Kannada Latest

ಈ ಐಎಎಸ್ ಅಧಿಕಾರಿ: ಪರ್ವಾತರೋಹಿ, ಸಮರ ಕಲಾವಿದ ಹಾಗೂ ಲೇಖಕರೂ ಕೂಡ ಹೌದು!

37 ವರ್ಷದ‌ ರವೀಂದ್ರ ಕುಮಾರ್ ಅವರು ಕೇವಲ ಐಐಎಸ್ ಅಧಿಕಾರಿ ಮಾತ್ರವಲ್ಲದೆ ಪರ್ವತಾರೋಹಿ, ಸಾಹಸಿಗ, ಲೇಖಕ ಹಾಗೂ ಸಮರ ಕಲಾವಿದರು ಹೌದು.

Team YS Kannada
16th Aug 2019
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಯಾರಿಗಾದರೂ ನೀವು ಐಐಎಸ್ ಅಧಿಕಾರಿ ಹೇಗಿರುತ್ತಾರೆ ಎಂದು ಕೇಳಿದಾಗ, ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಅವರ ಕೆಲಸದ ಸ್ಬರೂಪ. ಫೈಲ್ ಗಳೊಂದಿಗೆ ಜೋಡಿಸಿದ‌ ಮೇಜಿನ ಮುಂದೆಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂದೇ ನಾವು ಭಾವಿಸುತ್ತೇವೆ. ಆದರೆ 37 ವರ್ಷದ ರವೀಂದ್ರ ಕುಮಾರ್ ಅವರು ಈ ಸಾಲಿಗೆ ಸೇರ್ಪಡೆಯಾಗುವುದಿಲ್ಲ.


ಟ

ರವೀಂದ್ರ ಕುಮಾರ್ ಮೌಂಟ್ ಎವರೆಸ್ಟ್ ಶಿಖರ ಏರುತ್ತಿರುವುದು

ರವೀಂದ್ರ ಕುಮಾರ್ ಅನೇಕ ಹವ್ಯಾಸಗಳ‌‌ ಟೋಪಿಗಳನ್ನು ಹೊತ್ತಿದ್ದಾರೆ. ಮಾಜಿ ಸಮುದ್ರ ನಾವಿಕ, ಸಾಹಸಿಗ, ಲೇಖಕ‌‌ ಮತ್ತು ಸಮರ ಕಲಾವಿದರಾಗಿದ್ದಾರೆ. ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ ಮೊದಲ ಐಎಎಸ್ ಅಧಿಕಾರಿ, ಮತ್ತು ನಂತರ ಅದೇ ಶೃಂಗಸಭೆಗೆ ಐಎಎಸ್ ಅಧಿಕಾರಿಗಳ ಮತ್ತೊಂದು ತಂಡವನ್ನು ಮುನ್ನೆಡೆಸಿದರು.


ರವೀಂದ್ರ ಅವರು ಬಿಹಾರ ರಾಜ್ಯದ ಬೆಗುಸರಾಯ್ ಜಿಲ್ಲೆಯ ವಿನಮ್ರ ಎನ್ನುವ ರೈತ ಕುಟುಂಬದಲ್ಲಿ ಜನಿಸಿದರು‌. ಅವರ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದರೆ, ಅವರಿಗೆ ಅವಕಾಶಗಳು ಸಿಗುವುದು ಬಹಳ ವಿರಳವಾಗಿತ್ತು. ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೆ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಕೆಲವು ವರ್ಷಗಳ ನಂತರ ನಾಗರಿಕ ಸೇವಾ ಪರೀಕ್ಷೆಯನ್ನು ಬರೆದರು.


ಟ

ರವೀಂದ್ರ ಕುಮಾರ್ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ನಂತರ

"ಐಐಟಿ ತರಬೇತಿಯ ಜೊತೆಗೆ ಹನ್ನೆರಡನೆಯ ತರಗತಿಯ ಶುಲ್ಕವು ತುಂಬಾ ದುಬಾರಿಯಾಗಿದ್ದರಿಂದ ನನ್ನ ತಂದೆ ನನ್ನ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ತುಂಬಾ ಕಷ್ಟಪಟ್ಟರು" ಎಂದು ಅವರು ಹೇಳುತ್ತಾರೆ‌.


ರವೀಂದ್ರ ಅವರು ತಮ್ಮ‌ ಈ ಪ್ರಯಾಣದ ಕುರಿತಾಗಿ "ಮೆನಿ ಎವರೆಸ್ಟ್ಸ್" (Many Everests) ಎನ್ನುವ ಪುಸ್ತಕವನ್ನು‌ ಬರೆಯುತ್ತಾರೆ. ಅದರಲ್ಲಿ ತಮ್ಮ ಸ್ವಂತ ಜೀವನಾನುಭವಗಳನ್ನು ದಾಖಲಿಸುವ ಮೂಲಕ 'ಅಡ್ವಾನ್ಸ್ಡ್ ಪಾಸಿಟಿವ್ ವಿಸ್ಯುಯೆಲೆಷನ್' ಎಂಬ ತಂತ್ರದ ಕುರಿತಾಗಿ ವಿವರಿಸಿದ್ದಾರೆ. ಇದು ಯಾವುದೇ ಗುರಿಯನ್ನು ಸಾಧಿಸಲು ಮಾನವನ ಮನಸ್ಸಿನ ಶಕ್ತಿಯೊಂದಿಗೆ ವ್ಯವರಿಸುತ್ತದೆ. ಈ ಪುಸ್ತಕ ಬಹಳಷ್ಟು ಜನರ ಕನಸುಗಳನ್ನು ನನಸಾಗಿಸಲು ಪ್ರೇರೆಪಿಸಿದೆ ಎನ್ನುತ್ತಾರೆ.


ಐಎಎಸ್ ಅಧಿಕಾರಿಯಾಗಿ


"ನನ್ನ ಮಾವ ಶ್ಯಾಮ್ ಪ್ರಸಾದ್ ಐಪಿಎಸ್ ಅಧಿಕಾರಿಯಾಗಿದ್ದರಿಂದ ನಾಗರಿಕ ಸೇವೆಗಳಿಗೆ ಸೇರಲು ನನಗೆ ಸ್ಪೂರ್ತಿಯಾಯಿತು. ನಾನು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣವಾದಾಗ, ನನ್ನ ಬಾಲ್ಯದ ಕನಸನ್ನು ಅರಿತುಕೊಂಡಿದ್ದೆನೆ ಎಂದು ಭಾವಿಸಿದೆ" ಎಂದು ರವೀಂದ್ರ ಹೇಳುತ್ತಾರೆ‌.


ಟ

ಸಿಕ್ಕಿಮ್ ನಲ್ಲಿ ತರಬೇತಿಯಲ್ಲಿ ನಿರತರಾಗಿರುವ ರವೀಂದ್ರ

ಮೌಂಟ್ ಎವರೆಸ್ಟ್ ನ ಮಡಿಲಲ್ಲಿ


ಸಿಕ್ಕಿಮ್ ಗೆ ವರ್ಗಾವಣೆಯಾದನಂತರ ರವೀಂದ್ರ ರವರಿಗೆ ಭೂಕಂಪನ ವಿರುವ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಅವಕಾಶ ಒದಗಿ ಬಂತು.


"2011 ರಲ್ಲಿ ಭೂಕಂಪನವು ರಾಜ್ಯವನ್ನು ದ್ವಂಸಗೊಳಿಸಿದಾಗ ಸ್ಥಳೀಯ ಪಾದಯಾತ್ರಿಕರು ಅವಶೇಷಗಳಿಂದ ಹೊರಬರಲು ಜನರಿಗೆ ಸಹಾಯ ಮಾಡಿದ ನಂತರ ನಾನು‌ ಪರ್ವತಾರೋಹಣವನ್ನು ಕಲಿಯಲು ನಿರ್ಧರಿಸಿದೆ. ವಿಪತ್ತಿನ ಸಮಯದಲ್ಲಿ ಜನರನ್ನು ತಲುಪಬೇಕೆಂಬ ನನ್ನ ಬಯಕೆಯು ಡಾರ್ಜಿಲಿಂಗ್‌ನ 'ಹಿಮಾಲಯನ್ ಪರ್ವತಾರೋಹಣ ಸಂಸ್ಥೆ'ಯಲ್ಲಿ ತರಬೇತಿಗೆ ಸೇರಿಕೊಳ್ಳಲು ಕಾರಣವಾಯಿತು ಎಂದು ರವೀಂದ್ರರವರು ನೆನಪಿಸಿಕೊಳ್ಳುತ್ತಾರೆ.

ರವೀಂದ್ರರವರು ಯಾವಾಗಲೂ ಸವಾಲುಗಳನ್ನು ಹುಡುಕುವ ಮತ್ತು ಕಾರ್ಯಕ್ಷಮತೆಯ‌ ಗುಣಮಟ್ಟವನ್ನು ಪೂರೈಸುವ ಪ್ರವೃತ್ತಿಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರಿಂದ, ವಿಶ್ವದ ಅತ್ಯುನ್ನತ ಶಿಖರವನ್ನು ಏರಲು ಉತ್ಸಾಹವನ್ನು ಹೊಂದಿದ್ದರು.


"ನಾನು ಶಿಖರವನ್ನು ಏರಲು ಮಾನಸಿಕವಾಗಿ ಮತ್ತು ದೈಹಿಕವಾಗಿ ನನ್ನನ್ನು ತಯಾರಿ ಮಾಡಿಕೊಳ್ಳಲು ಪ್ರಾರಂಭಿಸಿದೆ. ಎವರೆಸ್ಟ್ ಶಿಖರವನ್ನು ಏರುವುದು ತುಂಬಾ ಅಪಾಯಕಾರಿ ಮತ್ತು ಅದರ ಬದಲಾಗಿ ಸಣ್ಣ ಶಿಖರಗಳನ್ನು ಏರಲು ಪ್ರಯತ್ನಿಸಲು ಎಂದು ಬಹಳಷ್ಟು ಜನರು ಸಲಹೆ ನೀಡಿದರು. ಆದರೆ ನಾನು ನನ್ನ ನಿರ್ಧಾರಗಳಿಗೆ ಅಂಟಿಕೊಂಡಿದ್ದೆ" ಎಂದು ರವೀಂದ್ರ ಹೇಳುತ್ತಾರೆ.


q

ರವೀಂದ್ರರವರು ಮೌಂಟ್ ಎವರೆಸ್ಟ್ ಶಿಖರಕ್ಕೆ‌‌ ಹೋಗುವ ದಾರಿಯಲ್ಲಿ


ಹಲವು ತಿಂಗಳುಗಳ ತರಬೇತಿ ಕಠಿಣ ತರಬೇತಿ ಪಡೆದ ನಂತರ, ಮೇ 19, 2013ರಂದು ರವೀಂದ್ರ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದರು. ಇದರ ಮೂಲಕ ರವೀಂದ್ರರವರು ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗುರುತನ್ನು ರಚಿಸಿದರು. ಅವರು ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದಾಗ, ಎತ್ತರದಿಂದ ಮತ್ತು ಮೇಲಿನಿಂದ ನೋಡುವದರಿಂದ ವಿಸ್ಮಯಗೊಂಡರು. ಆ ನೋಟ ಎಷ್ಟರ ಮಟ್ಟಿಗೆಂದರೆ,‌ ಅದು ಅವರನ್ನು ಮೂಕರನ್ನಾಗಿ ಮಾಡಿತು. "ನಾನು ಸ್ಬಲ್ಪ ಹೊತ್ತು ಮೌನವಾಗಿ ನನ್ನ ಸುತ್ತಲಿನ ಎಲ್ಲವನ್ನೂ ಗಮನಿಸಿತ್ತಿದ್ದೆ. ಆಗ ನಾನು ಅನುಭವಿಸಿದ ಸಂತೋಷವು ಸಾಟಿಯಿಲ್ಲದ್ದು." ಎಂದು ರವೀಂದ್ರ ಯುವರ್‌ಸ್ಟೋರಿಗೆ ತಿಳಿಸಿದರು.


ನಿಸ್ವಾರ್ಥದ ‌ಕ್ರಿಯೆ


ಮೌಂಟ್ ಎವರೆಸ್ಟ್ ಶಿಖರವನ್ನು ಒಮ್ಮೆ ತಲುಪಿದ ನಂತರ ರವೀಂದ್ರ ಅವರು ಸಂತೃಪ್ತರಾಗಲಿಲ್ಲ. ಅವರು ಅದನ್ನು ಇನ್ನೊಂದು ಬಾರಿ ಹತ್ತಲು ಬಯಸಿದ್ದರು. ಆದರೆ, ಈ ಬಾರಿ ಅವರ ಈ‌ ಸಾಹಸದ ಉದ್ದೇಶ 'ಕ್ಲೀನ್ ಇಂಡಿಯಾ' ಬಗ್ಗೆ ಹರಡುವುದಾಗಿತ್ತು.


ಕ

ರವೀಂದ್ರರವರ ನೇತೃತ್ವದಲ್ಲಿ 'ಆಲ್ ಇಂಡಿಯಾ ಸರ್ವೀಸಸ್ ಎಕ್ಸಪೆಡಿಷನ್‌ ಟು ಮೌಂಟ್ ಎವರೆಸ್ಟ್' ಅನ್ನು ಪ್ರಧಾನಿ‌ ಬಿಡುಗಡೆ ಮಾಡಿರುವುದು


2015 ರಲ್ಲಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ (IMF) 'ಮೌಂಟ್ ಎವರೆಸ್ಟ್ ಆಲ್ ಇಂಡಿಯಾ ಸರ್ವೀಸಸ್ ಎಕ್ಸೆಪಿಡಿಶನ್' ಅನ್ನು ಆಯೋಜಿಸಿತು. ಈ ತಂಡವು ರವೀಂದ್ರ ಕುಮಾರ್ ನೇತೃತ್ವದ ಐದು ಐಎಎಸ್ ಅಧಿಕಾರಿಗಳನ್ನು ಒಳಗೊಂಡಿತ್ತು.


"ಈ ಸಾಹಸವು ವಿಶ್ವದ ಅತ್ಯುನ್ನತ ಶಿಖರದಿಂದ 'ಸ್ವಚ್ಛ ಭಾರತ ಅಭಿಯಾನ'ದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ದಂಡಯಾತ್ರೆಯನ್ನು ಪ್ರಧಾನಿ ನರೇಂದ್ರ ಮೋದಿಯವರೆ ಫ್ಲ್ಯಾಗ್ ಮಾಡಿದ್ದಾರೆ" ಎಂದು ಯುವರ್‌ಸ್ಟೋರಿಗೆ ತಿಳಿಸಿದರು.


ಆದರೆ, ತಂಡವು ಬೇಸ್ ಕ್ಯಾಂಪ್‌ ತಲುಪಿದಾಗ, ನೇಪಾಳದಲ್ಲಿ ಭೂಕಂಪನ ಸಂಭವಿಸಿದ್ದರಿಂದ‌,‌‌ ಈ ಪ್ರದೇಶದಲ್ಲಿ ಹಿಮಪಾತ ಸಂಭವಿಸಿತು. ಆ ಭೂಕಂಪದ ಭೀಕರತೆಯನ್ನು ತಂಡವು ನೇರವಾಗಿ ಕಂಡಿತು. ಚೀನಾದ ಸಹ‌ ಚಾರಣಿಗನ ತಲೆಯು ಅವರ ಗುಡಾರದ‌‌ ಪಕ್ಕದಲ್ಲಿನ ಬಂಡೆಯ ಮೇಲೆ ಬಡಿಯಿತು ಮತ್ತು‌‌ ನೋವಿನಿಂದ ಕೂಗಿದ ಜನರ ಕೂಗು ಪರ್ವತದ ಗಾಳಿಯ ಮೂಲಕ ಪ್ರತಿಧ್ವನಿಸಿತು.


ಕ

ರವೀಂದ್ರರವರು ಪರ್ವತಾರೋಹಣದ ಮೇಲಿನ ಪ್ರೀತಿಯಿಂದ ಮೂರನೇ ಬಾರಿಗೆ ಎವರೆಸ್ಟ್ ಏರಲು‌ ಸಜ್ಜಾಗಿರುವುದು

ದಂಡಯಾತ್ರೆಯನ್ನು ಹಿಂತೆಗೆದುಕೊಂಡರೂ, ರವೀಂದ್ರರವರು ಅಪಾಯಕಾರಿ ಸ್ಥಳದಿಂದ ತಕ್ಷಣ ‌ಹೊರಹೋಗಲು ನಿರಾಕರಿಸಿದರು. ಜೊತೆಗೆ ಅವರು ಪಾರುಗಾಣಿಕಾ ಕಾರ್ಯಾಚರಣೆಗೆ ಸೇರಿಕೊಂಡರು ಮತ್ತು ತಮ್ಮ‌ ಜೀವನವನ್ನು ಅಪಾಯಕ್ಕೆ‌‌ ತಳ್ಳುವ ಮೂಲಕ,‌ ಬೇಸ್ ಕ್ಯಾಂಪ್ ಬಳಿ ತಮ್ಮ‌ ತಂಡದ ಸಹ ಚಾರಣಿಗ ಕಾಜಿ ಶೆರ್ಪಾ ಅವರ ಸಹಾಯದಿಂದ ಮೂರು ಜನರ ಪ್ರಾಣವನ್ನು ಉಳಿಸಿದರು.


"ನಾವು ಗಾಯಾಳುಗಳನ್ನು ಸ್ಟ್ರೆಚರ್‌ನಲ್ಲಿ ಹತ್ತಿರದ ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಬೇಕಾಗಿತ್ತು. ಸುತ್ತಲೂ ಹಿಮನದಿಗಳಿದ್ದರಿಂದ ಭೂಪ್ರದೇಶ‌ ಕಠಿಣತೆಯಿಂದ ಕೂಡಿತ್ತು. ಆಗ ನಾವು 17,600 ಅಡಿ ಎತ್ತರದಲ್ಲಿದ್ದೆವು. ಆ ಜೀವಗಳನ್ನು ಉಳಿಸಲೆಂದೆ ದೇವರು ನನಗೆ ಧೈರ್ಯವನ್ನು ಕೊಟ್ಟನೆಂದು ನಾನು ಭಾವಿಸುತ್ತೇನೆ. ಕಾಜಿ ಹಾಗೂ ನಾನು ಇಬ್ಬರೂ ಹಾಗೇ ಮರಳಲು ಅದೃಷ್ಟವಂತರು", ಎಂದು ರವೀಂದ್ರ ನೆನಪಿಸಿಕೊಳ್ಳುತ್ತಾರೆ.


ರವೀಂದ್ರ ಮೂರನೇ ಬಾರಿಗೆ ಎವರೆಸ್ಟ್ ಅನ್ನು ಮತ್ತೆ ಹತ್ತಿದರು. 2019ರ ಏಪ್ರಿಲ್ ಮೊದಲ ವಾರದಲ್ಲಿದಂಡಯಾತ್ರೆಗೆ ತೆರಳಿದ್ದರು. "ಮುಕ್ತ ಮಲವಿಸರ್ಜನೆ ಮುಕ್ತ ರಾಷ್ಟ್ರ ಮತ್ತು ಶುದ್ಧ ಗಂಗಾ" ಸಂದೇಶವನ್ನು ಪ್ರಸಾರ ಮಾಡುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು. "ಭಾರತದ ಸ್ವಾಸ್ಥ್ಯವನ್ನು ಕಾಪಾಡುವುದರ ಕುರಿತಾಗಿ‌ ಜನರ ಗಮನವನ್ನು ಸೆಳೆಯಲು ನನ್ನ ಪ್ರಯತ್ನದ ಮೂಲಕ‌ ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.


ವಿಶೇಷ ವ್ಯಕ್ತಿತ್ವ


ಟ

ರವೀಂದ್ರರವರು ಪರ್ವತಾರೋಹಣ ಮಾತ್ರವಲ್ಲ,‌ ಇತರೆ ಸಾಹಸ ಚಟುವಟಿಕೆಗಳನ್ನು ಸಹ ಆನಂದಿಸುತ್ತಾರೆ

ದೈನಂದಿನ ಬದುಕಿನಲ್ಲಿ ರವೀಂದ್ರರಂತಹ ಬಹುಮುಖಿ ವ್ಯಕ್ತಿತ್ವವನ್ನು ಕಾಣುವುದು ಬಹು ಅಪರೂಪ.


ಪರ್ವತಾರೋಹಣ ಮಾತ್ರವಲ್ಲದೇ, ಸಾಹಸ ಪ್ರವೃತ್ತಿಯನ್ನು ಬೇಡುವಂತಹ ‌ಸ್ಕೂಬಾ ಡೈವಿಂಗ್, ಬಂಗೀ‌ ಜಂಪ್, ಕುದುರೆ ಸವಾರಿಯಂತಹ ಚಟುವಟಿಕೆಗಳನ್ನು ಸಹ ಅವರು ಆನಂದಿಸುತ್ತಾರೆ. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಅವರು ಯುದ್ಧ ಮತ್ತು ಆತ್ಮರಕ್ಷಣೆಯ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದಾರೆ.


ನಾನು ನನ್ನ ಬದುಕಿನಲ್ಲಿ ಮೂರು ಪದಗಳ ಮಂತ್ರವನ್ನು ಅನುಸರಿಸುತ್ತೇನೆ,‌ಅದುವೇ - ಗ್ರಹಿಸಿ, ನಂಬಿರಿ ಮತ್ತು ಸಾಧಿಸಿ. ದೊಡ್ಡ-ದೊಡ್ಡ ಕನಸುಗಳನ್ನು ಕಲ್ಪಿಸಿಕೊಳ್ಳುವುದು ಮುಖ್ಯ, ಆದರೆ ಆ ಕನಸನ್ನು ಸಾಧಿಸಲು ಮತ್ತು ಸಾಕಾರಗೊಳಿಸಲು ತನ್ನನ್ನು ನಂಬುವಷ್ಟು ಶ್ರಮಿಸುವುದು‌ ಇನ್ನೂ ಮುಖ್ಯವಾಗಿದೆ" ಎಂದು ರವೀಂದ್ರ ಹೇಳುತ್ತಾರೆ.


1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories