ಶೀಘ್ರದಲ್ಲೆ ಮೊಬೈಲ್‌ಗಳಲ್ಲಿ ಬರಲಿದೆ ಭಾರತದ ಸ್ವತಂತ್ರ ನ್ಯಾವಿಗೇಷನ್‌ ಸಿಸ್ಟಮ್‌ ನಾವಿಕ್

ನಾವಿಕ್- ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್ ಎಂದೂ ಕರೆಯಲ್ಪಡುವ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) ಯುಎಸ್ ಮೂಲದ ಜಿಪಿಎಸ್, ರಶಿಯಾಸ್ ಗ್ಲೋನಾಸ್ ಮತ್ತು ಯುರೋಪ್ ಅಭಿವೃದ್ಧಿಪಡಿಸಿದ ಗೆಲಿಲಿಯೊಗಿಂತ ಉತ್ತಮವಾಗಿರಲಿದೆ ಎಂದು ವರದಿಯಾಗಿದೆ.‌

ಶೀಘ್ರದಲ್ಲೆ ಮೊಬೈಲ್‌ಗಳಲ್ಲಿ ಬರಲಿದೆ ಭಾರತದ ಸ್ವತಂತ್ರ ನ್ಯಾವಿಗೇಷನ್‌ ಸಿಸ್ಟಮ್‌ ನಾವಿಕ್

Thursday January 23, 2020,

2 min Read

ತಮ್ಮ ಸ್ನ್ಯಾಪ್‌ಡ್ರಾಗನ್ ಮೊಬೈಲ್ ಚಿಪ್‌ಸೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಾವಿಕ್ ತಂತ್ರಜ್ಞಾನದ ಸಾಮರ್ಥ್ಯವನ್ನು ಶಕ್ತಗೊಳಿಸುವ ನಿಟ್ಟಿನಲ್ಲಿ ಯು ಎಸ್ ಮೂಲದ ಚಿಪ್‌ಮೇಕರ್ ಕ್ವಾಲ್ಕಾಮ್‌ಗೆ ಅವಕಾಶ ಕಲ್ಪಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಂಗಳವಾರ ತಿಳಿಸಿದೆ.


ಭಾರತೀಯ ಮೀನುಗಾರರ ಮೇಲೆ ನಾಮಾಂಕಿತಗೊಂಡಿರುವ ನಾವಿಕ್ ಎರಡು ರೀತಿಯ ಸೇವೆಗಳನ್ನು ಒದಗಿಸುತ್ತದೆ- ಒಂದು ಸಾರ್ವಜನಿಕರು ಉಪಯೋಗಿಸಬಹುದಾದ ಸ್ಟ್ಯಾಂಡರ್ಡ್ ಪೊಸಿಶನಿಂಗ್ ಸರ್ವಿಸ್ (ಎಸ್‌ಪಿಎಸ್), ಮತ್ತೊಂದು ಸೀಮಿತ ಸೇವೆ(ಆರ್‌ಎಸ್), ಇದು ಅಧಿಕೃತ ಬಳಕೆದಾರರು ಮತ್ತು ಏಜೆನ್ಸಿಗಳಿಗೆ ಸಂಬಂಧಿಸಿದ ಗೂಢ ಲಿಪೀಕರಣ ಹೊಂದಿರುವ ಸೇವೆಯಾಗಿದೆ.


ನಾವಿಕ್- ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್ ಎಂದೂ ಕರೆಯಲ್ಪಡುವ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) ಯುಎಸ್ ಮೂಲದ ಜಿಪಿಎಸ್, ರಶಿಯಾಸ್ ಗ್ಲೋನಾಸ್ ಮತ್ತು ಯುರೋಪ್ ಅಭಿವೃದ್ಧಿಪಡಿಸಿದ ಗೆಲಿಲಿಯೊಗಿಂತ ಉತ್ತಮವಾಗಿರಲಿದೆ ಎಂದು ವರದಿಯಾಗಿದೆ.


ನಾವಿಕ್ ಎನ್ನುವುದು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಐಆರ್ಎನ್ಎಸ್ಎಸ್) ನ ಸಂಕ್ಷಿಪ್ತ ರೂಪವಾಗಿದೆ. ಇಸ್ರೋ ಪ್ರಕಾರ, ಭೂಮಂಡಲ, ವೈಮಾನಿಕ ಮತ್ತು ಸಾಗರ ಸಂಚರಣೆ, ವಿಪತ್ತು ನಿರ್ವಹಣೆ, ವಾಹನ ಟ್ರ್ಯಾಕಿಂಗ್ ಮತ್ತು ಫ್ಲೀಟ್ ನಿರ್ವಹಣೆ ಮತ್ತು ಮೊಬೈಲ್ ಫೋನ್‌ಗಳ ಏಕೀಕರಣಕ್ಕಾಗಿ ಐಆರ್‌ಎನ್‌ಎಸ್‌ಎಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ.


ಐಆರ್‌ಎನ್‌ಎಸ್‌ಎಸ್ ಪ್ರಾಥಮಿಕ ಸೇವಾ ಪ್ರದೇಶದಲ್ಲಿ 20 ಮೀಟರ್‌ಗಿಂತ ಉತ್ತಮವಾದ ಸ್ಥಾನದ ನಿಖರತೆಯನ್ನು ಒದಗಿಸುವ ನಿರೀಕ್ಷೆಯಿದೆ.


ಬಾಹ್ಯಾಕಾಶ ವಿಭಾಗವು ಐಆರ್‌ಎನ್ಎಸ್ಎಸ್‌ನ ಎಂಟು ಉಪಗ್ರಹಗಳ ನಕ್ಷತ್ರಪುಂಜವನ್ನು ಒಳಗೊಂಡಿದೆ. ಅವುಗಳಲ್ಲಿ ಮೂರು ಉಪಗ್ರಹಗಳು ಜಿಯೋಸ್ಟೇಷನರಿ ಕಕ್ಷೆಯಲ್ಲಿವೇ ಮತ್ತು ಉಳಿದ ನಾಲ್ಕು ಭೌಗೋಳಿಕ ಕಕ್ಷೆಗಳಲ್ಲಿ ಎರಡು ವಿಭಿನ್ನ ಆಯಾಮಗಳಲ್ಲಿ ಅಗತ್ಯವಾದ ಇಳಿಜಾರು ಮತ್ತು ಸಮಭಾಜಕ ಛೇದಗಳಲ್ಲಿವೆ. ನಕ್ಷತ್ರಪುಂಜದ ಎಲ್ಲಾ ಉಪಗ್ರಹಗಳನ್ನು ಒಂದೇ ರೀತಿ ಕಾನ್ಫಿಗರ್ ಮಾಡಲಾಗಿದೆ. ಇದನ್ನು ಭಾರತದ ಬಳಕೆದಾರರಿಗೆ ಮತ್ತು ಅದರ ಗಡಿಯಿಂದ 1500 ಕಿ.ಮೀ ವರೆಗಿನ ಪ್ರದೇಶಗಳಿಗೆ ನಿಖರವಾದ ಸ್ಥಾನದ ಮಾಹಿತಿಯನ್ನು ಒದಗಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ.


ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 720ಜಿ, 662 ಮತ್ತು 460 ಚಿಪ್‌ಸೆಟ್‌ಗಳನ್ನು ಬಿಡುಗಡೆಗೊಳ್ಳಲಿದ್ದು ಇವು ನಾವಿಕ್‌ ಅನ್ನು ಬೆಂಬಲಿಸಲಿವೆ.


"ಈ ಚಿಪ್‌ಸೆಟ್‌ಗಳನ್ನು ಕ್ವಾಲ್ಕಾಮ್ ಟೆಕ್ನಾಲಜೀಸ್, ಇಂಕ್ ಬಿಡುಗಡೆ ಮಾಡುತ್ತಿದೆ, ಮತ್ತು ಬಿಡುಗಡೆಯು ಸ್ಮಾರ್ಟ್‌ಫೋನ್ ಒಇಎಂಗಳಿಂದ ನಾವಿಕ್ ಅನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಕಾರ್ಯನಿರ್ವಹಿಸುತ್ತದೆ," ಎಂದು ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.


ಒಇಎಂಗಳು ಈಗ ಭಾರತೀಯ ಮಾರುಕಟ್ಟೆಗಾಗಿ ಬಿಡುಗಡೆಗೊಳಿಸುವ ಪ್ರತಿಯೊಂದು ಹೊಸ ಮಾದರಿಗಳು ನಾವಿಕ್ ತಂತ್ರಜ್ಞಾನವನ್ನು ಒಳಗೊಂಡಿರುತ್ತವೆ, ಹೀಗಾಗಿ ಮುಂಬರುವ ಹ್ಯಾಂಡ್‌ಸೆಟ್‌ಗಳು, ಅಪ್ಲಿಕೇಶನ್‌ಗಳು, ಪ್ರೊಸೆಸರ್‌ಗಳು ಇತ್ಯಾದಿಗಳಲ್ಲಿ ನಾವಿಕ್ ತಂತ್ರಜ್ಞಾನವು ಸಾಮಾನ್ಯ ವೈಶಿಷ್ಟ್ಯವಾಗಿ ಹೊರ ಹೊಮ್ಮಬಹುದು ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ,


ಈ ಹೊಸ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ಗಳನ್ನು ಆಧರಿಸಿ ಶೀಘ್ರದಲ್ಲೇ ನಾವಿಕ್ ಬೆಂಬಲದೊಂದಿಗೆ ಸಾಧನಗಳನ್ನು ಬಿಡುಗಡೆ ಮಾಡುವುದಾಗಿ ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ ಶಿಯೋಮಿ ಮತ್ತು ರಿಯಲ್‌ಮಿ ಹೇಳಿವೆ.‌


ಈ ಬೆಳವಣಿಗೆಯ ಬಗ್ಗೆ ಕೆ. ಶಿವನ್‌ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ,

“ನಾವಿಕ್ ಅನ್ನು ಅಂತರ್ಗತಗೊಳಿಸುವ ಕ್ವಾಲ್ಕಾಮ್‌ನ ಪ್ರಯತ್ನಗಳಿಂದ ಇಸ್ರೋ ಸಂತೃಪ್ತಗೊಂಡಿದೆ ಮತ್ತು ಭಾರತದಲ್ಲಿ ಭವಿಷ್ಯದಲ್ಲಿ ಬಿಡುಗಡೆಯಾಗುವ ಹ್ಯಾಂಡ್ಸೆಟ್‌ಗಳಿಗೆ ನಾವಿಕ್ ತಂತ್ರಜ್ಞಾನವನ್ನು ಒದಗಿಸಲು ನಾವು ಒಇಎಂಗಳನ್ನು ಪ್ರೇರಿಪಿಸುತ್ತೇವೆ. ಅನೇಕ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಾವಿಕ್ ಲಭ್ಯತೆಯು ಭಾರತದ ಸ್ಮಾರ್ಟ್‌ಫೋನ್‌ಗಳ ಜಿಯೋಲೋಕಲೈಸೇಶನ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸ್ವತಃ ಭಾರತೀಯರೇ ಅಭಿವೃದ್ಧಿ ಪಡಿಸಿದ ಈ ಸ್ಥಾನೀಯ ತಂತ್ರಜ್ಞಾನದಿಂದ ಭಾರತೀಯ ಗ್ರಾಹಕರಿಗೆ ತಮ್ಮ ದಿನನಿತ್ಯದ ಬಳಕೆಗಾಗಿ ಸಹಾಯವಾಗುತ್ತದೆ,” ಎಂದರು.


Share on
close