ಭಾರತದಲ್ಲಿ ವಾಯುಮಾಲಿನ್ಯದಿಂದ ಹೃದ್ರೋಗ, ಪಾರ್ಶ್ವವಾಯುಗೆ ತುತ್ತಾಗುವ ಸಂಭವ ಹೆಚ್ಚುತ್ತಿದೆ : ಅಧ್ಯಯನ

ಭಾರತದಲ್ಲಿ ಹೆಚ್ಚಿನ ಮಟ್ಟದ ಸುತ್ತಮುತ್ತಲಿನ ಮತ್ತು ಮನೆಯ ಒಳಗಿನ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಭಾರತದಲ್ಲಿ ವಾಯುಮಾಲಿನ್ಯದಿಂದ ಹೃದ್ರೋಗ, ಪಾರ್ಶ್ವವಾಯುಗೆ ತುತ್ತಾಗುವ ಸಂಭವ ಹೆಚ್ಚುತ್ತಿದೆ : ಅಧ್ಯಯನ

Thursday November 14, 2019,

2 min Read

ಲಂಡನ್: ಸ್ಪೇನ್‌ನ ಬಾರ್ಸಿಲೋನಾ, ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ (ಐಎಸ್‌ಗ್ಲೋಬಲ್) ನೇತೃತ್ವದ ತಂಡವು ಮನೆಯ ಮತ್ತು ಸುತ್ತಮುತ್ತಲಿನ ವಾಯುಮಾಲಿನ್ಯ, ಮತ್ತು ಕ್ಯಾರೋಟಿಡ್‌ ಇಂಟಿಮಾ ಮೀಡಿಯಾ ಥಿಕ್‌ ನೆಸ್(ಸಿಐಎಂಟಿ)-ಅಪಧಮನಿಕಾಠಿಣ್ಯ ಅಥವಾ ಅಪಧಮನಿಗಳ ದಪ್ಪವಾಗುವಿಕೆಯ- ನಡುವಿನ ಒಡನಾಟವನ್ನು ಅನ್ವೇಷಿಸುವ ಮೊದಲ ತಂಡವಾಗಿದ್ದು ಇದನ್ನು ಕಡಿಮೆ ಮತ್ತು ಮಧ್ಯಮ ಆದಾಯವಿರುವ ದೇಶಗಳಲ್ಲಿ ನಡೆಸಿದೆ.


ತೆಲಂಗಾಣದ ಹೈದರಾಬಾದ್‌ನ ಉಪನಗರಗಳ ಪ್ರದೇಶದಲ್ಲಿ ನಡೆಸಿದ ಅಧ್ಯಯನವು, ಸೂಕ್ಷ್ಮ ಕಣಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುವ ಜನರು ಹೆಚ್ಚಿನ ಸಿಐಎಂಟಿ ಸೂಚ್ಯಂಕವನ್ನು ಹೊಂದಿದ್ದಾರೆಂದು ತೋರಿಸುತ್ತದೆ, ಅಂದರೆ ಅವರು ಪಾರ್ಶ್ವವಾಯು ಅಥವಾ ಹೃದಯಾಘಾತದಂತಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುವ ಅಪಾಯ ಅವರಲ್ಲಿ ಹೆಚ್ಚಾಗಿರುತ್ತದೆ.


ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನವನ್ನು 3,372 ಜನರು ಭಾಗವಹಿಸಿ ನೇರವೆರಿಸಿದ್ದರು.


ತಂಡವು ಸಿಐಎಂಟಿ ಮತ್ತು ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ಲ್ಯಾಂಡ್ ಯೂಜ್ ರೇಗ್ರೇಷನ್ (ಎಲ್‌ಯುಆರ್- ಮಾಲಿನ್ಯವನ್ನು ವಿಶ್ಲೇಷಿಸುವ ಕ್ರಮಾವಳಿ) ಎಂಬ ಅಲ್ಗಾರಿದಮ್ ಬಳಸಿ ಅಳೆದರು, ಇದನ್ನು ಸಾಮಾನ್ಯವಾಗಿ ಸೂಕ್ಷ್ಮ ಕಣಗಳನ್ನು-2.5 ಮೈಕ್ರೊಮೀಟರ್‌ಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳು- ಹೆಚ್ಚಿನ ಆದಾಯವಿರುವ ದೇಶಗಳಲ್ಲಿ- ಸೂಕ್ಷ್ಮ ಕಣಗಳ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ.


ಭಾಗವಹಿಸುವವರು ತಾವು ಆಡುಗೆಗೆ ಬಳಸಿದ ಇಂಧನದ ಬಗೆಗಿನ ಮಾಹಿತಿಯನ್ನು ಸಹ ನೀಡಿದರು.


ಫಲಿತಾಂಶಗಳು ಸುತ್ತುಮುತ್ತಲಿನ ಸೂಕ್ಷ್ಮ ಕಣಗಳ ಜೊತೆ ವಾರ್ಷಿಕವಾಗಿ ಹೆಚ್ಚಾಗಿ ಒಡ್ಡಿಕೊಳ್ಳುವುದು ಹೆಚ್ಚಿನ ಸಿಐಎಂಟಿಯೊಂದಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ, ಭಾಗವಹಿಸುವವರಲ್ಲಿ ವಿಶೇಷವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಕಾರ್ಡಿಯೋಮೆಟಾಬಾಲಿಕ್ ಗೆ ತುತ್ತಾಗುವ ಅಪಾಯಕಾರಿ ಅಂಶಗಳನ್ನು ಹೊಂದಿರುವವರು ಎಂದು ಸಂಶೋಧಕರು ಹೇಳಿದ್ದಾರೆ.


ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇಕಡಾ ಅರವತ್ತರಷ್ಟು ಜನರು ಅಡುಗೆ ಮಾಡಲು ಒಲೆಯಲ್ಲಿ ಕಟ್ಟಿಗೆ, ಸಗಣಿ ಅಥವಾ ಇದ್ದಿಲನ್ನು ಬಳಸಿದ್ದರು.


"ಅಡುಗೆಗಾಗಿ ಒಲೆಯಲ್ಲಿ ಕಟ್ಟಿಗೆ, ಸಗಣಿ ಅಥವಾ ಇದ್ದಿಲನ್ನು ಬಳಸುವ ಜನರು ಹೆಚ್ಚಿನ ಸಿಐಎಂಟಿಯನ್ನು ಹೊಂದಿದ್ದರು, ವಿಶೇಷವಾಗಿ ಹವೆಯಾಡದ ಸ್ಥಳಗಳಲ್ಲಿ ಅಡುಗೆ ಮಾಡುವದ ಮಹಿಳೆಯರು" ಎಂದು ಐಎಸ್ ಗ್ಲೋಬಲ್ ಸಂಶೋಧಕ ಮತ್ತು ಅಧ್ಯಯನದ ಮೊದಲ ಲೇಖಕ ಒಟಾವಿಯೊ ರಂಜಾನಿ ವಿವರಿಸಿದರು.


"ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಿಐಎಂಟಿ ಹೊಂದಿದ್ದರು, ಅವರು ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ಕಟ್ಟಿಗೆ, ಸಗಣಿ ಅಥವಾ ಇದ್ದಿಲಿನ ಕಲುಷಿತವಾದ ಗಾಳಿಯನ್ನು ಉಸಿರಾಡುವದರಿಂದ" ಎಂದು ಅವರು ಹೇಳಿದರು.


ಪಿ ಎಮ್‌ 2.5 ಗೆ ವಾರ್ಷಿಕ ಸರಾಸರಿ ಅನಾವರಣವು ಪ್ರತಿ ಘನ ಮೀಟರ್‌ಗೆ (ಮಿ, ಗ್ರಾ.) 32.7 ಮೈಕ್ರೊಗ್ರಾಂಗಳು (ಮಿ, ಗ್ರಾ.) ಆಗಿತ್ತು, ಇದು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದ ಗರಿಷ್ಠಮಾನ್ಯತೆ 10 ಮಿ, ಗ್ರಾ./ಎಮ್‌3 ಮಟ್ಟಕ್ಕಿಂತ ತುಂಬಾ ಹೆಚ್ಚಿದೆ.


"ಈ ಅಧ್ಯಯನವು ಭಾರತದಂತಹ, ಸಾಂಕ್ರಾಮಿಕ ರೋಗ ಪರಿವರ್ತನೆ ಮತ್ತು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯದಂತಹ ರೋಗಗಳ ಹರಡುವಿಕೆಯಲ್ಲಿ ತೀವ್ರ ವೃದ್ಧಿಯನ್ನು ಅನುಭವಿಸುತ್ತಿರುವ ದೇಶಗಳಿಗೆ ಪ್ರಸ್ತುತವಾಗಿದೆ" ಎಂದು ಐಎಸ್ ಗ್ಲೋಬಲ್ ಸಂಶೋಧಕ ಮತ್ತು ಅಧ್ಯಯನದ ಸಂಯೋಜಕ ಕ್ಯಾಥರಿನ್ ಟೊನ್ನೆ ಹೇಳಿಕೆ ನೀಡಿದರು.


"ಇದಲ್ಲದೆ, ದೇಶವು ವ್ಯಾಪಕ ಮಟ್ಟದ ಸುತ್ತುಮುತ್ತ ಆವರಿಸಿರುವ ಒಳಾಂಗಣದ ವಾಯುಮಾಲಿನ್ಯದಿಂದ, ತತ್ತರಿಸುತ್ತಿದೆ" ಎಂದು ಟೊನ್ನೆ ಹೇಳಿದರು.


ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ವಾಯುಮಾಲಿನ್ಯದ ಕುರಿತು ಹೆಚ್ಚಿನ ಅಧ್ಯಯನಗಳನ್ನು ಮಾಡುವ ಅಗತ್ಯವನ್ನು ಇಂತಹ ಸಂಶೋಧನೆಗಳು ಸಾರಿ ಸಾರಿ ಹೇಳುತ್ತವೆ ಎಂದು ಅವರು ಹೇಳಿದರು.


ಜನಸಂಖ್ಯೆಯ ಗುಣಲಕ್ಷಣಗಳು ಮತ್ತು ವಾಯುಮಾಲಿನ್ಯದ ಮಟ್ಟದಲ್ಲಿನ ವ್ಯತ್ಯಾಸಗಳಿಂದಾಗಿ ಹೆಚ್ಚಿನ ಆದಾಯದ ದೇಶಗಳಲ್ಲಿ ನಡೆಯುವ ಅಧ್ಯಯನಗಳಿಂದ ತೀರ್ಮಾನಗಳು ಗಣನೀಯವಾಗಿ ಭಿನ್ನವಾಗಿರುತ್ತವೆ ಎಂದು ಟೊನ್ನೆ ತಿಳಿಸಿದರು.