ಏಷ್ಯಾದಲ್ಲೇ ಉಬರ್ ಈಟ್ಸ್, ಕೆ ಎಫ್ ಸಿ ಹಾಗೂ ಮೆಕ್ ಡೊನಾಲ್ಡ್ ಗಿಂತಲೂ ಅತೀ ಹೆಚ್ಚು ಬೇಡಿಕೆಗಿಟ್ಟಿಸಿಕೊಂಡಿದೆ ನಮ್ಮದೇಶದ ಇಂದೋರಿನ ‘ಜಾನಿ ಹಾಟ್ ಡಾಗ್ʼ

ಇಂದೋರ್‌ನಲ್ಲಿನ ವಿಜಯ್ ಸಿಂಗ್ ರಾಥೋಡ್ ಅವರ ಸಣ್ಣ 120 ಚದರ ಅಡಿ ಅಂಗಡಿಯು ಜಾಗತಿಕ ಬ್ರಾಂಡ್‌ಗಳು ನೀಡುವ ಹವಾನಿಯಂತ್ರಿತ ಸೌಕರ್ಯಗಳಿಗೆ ಎಂದಿಗೂ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ, ಆದರೆ ಅವರು ತಮ್ಮ ಬಿಸಿ ತವಾದಿಂದ ತಯಾರಾಗುವ ವಿಶೇಷ ಖಾದ್ಯಗಳಿಂದ ಪ್ರಸಿದ್ಧರಾಗಿದ್ದಾರೆ.

ಏಷ್ಯಾದಲ್ಲೇ ಉಬರ್ ಈಟ್ಸ್, ಕೆ ಎಫ್ ಸಿ ಹಾಗೂ ಮೆಕ್ ಡೊನಾಲ್ಡ್ ಗಿಂತಲೂ ಅತೀ ಹೆಚ್ಚು ಬೇಡಿಕೆಗಿಟ್ಟಿಸಿಕೊಂಡಿದೆ ನಮ್ಮದೇಶದ ಇಂದೋರಿನ ‘ಜಾನಿ ಹಾಟ್ ಡಾಗ್ʼ

Friday October 18, 2019,

4 min Read

ಕಳೆದ 50 ವರ್ಷಗಳಿಂದ ತಮ್ಮ ಬಿಸಿ ತವಾದ ಎದುರೇ ಕಾಲ ಕಳೆದ ವಿಜಯ್ ಗೆ, ಹಾಂಕಾಂಗ್ ನಲ್ಲಿ ಅವರ ಸಾಧನೆಗೆ ತಂಪಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಇಂದೋರ್‌ನಲ್ಲಿ ಜಾನಿ ಹಾಟ್ ಡಾಗ್ ನಡೆಸುತ್ತಿರುವ ವಿಜಯ್ ಸಿಂಗ್ ಅವರನ್ನು ಉಬರ್ ಈಟ್ಸ್ ಎಪಿಎಸಿ ರೆಸ್ಟೋರೆಂಟ್ ಪಾರ್ಟ್‌ನರ್ಸ್ ಅವಾರ್ಡ್ಸ್ 2019 ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಜುಲೈನಲ್ಲಿ ನಡೆದ ಉಬರ್ ಈಟ್ಸ್ ಫ್ಯೂಚರ್ ಆಫ್ ಫುಡ್ ಶೃಂಗಸಭೆಯ ಭಾಗವಾಗಿದ್ದ ಈ ಕಾರ್ಯಕ್ರಮದಲ್ಲಿ ಕೆಲವು ಜನಪ್ರಿಯ ಆಹಾರ ಬ್ರಾಂಡ್‌ಗಳಾದ ಬರ್ಗರ್ ಕಿಂಗ್ ಮತ್ತು ಕೆಫೆ ಕಾಫಿ ಡೇ ಅನ್ನು ಸನ್ಮಾನಿಸಲಾಯಿತು.


ಎಲ್ಲಾ ಏಷ್ಯಾ-ಪೆಸಿಫಿಕ್ ಪ್ರದೇಶದಿಂದ ಉಬರ್ ಈಟ್ಸ್ನಲ್ಲಿ ಹೆಚ್ಚು ಆದೇಶಿಸಲಾದ ಖಾದ್ಯಕ್ಕಾಗಿ ವಿಜಯ್ ಸಿಂಗ್ ಪ್ರಶಸ್ತಿಯನ್ನು ಪಡೆದರು. ಅವರ ಖಾದ್ಯ "ಸಸ್ಯಹಾರಿ


ಹಾಟ್ ಡಾಗ್" ಇದು ಮೆಕ್ಡೊನಾಲ್ಡ್ಸ್, ಕೆ ಎಫ್ ಸಿ ಮತ್ತು ಇತರ ಜಾಗತಿಕ ಬ್ರ್ಯಾಂಡ್‌ಗಳನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.


ವಿಜಯ್ ಸಿಂಘ್ ರಾಥೋಡ್, ಸ್ಥಾಪಕ, ಜಾನಿ ಹಾಟ್ ಡಾಗ್. (ಚಿತ್ರ ಕೃಪೆ: ಮುಕ್ತಿ ಮಾಸಿಹ್)

ತಾವು ಬಹು ದೂರ ಪ್ರಯಾಣಿಸಿ ಪ್ರಶಸ್ತಿಯನ್ನು ಪಡೆದುಕೊಂಡ ವಿಜಯ್ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಾ ಹೀಗೆ ಹೇಳಿದರು,


"ಪ್ರಶಸ್ತಿ ಸ್ವೀಕರಿಸಲು ತುಂಬಾ ಸಂತಸವಾಯಿತು, ಅದೊಂದು ಒಳ್ಳೆಯ ಅನುಭವ ಆದರೆ ಅದರ ಬದಲು ನಾನು ನನ್ನ ಅಂಗಡಿಯಲ್ಲಿ ಕುಳಿತು ಅಡುಗೆ ಮಾಡಿದ್ದರೆ ಇನ್ನೂ ಖುಷಿಯಾಗುತ್ತಿತ್ತು.”

ನಿಜವಾದ ದೇಶೀಯ ರುಚಿ

ನಿಜ ಹೇಳುವುದಾದರೆ, ಇಂದೋರ್‌ನ ಜನಪ್ರಿಯ ಆಹಾರ ಗಾಲಿ ಚಪ್ಪನ್ ದುಕಾನ್‌ನಲ್ಲಿರುವ ವಿಜಯ್ ಸಿಂಗ್ ಅವರ 120 ಚದರ ಅಡಿಗಳ ಅಂಗಡಿಯು ಜಾಗತಿಕ ಬ್ರ್ಯಾಂಡ್‌ಗಳು ನೀಡುವ ಹವಾನಿಯಂತ್ರಿತ ಸೌಕರ್ಯಗಳಿಗೆ ಎಂದಿಗೂ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ, ಆದರೆ ಅವರು ತಮ್ಮ ಬಿಸಿ ತವಾದಿಂದ ತಯಾರಿಸಿ ಉಣಬಡಿಸುವ ತಿನಿಸುಗಳು ಅವರ ಬಗ್ಗೆ ಬರೆಯಲು ಕಾರಣವಾಗಿದೆ.


ಜಾನಿ ಹಾಟ್ ಡಾಗ್‌ನ ಹಾಟ್ ಡಾಗ್‌ಗಳು ಬೆಣ್ಣೆ, ರಸವತ್ತಾದ ರೌಂಡ್ ಸ್ಯಾಂಡ್‌ವಿಚ್‌ಗಳು, ಬಿಸಿ ಮಸಾಲೆಯುಕ್ತ ಆಲೂಗೆಡ್ಡೆಗಳಿಂದ ತುಂಬಿರುತ್ತವೆ ಮತ್ತು ಕಚ್ಚಾ ಕತ್ತರಿಸಿದ ಈರುಳ್ಳಿ ಮತ್ತು ಮಸಾಲೆಯುಕ್ತ ಹಸಿರು ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಈ ರೀತಿಯ ಹಾಟ್ ಡಾಗ್ ಒಂದನ್ನು ತಿಂದರೆ ಇನ್ನೊಂದು ಮೊತ್ತೊಂದು ತಿನ್ನುವ ಬಯಕೆ ಉಂಟಾಗುವುದು ಸಹಜ.


ವಿಜಯ್ ಸಿಂಗ್ ಮತ್ತು ಅವರ ಕಿರಿಯ ಮಗ ಕಳೆದ ವರ್ಷ ಉಬರ್ ಈಟ್ಸ್ ಜೊತೆ ಒಪ್ಪಂದ ಮಾಡಿಕೊಂಡಾಗಿನಿಂದ, ಅವರು ತಮ್ಮ 'ಹಾಟ್ ಡಾಗ್ಸ್' ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ.


ಇಪ್ಪತ್ತು ವರ್ಷಗಳ ಹಿಂದೆ, ವಿಜಯ್ ಸಿಂಗ್ ದಿನಕ್ಕೆ ಸುಮಾರು 50 ರಿಂದ 60 ಹಾಟ್ ಡಾಗ್‌ಗಳನ್ನು ಮಾರಾಟ ಮಾಡುತ್ತಿದ್ದರು, ಅದು ಪ್ರತಿ ಹಾಟ್ ಡಾಗ್‌ಗೆ ಕೇವಲ 75 ಪೈಸೆ ಬೆಲೆಗೆ. ಇಂದು ಹೆಚ್ಚುತ್ತಿರುವ ಗ್ರಾಹಕರಿಗೆ ಅನುಗುಣವಾಗಿ ಪ್ರತಿದಿನ ಸುಮಾರು 4,000 ಹಾಟ್ ಡಾಗ್‌ಗಳನ್ನು ತಲಾ 30 ರೂಪಾಯಿಗೆ ಮಾರಾಟ ಮಾಡುತ್ತಾರೆ.


ವಿಜಯ್ ಸಿಂಗ್ ತಮ್ಮ ಯಶಸ್ಸನ್ನು ಭಾರತದ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ವ್ಯಾಪಿಸಿರುವ ಡಿಜಿಟಲ್ ಕ್ರಾಂತಿಗೆ ಸಲ್ಲಿಸುತ್ತಾರೆ. "2005 ರಿಂದ, ನನ್ನ ವ್ಯವಹಾರವು ಉತ್ತಮವಾಗಿದೆ ಮತ್ತು ಕಳೆದ ವರ್ಷ ನಾವು ಆಹಾರ ವಿತರಣಾ ಅಪ್ಲಿಕೇಶನ್‌ನೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ಮಾರಾಟವು ಮೂರು ಪಟ್ಟು ಹೆಚ್ಚಾಗಿದೆ" ಎಂದು ಅವರು ಹೇಳುತ್ತಾರೆ.


ಕಳೆದ ವರ್ಷ, ವಿಜಯ್ ಸಿಂಗ್ ಅವರ ಜಾನಿ ಹಾಟ್ ಡಾಗ್ ವಾರ್ಷಿಕ ರೂ. 3 ಕೋಟಿ ವಹಿವಾಟನ್ನು ತಲುಪಿತ್ತು. ಅವರು ಮೊದಲು ಪ್ರಾರಂಭಿಸಿದಾಗ 1978 ರ ಸುಮಾರಿಗೆ ವಾರ್ಷಿಕ ಆದಾಯದ ಕೇವಲ 500 ರೂ. "ಈಸ್ ಸಾಲ್, ಉಸ್ಸೆ ಭೀ ಉಪರ್ ಜಾಯೇಗಾ (ಈ ವರ್ಷ, ನಾವು ಇನ್ನು ಹೆಚ್ಚು ಸಂಪಾದಿಸುತ್ತೇವೆ)" ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.


ಜಾನಿ ಹಾಟ್ ಡಾಗ್ ಖಾದ್ಯ. (ಚಿತ್ರಕೃಪೆ: ಮುಕ್ತಿ ಮಾಸಿಹ್)

ಆದರೆ ವಿಜಯ್ ಸಿಂಗ್‌ಗೆ, ದೊಡ್ಡ ಮೊತ್ತವನ್ನು ಮಾಡುವ ಉದ್ದೇಶ ಎಂದಿಗೂ ಇರಲಿಲ್ಲ, ಇದೆ ಅವರ ಜಾನಿ ಹಾಟ್ ಡಾಗ್ ಅನ್ನು ಮೊದಲ ಸ್ಥಾನದಲ್ಲಿ ಇರುವಂತೆ ಮಾಡಿದೆ. ಕೇವಲ ಎಂಟು ವರ್ಷದ ಬಾಲಕನಾಗಿದ್ದಾಗಲೂ, ವಿಜಯ್ ಸಿಂಗ್ ಇಂದೋರ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜಿಎಸ್‌ಐಟಿಎಸ್) ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳಿಗೆ ಚಹಾ ಮತ್ತು ತಿಂಡಿಗಳನ್ನು ಬಡಿಸುತ್ತಿದ್ದರು.


"ಮೈನೆ ಬಹುತ್ ಸೇವಾ ಕಿ ಹೈ, ಸಹಾಬ್. ಕರೀಬ್, ಕರೀಬ್ ಏಕ್ ಲಾಕ್ ವಿದ್ಯಾರ್ಥಿಯೊಂಕೋ ಮೈನೆ ಖಿಲಾಯ ಹೈ (ನಾನು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿದ್ದೇನೆ)" ಎನ್ನುತ್ತಾರೆ ವಿಜಯ್


ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಹಾಯ ಮಾಡುವ ಆಹಾರವನ್ನು ಯಾವಾಗಲೂ ನೀಡುವುದು ಅವರ ಉದ್ದೇಶವಾಗಿತ್ತು ಎಂದು ಅವರು ಹೇಳುತ್ತಾರೆ. "ಮಜ್ದೂರಿ ಸೆ ಜ್ಯಾದ ದಿಮಾಕ್ ಕಾ ಕಾಮ್ ಹೋತಾ ಹೈ (ನಮ್ಮ ಮೆದುಳನ್ನು ಬಳಸುವುದರಿಂದ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ)" ಎಂದು ಅವರು ಹೇಳುತ್ತಾರೆ.


ಆದ್ದರಿಂದ ಅವರು ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಮೊಟ್ಟೆಯ ಆಮ್ಲೆಟ್‌ಗಳನ್ನು ತಯಾರಿಸಿ ಬನ್ ಅಥವಾ ಬ್ರೆಡ್‌ನಲ್ಲಿ ಬಡಿಸುತ್ತಿದ್ದರು.


ಮತ್ತು ವಿದ್ಯಾರ್ಥಿಗಳು ಅದನ್ನು ಕರೆಯಲು ಪ್ರಾರಂಭಿಸಿದ ನಂತರ 'ಬ್ಯಾಂಜೊ' ಎಂಬ ಹೆಸರು ಬಂದಿತು. ಇಂದು ಬ್ಯಾಂಜೊ ಜೊತೆಗೆ, ಜಾನಿ ಹಾಟ್ ಡಾಗ್‌ನ ಮೆನುವಿನಲ್ಲಿರುವ ಮಟನ್ ಹಾಟ್ ಡಾಗ್ ಮತ್ತು ಅತ್ಯಂತ ಜನಪ್ರಿಯ ಸಸ್ಯಾಹಾರಿ ಹಾಟ್ ಡಾಗ್ ಸೇರಿಕೊಂಡಿದೆ.


ರಾತ್ರಿ 11 ಗಂಟೆಯ ಹೊತ್ತಿಗೆ ಅಂದರೆ ಅಂಗಡಿ ಮುಚ್ಚುವವರೆಗೆ ಯಾವುದೇ ಸಮಯದಲ್ಲಿ, ವಿಜಯ್ ಸಿಂಗ್ ಬಿಸಿ ತವಾದ ಎದುರು ಬ್ರೆಡ್ ರೋಸ್ಟ್ ಮಾಡುತ್ತಲೋ ಅಥವಾ ಬೆಣ್ಣೆಯನ್ನು ರೌಂಡ್ ಆಗಿ ಕತ್ತರಿಸುತ್ತಲೂ ದುಡಿಯುವುದನ್ನು ಕಾಣಬಹುದು,


ಇಂದೋರ್‌ನಂತಹ ನಗರದಲ್ಲಿ ಪ್ರತಿ 100 ಮೀಟರ್‌ಗೆ ಸಮೋಸಾ / ಕಚೋರಿ ಅಥವಾ ಪೋಹಾ ಅಥವಾ ಸೆವ್ ಅಂಗಡಿಯನ್ನು ಕಾಣಬಹುದು, ಆದ್ದರಿಂದ ಇವೆಲ್ಲವನ್ನು ಹೊರತುಪಡಿಸಿ ವಿಜಯ್ ಸಿಂಗ್ ಸಂಪೂರ್ಣವಾಗಿ ವಿಭಿನ್ನ ಆಹಾರ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು.


ಅವರು ತಮ್ಮದೇ ಆದ ಉಪಾಹಾರ ಗೃಹವನ್ನು ತೆರೆಯಲು ನಿರ್ಧರಿಸಿದಾಗ, ಅವರು ತಮ್ಮ ಬಜೆಟ್‌ನಲ್ಲಿದ್ದದ್ದನ್ನು ಸರಿದೂಗಿಸುವ ಹಾಗೆ ಅಂಗಡಿಯನ್ನು ಮಾಡಿದರು ಆದರೆ ಮುಂದಿನ ದಿನಗಳಲ್ಲಿ ತಮ್ಮ ಈ ಆಹಾರ ವ್ಯವಹಾರವು ಇನ್ನಷ್ಟು ಶಕ್ತಿಯುತವಾಗಲಿದೆ ಎಂದು ವಿಜಯ್ ಗೆ ತಮ್ಮ ಮೇಲೆ ಭರವಸೆ ಇದೆ.


ಸಮೋಸಾ ಅಥವಾ ಕಚೋರಿ ವ್ಯವಹಾರವನ್ನು ತೆರೆಯಲು, ನಾವು ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಮತ್ತು ಅದು ಹೆಚ್ಚು ಜಟಿಲವಾಗಿದೆ ಎಂದು ವಿಜಯ್ ಸಿಂಗ್ ಹೇಳುತ್ತಾರೆ. ಇದಕ್ಕೆ ಹೋಲಿಸಿದರೆ, ಹಾಟ್ ಡಾಗ್ ತಯಾರಿಸಲು, ಮಾಡಬೇಕಾಗಿರುವುದು ಆಲೂಗಡ್ಡೆ ಕುದಿಸುವುದು, ಆಲೂ ಟಿಕ್ಕಿಗಳನ್ನು ತಯಾರಿಸುವುದು ಮತ್ತು ಅದನ್ನು ಬನ್‌ಗಳ ನಡುವೆ ಇಡುವುದಷ್ಟೇ ಎಂದು ಅವರು ಹೇಳುತ್ತಾರೆ.


"ನಾನು ಒಲೆ ಮತ್ತು ಕಲ್ಲಿದ್ದಲು ಸಿಗ್ರಿ ಖರೀದಿಸಿದೆ. ಆ ದಿನಗಳಲ್ಲಿ ಕಲ್ಲಿದ್ದಲು ಅಗ್ಗವಾಗಿತ್ತು" ಎಂದು ಅವರು ಹೇಳುತ್ತಾರೆ. ಟಿಕ್ಕಿಗಳನ್ನು ಹೇಗೆ ತಯಾರಿಸಬೇಕೆಂದು ಅವರ ತಾಯಿ ತೋರಿಸಿದರು. "ನಾವು ಈ ರೀತಿಯ ಬ್ರೆಡ್ ಮತ್ತು ಸಾಮಗ್ರಿಗಳನ್ನು ಎಂದಿಗೂ ಸೇವಿಸಲಿಲ್ಲ, ಆದ್ದರಿಂದ ನಾನು ಇಲ್ಲಿಂದ ಮತ್ತು ಅಲ್ಲಿಂದ ಕಲಿತಿದ್ದೇನೆ".

ಹೆಸರಿನಲ್ಲೇನಿದೆ?

ಇಂದೋರ್‌ನ ಹೆಚ್ಚಿನ ಅಂಗಡಿಗಳಲ್ಲಿ ಹೆಸರಿಸುವಾಗ ಅದರ ಮಾಲೀಕರ ಕೊನೆಯ ಹೆಸರನ್ನು ತನ್ನ ಅಂಗಡಿಗೆ ಇಡುವುದು ರೂಢಿ. ಆದರೆ ವಿಜಯ್ ಸಿಂಗ್ ಅವರು ರಾಥೋಡ್ ಹಾಟ್ ಡಾಗ್ ಎಂದು ಕರೆಯಲು ಸಾಧ್ಯವಿಲ್ಲ ಏಕೆಂದರೆ ಅವರು ಮೊಟ್ಟೆಯನ್ನು ಬಡಿಸುತ್ತಿರುವುದರಿಂದ ಅವರ ಕುಟುಂಬ ಆ ಹೆಸರನ್ನಿಡಲು ಆಕ್ಷೇಪಿಸುತಿತ್ತು.


ಆದ್ದರಿಂದ, ಅವರು ಇಂದೋರ್‌ನ ಜನಪ್ರಿಯ ಘಮಂಡಿ ಲಸ್ಸಿಯಿಂದ ಸ್ಫೂರ್ತಿ ಪಡೆದರು, ಇದು ಗ್ರಾಹಕರಲ್ಲಿ ದೊಡ್ಡ ಯಶಸ್ಸನ್ನು ಕಂಡಿತು, ಅದರ ಲಸ್ಸಿಗೆ ಮಾತ್ರವಲ್ಲದೆ ಹಳೆಯ ಸಮಯದ ಹಿಂದಿ ಚಲನಚಿತ್ರ ನಟ ವೈಜಯಂತಿಮಾಲಾದಲ್ಲಿ ಇದನ್ನು ಶುಭಸೂಚಕವಾಗಿ ಸಹ ಬಳಸಲಾಗಿತ್ತು.


ಇಂದೋರ್‌ನಲ್ಲಿರುವ ಜಾನಿ ಹಾಟ್ ಡಾಗ್ ಉಪಾಹಾರ ಗೃಹ. (ಚಿತ್ರ ಕ್ರಪೆ: ಮುಕ್ತಿ ಮಾಸಿಹ್)

70 ರ ದಶಕದ ಆರಂಭದಲ್ಲಿ, ಇಂಗ್ಲೀಷ್ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸುವ ಚಿತ್ರಮಂದಿರದ ಹೊರಗೆ ನಾವು ಸುತ್ತಾಡುತ್ತಿದ್ದೆವು. ನಮಗೆಲ್ಲಾ ತಿಳಿದಿರುವಂತೆ, ಹೊರಗೆ ಮೊಟ್ಟೆಗಳನ್ನು ಮಾರುವ ಅನೇಕ ತೆಲವಾಳಗಳು ಇರುತ್ತಿದ್ದರು. ನನ್ನ ಅಂಗಡಿಗೆ ಜಾನಿ ಹಾಟ್ ಡಾಗ್ ಎಂದು ಹೆಸರಿಸುವ ಆಲೋಚನೆಯು ನಂಗೆ ಅಲ್ಲೇ ಬಂದಿದ್ದು," ಎಂದು ನೆನಪುಗಳನ್ನು ಹಂಚಿಕೊಂಡರು.


ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಆಹಾರವನ್ನು ಉಣಬಡಿಸಿದ ಲಕ್ಷಾಂತರ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಅನೇಕರು ವಿದೇಶದಲ್ಲಿ ನೆಲೆಸಿದ್ದಾರೆ. ಆದರೆ, ಅವರು ಎಂದಿಗೂ ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಲು ಮತ್ತು ತಮ್ಮ ನೆಚ್ಚಿನ ಬ್ಯಾಂಜೊ ಮತ್ತು ಹಾಟ್ ಡಾಗ್ ಅನ್ನು ತಿನ್ನಲು ಮತ್ತು ಹಳೆಯ ಹಳೆಯ ದಿನಗಳನ್ನು ನೆನಪಿಸಲು ಮರೆಯುವುದಿಲ್ಲ.


ಅವರು ಈಗ ಎರಡು ಅಂಗಡಿಗಳನ್ನು ಹೊಂದಿದ್ದಾರೆ ಒಂದನ್ನು ಅವರ ಮಗ ನೋಡಿಕೊಳ್ಳುತ್ತಿದ್ದಾರೆ. ವಿಜಯ್ ಸಿಂಗ್ ಗೆ ಅವರ ವ್ಯವಹಾರವನ್ನು ವಿಸ್ತರಿಸಲು ಹಣವನ್ನು ಸಹ ನೀಡಲಾಗಿದೆ, ಆದರೆ ಅವರು "ಯೆ ಸಾಬ್ ಪೈಸಾ ಬಹುತ್ ಮಗಾಜ್ಮರಿ ಹೈ (ಹೆಚ್ಚು ಹಣದಿಂದ ಸಾಕಷ್ಟು ತಲೆನೋವು ಇದೆ)" ಎಂದು ಹೇಳುತ್ತಾರೆ.


ಸದಾ ಹಣದ ಹಿಂದೆ ಓಡುವವವರಿಗೆ ವಿಜಯ್ ಜೀವನ ಮೌಲ್ಯವನ್ನು ಭೋದಿಸುತ್ತಾರೆ. ಅವರೆ ಹೇಳುವಂತೆ,

"ಮೈನೆ ತೋಹ್ ಕಹತಾ ಹುನ್, ಪಾನಿ ಔರ್ ಪೈಸಾ ಹಮೇಶಾ ಗುಟಾನ್ ಕೆ ನೀಚೆ ಹೋನಾ ಚಾಹಿಯೆ, ವರ್ಣಾ ಡೂಬ್ನೆ ಕಾ ದಾರ್ ರಹೇತಾ ಹೈ (ನೀರು ಮತ್ತು ಹಣ ಯಾವಾಗಲೂ ಮೊಣಕಾಲು ಮಟ್ಟದಲ್ಲಿರಬೇಕು ಇಲ್ಲದಿದ್ದರೆ ಮುಳುಗುವ ಸಾಧ್ಯತೆಗಳಿವೆ)."