ನಾಸಾದ ಗಗನಯಾತ್ರೆಗೆ ಆಯ್ಕೆಯಾದ ಭಾರತೀಯ ಮೂಲದ ರಾಜಾ ಜಾನ್ ವರ್ಪುಟೂರ್ ಚಾರಿ

2017ರ ಗಗನಯಾತ್ರಿ ಅಭ್ಯರ್ಥಿ ತರಗತಿಗೆ ಸೇರಲು ನಾಸಾವು ರಾಜಾ ಜಾನ್ ವರ್ಪುಟೂರ್ ಚಾರಿ ಅವರನ್ನು ಆಯ್ಕೆ ಮಾಡಿತ್ತು. ಅವರು 2017ರ ಅಗಸ್ಟ್ ನಲ್ಲಿ ಕರ್ತವ್ಯಕ್ಕೆ ಸೇರಿಕೊಂಡರು.

14th Jan 2020
  • +0
Share on
close
  • +0
Share on
close
Share on
close

ಭಾರತ ಮತ್ತು ಅಮೆರಿಕದ ಯುಎಸ್ ವಾಯುಪಡೆಯ ಕೊಲೊನಲ್ ರಾಜಾ ಜಾನ್ ವೂರ್ಪುಟೂರ್ ಚಾರಿ ಅವರು 11 ಹೊಸ ನಾಸಾ ಪದವೀಧರರ ಜೊತೆ ತಮ್ಮ ಎರಡು ವರ್ಷಗಳ ಮೂಲಭೂತ ಗಗನಯಾತ್ರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವರೆಲ್ಲರೂ ಬಾಹ್ಯಾಕಾಶ ಏಜೆನ್ಸಿಯ ಮಹತ್ವಾಕಾಂಕ್ಷೆಯ ಭವಿಷ್ಯದ ಕಾರ್ಯಾಚರಣೆಯಾದ ಚಂದ್ರ ಮತ್ತು ಮಂಗಳ ಗ್ರಹಗಳ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಒಂದು ಭಾಗವಾಗಲು ಸಜ್ಜಾಗಿದ್ದಾರೆ.


2017ರಲ್ಲಿ ನಾಸಾ ತನ್ನ ಆರ್ಟೆಮಿಸ್ ಕಾರ್ಯಕ್ರಮವನ್ನು ಘೋಷಿಸಿದ ನಂತರ 18,000 ಅರ್ಜಿದಾರರಲ್ಲಿ ಈ ಯಶಸ್ವಿ ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಯಿತು.


41 ವರ್ಷದ ರಾಜಾ ಜಾನ್ ವೂರ್ಪುಟೂರ್ ಚಾರಿ ಅವರನ್ನು 2017ರ ಗಗನಯಾತ್ರಿ ಅಭ್ಯರ್ಥಿ ತರಗತಿಗೆ ಸೇರಲು ನಾಸಾ ಆಯ್ಕೆ ಮಾಡಿತು. ಆಗಸ್ಟ್ 2017 ರಲ್ಲಿ ಅವರು ಕರ್ತವ್ಯಕ್ಕೆ ಹಾಜರಾದರು. ಆರಂಭಿಕ ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಪೂರ್ಣಗೊಳಿಸಿ ಅವರು ಮಿಷನ್ ನಿಯೋಜನೆಗೆ ಅರ್ಹರಾಗಿದ್ದಾರೆ.


ಶುಕ್ರವಾರ ನಡೆದ ಸಮಾರಂಭದಲ್ಲಿ, 1959ರಲ್ಲಿ ಆಯ್ಕೆ ಮಾಡಲಾಗಿದ್ದ 7 ಬುಧಗ್ರಹ ಗಗನಯಾತ್ರಿಗಳ ಸಂಪ್ರದಾಯದಂತೆ ಪ್ರತಿ ಹೊಸ ಗಗನಯಾತ್ರಿಗಳಿಗೆ ಬೆಳ್ಳಿ ಪಿನ್ ಅನ್ನು ನೀಡಲಾಯಿತು.


(ಚಿತ್ರಕೃಪೆ: ಹಫ್ಟಿಂಗ್ಟನ್ ಪೋಸ್ಟ್)


"2020 ಅಮೆರಿಕಾದಿಂದ ಅಮೆರಿಕಾದ ಗಗನಯಾತ್ರಿಗಳನ್ನು ಅಮೆರಿಕನ್ ರಾಕೆಟ್‌ಗಳಲ್ಲಿ ಕಳುಹಿಸಿದ ಘಟನೆಗೆ ಸಾಕ್ಷಿಯಾಗುತ್ತದೆ. ಇದು ನಮ್ಮ ಆರ್ಟೆಮಿಸ್ ಕಾರ್ಯಕ್ರಮ ಮತ್ತು ಚಂದ್ರ ಹಾಗೂ ಅದಕ್ಕೂ ಮೀರಿದ ಕಾರ್ಯಗಳಿಗೆ ಪ್ರಗತಿಯ ಪ್ರಮುಖ ವರ್ಷವಾಗಿದೆ," ಎಂದು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರಿಡೆನ್‌ಸ್ಟೈನ್ ಅವರು ಹೂಸ್ಟನ್ನಿನ ಏಜೆನ್ಸಿಯ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಹೇಳಿದರು.


"ಈ ವ್ಯಕ್ತಿಗಳು ಅಮೆರಿಕವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತಾರೆ ಮತ್ತು ನಮ್ಮ ಗಗನಯಾತ್ರಿ ದಳಕ್ಕೆ ಸೇರಲು ಇದು ಅದ್ಭುತ ಸಮಯ," ಎಂದು ಹೇಳಿದರು.


ಗಗನಯಾತ್ರಿಗಳು ತಮ್ಮ ಮೊದಲ ಬಾಹ್ಯಾಕಾಶ ಹಾರಾಟಗಳನ್ನು ಪೂರ್ಣಗೊಳಿಸಿದ ನಂತರ ಚಿನ್ನದ ಪಿನ್ ಸ್ವೀಕರಿಸುತ್ತಾರೆ.


ಹೊಸ ಪದವೀಧರರಿಗೆ ಗಗನಯಾತ್ರಿ ಅಭ್ಯರ್ಥಿ ತರಬೇತಿಯಲ್ಲಿ ಸ್ಪೆಸ್‌ ವಾಕಿಂಗ್, ರೊಬೊಟಿಕ್ಸ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ವ್ಯವಸ್ಥೆಗಳು, ಟಿ -38 ಜೆಟ್ ಪ್ರಾವೀಣ್ಯತೆ ಮತ್ತು ರಷ್ಯಾದ ಭಾಷೆ, ಇವೆಲ್ಲವುಗಳ ಬಗ್ಗೆ ಸೂಚನೆ, ಅಭ್ಯಾಸ ಮತ್ತು ಪರೀಕ್ಷೆಗಳು ಸೇರಿವೆ.


ಗಗನಯಾತ್ರಿಗಳಂತೆ ಅವರು ಸಹ ಬಾಹ್ಯಾಕಾಶ ನೌಕೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಾರೆ, ಪ್ರಸ್ತುತ ಬಾಹ್ಯಾಕಾಶದಲ್ಲಿರುವ ತಂಡಗಳನ್ನು ಬೆಂಬಲಿಸುತ್ತಾರೆ ಮತ್ತು ಬಾಹ್ಯಾಕಾಶಕ್ಕೆ ಬಂದ ಸುಮಾರು 500 ಜನರ ಶ್ರೇಣಿಗೆ ಸೇರುತ್ತಾರೆ.


ನಾಸಾ ತನ್ನ ಗಗನಯಾತ್ರಿಗಳಿಗಾಗಿ ನಡೆಸಿದ ಮೊದಲ ಸಾರ್ವಜನಿಕ ಪದವಿ ಸಮಾರಂಭದಲ್ಲಿ ಸೆನೆಟರ್‌ಗಳಾದ ಜಾನ್ ಕಾರ್ನಿನ್ ಮತ್ತು ಟೆಕ್ಸಾಸ್‌ನ ಟೆಡ್ ಕ್ರೂಜ್ ಭಾಷಣಕಾರರಲ್ಲಿ ಒಬ್ಬರಾಗಿದ್ದರು.


"ಬಹಳ ಹಿಂದಿನಿಂದಲೂ ಯುನೈಟೆಡ್ ಸ್ಟೇಟ್ಸ್ ಬಾಹ್ಯಾಕಾಶ ಪರಿಶೋಧನೆಯಲ್ಲಿ ವಿಶ್ವದ ಅಗ್ರಗಣ್ಯವಾಗಿದೆ ಮತ್ತು ಜಾನ್ಸನ್ ಬಾಹ್ಯಾಕಾಶ ಕೇಂದ್ರವು ಯಾವಾಗಲೂ ಮಾನವ ಬಾಹ್ಯಾಕಾಶ ಹಾರಾಟ ಚಟುವಟಿಕೆಯ ಹೃದಯ ಮತ್ತು ಮನೆಯಾಗಿರುತ್ತದೆ. ಹೊಸದಾಗಿ ಆಯ್ಕೆಯಾದ ಗಗನಯಾತ್ರಿಗಳು ಇತಿಹಾಸಕ್ಕೆ ಹೊಸ ಕೊಡಿಗೆ ನೀಡುತ್ತಾರೆ ಮತ್ತು ನಂಬಲಾಗದ ಸಾಧನೆ ಮಾಡುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ," ಎಂದು ಕಾರ್ನಿನ್ ಹೇಳಿದರು.


"ಆರ್ಟೆಮಿಸ್ ಕಾರ್ಯಕ್ರಮದ ಮೊದಲ ಪದವೀಧರ ವರ್ಗ ಎಂದು ನಾನು ಈ ಅಸಾಧಾರಣ ಪುರುಷರು ಮತ್ತು ಮಹಿಳೆಯರನ್ನು ಅಭಿನಂದಿಸುತ್ತೇನೆ. ಅವರು ಅಂತಿಮ ಗಡಿನಾಡಿನ ಪ್ರವರ್ತಕರು, ಅವರ ಕಾರ್ಯವು ಮುಂದಿನ ಪೀಳಿಗೆಗೆ ಬಾಹ್ಯಾಕಾಶದಲ್ಲಿ ಅಮೆರಿಕದ ನಾಯಕತ್ವವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅವರ ಮುಂದೆ ಇರುವ ಅವಕಾಶಗಳಿಗಾಗಿ ನಾನು ಉತ್ಸುಕನಾಗಿದ್ದೇನೆ, ಅದರಲ್ಲಿ ಚಂದ್ರನ ಮೇಲ್ಮೈಗೆ ಮೊಟ್ಟಮೊದಲ ಮಹಿಳೆಯನ್ನು ಇಳಿಸುವುದು ಮತ್ತು ಮಂಗಳನ ಮೇಲೆ ಹೆಜ್ಜೆ ಹಾಕುವುದು ಸೇರಿದೆ,” ಮುಂತಾದ ವಿಷಯಗಳ ಕುರಿತಂತೆ ಕ್ರೂಜ್ ಮಾತನಾಡಿದರು.


ಹೊಸ ಪದವೀಧರರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಚಂದ್ರ ಮತ್ತು ಮಂಗಳ ಗ್ರಹದ ಕಾರ್ಯಗಳಿಗೆ ನಿಯೋಜಿಸಬಹುದು.


ದಶಕದ ನಂತರ ಈ ಸುಸ್ಥಿರ ಚಂದ್ರನ ಪರಿಶೋಧನೆಯ ಗುರಿಯೊಂದಿಗೆ ನಾಸಾ ಮೊದಲ ಮಹಿಳೆ ಮತ್ತು ಪುರುಷನನ್ನು ಮುಂದಿನ 2024ರ ವೇಳೆಗೆ ಚಂದ್ರನ ಮೇಲ್ಮೈಗೆ ಕಳುಹಿಸುತ್ತದೆ. ಹೆಚ್ಚುವರಿ ಚಂದ್ರನ ಕಾರ್ಯಗಳನ್ನು ವರ್ಷಕ್ಕೊಮ್ಮೆ ಯೋಜಿಸಲಾಗಿದೆ ಮತ್ತು ಮಂಗಳ ಗ್ರಹದ ಮಾನವ ಪರಿಶೋಧನೆಯನ್ನು 2030ರ ದಶಕದ ಮಧ್ಯಭಾಗದಲ್ಲಿ ಗುರಿ ಮಾಡಲಾಗಿದೆ.


ನಾಸಾ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನ ಕೆಲಸವನ್ನು ಮುಂದುವರೆಸಿದೆ, ಇದು ನವೆಂಬರ್‌ನಲ್ಲಿ ಸತತ 20 ವರ್ಷಗಳ ಮಾನವ ಸ್ವಾಧೀನವನ್ನು ಆಚರಿಸಲಿದೆ.


ಅಮೆರಿಕದ ವಾಣಿಜ್ಯ ಬಾಹ್ಯಾಕಾಶ ನೌಕೆಯಲ್ಲಿ ಮತ್ತೆ ಅಮೆರಿಕದಿಂದ ಗಗನಯಾತ್ರಿಗಳನ್ನು ಕಳುಹಿಸುವ ಯೋಚನೆಯಲ್ಲದೆ ಮತ್ತು ಆರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿ ಮನುಷ್ಯರನ್ನು ಚಂದ್ರನಿಗೆ ಕಳುಹಿಸಲು ತಯಾರಿ ನಡೆಸುತ್ತಿದೆ.


ಸೀಡರ್ ಫಾಲ್ಸ್ ಅಯೋವಾದ ಯುಎಸ್ ವಾಯುಪಡೆಯ ಕೊಲೊನಲ್ ಆಗಿದ್ದ ರಾಜಾ ಜಾನ್ ವೂರ್ಪುಟೂರ್ ಚಾರಿ ಯುಎಸ್ ಏರ್ ಫೋರ್ಸ್ ಅಕಾಡೆಮಿಯಿಂದ ಖಗೋಳ ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗ್ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.


ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ ಮತ್ತು ಮೇರಿಲ್ಯಾಂಡ್‌ನ ಪ್ಯಾಟುಕ್ಸೆಂಟ್ ನದಿಯಲ್ಲಿರುವ ಯುಎಸ್ ನೇವಲ್ ಟೆಸ್ಟ್ ಪೈಲಟ್ ಶಾಲೆಯಲ್ಲಿ ಪದವಿ ಪಡೆದಿದ್ದಾರೆ.


ಚಾರಿ 461 ನೇ ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್‌ನ ಕಮಾಂಡರ್ ಮತ್ತು ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್‌ನಲ್ಲಿ ಎಫ್ -35 ಇಂಟಿಗ್ರೇಟೆಡ್ ಟೆಸ್ಟ್ ಫೋರ್ಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.


ಎಂಜಿನಿಯರಿಂಗ್ ಪದವಿಗಾಗಿ ಹೈದರಾಬಾದ್‌ನಿಂದ ಚಿಕ್ಕ ವಯಸ್ಸಿನಲ್ಲಿಯೇ ಯುಎಸ್‌ಗೆ ಹೋದ ಅವರ ತಂದೆ ಶ್ರೀನಿವಾಸ್ ಚಾರಿ ಅವರು ಉನ್ನತ ಶಿಕ್ಷಣ ಪಡೆಯಲು ಮತ್ತು ಯಶಸ್ವಿ ವೃತ್ತಿಜೀವನವನ್ನು ಮಾಡಲು ಪ್ರೇರಣೆ ನೀಡಿದರು. ಅವರು ತಮ್ಮ ಹೆಂಡತಿಯನ್ನು ಭೇಟಿಯಾದರು ಮತ್ತು ತಮ್ಮ ಇಡೀ ವೃತ್ತಿಜೀವನವನ್ನು ವಾಟರ್‌ಲೂನ ಜಾನ್ ಡೀರೆನಲ್ಲಿ ಕಳೆದರು.


"ನನ್ನ ತಂದೆ ಶಿಕ್ಷಣ ಪಡೆಯುವ ಗುರಿಯೊಂದಿಗೆ ಈ ದೇಶಕ್ಕೆ ಬಂದರು ಮತ್ತು ಅದರ ಪ್ರಾಮುಖ್ಯತೆಯನ್ನು ಅರಿತುಕೊಂಡು ನಾನು ಹಾಗೆ ಬೆಳೆದಿದ್ದೇನೆ," ಎಂದು ಚಾರಿ ಇತ್ತೀಚಿನ ಸಂದರ್ಶನದಲ್ಲಿ ಪಿಟಿಐಗೆ ತಿಳಿಸಿದರು.


"ನನ್ನ ಬಾಲ್ಯದುದ್ದಕ್ಕೂ ಶಿಕ್ಷಣದ ಮೇಲೆ ಗಮನವಿತ್ತು ಮತ್ತು ಅದು ಯಶಸ್ವಿಯಾಗಲು ನೀನು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದ್ದರು," ಎಂದರು.


ಚಾರಿ ಅವರ ಪತ್ನಿ ಹಾಲಿ ಸೀಡರ್ ಫಾಲ್ಸ್ ಮೂಲದವರಾಗಿದ್ದು ಅವರಿಗೆ ಮೂವರು ಮಕ್ಕಳಿದ್ದಾರೆ.

  • +0
Share on
close
  • +0
Share on
close
Share on
close

Our Partner Events

Hustle across India