ಕೊರೊನಾವೈರಸ್: ವೆಂಟಿಲೇಟರ್‌ಗಳಿಗೆ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಐಐಟಿ ಹೈದರಾಬಾದ್ ಕರೆ ನೀಡಿದೆ

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚುತ್ತಿರುವ ವೆಂಟಿಲೇಟರ್‌ಗಳ ಬೇಡಿಕೆಯನ್ನು ಪೂರೈಸಲು ಪರ್ಯಾಯವಾಗಿ ‘ಬ್ಯಾಗ್ ವಾಲ್ವ್ ಮಾಸ್ಕ್' ಅನ್ನು ಅಳವಡಿಸಿಕೊಳ್ಳಲು ಕೇಂದ್ರಕ್ಕೆ ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸೋಮವಾರ ಸೂಚಿಸಿದೆ.

ಕೊರೊನಾವೈರಸ್: ವೆಂಟಿಲೇಟರ್‌ಗಳಿಗೆ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಐಐಟಿ ಹೈದರಾಬಾದ್ ಕರೆ ನೀಡಿದೆ

Tuesday March 31, 2020,

2 min Read

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚುತ್ತಿರುವ ವೆಂಟಿಲೇಟರ್‌ಗಳ ಬೇಡಿಕೆಯನ್ನು ಪೂರೈಸಲು ಪರ್ಯಾಯವಾಗಿ ‘ಬ್ಯಾಗ್ ವಾಲ್ವ್ ಮಾಸ್ಕ್' ಅನ್ನು ಅಳವಡಿಸಿಕೊಳ್ಳಲು ಕೇಂದ್ರಕ್ಕೆ ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸೋಮವಾರ ಸೂಚಿಸಿದೆ.


ಈ ಸಲಹೆಯನ್ನು ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ಬಿ.ಎಸ್.ಮೂರ್ತಿ ನೀಡಿದ್ದಾರೆ.


ಸಾಂಪ್ರದಾಯಿಕ ವೆಂಟಿಲೇಟರ್‌ಗಳು ದುಬಾರಿಯಾಗಿದ್ದು, ಉತ್ಪಾದಿಸಲು ಮತ್ತು ಅವುಗಳನ್ನು ಸಾಗಿಸುವುದು ಸುಲಭವಲ್ಲದ ಕಾರಣ, ಐಐಟಿ-ಹೈದರಾಬಾದ್‌ನ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮೂರ್ತಿ ಮತ್ತು ಪ್ರೊಫೆಸರ್ ವಿ ಈಶ್ವರನ್, ಸಣ್ಣ ಸಾಧನಗಳಾದ ‘ಬ್ಯಾಗ್ ವಾಲ್ವ್ ಮಾಸ್ಕ್'ಗಳ ಉಪಯುಕ್ತತೆಯನ್ನು ಎತ್ತಿ ಹಿಡಿದಿದ್ದಾರೆ.


q


ತುರ್ತು ಸಂದರ್ಭಗಳಲ್ಲಿ ಕೃತಕ ಉಸಿರಾಟದ ಬೆಂಬಲವನ್ನು ನೀಡಲು ಈ ಸಾಧನವನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು. ಇದಲ್ಲದೆ, ಉಪಕರಣಗಳು ಅಗ್ಗವಾಗಿವೆ, ಉತ್ಪಾದಿಸಲು ಸುಲಭ ಮತ್ತು ಪೋರ್ಟಬಲ್ ಆಗಿವೆ ಮತ್ತು ಈ ಬಿಕ್ಕಟ್ಟಿನಲ್ಲಿ ಅಗತ್ಯವಿರುವ ಪ್ರತಿಯೊಂದು ಗುಣಮಟ್ಟವನ್ನು ಹೊಂದಿವೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.


ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ/ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಥವಾ ಇನ್ನಿತರ ನೋಡಲ್ ಸಂಸ್ಥೆಯ ಮೂಲಕ ಕೇಂದ್ರ ಸರ್ಕಾರವು ಕಾರ್ಯಪಡೆಯೊಂದನ್ನು ರೂಪಿಸಿ ಎರಡು ತಿಂಗಳ ಗರಿಷ್ಠ ಸಮಯ-ಚೌಕಟ್ಟಿನಡಿ ಈ ಕಡಿಮೆ-ವೆಚ್ಚದ ವೆಂಟಿಲೇಟರ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಅಗತ್ಯವಾದ ಕಾರ್ಯಗಳನ್ನು ನಿರ್ವಹಿಸುವಂತೆ ಈ ಇಬ್ಬರು ತಜ್ಞರು ಸಲಹೆ ನೀಡಿದ್ದಾರೆ.


ಅದರ ನಂತರದ ಉತ್ಪಾದನಾ ದರವು ವಾರಕ್ಕೆ ಹಲವಾರು ಲಕ್ಷ ಯೂನಿಟ್‌ಗಳಷ್ಟಿರಬೇಕು, ಆದ್ದರಿಂದ ಸರ್ಕಾರದ ನೇರ ಪರಿಶೀಲನೆಯಡಿಯಲ್ಲಿ, ಯುದ್ಧಕ್ಕೆ ಸನ್ನದ್ದರಾದ ರೀತಿಯಲ್ಲಿ ತಯಾರಿ ನಡೆಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆರೈಕೆಯ ಅಗತ್ಯವಿರುವ 15 ಪ್ರತಿಶತದಷ್ಟು ಕೋವಿಡ್-19 ಪೀಡಿತ ರೋಗಿಗಳಲ್ಲಿ, ಸುಮಾರು ಮೂರನೇ ಒಂದು ಭಾಗದಷ್ಟು (5 ಪ್ರತಿಶತ) ಜನರು ಉಸಿರಾಟದ ತೊಂದರೆಗಳನ್ನು ಎದುರಿಸಬಹುದು, ಇವರಿಗೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲು ವೆಂಟಿಲೇಟರ್‌ಗಳು ಅಗತ್ಯವಾಗಿರುತ್ತವೆ.


ಬ್ಯಾಗ್ ವಾಲ್ವ್ ಮಾಸ್ಕ್‌ಗಳು ಪ್ರಸ್ತುತ ಕೈ ಸಹಾಯದಿಂದ ಚಲಾಯಿಸಿಬಹುದಾಗಿದೆ, ಆದ್ದರಿಂದ ವೆಂಟಿಲೇಟರ್ ರೀತಿ ಇವು ನಿರಂತರ ಬಳಕೆಗೆ ಸೂಕ್ತವಲ್ಲ ಎಂದು ಪ್ರಾಧ್ಯಾಪಕರು ಹೇಳಿದರು, ವಿದ್ಯುತ್ ಶಕ್ತಿಯಿಂದ ನಡೆಸಲ್ಪಡುವ ಇದೇ ರೀತಿಯ ಸಾಧನವನ್ನು ವಿನ್ಯಾಸಗೊಳಿಸುವುದು ಸುಲಭ, ಇದು ಸಾಂಪ್ರದಾಯಿಕ ಶಕ್ತಿಯ ಹೊರತಾಗಿ ಕಾರ್ ಬ್ಯಾಟರಿಯಂತಹವುಗಳಿಂದಲೂ ಚಾಲನೆಮಾಡಬಹುದಾಗಿದೆ.


ಇದರ ಸಾಗಣೆಯು ಸುಲಭವಾಗಿರುವುದರಿಂದ (ಪೋರ್ಟಬಲ್), ವಿದ್ಯುತ್ ಸರಬರಾಜು ಇಲ್ಲದೆ ಹಳ್ಳಿಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲುಬಹುದು ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಅಗ್ಗವಾಗಿದೆ.


ಈ ವ್ಯವಸ್ಥೆಯ ಅನುಕೂಲಗಳ ಬಗ್ಗೆ ವಿವರಿಸುತ್ತಾ, ಇಬ್ಬರು ಪ್ರಾಧ್ಯಾಪಕರು,


"ವೆಚ್ಚದ ಬಗ್ಗೆ ನಮ್ಮ ಅಂದಾಜೆನೆಂದರೆ, ಇದನ್ನು 5000 ರೂ.ಗಿಂತ ಕಡಿಮೆ ಅಥವಾ ಸಾಂಪ್ರದಾಯಿಕ ಸಾಧನದ ಬೆಲೆಯ ನೂರನೇ ಒಂದು ಭಾಗಕ್ಕೆ ತಯಾರಿಸಬಹುದು. ವೆಚ್ಚವು ಎಷ್ಟು ಕಡಿಮೆಯಾಗಿದೆ ಎಂದರೆ, ಇದನ್ನು ಏಕ-ಬಳಕೆಯ ಸಾಧನವೆಂದೆ ಪರಿಗಣಿಸಬಹುದು, ಅದನ್ನು ಒಮ್ಮೆ ಬಳಸಿ ಮರುಬಳಕೆಮಾಡದಷ್ಟು ಅಗ್ಗವಾಗಿದೆ ಎಂದು ಹೇಳಬಹುದು."