಿತ ಔಷಧಿಗಳನ್ನು ಸಹ ಒದಗಿಸುತ್ತವೆ.


ದಿ ಲಾಜಿಕಲ್ ಇಂಡಿಯನ್ ಜೊತೆಗೆ ಮಾತನಾಡಿದ ಆದಿತ್ಯ ಅವರು, 


"ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ವೇಗ ನಿಧಾನವಾಗಿದೆ. ಆದ್ದರಿಂದ, ನೀವು ಯಾವುದೇ ಹೊಸ ಉಪಕ್ರಮವನ್ನು ಕಾರ್ಯಗತಗೊಳಿಸಲು ಮತ್ತು ಅದರ ಫಲಿತಾಂಶಗಳನ್ನು ವಿಶ್ಲೇಷಿಸಲು ಬಯಸಿದ್ದರೂ ಸಹ, ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿಯವರೆಗೆ, ನಾವು ಜಿಲ್ಲೆಯ ಜನರಿಂದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದೇವೆ. ಅದು ನನ್ನನ್ನು ಪ್ರತಿದಿನ ಉಲ್ಲಾಸಗೊಳಿಸುತ್ತದೆ. ನಿಮ್ಮ ಕೆಲಸದಿಂದ ನೀವು ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸಿದಾಗ ಅದು ಅಪಾರ ತೃಪ್ತಿಯನ್ನು ನೀಡುತ್ತದೆ ಮತ್ತು ಆ ಭಾವನೆಯನ್ನು ಬೇರೆ ಯಾವುದು ತುಂಬಲಾಗದಂತದ್ದು. ಹೊಸ ಅಂಗನವಾಡಿ ಕೇಂದ್ರಗಳನ್ನು ತೆರೆಯುವುದರಿಂದ ನಾವು ಹಣಕಾಸಿನ ಕೊರತೆಯನ್ನು ಎದುರಿಸಬೇಕಾಗಬಹುದು. ಇಂತಹ ಯಶಸ್ವಿ ಯೋಜನೆಗಳಿಗೆ ರಾಜ್ಯವು ಹೆಚ್ಚಿನ ಹಣವನ್ನು ಮೀಸಲಿಡುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದರು.


ಈಗ ಆದಿತ್ಯ ಅವರು ವರ್ಷದ ಅಂತ್ಯದ ವೇಳೆಗೆ ಜಿಲ್ಲೆ ಮತ್ತು ರಾಜ್ಯದಾದ್ಯಂತ ಸುಮಾರು 1,000 ಅಂಗನವಾಡಿಗಳನ್ನು ಅಭಿವೃದ್ಧಿಪಡಿಸಬೇಕೆಂದುಕೊಂಡಿದ್ದಾರೆ.


ಶಿಕ್ಷಣದ ವಿಷಯದಲ್ಲಿ ಐಎಎಸ್ ಅಧಿಕಾರಿ ಜಿಲ್ಲಾ ಇ-ಗವರ್ನನ್ಸ್ ಸೊಸೈಟಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು (ಡಿಜಿಎಸ್) ಪ್ರಾರಂಭಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ಕಂಪ್ಯೂಟರ್ ಶಿಕ್ಷಣವು ದೊರೆಯುತ್ತದೆ.


ಈ ಪ್ರೋಗ್ರಾಂ ಕಂಪ್ಯೂಟರ್‌ಗಳ ಎಲ್ಲಾ ಮೂಲಭೂತ ಅಂಶಗಳನ್ನು ಹಾಗೂ 32 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಎರಡು ತಿಂಗಳ ಸುದೀರ್ಘ ಕೋರ್ಸ್ ಅನ್ನು ಒಳಗೊಂಡಿದೆ ಮತ್ತು ಸುಮಾರು 1,700 ವಿದ್ಯಾರ್ಥಿಗಳು ಈಗಾಗಲೇ ಇದರ ಪ್ರಯೋಜನವನ್ನು ಪಡೆದಿದ್ದಾರೆ.


(ಚಿತ್ರಕೃಪೆ: ಫೇಸ್‌ಬುಕ್‌)




ಗಣಿತ ಮತ್ತು ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ‘ವಂಡರ್ ಆನ್ ವೀಲ್ಸ್’ ಕಾರ್ಯಕ್ರಮವನ್ನು ಪರಿಚಯಿಸಿದ್ದಾರೆ. ಇದು ಶಿಕ್ಷಣವನ್ನು ಮುಂದುವರೆಸುವಾಗ ವಿಜ್ಞಾನ ಕ್ಷೇತ್ರವನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ.


ಮೂಲಸೌಕರ್ಯದ ವೆಚ್ಚವನ್ನು ನಿಭಾಯಿಸಲು ಆದಿತ್ಯ ಪ್ರತಿ ಪ್ರದೇಶದ ವಿದ್ಯಾರ್ಥಿಗಳನ್ನು ತಲುಪುವ ಹೊಸ ಉಪಕ್ರಮವನ್ನು ಜಾರಿಗೊಳಿಸಿದರು. ಇದುವರೆಗೆ ಇದು ಚಕ್ರಧರಪುರದ ಸದರ್ ಪ್ರದೇಶದ 30 ಶಾಲೆಗಳನ್ನು ತಲುಪಿದೆ.


ಆದಿತ್ಯ ಅವರು 2015 ರಲ್ಲಿ ಎಐಆರ್ 99 ನೊಂದಿಗೆ ಯುಪಿಎಸ್ಸಿ ಪರೀಕ್ಷೆಯನ್ನು ಬರೆದಿದ್ದಾರೆ. ವರದಿ ಹ್ಯೂಮನ್ಸ್ ಆಫ್ ಜಾರ್ಖಂಡ್.

“ಒಬ್ಬ ಸಾಮಾನ್ಯ ಮನುಷ್ಯನಾಗಿರುವ ನಾನು ಯಾವಾಗಲೂ ಸಣ್ಣ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿದ್ದೆ, ಅದನ್ನು ಶಕ್ತಿಯಿಂದ ಜನರು ಸುಲಭವಾಗಿ ಪರಿಹರಿಸಬಹುದು, ಆದರೂ ಅವು ಅತೃಪ್ತಿಕರವಾಗಿ ಉಳಿದಿವೆ. ಆದ್ದರಿಂದ ನಾನು ಬದಲಾವಣೆಯನ್ನು ಬಯಸಿದೆ. ಸವಾಲನ್ನು ಸ್ವೀಕರಿಸಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧವಾಗಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ,” ಎಂದರು.