ಭವಿಷ್ಯದ ನಾಯಕರನ್ನು ರೂಪಿಸಲು ಡಿಪ್ಲೋಮಾ ಕೋರ್ಸ್‌ ಆರಂಭಿಸಿದ ಐಐಟಿಯ ಹಳೆಯ ವಿದ್ಯಾರ್ಥಿಗಳು

ಭಾರತದಲ್ಲಿ ಬದಲಾವಣೆ ತರುವ ಸಲುವಾಗಿ ಸಾಮಾಜಿಕ ನಾಯಕತ್ವದ ಕುರಿತಾದ ಹನ್ನೊಂದು ತಿಂಗಳ ಡಿಪ್ಲೊಮಾ ಕೋರ್ಸ್‌ ಆರಂಭಿಸಿದ ಐಐಟಿ ಬಾಂಬೆ ಹಾಗೂ ದೆಹಲಿಯ ಹಳೆಯ ವಿದ್ಯಾರ್ಥಿಗಳು.

9th Nov 2019
  • +0
Share on
close
  • +0
Share on
close
Share on
close

ಐಐಟಿ ದೆಹಲಿ ಹಾಗೂ ಬಾಂಬೆಯ ಹಳೆಯ ವಿದ್ಯಾರ್ಥಿಗಳು ರಾಷ್ಟ್ರಂ ಸ್ಕೂಲ್‌ ಆಫ್‌ ಪಬ್ಲಿಕ್‌ ಲೀಡರ್‌ಶಿಪ್‌ ಎಂಬ ಸಂಸ್ಥೆ ಸ್ಥಾಪಿಸಿದ್ದು, ಭವಿಷ್ಯದಲ್ಲಿ ಭಾರತಕ್ಕೆ ಹೊಸ ರೀತಿಯ ನಾಯಕರನ್ನು ನೀಡುವ ಸಲುವಾಗಿ ಯುವ ಬದಲಾವಣೆ ರೂವಾರಿಗಳನ್ನು ತರಬೇತಿಗೊಳಿಸುತ್ತಿದೆ.


ರಾಷ್ಟ್ರಂ “ಉದ್ದೇಶಪೂರ್ವಕ, ಸ್ವಯಂ-ಜಾಗೃತ ಹಾಗೂ ಕೌಶಲ್ಯಯುತ ಸಾರ್ವಜನಿಕ ನಾಯಕರನ್ನು ಬೆಳೆಸಿ, ಭಾರತದಲ್ಲಿ ಹೊಸ ರೂಪಾಂತರವನ್ನು ಸೃಷ್ಟಿಸಲು ಸಾರ್ವಜನಿಕ ನಾಯಕತ್ವದಲ್ಲಿ 11 ತಿಂಗಳ ಡಿಪ್ಲೋಮ ಕೋರ್ಸ್‌ ನೀಡುತ್ತದೆ.


ರಾಷ್ಟ್ರಂ ಸಂಸ್ಥೆಯ ತಂಡ


ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತ, ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿ, ರಾಷ್ಟ್ರಂ ಸಂಸ್ಥೆಯ ಸಹ ಸಂಸ್ಥಾಪಕರಾದ ಶೋಭಿತ್‌ ಮಾಥೂರ್‌, “ರಾಷ್ಟ್ರಂ ನಲ್ಲಿ ಕಲಿಯುವವರು ಸಮಾಜಕ್ಕೆ ಮೂರು ರೀತಿಯಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಾರೆ – ಶೈಕ್ಷಣಿಕ ನಾಯಕರು, ಸಾಮಾಜಿಕ ನಾಯಕರು ಹಾಗೂ ರಾಜಕೀಯ ನಾಯಕರು. ಸ್ವಾಮಿ ವಿವೇಕಾನಂದರಂತಹ ನಾಯಕರ ಉದ್ದೇಶಗಳನ್ನು ಈಡೇರಿಸುತ್ತ, 21ನೇ ಶತಮಾನದ ಭಾರತವನ್ನು ಬೆಳೆಸಬೇಕೆಂಬುದೇ ನಮ್ಮ ಆಸೆ” ಎಂದರು


ಹೇಳಿಕೆಯ ಪ್ರಕಾರ, ಈ ಶಾಲೆಯ ಪದವಿಯೋತ್ತರ ಡಿಪ್ಲೋಮಾ ಕೋರ್ಸ್‌, ಈಗಾಗಲೆ ಸಮಾಜದಲ್ಲಿ ಬದಲಾವಣೆ ತರಲು ಕೆಲಸ ಮಾಡುತ್ತಿರುವ, ತಳಮಟ್ಟದಲ್ಲಿ ಕೆಲಸಮಾಡಿರುವ ಬದಲಾವಣೆಯ ರೂವಾರಿಗಳಿಗೆ 11 ತಿಂಗಳ ವಸತಿಯುತ ತರಬೇತಿಯು ಸಹಕಾರಿಯಾಗಲಿದೆ.


ಈ ಕೋರ್ಸಿನ ಪಠ್ಯಕ್ರಮವು, ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾ ಸಾಮರ್ಥ್ಯವನ್ನು, ನೆಟ್ವರ್ಕಿಂಗ್‌, ವಿಮರ್ಶಾತ್ಮಕ ಚಿಂತನೆ ಹಾಗೂ ನಾಯಕತ್ವ ಸಂವಹನದಂತಹ ಅದ್ಭುತ ಕೌಶಲ್ಯಗಳನ್ನು ವರ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗೂ ಅಧ್ಯಯನ ಹಾಗೂ ಕ್ಷೇತ್ರಕಾರ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡಿದೆ.


ರಾಷ್ಟ್ರಂನ ಈ ಕೋರ್ಸ್‌ಗೆ ಆಕಾಂಕ್ಷಿಗಳನ್ನು ಆಯ್ಕೆಮಾಡುವಾಗ ಅವರನ್ನು ಪರೀಕ್ಷಿಸಲಾಗುತ್ತದೆ. ಹಾಗೂ ಇಡೀ ಬ್ಯಾಚಿನ 50% ಆಕಾಂಕ್ಷಿಗಳಿಗೆ 100% ವಿದ್ಯಾರ್ಥಿವೇತನವನ್ನೂ ಕೊಡಲಾಗುವುದೆಂದು ಹೇಳಲಾಗಿದೆ.


ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರದ ಸಾಧಕರಿಂದ, ತಜ್ಞರಿಂದ ಅಂದರೆ, ಮಾಜಿ ಶಿಕ್ಷಣ ಕಾರ್ಯದರ್ಶಿಗಳಾದ ಅನಿಲ್‌ ಸ್ವರೂಪ್‌; ರಾಜ್ಯಸಭಾದ ಎಂಪಿ ವಿನಯ್‌ ಸಹಸ್ರಬುದ್ಧೆ; ಮಾಜಿ ಐಏಎಸ್‌ ಜಯಪ್ರಕಾಶ್‌ ನಾರಾಯಣ್‌ ಹಾಗೂ ಹಲವರಿಂದ ವಿಶೇಷ ಕಾರ್ಯಗಾರಗಳನ್ನೂ ಏರ್ಪಡಿಸಲಾಗುತ್ತದೆ.
ತಮ್ಮ ಮೊದಲ ಬ್ಯಾಚಿನ ಕೋರ್ಸ್‌ಗೆ ಪ್ರವೇಶವನ್ನು ಡಿಸೆಂಬರ್‌ ಮೊದಲವಾರದಲ್ಲಿ ತೆರೆಯಲಿದ್ದು, ಮೊದಲ 50 ಜನರ ತಂಡದೊಟ್ಟಿಗೆ ಕಾರ್ಯಕ್ರಮವನ್ನು ಜುಲೈ 2020ರಲ್ಲಿ ಆರಂಭಿಸಲಿದೆ.


ಇಲ್ಲಿಯವರೆಗೆ ಈ ಐಐಟಿ ವಿದ್ಯಾರ್ಥಿಗಳು ತಮ್ಮ ವಿಶನ್‌ ಇಂಡಿಯಾ ಫೌಂಡೇಶನ್‌ ಮೂಲಕ ಸಮಾಜದ ಹಲವು ಸ್ಥರಗಳನ್ನು ಕಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿಐಎಫ್‌ ಕಾನೂನು ರಚನೆ ಹಾಗೂ ಆಡಳಿತ ವಿಭಾಗಗಳಲ್ಲಿ ನವೀನ ಕಲಿಕಾ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದು, ಅದರಿಂದ 1,500+ ಹೆಚ್ಚು ವಿದ್ಯಾರ್ಥಿಗಳು ಹಾಗೂ ವೃತ್ತಿಪರರನ್ನು ಭಾರತದಾದ್ಯಂತ 180 ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿ ಹರಡಿಸಿದೆ.


ಹಲವು ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಸ್ಥೆಯು ವಿವಿಧ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿದೆ ಹಾಗೂ ತನ್ನದೇ ಆದ ನೀತಿ ಸಂಶೋಧನಾ ವಿಭಾಗವನ್ನು ಹೊಂದಿದ್ದು, ಅದರ ಮೂಲಕ ವಿದೇಶಾಂಗ ನೀತಿಗಳ ಕುರಿತಾಗಿ ವಿಷಯಗಳನ್ನು ಪ್ರಕಟಿಸುತ್ತದೆ.


ರಾಷ್ಟ್ರಂನ ಸಹ ಸಂಸ್ಥಾಪಕರಾದ ಐಐಟಿ ದೆಲ್ಲಿಯ ಹಳೆಯ ವಿದ್ಯಾರ್ಥಿ ಕುಮಾರ್‌ ಶುಭಂ ಮಾತನಾಡುತ್ತ,


“ನಾವು ವಿಐಎಫ್‌ಅನ್ನು ಐದು ವರ್ಷಗಳ ಹಿಂದೆ ಆರಂಭಿಸಿದೆವು ಹಾಗೂ ಭಾರತವನ್ನು ಮುನ್ನೆಡಸಬಲ್ಲ ಬದಲಾವಣೆಯ ರೂವಾರಿಗಳ ಜೀವನವನ್ನು ಸುಸ್ಥಿರವಾಗಿ ಬದಲಾಯಿಸುತ್ತಾ ಬಂದಿದ್ದೇವೆ. ಆದಾಗ್ಯೂ ಅಷ್ಟು ಸಾಲದೆನ್ನಿಸಿತು. ಪೀಳಿಗೆಯಿಂದ ಪೀಳಿಗೆಗೆ ನಾಯಕರನ್ನು ತಯಾರಿಸುತ್ತ, ಹುಟ್ಟುಹಾಕಲು ನಮಗೆ ಪೂರ್ಣಾವಧಿಯ ಬದ್ಧತೆ ಅವಶ್ಯವಾಗಿತ್ತು. ನಮಗೆ ಕಲಿಕಾ ಪ್ರಯಾಣವನ್ನು ಪ್ರಯಾಸಕರಿಸದೆ, ಹೆಚ್ಚಿನ ಸಾಮರ್ಥ್ಯಯುಳ್ಳ ನಾಯಕರನ್ನು ತಯಾರಿಸಬಲ್ಲ ಸಂಸ್ಥೆಯ ಅವಶ್ಯಕತೆ ಇತ್ತು.” ಎಂದರು.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Our Partner Events

Hustle across India