ಮಾನವ ಕೈಗಳಂತೆ ಕಾರ್ಯನಿರ್ವಹಿಸುವ ಹಿಡಿತದ ಸಾಧನವನ್ನು ಹೊಂದಿರುವ ರೋಬೋಟನ್ನು ವಿನ್ಯಾಸಗೊಳಿಸಿರುವ ಮದ್ರಾಸಿನ ಐಐಟಿ ಸಂಶೋಧಕರು
ಮದ್ರಾಸಿನ ಐಐಟಿಯ ಪ್ರೊಫೆಸರ್ ಮತ್ತು ಅವರ ವಿದ್ಯಾರ್ಥಿ ಸೇರಿ ಚಲನ ಶಕ್ತಿಯೊಂದಿಗೆ ಸಂಕಿರ್ಣ ಕೌಶಲ್ಯತೆಯ ಕಾರ್ಯಗಳನ್ನು ನಿರ್ವಹಿಸುವ ಬಹು-ಉದ್ದೇಶದ ಹಿಡಿತದ ಸಾಧನವನ್ನು ಹೊಂದಿರುವ ರೋಬೋಟನ್ನು ವಿನ್ಯಾಸಗೊಳಿಸಿದ್ದಾರೆ. ಅದು ಕೈಗಾರಿಕೆಗಳಿಗೆ ಉಪಯಕ್ತವಾದ ಹತ್ತುವುದು, ಹಿಡಿಯುವುದು ಮತ್ತು ಜೋಡಿಸುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
Monday August 19, 2019,
2 min Read
ಮಾನವ ಕೈಬೆರಳುಗಳ ರಚನೆ ಮತ್ತು ನೈಪುಣ್ಯತೆಯಿಂದಾಗಿ ಬೇರೆ ಯಾವ ಜೀವಿಗಳಿಗೂ ಸಾಧ್ಯವಾಗದ ವಸ್ತುಗಳನ್ನು ಹಿಡಿದುಕೊಳ್ಳುವ ಸಾಮರ್ಥ್ಯ ಮಾನವನಿಗೆ ಮಾತ್ರ ಇದೆ. ಆದರೆ ಈಗ ಮದ್ರಾಸಿನ ಐಐಟಿ ಸಂಶೋಧನಾ ತಂಡವು ತಯಾರಿಸಿರುವ, ಉತ್ತಮ ಹಿಡಿತ, ಚಲನಶಕ್ತಿ ಮತ್ತು ತಿರುಗುವ ಸಾಮರ್ಥ್ಯಗಳನ್ನು ಹೊಂದಿರುವ ಬಹುವಿಧಾನ ರೋಬೋಟಿನೊಂದಿಗೆ ಮಾನವನು ಸ್ಪರ್ಧಿಸಬೇಕಾದ ಸಮಯ ಬಂದಿದೆ.
"ಗ್ರಾಸ್ಪ್ ಮ್ಯಾನ್" ಎಂದು ನಾಮಕರಣಗೊಂಡಿರುವ ಈ ಹೊಸ ಮಾದರಿಯ ರೋಬೋಟ್ ಪೈಪಿನ ಪರಿಶೀಲನೆ, ಶೋಧನೆ ಮತ್ತು ರಕ್ಷಣಾ ಕಾರ್ಯ ಮತ್ತು ಹತ್ತುವುದು, ಹಿಡಿಯುವುದು, ಜೋಡಿಸುವುಕೆಯಂತಹ ಹಲವಾರು ಕೈಗಾರಿಕಾ ಉಪಯೋಗಗಳನ್ನು ಹೊಂದಿದೆ.
ಈ ರೋಬೋಟಿಗೆ ಒಂದು ಜೊತೆ ಹಿಡಿತದ ಸಾಧನಗಳನ್ನು ಅಳವಡಿಸಿಲಾಗಿದೆ. ಇವು ಮಾನವ ಕೈಗಳಂತೆ ವಸ್ತುಗಳನ್ನು ಬಿಗಿಯಾಗಿ ಹಿಡಿಯುವಂತಹ ಕೈ ಚಳಕವನ್ನು ಹೊಂದಿವೆ ಮತ್ತು ಅವು ಹಿಡಿದುಕೊಳ್ಳುವ ವಸ್ತುವಿನ ಆಕಾರಕ್ಕೆ ಹೊಂದಿಕೊಳ್ಳಬಲ್ಲವು. ಚಲನಶಕ್ತಿಯ ವಿಧಾನವನ್ನು ಉಪಯೋಗಕ್ಕೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದಾದ ಸಾಮರ್ಥ್ಯವನ್ನು ಹೊಂದಿರುವ ಒಂದು ರೋಬೋಟ್ ವೇದಿಕೆಯನ್ನು ಈ ಎರಡು ಹಿಡಿತದ ಸಾಧನಗಳಿಗೆ ಅಳವಡಿಸಲಾಗಿದೆ.
ಮುಂದಿನ ಅಧ್ಯಯನ ಮತ್ತು ರೋಬೋಟಿನ ಸಾಮರ್ಥ್ಯಗಳನ್ನು ಅರ್ಥೈಸಿಕೊಳ್ಳುವ ಸಲುವಾಗಿ ರೋಬೋಟಿಕ್ಸ್ ಪ್ರಯೋಗಾಲಯ ಎಂಜನಿಯರಿಂಗ್ ವಿನ್ಯಾಸ ವಿಭಾಗ ಐಐಟಿ ಮದ್ರಾಸ್ ನಲ್ಲಿ ಪ್ರೋಟೋ ಟೈಪ್ ಮಾದರಿಯೊಂದನ್ನು ಸಿದ್ಧಪಡಿಸಿ ಅಭಿವೃದ್ಧಿಪಡಿಸಲಾಗಿದೆ.
ಪ್ರೊಫೆಸರ್ ಅಸೋಕನ್ ತೊಂಡಿಯಾತ್ ತಮ್ಮ ಸಂಶೋಧನಾ ವಿದ್ಯಾರ್ಥಿ ನಾಗಮಣಿ ಕಂದನ್ ಗೋವಿಂದನರ ಜೊತೆಯಲ್ಲಿ ಈ ಸಾಧನದ ಪರೀಕ್ಷೆ ಮತ್ತು ಮುಂದಿನ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಈ ಸಂಶೋಧನೆಯು ಎ ಎಸ್ ಎಮ್ ಇ ಹೊರ ತರುವ ಮೆಕ್ಯಾನಿಸಮ್ಸ್ ಮತ್ತು ರೋಬೋಟಿಕ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಪ್ರೊಫೆಸರರ ತಂಡವು ಈ ರೋಬೋಟನ್ನು "ಹೆಚ್ಚು ಸಾಮರ್ಥ್ಯ ಹೊಂದಿರುವ ಮತ್ತು ಕಡಿಮೆ ಸಂಕೀರ್ಣತೆಯ ಸಾಧನ" ವನ್ನಾಗಿ ಅಭಿವೃದ್ಧಿಪಡಿಸಲು ಕೆಲಸ ಮಾಡುತಿದ್ದಾರೆ.
“ತಂತ್ರ ನಿರ್ದಿಷ್ಟವಾದ ರೋಬೋಟುಗಳ ಅವಶ್ಯಕತೆಯನ್ನು ತಪ್ಪಿಸುವ ಮತ್ತು ವಿವಿಧ ಉಪಯೋಗಗಳಲ್ಲಿ ಹೆಚ್ಚಿನ ಸಂಕೀರ್ಣತೆಯಿಲ್ಲದೆ ಬಳಸಬಹುದಾದ ಕನಿಷ್ಠ ಮಟ್ಟದ ವಿನ್ಯಾಸವನ್ನು ಹೊಂದಿರುವ ರೋಬೋಟನ್ನು ಅಭಿವೃದ್ಧಿಪಡಿಸುವುದು ಈ ಸಂಶೋಧನೆಯ ಹಿಂದಿರುವ ಉದ್ದೇಶ” ಎಂದು ಅಸೋಕನ್ ಹೇಳುತ್ತಾರೆ
ಶೋಧನೆ ಮತ್ತು ರಕ್ಷಣಾ ಕಾರ್ಯಗಳಲ್ಲಿ ಮತ್ತು ಚಲನ ಶಕ್ತಿಯ ವಿವಿಧ ಕಾರ್ಯಗಳಲ್ಲಿ ಉಪಯೋಗಿಸುನ ಯಂತ್ರಗಳು ಈ ರೋಬೋಟಿಕ್ ವೇದಿಕೆಯಿಂದ ಪ್ರಯೋಜನ ಪಡೆಯಬಹುದಾಗಿದೆ.
“ನಮ್ಮ ಇತ್ತೀಚಿನ ಪ್ರಕಟಣೆಯು ನಾವು ಸಿದ್ಧಪಡಿಸಿರುವ ಪ್ರೋಟೋ ಟೈಪ್ ಮಾದರಿಯ ಕಾರ್ಯನಿರ್ವಹಣೆಯ ಬಗ್ಗೆ ನಡೆಸಲಾಗಿರುವ ಪ್ರಯೋಗಗಳು ಮತ್ತು ಚಲನೆ ಮತ್ತು ಸ್ಥಬ್ಧ ಸ್ಥಿತಿಯ ವಿಶ್ಲೇಷಣೆಗಳ ವಿವರಗಳನ್ನು ಒದಗಿಸುತ್ತದೆ. ಚಲನಶಕ್ತಿ ಮತ್ತು ಮಾರ್ಪಡಿಸುವಿಕೆಯ ಸಾಮರ್ಥ್ಯಗಳಿಂದಾಗಿ ಒಂದು ವಸ್ತುವನ್ನು ಹಿಡಿದುಕೊಂಡು ಸುತ್ತುವುದು, ಪ್ರಾಣಿಗಳಂತೆ ನಡೆದಾಡುವುದು, ಮಂಗಗಳಂತೆ ತೋಳು ತಿರುಗಿಸುವುದು ಮುಂತಾದ ವೈಶಿಷ್ಟ್ಯಗಳನ್ನು ಈ ರೋಬೋಟ್ ಹೊಂದಿದೆ” ಎಂದು ಅಸೋಕನ್ ಹೇಳುತ್ತಾರೆ.