ಐಕೆಇಎ 2030 ರ ವೇಳೆಗೆ ಹವಾಮಾನದ ವೈಪರೀತ್ಯದ ವಿರುದ್ದದ ಯುದ್ಧದಲ್ಲಿ ಹವಾಮಾನ-ಸಕಾರಾತ್ಮಕವಾಗಲು 200 ಮಿಲಿಯನ್ ಯುರೋಗಳನ್ನು ಹೂಡಿಕೆ ಮಾಡಿದೆ

ಐಕೆಇಎ ಹೂಡಿಕೆಯು ಎರಡು ಆಯಾಮಗಳ ಮೇಲೆ ಕೇಂದ್ರೀಕರಿಸುತ್ತದೆ - ಸರಕು ಸಾಗಣೆಯ ಸರಪಳಿಯನ್ನು ನವೀಕರಿಸಬಹುದಾದ ಇಂಧನ ಬಳಕೆಯ ಮುಖಾಂತರ ಪರಿವರ್ತಿಸುವುದು ಮತ್ತು ಮರು ಅರಣ್ಯೀಕರಣ, ಅವನತಿ ಹೊಂದಿದ ಕಾಡುಗಳ ಪುನಃಸ್ಥಾಪನೆ ಮತ್ತು ಉತ್ತಮ ಅರಣ್ಯ ನಿರ್ವಹಣೆಯ ಮೂಲಕ ವಾತಾವರಣದಿಂದ ಇಂಗಾಲವನ್ನು ತೆಗೆದುಹಾಕುವುದು.

2nd Dec 2019
  • +0
Share on
close
  • +0
Share on
close
Share on
close

ಪ್ರಪಂಚದಾದ್ಯಂತ ಹವಾಮಾನ ಬದಲಾವಣೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಹಲವಾರು ಕಾರ್ಪೊರೇಟ್‌ಗಳು ಪರಿಸರ ಸುಸ್ಥಿರತೆಯತ್ತ ಕೆಲಸ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ, ಸ್ವೀಡಿಷ್ ಗೃಹೋಪಯೋಗಿ ಪೀಠೋಪಕರಣಗಳ ವ್ಯಾಪಾರಿ ಐಕೆಇಎ 2030 ರ ವೇಳೆಗೆ ಹವಾಮಾನ-ಸಕಾರಾತ್ಮಕವಾಗಲು 200 ಮಿಲಿಯನ್ ಯುರೋಗಳನ್ನು ಹೂಡಿಕೆ ಮಾಡಿದೆ.


ಮುಂಬರುವ ಯುಎನ್ ಹವಾಮಾನ ಬದಲಾವಣೆ ಸಮ್ಮೇಳನ ಸಿಒಪಿ 25 ಗೆ ಸಂಬಂಧಿಸಿದಂತೆ ಈ ಹೂಡಿಕೆ ಬಂದಿದೆ. ಕಂಪನಿಯ ಪ್ರಕಾರ, ಹೂಡಿಕೆಯು ಎರಡು ಆಯಾಮಗಳ ಮೇಲೆ ಕೇಂದ್ರೀಕರಿಸುತ್ತದೆ - ಒಂದು, ನವೀಕರಿಸಬಹುದಾದ ಇಂಧನ ಬಳಕೆಯ ಮುಖಾಂತರ ಐಕೆಇಎ ಪೂರೈಕೆ ಸರಬರಾಜು ಸರಪಳಿಯನ್ನು ಪರಿವರ್ತಿಸುವುದು, ಎರಡು, ಮರು ಅರಣ್ಯೀಕರಣ, ಅವನತಿ ಹೊಂದಿದ ಕಾಡುಗಳಿಗೆ ಜೀವ ತುಂಬುವುದು ಮತ್ತು ಉತ್ತಮ ಅರಣ್ಯ ನಿರ್ವಹಣಾ ಅಭ್ಯಾಸಗಳ ಮೂಲಕ ವಾತಾವರಣದಿಂದ ಇಂಗಾಲವನ್ನು ತೆಗೆದುಹಾಕುವುದು.
ಮೊದಲ ಬಂಡವಾಳವನ್ನು 2030 ರ ವೇಳೆಗೆ ತನ್ನ ಉತ್ಪಾದನೆಯಲ್ಲಿ 100 ಪ್ರತಿಶತ ನವೀಕರಿಸಬಹುದಾದ ಶಕ್ತಿಯನ್ನು (ವಿದ್ಯುತ್, ತಾಪನ, ತಂಪಾಗಿಸುವಿಕೆ ಮತ್ತು ಇತರ ಇಂಧನ ಬಳಕೆಗಳು) ಬಳಸುವ ಗುರಿಯನ್ನು ಪೀಠೋಪಕರಣಗಳ ದೈತ್ಯ ಸಂಸ್ಥೆ ಹೊಂದಿದೆ. ಇದನ್ನು ನೇರ ಪೂರೈಕೆದಾರರ ಸಹಯೋಗದೊಂದಿಗೆ ನಿರ್ಮಿಸಲಾಗುವುದು.


ಎರಡನೇ ಬಂಡವಾಳವು ವಾತಾವರಣದಿಂದ ಇಂಗಾಲವನ್ನು ತೆಗೆದುಹಾಕಲು ಮತ್ತು ಮರು ಅರಣ್ಯೀಕರಣ ಮತ್ತು ಜವಾಬ್ದಾರಿಯುತ ಅರಣ್ಯ ನಿರ್ವಹಣೆಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತದೆ. ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವಲ್ಲಿ, ಜೀವವೈವಿಧ್ಯತೆಯನ್ನು ಬೆಂಬಲಿಸುವಲ್ಲಿ ಮತ್ತು ಹವಾಮಾನ ಬದಲಾವಣೆ ತಗ್ಗಿಸುವಲ್ಲಿ ಜವಾಬ್ದಾರಿಯುತವಾಗಿ ನಿರ್ವಹಿಸಲಾದ ಕಾಡುಗಳು ಪ್ರಮುಖ ಪಾತ್ರವಹಿಸುತ್ತವೆ.


ಕಟ್ಟಿಗೆ ಐಕೆಇಎ ಬಳಸುವ ಪ್ರಮುಖ ಕಚ್ಚಾ ವಸ್ತುಗಳ ಪೈಕಿ ಒಂದಾಗಿದೆ, ಕಂಪನಿಯು ವಿಶ್ವದಾದ್ಯಂತ ಜವಾಬ್ದಾರಿಯುತ ಅರಣ್ಯ ನಿರ್ವಹಣೆಯನ್ನು ಉತ್ತೇಜಿಸುತ್ತ ಬಂದಿದೆ.


ಐಕೆಇಎ ಹವಾಮಾನ ಹೆಜ್ಜೆಗುರುತುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೊಡುಗೆ, ಉತ್ಪನ್ನಗಳು ಮತ್ತು ಉತ್ಪಾದನೆಯಲ್ಲಿ ಬಳಸುವ ವಸ್ತುಗಳಿಂದ ಬಂದಿದೆ ಎಂದು ತಿಳಿಸಿದೆ. ಐಕೆಇಎ ಗ್ರೂಪ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟೊರ್ಬ್ಜಾರ್ನ್ ಲೋಫ್ ಮಾತನಾಡುತ್ತಾ,


"ಐಕೆಇಎ ಸಂಸ್ಥೆಯ ಮೌಲ್ಯ ಸರಪಳಿಯಿಂದ ಹೊರಸೂಸಲ್ಪಡುವ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2030 ರ ವೇಳೆಗೆ ಸಂಪೂರ್ಣವಾಗಿ ಕಡಿಮೆ ಮಾಡುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ," ಎಂದರು.


ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರವನ್ನು ಹವಾಮಾನ-ಸಕಾರಾತ್ಮಕವಾಗಿಸುವ ಪಣತೊಟ್ಟಿದೆ. ಐಕೆಇಎ ಖರೀದಿ ಸಂಸ್ಥೆ ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿ ಐಕೆಇಎ ಉತ್ಪನ್ನಗಳನ್ನು ಉತ್ಪಾದಿಸುವ 60 ಕ್ಕೂ ಹೆಚ್ಚು ಸ್ಥಳೀಯ ಸರಬರಾಜುದಾರರೊಂದಿಗೆ ಕೆಲಸ ಮಾಡುತ್ತದೆ, ಅವರು ಹೆಚ್ಚು ಜನ-ಮತ್ತು ಪರಿಸರ ಸ್ನೇಹಿಯಾಗಲು ಮತ್ತು ಅದರ ಉತ್ಪಾದನೆಯಲ್ಲಿ 100 ಪ್ರತಿಶತ ನವೀಕರಿಸಬಹುದಾದ ಶಕ್ತಿಯನ್ನು ಬಳಸುವತ್ತ ಗಮನ ಹರಿಸಿದ್ದಾರೆ. ಉತ್ಪನ್ನಗಳಿಗೆ ನವೀಕರಿಸಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಕಚ್ಚಾ ವಸ್ತುಗಳನ್ನು ಬಳಸುವತ್ತ ಕಾರ್ಯ ನಿರ್ವಹಿಸುತ್ತಿದೆ.


ಐಕೆಇಎ ಅಂಗಡಿಗಳು ಸಹ ಇಂಗಾಲ-ತಟಸ್ಥವಾಗಲು ಕೆಲಸ ಮಾಡುತ್ತಿವೆ. ಹೆಚ್ಚಿನ ವಿದ್ಯುತ್ತ ಚಾಲಿತ ವಾಹನಗಳನ್ನು (ಇವಿ) ಅಳವಡಿಸಿಕೊಳ್ಳುವ ಮೂಲಕ ಕಂಪನಿಯು ತನ್ನ ಸರಕುಸಾಗಣೆಯಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಬಳಸುತ್ತಿದೆ. ಭಾರತದಲ್ಲಿ, ಇದು ಈಗಾಗಲೇ ತನ್ನ ಸರಕುಸಾಗಣೆಯ ಕಾರ್ಯಾಚರಣೆಗಳಲ್ಲಿ ಶೇಕಡಾ 20 ಪ್ರತಿಶತದಷ್ಟು ಇವಿಗಳನ್ನು (ವಿದ್ಯುತ್ತ ಚಾಲಿತ ವಾಹನ) ಬಳಸುತ್ತಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 60 ಪ್ರತಿಶತವನ್ನು ತಲುಪುವ ಗುರಿ ಹೊಂದಿದೆ.


ಕಂಪನಿಯ ಮತ್ತೊಂದು ಪ್ರಮುಖ ಕ್ರಮವೆಂದರೆ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಬತ್ತದ ಒಣಹುಲ್ಲಿನ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಪರಿವರ್ತಿಸುವುದು, ಇದರ ಪರಿಣಾಮವಾಗಿ ಬತ್ತದ ಒಣಹುಲ್ಲನ್ನು ಮಾತ್ರ ಬಳಸಿ ತಯಾರಿಸುವ ಪೀಠೋಪಕರಣಗಳ ಫೋರಾಂಡ್ರಿಂಗ್‌ (FÖRÄNDRING) ಎಂಬ ಹೊಸ ಸಂಗ್ರಹವನ್ನು ಸೃಷ್ಟಿಸಲಾಗಿದೆ.


ಇಂಟರ್ ಐಕೆಇಎ ಗ್ರೂಪ್‌ನ ಮುಖ್ಯ ಸುಸ್ಥಿರ ಅಧಿಕಾರಿ ಲೆನಾ ಪ್ರಿಪ್-ಕೊವಾಕ್, ಅವರ ಪ್ರಕಾರ,


"ನಮ್ಮ ಹವಾಮಾನ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು 1.5 ° C ಗೆ ಸೀಮಿತಗೊಳಿಸಲು ಕೊಡುಗೆ ನೀಡುವ ಅತ್ಯುತ್ತಮ ಮಾರ್ಗವೆಂದರೆ ಮುಖ್ಯವಾಗಿ ನಮ್ಮ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು. ಆದರೆ, ನಾವು ವಾತಾವರಣದಿಂದ ಅಸ್ತಿತ್ವದಲ್ಲಿರುವ ಇಂಗಾಲವನ್ನು ಸಹ ತೆಗೆದುಹಾಕಬೇಕಾಗಿದೆ. ನಮ್ಮ ಸಮಗ್ರ ಪೂರೈಕೆ ಸರಪಳಿ, ನಮ್ಮ ಜಾಗತಿಕ ಉಪಸ್ಥಿತಿ ಮತ್ತು ನಮ್ಮ ಅರಣ್ಯ ಮತ್ತು ಹವಾಮಾನ ಪರಿಣತಿಯ ಮೂಲಕ ನಾವು ಸಕಾರಾತ್ಮಕ ವ್ಯತ್ಯಾಸವನ್ನು ಮಾಡಬಹುದು.”


ಇದೇ ರೀತಿಯ ಉಪಕ್ರಮದಲ್ಲಿ, ಬಾಹ್ಯ ಪಾಲುದಾರರೊಂದಿಗೆ ಸಹಕರಿಸಲು ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ನೀಡಲು ಪ್ರಾಕ್ಟರ್ ಮತ್ತು ಗ್ಯಾಂಬಲ್ ಇಂಡಿಯಾ 200 ಕೋಟಿ ರೂ.ಗಳ ಪರಿಸರ ಸುಸ್ಥಿರತೆ ನಿಧಿಯನ್ನು ಸ್ಥಾಪಿಸಿದೆ.


ಪಿಟಿಐ ವರದಿಗಳ ಪ್ರಕಾರ ಪಿ ಮತ್ತು ಜಿ ಭಾರತೀಯ ಉಪಖಂಡದ ಎಂಡಿ ಮತ್ತು ಸಿಇಒ ಮಧುಸೂದನ್ ಗೋಪಾಲನ್ ಅವರು, “ಪರಿಸರ ಸುಸ್ಥಿರತೆಯು ಕಂಪನಿಯ ಸಾಮಾಜಿಕ ಜವಾಬ್ದಾರಿಯುನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸಂಸ್ಥೆಯ ವ್ಯವಹಾರ ಮತ್ತು ಕಾರ್ಯತಂತ್ರದಲ್ಲಿ ಹಾಸುಹೊಕ್ಕಾಗಿದೆ. ಅತಿದೊಡ್ಡ ಸವಾಲುಗಳನ್ನು ಪರಿಹರಿಸಲು ಸಹಯೋಗದ ಅಗತ್ಯವಿದೆ. ಅದು ಜನರನ್ನು, ಸಮಾಜವನ್ನು ಮತ್ತು ವ್ಯವಹಾರಗಳನ್ನು ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ ಎಂದು ತಿಳಿದಿದೆ.”


ನಾವೀನ್ಯತೆಯ ಮುಂಚೂಣಿಯಲ್ಲಿರುವ ಸಂಸ್ಥೆಗಳಿಗೆ ಭಾರತವು ಅತ್ಯಮೂಲ್ಯ ಮಾರುಕಟ್ಟೆಯಾಗಿದೆ ಎಂದು ಮಧುಸೂದನ್ ಹೇಳಿದರು.


ಕಳೆದ ವರ್ಷ, ಕಂಪನಿಯು 'ಇನ್ನೋವೇಶನ್ ಸೋರ್ಸಿಂಗ್ ಫಂಡ್' ಅನ್ನು ಸ್ಥಾಪಿಸಿತು, ಅದರ ಮೂಲಕ ಈಗಾಗಲೇ ದೇಶಾದ್ಯಂತದ ಬಾಹ್ಯ ಪಾಲುದಾರರ ಸಹಯೋಗದೊಂದಿಗೆ ನವೀನ ಪರಿಹಾರಗಳನ್ನು ಜಾರಿಗೆ ತರಲು 200 ಕೋಟಿ ರೂ ಸಂಗ್ರಹಿಸಿದೆ.How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Our Partner Events

Hustle across India