ಉದ್ಯಮಿಗಳಿಗೆ ಇನ್ಫೋಸಿಸ್ ನಾರಾಯನ ಮೂರ್ತಿಯ ಕಿವಿಮಾತು

- +0
- +0
ಇನ್ಫೋಸಿಸ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಎನ್ ಆರ್ ನಾರಾಯನ ಮೂರ್ತಿ ಅವರದು ಭಾರತೀಯ ಸ್ಟಾರ್ಟಪ್ ಮತ್ತು ಭಾರತೀಯ ಐಟಿ ಕ್ಷೇತ್ರದಲ್ಲಿ ಮುಖ್ಯವಾದ ಹೆಸರು. ಅವರು ತಮ್ಮ ಉದ್ಯಮ ಪ್ರಯಾಣದ ಬಗ್ಗೆ ಮಾತನಾಡುತ್ತಾ ಉದ್ಯಮಿಗಳಿಗೆ ಕಿವಿಮಾತು ಹೇಳಿದ್ದಾರೆ. ಉದ್ಯಮಿಗಳು ಪ್ಲ್ಯಾನ್-ಬಿ ಹೊಂದಿರಬಾರದು ಎಂದು ಮೂರ್ತಿ ಎಸ್‌ವಿಕೆಎಮ್‌ನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
“ನೀವೊಂದು ಸಂಸ್ಥೆ ನಡೆಸುತ್ತಿದ್ದರೆ ನಿಮ್ಮ ಬಳಿ ಪ್ಲ್ಯಾನ್-ಬಿ ಇರಬಾರದು ಮತ್ತು ನಿಮ್ಮ ಯೋಜನೆಯ ಮೇಲೆ ನಿಮಗೆ ಅರ್ಧ ವಿಶ್ವಾಸ ಇರಬಾರದು. ಬೇರೆ ದಾರಿಯೆ ಇಲ್ಲವೆನೋ ಎಂಬಂತೆ ನೀವು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು. ನಿಮ್ಮ ಐಡಿಯಾ ಕೆಲಸ ಮಾಡುವುದಿಲ್ಲವೆಂದು ಮಾರುಕಟ್ಟೆಯಿಂದ ಸೂಚನೆ ಸಿಗುವವರೆಗೂ ದಯವಿಟ್ಟು ಪ್ಲ್ಯಾನ್-ಬಿ ಬಗ್ಗೆ ಯೋಚಿಸಬೇಡಿ,” ಎಂದು ವರ್ಚುವಲ್ ಸಭೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮೂರ್ತಿ ಮಾತನಾಡಿದರು.

ಇನ್ಫೋಸಿಸ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಎನ್ ಆರ್ ನಾರಾಯನ ಮೂರ್ತಿ
ಮೂರ್ತಿಯವರು ತಮ್ಮ ಪ್ರಾರಂಭದಲ್ಲಿ ಸ್ಥಾಪಿಸಿದ ಸಾಫ್ಟ್ರಾನಿಕ್ಸ್ ಅನ್ನು ಹಲವು ಕಾರಣಗಳಿಂದ ಮುಚ್ಚಬೇಕಾಯಿತು. 70 ರಲ್ಲಿ ಸ್ಥಾಪನೆಗೊಂಡ ಸಾಫ್ಟ್ರಾನಿಕ್ಸ್ ಭಾರತೀಯ ಕಂಪನಿಗಳಿಗೆ ಕಂಪ್ಯೂಟರ್ ಅಲ್ಗಾರಿಥ್ಮಗಳನ್ನು ನೀಡುವ ಸಂಸ್ಥೆಯಾಗಿತ್ತು. ಭಾರತದ ಮಾರುಕಟ್ಟೆಗೆ ಆಗ ಅದರ ಅವಷ್ಯಕತೆ ಇರಲಿಲ್ಲ, ಇದನ್ನು ಮನಗಂಡ ಮೂರ್ತಿ ತಮ್ಮ ಸ್ಟಾರ್ಟಪ್ ಅನ್ನು ಮುಚ್ಚಬೇಕಾಯಿತು.
ಆದರೆ ಈ ಸೋಲಿನಿಂದ ಅವರು ಕಂಗೆಡಲಿಲ್ಲ, ಅವರ ಉತ್ಸಾಹ ಕುಸಿಯಲಿಲ್ಲ. ಪುಣೆಯ ಪಟ್ನಿ ಕಂಪ್ಯೂಟರ್‌ನಲ್ಲಿ ಐದು ವರ್ಷ ಕೆಲಸ ಮಾಡಿ, ಪಟ್ನಿಯಲ್ಲಿದ್ದ ನಂದನ ನಿಲೇಕನಿ, ಎನ್ ಎಸ್ ರಾಘವನ್, ಎಸ್ ಗೋಪಾಲಕೃಷ್ಣನ್, ಎಸ್ ಡಿ ಶೊಡ್ಬುಲಾಲ್, ಕೆ. ದಿನೇಶ್ ಮತ್ತು ಅಶೋಕ ಅರೋರಾ ಜತೆ ಸೇರಿ ಇನ್ಫೋಸೊಸ್ ಸ್ಥಾಪಿಸಿದರು. ಅದರ ಮುಂದಿನದು ಇತಿಹಾಸ.
ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಮೂರ್ತಿ, ತಮ್ಮ ಸ್ಪರ್ಧಿಗಳಿಗಿಂತ ಹೇಗೆ ತಮ್ಮ ಸ್ಟಾರ್ಟಪ್‌ನ ಉತ್ಪನ್ನ ಗ್ರಾಹಕರಿಗೆ ಇನ್ನೂ ಉತ್ತಮ ಮೌಲ್ಯ ನೀಡುತ್ತದೆ ಎಂಬುದನ್ನು ತೋರಿಸದಿರುವುದು ಉದ್ಯಮಿಗಳು ಮಾಡುವ ಸಾಮಾನ್ಯವಾದ ತಪ್ಪು. ಉದ್ಯಮಿಗಳು ಒಳ್ಳೇಯ ವೇತನ ನೀಡುವ ಉತ್ತಮ ಗುಣಮಟ್ಟದ ಕೆಲಸಗಳನ್ನು ಹುಟ್ಟುಹಾಕಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದುತ್ತದೆ.
ಪ್ರತಿಭೆ ಮತ್ತು ಶ್ರಮಕ್ಕೆ ಕೇವಲ ಮನ್ನಣೆ ಸಿಗದೆ ನೈಜ ಪ್ರಯೋಜನ ಸಿಗುವಂತಹ ಪರಿಸರವನ್ನು ಉದ್ಯಮಿಗಳು ಮತ್ತು ವ್ಯವಹಾರ ನಾಯಕರು ಸೃಷ್ಟಿಸಬೇಕು ಎನ್ನುತ್ತಾರೆ ಅವರು.
- +0
- +0