ಗೋವಿನ ಸಗಣಿಯಿಂದ ಪರಿಸರ ಸ್ನೇಹಿ ರಾಖಿ ತಯಾರಿಸಿದ ಮಹಿಳೆ

ಅನಿವಾಸಿ ಭಾರತೀಯರಾದ ಅಖ್ಲಾ ಲಹೋಟಿ, ಅಣ್ಣ-ತಂಗಿಯರ ಬಾಂಧವ್ಯದ ಸಂಕೇತವಾದ ರಾಖಿ ಹಬ್ಬವನ್ನು ಪರಿಸರ ಸ್ನೇಹಿಯಾಗಿಸಲು ಹಸುವಿನ ಸಗಣಿಯಿಂದ ರಾಖಿಗಳನ್ನು ತಯಾರಿಸಿದ್ದಾರೆ. ಈ ರಾಖಿ ಹಬ್ಬವು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲದೆ ನಿಮ್ಮಿಂದ ಪರಿಸರಕ್ಕೂ ಒಳಿತಾಗಲಿ ಎಂಬುದು ಇದರ ಉದ್ದೇಶ.

15th Aug 2019
  • +0
Share on
close
  • +0
Share on
close
Share on
close

ರಕ್ಷಾ ಬಂಧನ, ಹಿಂದೂಗಳು ಸಹೋದರ-ಸಹೋದರಿಯರ ಬಂಧುತ್ವವನ್ನು ಆಚರಿಸುವ ಹಬ್ಬ. ಪ್ರಪಂಚವೆಲ್ಲ ತ್ಯಾಜ್ಯದಿಂದ ತುಂಬಿರುವಾಗ, ನೀವು ಸಹ ಮತ್ತೆ ತ್ಯಾಜ್ಯ ಸೃಷ್ಟಿಸುವ ಬದಲು ಪರಿಸರ ಸ್ನೇಹಿ ರಾಖಿ ಉಪಯೋಗಿಸಿ ಪರಿಸರಕ್ಕೆ ಮಾರಕವಾಗದ ಹಾಗೆ ಹಬ್ಬವನ್ನು ಆಚರಿಸುವ ಉತ್ತಮ ಕಾಲ ಬಂದಿದೆ.


ಉತ್ತರಪ್ರದೇಶದ ಬಿಜ್ನೋರೆ ಜಿಲ್ಲೆಯ ಗೋಶಾಲೆಯೊಂದು ಪರಿಸರ ಸ್ನೇಹಿ ರಾಖಿ ತಯಾರಿಸಿ ನಿಮಗೆ ಅನುಕೂಲ ಮಾಡಿಕೊಡುತ್ತಿದೆ. ಶ್ರೀ ಕೃಷ್ಣ ಎಂಬ ಹೆಸರಿನ ಗೋಶಾಲೆಯು ಹಸುವಿನ ಸಗಣಿಯಿಂದ ರಾಖಿಗಳನ್ನು ತಯಾರಿಸುತ್ತಿದೆ. ಈ ಉಪಕ್ರಮನ್ನು, ತಮ್ಮ ತಂದೆಗೆ ಗೋಶಾಲೆಯನ್ನು ನಡೆಸಲು ಸಹಾಯ ಮಾಡಲೆಂದು ಇಂಡೋನೇಷ್ಯಾದಲ್ಲಿನ ತಮ್ಮ ಕೆಲಸವನ್ನು ತೊರೆದು ಭಾರತಕ್ಕೆ ಬಂದ ಅಲ್ಖಾ ಲಹೋಟಿ ಮುನ್ನಡೆಸುತ್ತಿದ್ದಾರೆ.


ವ

ಮಾರುಕಟ್ಟೆಯಲ್ಲಿ ರಾಖಿಗಳನ್ನು ಖರೀದಿಸುತ್ತಿರುವ ಹೆಣ್ಣುಮಕ್ಕಳು.


ಪರಿಸರ ಸ್ನೇಹಿ ರಾಖಿ ತಯಾರಿಕೆಯ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, ಅಖ್ಲಾ


"ಮೊದಲಿಗೆ, ನಾವು ವಿಭಿನ್ನ ಆಕಾರಗಳ ಮತ್ತು ಗಾತ್ರಗಳ ಟೆಂಪ್ಲೇಟ್ ಅನ್ನು ತಯಾರಿಸುತ್ತೇವೆ, ನಂತರ ನಾವು ಈ ಟೆಂಪ್ಲೆಟ್ಗಳಲ್ಲಿ ಕಚ್ಚಾ ಹಸುವಿನ ಸಗಣಿಗಳನ್ನು ಹಾಕಿ ಅದನ್ನು ತಂಪಾದ ಮತ್ತು ಗಾಢವಾದ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿಡುತ್ತೇವೆ. ಅದು ಒಣಗಿದ ನಂತರ, ನಾವು ಅದನ್ನು ಪರಿಸರ ಸ್ನೇಹಿ ಬಣ್ಣಗಳಿಂದ ಅಲಂಕರಿಸುತ್ತೇವೆ ಮತ್ತು ಪ್ಲಾಸ್ಟಿಕ್ ಬಣ್ಣಗಳಿಗೆ ಬದಲಾಗಿ ಎಳೆಗಳನ್ನು ಬಳಸುತ್ತೇವೆ. ಚೀನಾದಲ್ಲಿ ತಯಾರಾದ ರಾಖಿಗೆ ವಿರುದ್ಧವಾಗಿ, ನಮ್ಮ ರಾಖಿ ಪರಿಸರ ಸ್ನೇಹಿಯಾಗಿದೆ. ಅವುಗಳು ಕೊಳೆತು, ನಂತರ ಗೊಬ್ಬರವಾಗಿ ಪರಿವರ್ತನೆಯಾಗುತ್ತವೆ.


117 ಹಸುಗಳಿಗೆ ಆಶ್ರಯವಾಗಿರುವ ಗೋಶಾಲೆಯು ಹಸುವಿನ ಸಗಣಿಯಿಂದ ಈಗಾಗಲೆ ಕೆಲ ಉತ್ಪನ್ನಗಳನ್ನು ತಯಾರಿಸಿದೆ - ದಹನ ಕ್ರಿಯೆಗೆ ಉಪಯೋಗಿಸುವ ಚಪ್ಪಡಿಗಳು, ಹೂವಿನ ಕುಂಡಗಳನ್ನು ಹಾಗೆಯೇ ಗೋಮೂತ್ರದಿಂದ ಸೋಂಕುನಿವಾರಕವನ್ನು ತಯಾರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.


ರಾಖಿಗಳು ಬಹಳ ದಿನ ಬಾಳಿಕೆ ಬರುವುದಿಲ್ಲ ಹಾಗೂ ಹಸುವಿನ ಸಗಣಿಯಿಂದ ರಾಖಿ ತಯಾರಿಸುವುದು ಸುಲಭವಾಗಿರಲಿಲ್ಲ. ಆದರೆ ನಿರಂತರ ಪ್ರಯೋಗಗಳಿಂದ ಹಾಗೂ ಎಡೆಬಿಡದ ನಡೆಸಿದ ಪ್ರಯತ್ನಗಳಿಂದ, ತಂದೆ - ಮಗಳು ಸೇರಿ ಗಟ್ಟಿಯಾದ ರಾಖಿ ತಯಾರಿಸುವಲ್ಲಿ ಯಶಸ್ವಿಯಾದರು.


ಅಖ್ಲಾ ಹೇಳುತ್ತಾರೆ,


"ನಮಗೆ‌ ಸ್ಥಿರತೆ ಕಾಪಾಡಲು ಸಾಧ್ಯವಾಗಿದ್ದು ರಾಖಿಗಳನ್ನು ತಂಪಾಗಿರುವ ಹಾಗೂ ಗಾಢ ಕತ್ತಲಿರುವ ಜಾಗದಲ್ಲಿ, ಸೂರ್ಯನ ಬೆಳಕೂಯಿಲ್ಲದ ಜಾಗದಲ್ಲಿ ಇರಿಸಿದಾಗ."


ಪ್ರಸ್ತುತದಲ್ಲಿ, ರಾಖಿಗಳನ್ನು ಅತ್ಯಲ್ಪ ಬೆಲೆಯಲ್ಲಿ ಮಾರಾಟಮಾಡಲಾಗುತ್ತಿದ್ದು, ಅವು ಉಳಿದಲ್ಲಿ ಉಚಿತವಾಗಿ ಹಂಚಲಾಗುವುದು.


ಜನಪ್ರಿಯ ರಜಾದಿನಗಳಿಗೆ ಮತ್ತು ಹಬ್ಬಗಳಿಗೆ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಅನೇಕ ಉಪಕ್ರಮಗಳಿವೆ. ಉದಾಹರಣೆಗೆ, ಸ್ವಾತಂತ್ರ್ಯ ದಿನಾಚರಣೆಗೆ ಪರಿಸರ ಸ್ನೇಹಿ ಧ್ವಜಗಳನ್ನು ತಯಾರಿಸುತ್ತಿರುವ ಬೆಂಗಳೂರು ಮೂಲದ ಸೀಡ್ ಪೇಪರ್ ಇಂಡಿಯಾ. ಈ ಧ್ವಜಗಳು ಸಂಪೂರ್ಣವಾಗಿ ಕೈಯಲ್ಲೇ ತಯಾರಾಗಿದ್ದು, ಅವುಗಳಲ್ಲಿ ತುಳಸಿಯ ಬೀಜಗಳನ್ನು ಅಳವಡಿಸಿಲಾಗಿದೆ, ಸಂಭ್ರಮಾಚರಣೆಗಳು ಮುಗಿದ ನಂತರ ಆ ಧ್ವಜವನ್ನು ಮಣ್ಣಲ್ಲಿ ನೆಟ್ಟರೆ, ತುಳಸಿ ಗಿಡಗಳು ಹುಟ್ಟುವುದನ್ನು ಎದುರು ನೋಡಬಹುದಾಗಿದೆ.

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India