ರತನ್ ಟಾಟಾ ಅವರ ಹೊಸ ಉಪಕ್ರಮವು ಮುಂಬೈನ ಪೌರಕಾರ್ಮಿಕರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ

ಈ ಅಭಿಯಾನವು ಮುಖಕ್ಕೆ ಧರಿಸುವ ಮಾಸ್ಕ್ ಗಳು ಸೇರಿದಂತೆ ಉಚಿತ ರಕ್ಷಣಾ ಸಾಧನಗಳನ್ನು ವಿತರಿಸುತ್ತದೆ ಮತ್ತು ಮುಂಬೈನ ಕುರಾಲ್ ನಲ್ಲಿ ಚೌಕಿಯನ್ನು ಸ್ಥಾಪಿಸುತ್ತದೆ.

ರತನ್ ಟಾಟಾ ಅವರ ಹೊಸ ಉಪಕ್ರಮವು ಮುಂಬೈನ ಪೌರಕಾರ್ಮಿಕರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ

Friday February 21, 2020,

2 min Read

ತ್ಯಾಜ್ಯ ನಿರ್ವಹಣೆ ಭಾರತ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕ ಡಸ್ಟ್‌ಬಿನ್‌ಗಳು ಅಥವಾ ಮನೆಯಿಂದ ಸಂಗ್ರಹಿಸಿದಂತಹ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದ್ದರೂ, ನಗರಗಳು ಕಸದಿಂದ ತುಂಬಿ ಹೋಗಿವೆ. ಇದು ಪರಿಸರಕ್ಕೆ ಅಷ್ಟೇ ಅಲ್ಲದೇ ನಾಗರಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ.


ಸರ್ಕಾರ ಸ್ವಚ್ಛ ಭಾರತದಂತಹ ಅಭಿಯಾನವನ್ನು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮತ್ತು ನಾಗರೀಕರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡಿದೆ.


ಟಾಟಾ ಟ್ರಸ್ಟ್ ಮೂಲಕ ಕೈಗಾರಿಕೋದ್ಯಮಿ ರತನ್ ಟಾಟಾ ಈ ದಿಕ್ಕಿನಲ್ಲಿ ಮಿಷನ್ ಗರಿಮಾ ಎಂಬ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ಮಿಷನ್ ಗರಿಮಾ ಮುಂಬೈ ನಗರವನ್ನು ಸ್ವಚ್ಛವಾಗಿಡಲು ಸತತ ಪ್ರಯತ್ನ ಮಾಡುವ ನೈರ್ಮಲ್ಯ ಕಾರ್ಮಿಕರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಮಾನವೀಯ ಕೆಲಸವನ್ನು ಒದಗಿಸುವ ಗುರಿಯನ್ನು ಹೊಂದಿದೆ.


ಟಾಟಾ ಟ್ರಸ್ಟ್ #TwoBinsLifeWins ಎಂಬ ಉಪಕ್ರಮದಡಿಯಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಬೇರ್ಪಡಿಸಲು ನಾಗರಿಕರನ್ನು ಒತ್ತಾಯಿಸುತ್ತಾ ಶ್ರಮಶೀಲ ಪುರುಷರು ಮತ್ತು ಮಹಿಳೆಯರ ಮೇಲಿನ ಹೊರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರತನ್ ಟಾಟಾ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, “ಕೆಳಗಿನ ಲಿಂಕ್‌ಗಳು ನಿಮ್ಮ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಲು ಮತ್ತು ನಮ್ಮ ಉಪಕ್ರಮವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಈ ದೇಶವನ್ನು ಪ್ರತಿಯೊಬ್ಬರೂ ನಡೆಸುತ್ತಾರೆ," ಎಂದು ಬರೆದುಕೊಂಡಿದ್ದಾರೆ.


ರತನ್ ಟಾಟಾ




ಎನ್‌ಡಿಟಿವಿ ಪ್ರಕಾರ, ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆಗೆ ನೆರವಾಗಲು ಹೊಸ ತಂತ್ರಜ್ಞಾನಗಳನ್ನು ಗುರುತಿಸಲಾಗುವುದು ಎಂದು ನಿಯೋಗದ ವಕ್ತಾರರು ಹೇಳಿದ್ದಾರೆ. ಒಟ್ಟಾರೆ ಈ ಪ್ರಕ್ರಿಯೆಯು ಹೆಚ್ಚು ಯಾಂತ್ರಿಕವಾಗಿರುತ್ತದೆ ಮತ್ತು ಮಾನವರ ಹಸ್ತಕ್ಷೇಪವನ್ನು ತೆಗೆದುಹಾಕಲಿದೆ.


ಈ ಅಭಿಯಾನವು ಉಚಿತ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಅಥವಾ ಮುಖಕ್ಕೆ ಧರಿಸುವ ಮಾಸ್ಕ್ ಗಳನ್ನು ಒಳಗೊಂಡ ಪಿಪಿಇ ಅನ್ನು ವಿತರಿಸುತ್ತದೆ ಮತ್ತು ಮುಂಬೈನ ಕುರಲ್‌ನಲ್ಲಿ ಚೌಕಿಯನ್ನು ಸ್ಥಾಪಿಸುತ್ತದೆ.


ಬೆಳಿಗ್ಗೆ ಎಲ್ಲಾ ಕಾರ್ಮಿಕರಿಗೆ ಚೌಕಿ ಮೂಲ ಸ್ಥಳವಾಗಲಿದೆ, ಇಲ್ಲಿ ಕಾರ್ಮಿಕರು ತಮ್ಮ ಕೆಲಸದ ಉಡುಪಿನಲ್ಲಿ ಬದಲಾಗಬಹುದು. ಇದಲ್ಲದೇ ಈ ಚೌಕಿ ಸ್ಥಳವು ಕಚೇರಿ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳು, ನೀರು ಮತ್ತು ಶೌಚಗಳನ್ನು ಹೊಂದಿರಲಿವೆ.


ಇದು ಮೈಕ್ರೊವೇವ್ ಓವನ್, ಜಿಮ್ ಮತ್ತು ನೀರಿನ ಶುದ್ಧೀಕರಣ ವ್ಯವಸ್ಥೆಯನ್ನು ಒಳಗೊಂಡಿರುವ ಕ್ರಿಯಾತ್ಮಕ ಮುಕ್ತ ಸ್ಥಳವನ್ನು ಸಹ ಒಳಗೊಂಡಿರುತ್ತದೆ. ಎನ್‌ಡಿಟಿವಿಯೊಂದಿಗೆ ಮಾತನಾಡಿದ ವಕ್ತಾರರು,


"ಕಾರ್ಮಿಕರು ಮುಂಬೈ ನಂತಹ ದೊಡ್ಡ ಮೆಟ್ರೋಪಾಲಿಟನ್ ನಗರಗಳ ಬೆನ್ನೆಲುಬು. ಅವರು ನಮ್ಮ ನಗರವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತಾರೆ. ಅವರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮತ್ತು ಅವರ ಘನತೆಯನ್ನು ಕಾಪಾಡಲು ಪ್ರಯತ್ನಿಸುವುದು ಜವಾಬ್ದಾರಿಯಾಗಿದೆ. ನೈರ್ಮಲ್ಯ ಕಾರ್ಮಿಕರ ಕೆಲಸದ ವಾತಾವರಣದಲ್ಲಿ ಗಮನಾರ್ಹ ಸಕಾರಾತ್ಮಕ ಪರಿಣಾಮವನ್ನು ತರಲು ಮಿಷನ್ ಗರಿಮಾ ಬಯಸಿದೆ. #TwoBinsLifeWins ನೊಂದಿಗೆ, ರಾಷ್ಟ್ರದ ಆತ್ಮಸಾಕ್ಷಿಯನ್ನು ಉತ್ತೇಜಿಸಲು ಮತ್ತು ನಾಗರಿಕರು ಮನೆಗಳಲ್ಲಿಯೇ ತ್ಯಾಜ್ಯವನ್ನು ಬೇರ್ಪಡಿಸುವಂತೆ ಪ್ರೋತ್ಸಾಹಿಸಲು ನಾವು ಆಶಿಸುತ್ತೇವೆ. ಆದ್ದರಿಂದ ನೈರ್ಮಲ್ಯ ಕಾರ್ಮಿಕರು ಘನತೆ ಮತ್ತು ಗೌರವದ ಜೀವನವನ್ನು ನಡೆಸಬಹುದಾಗಿದೆ.”

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.