ತಾಂತ್ರಿಕ ಕಾರಣಗಳಿಂದ ಇಸ್ರೋ ಚಂದ್ರಯಾನ-2 ಉಡಾವಣೆಯನ್ನು ಮುಂದುಡಿದೆ.

ಇಸ್ರೋ ಭಾರತದ ಪ್ರತಿಷ್ಟಿತ ಯೋಜನೆಯಾದ ಚಂದ್ರಯಾನ-2 ಅನ್ನು, ರಾಕೆಟ್ ನ ಉಡವಣಾ ವಾಹನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಉಡಾವನೆಗೆ ಒಂದು ಗಂಟೆ ಮುಂಚಿತವಾಗಿ ಉಡಾವಣೆಯನ್ನು ಸ್ಥಗಿತಗೋಳಿಸಿದೆ. ಶೀಘ್ರದಲ್ಲೇ ,ಮುಂದಿನ ಉಡಾವಣಾ ಸಮಯವನ್ನು ಘೋಷಿಸುತ್ತದೆ.

ತಾಂತ್ರಿಕ ಕಾರಣಗಳಿಂದ ಇಸ್ರೋ ಚಂದ್ರಯಾನ-2 ಉಡಾವಣೆಯನ್ನು ಮುಂದುಡಿದೆ.

Monday July 15, 2019,

3 min Read

50 ನೇ ಆಪೋಲೋ ಮೂನ್ ಲ್ಯಾಂಡಿಂಗ್ ವಾರ್ಷಿಕೋತ್ಸವಕ್ಕೆ ಕೇವಲ ಒಂದೇ ವಾರವಿರುವಾಗ, ಇಸ್ರೋ ಚಂದ್ರಯಾನ-2 ನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶಹದಲ್ಲಿ ಭಾರತದಿಂದ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿತ್ತು. ಆದರೆ ಬೆಳಿಗ್ಗೆ 2.51 ಕ್ಕಿಂತ ಮುಂಚೆ ಉಡಾವನೆಗೆ ಕೆಲವೇ ನಿಮಿಷಗಳಿರುವಾಗ ತಾಂತ್ರಿಕ ದೋಷ ಕಂಡುಬಂದದ್ದಕ್ಕಾಗಿ ಸತೀಶ್ ಧವನ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟ, ಆಂಧ್ರಪ್ರದೇಶದಿಂದ ಉಡಾವಣೆಯಾಗಬೇಕಿದ್ದ ಯೋಜನೆಯನ್ನು ಸ್ಥಗಿತಗೋಳಿಸಲಾಗಿದೆ.


“ಉಡಾವಣೆಗೆ ಒಂದು ಗಂಟೆ ಮುಂಚಿತವಾಗಿ ಉಡಾವಣಾ ವಾಹನ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಸುರಕ್ಷತೆಯ ನಿಟ್ಟಿನಿಂದ ಚಂದ್ರಯಾನ-2 ಉಡಾವಣೆಯನ್ನು ಸ್ಥಗಿತಗೋಳಿಸಲಾಗಿದೆ. ಶೀಘ್ರದಲ್ಲೇ ಮುಂದಿನ ಉಡಾವಣಾ ಸಮಯವನ್ನು ಘೋಷಿಸುತ್ತೇವೆ,” ಹೀಗೆಂದು ಇಸ್ರೋ ಟ್ವೀಟ್ ಮಾಡಿದೆ.


ಸುದ್ದಿ ಸಂಸ್ಥೆಯ ಪ್ರಕಾರ, ಕ್ರಯೋಜನಿಕ್ ಇಂಧನವನ್ನು ತುಂಬುವಾಗ ತೊಂದರೆ ಕಂಡು ಬಂದಿದೆ. ರಾಕೆಟ್ ನಲ್ಲಿರುವ ಇಂಧನವನ್ನು ಹೊರತೆಗೆದು, ಖಾಲಿ ಮಾಡಿ ಕುಲಂಕುಶವಾಗಿ ಪರಿಶೀಲಿಸಿದ ಮೇಲೆ ಹೊಸ ಉಡಾವಣಾ ಸಮಯವನ್ನು ಘೋಷಿಸಲಾಗುವುದು.


Chandrayana @

ಬಾಹುಬಲಿ ಎಂದು ಕರೆಯುವ ಜಿಯೋಸಿಂಕ್ರೋನಸ ಉಪಗ್ರಹ ಉಡಾವಣಾ ವಾಹನ ಮಾರ್ಕ್ 3 ದ್ವಿತೀಯ ಉಡಾವಣಾ ಕ್ಷೇತ್ರದಲ್ಲಿ ಉಡಾವಣೆಗಿಂತ ಮುಂಚೆ ಕಂಡು ಬಂದದ್ದು ಹೀಗೆ. ಇಸ್ರೋ ನ ಎರಡನೇ ಚಂದ್ರಯಾನವೂ ರೋಬೋಟಿಕ ರೋವರನ್ನು ಚಂದ್ರನ ಮೇಲೆ ಇಳಿಸುವ ಗುರಿಯನ್ನು ಹೊಂದಿದೆ. (ಚಿತ್ರ:ಪಿಟಿಐ)

ಈ ಚಂದ್ರಯಾನವೂ ಯಶಸ್ವಿಯಾದರೆ, ಭಾರತವು ಚಂದ್ರನ ಮೃದು ಭಾಗದ ಮೇಲ್ಮೈ ಮೇಲೆ ಇಳಿದ ದೇಶಗಳಾದ ರಷಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರದ 4 ನೇ ದೇಶವಾಗಿ ಹೊರಹೊಮ್ಮಿ ಗಣ್ಯ ಬಾಹ್ಯಾಕಾಶ ಸಂಘಗಳಲ್ಲಿ ಒಂದಾಗುತ್ತದೆ.


ಮೂರು ಘಟಕಗಳ ಬಾಹ್ಯಾಕಾಶ ನೌಕೆ, 3,850 ಕೆ. ಜಿ. ತೂಕ ಹೊಂದಿದ್ದು, ಕಕ್ಷೆಗಾಮಿ, ಗ್ರಹನೌಕೆ ಮತ್ತು ರೋವರ ಗಳನ್ನು ಒಳಗೊಂಡು, ಯಾವ ದೇಶವು ತಲುಪಿರದ ಜಾಗವಾದ ಚಂದ್ರನ ದಕ್ಷಿಣ ಧ್ರುವದತ್ತ ಸಾಗುವ ಗುರಿ ಹೊಂದಿದೆ. 978 ಕೋಟಿ ವೆಚ್ಚದ ಚಂದ್ರಯಾನ ನೌಕೆಯೂ, ಜಿಯೋಸಿಂಕ್ರೋನಸ ಉಡಾವಣಾ ವಾಹನ ಜಿ ಎಸ್ ಎಲ್ ವಿ - ಮಾರ್ಕ್ 3 ಮೇಲೆ ಸವಾರಿ ಮಾಡುತ್ತಿದ್ದು, 54 ದಿನಗಳಲ್ಲಿ ನಿಖರವಾಗಿ ಯೋಜಿತ ಕಕ್ಷೀಯ ಹಂತಗಳಿಂದ ಚಂದ್ರನ ಮೇಲೆ ಇಳಿಯಲಿದೆ.


ಇಸ್ರೋ ಅಧ್ಯಕ್ಷ ಕೆ. ಸಿವನ ಚಂದ್ರಯಾನ-2 ನ್ನು “ತಂತ್ರಜ್ಞಾನದ ದೊಡ್ಡ ಹೆಜ್ಜೆ” ಎಂದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೊವಿಂದ ರವರು ಶ್ರೀಹರಿಕೋಟ ದಲ್ಲಿ ಉಡಾವಣೆಗಾಗಿ ಉಪಸ್ಥಿತರಿದ್ದರು.


ಯಾರೂ ಸಾಗದ ದಾರಿಯಲ್ಲಿ


ಬಾಹ್ಯಾಕಾಶ ನೌಕೆಯೂ ಸೆಪ್ಟೆಂಬರ್ 6 ರಂದು ಚಂದ್ರನ ಮೇಲೆ ಇಳಿದು, ಯಾವ ದೇಶವು ಇದುವರೆಗೂ ಅನ್ವೇಷಿಸದ ಚಂದ್ರನ ಭಾಗವನ್ನು ಅನ್ವೇಷಿಸುವ ಗುರಿಯನ್ನು ಹೊಂದಿತ್ತು. ಇದು ಚಂದ್ರನನ್ನು ಇನ್ನಷ್ಟು ಚೆನ್ನಾಗಿ ತಿಳಿದುಕೊಳ್ಳುವುದರಲ್ಲಿ ವಿಶ್ವಕ್ಕೇ ಸಹಾಯ ಮಾಡುತ್ತದೆ ಮತ್ತು ಅಲ್ಲಿ ಆಗಬಹುದಾದ ಹೊಸ ಅನ್ವೇಷಣೆಗಳಿಂದ ಭಾರತಕ್ಕೆ ಮತ್ತು ಮನುಕುಲಕ್ಕೆ ಲಾಭ ತಂದು ಕೋಡುತ್ತದೆ.


ಇಸ್ರೋ ಪ್ರಕಾರ, ಚಂದ್ರನ ದಕ್ಷಿಣ ಧ್ರುವವು ಉತ್ತರ ಧ್ರುವಕ್ಕೆ ಹೋಲಿಸಿದರೆ, ಅದರ ಮೇಲ್ಮೈ ಯ ದೊಡ್ಡ ಭಾಗ ಕತ್ತಲಿನಿಂದ ಕೂಡಿರುವುದರಿಂದ ಹೆಚ್ಚು ಆಸಕ್ತಿದಾಯಕವಾಗಿದೆ. ಶಾಶ್ವತವಾಗಿ ನೇರಳಿನಿಂದಾವೃತವಾದ ಜಾಗದಲ್ಲಿ ನೀರಿರುವ ಸಂಭವ ಹೆಚ್ಚಾಗಿದೆ ಮತ್ತು ಈ ಭಾಗವು ಕುಳಿಗಳಿಂದ ಕೂಡಿದೆ, ಇವುಗಳು ತಣ್ಣಗಿದ್ದು ಆರಂಭಿಕ ಸೌರ ಮಂಡಲದ ಪಳೆಯುಳಿಕೆಗಳನ್ನು ಹೊಂದಿರಬಹುದಾಗಿದೆ.


ಇಸ್ರೋನ ಈ ಯೋಜನೆಯ ಗುರಿಯು ಬಾಹ್ಯಾಕಾಶದಲ್ಲಿ ಭಾರತದ ಬಲವನ್ನು ಹೆಚ್ಚಿಸುವುದು, ಚಂದ್ರನ ನಿಗೂಢ ಭಾಗಗಳ ಮೇಲೆ ಬೆಳಕು ಚೆಲ್ಲುವುದು, ಆಕಾಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ಕೊಳ್ಳುವುದು, ತಂತ್ರಜ್ಞಾನದ ಪ್ರಗತಿಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಮೈತ್ರಿಗಳನ್ನು ಪ್ರೋತ್ಸಾಹಿಸುವುದಾಗಿದೆ.


ಚಂದ್ರನ ಮೇಲಿಳಿಯಲು ಇರುವ ಸವಾಲುಗಳು.


ಚಂದ್ರಯಾನ-2 ರಲ್ಲಿ ಮೂರು ಘಟಕಗಳಿವೆ – ವಿಕ್ರಮ ಎಂಬ ಗ್ರಹನೌಕೆ, ಕಕ್ಷೆಗಾಮಿ ಮತ್ತು ಆರು ಚಕ್ರಗಳಿರುವ ಪ್ರಜ್ಞಾನ ಎಂಬ ರೋವರ, ಇವೆಲ್ಲವನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ. ಈ ಘಟಕಗಳು ಚಂದ್ರನ ಮೇಲ್ಮೈ ಯನ್ನು ಅರಿಯಲು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಗುರಿ ಹೊಂದಿವೆ. ರೋವರ ಮೇಲಿರುವ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅತೀ ಹತ್ತಿರದಿಂದ ಗಮನಿಸಿ ಮಾಹಿತಿಯನ್ನು ಸಂಗ್ರಹಿಸಿ ಇಸ್ರೋ ಗೆ ರವಾಣಿಸುತ್ತದೆ, ನಂತರ ಇಸ್ರೋ ಚಂದ್ರನ ಮಣ್ಣನ್ನು ವಿಶ್ಲೇಷಿಸಲಿದೆ.


ಇದು ಒಟ್ಟು 13 ಪೆ ಲೋಡ್ ಗಳನ್ನು ಹೊಂದಿದೆ, ಅದರಲ್ಲಿ ಎಂಟು ಕಕ್ಷೆಗಾಮಿಯಲ್ಲಿ, ಮೂರು ಪೆ ಲೋಡ್ ಗಳು ವಿಕ್ರಮನಲ್ಲಿ ಮತ್ತು ಎರಡು ಪ್ರಜ್ಞಾನ ನಲ್ಲಿವೆ. ಐದು ಪೆ ಲೋಡ್ ಗಳು ಭಾರತದಿಂದ, ಮೂರು ಇರೋಪ್ ನಿಂದ, ಎರಡು ಯು ಎಸ್ ನಿಂದ ಮತ್ತು ಒಂದು ಬಲ್ಗೇರಿಯಾದಿಂದಿವೆ.


ಇಸ್ರೋ ಅಧಿಕಾರಿಗಳ ಪ್ರಕಾರ ಚಂದ್ರನ ಮೇಲೆ ಇಳಿಯಲು ಇರುವ ಸವಾಲುಗಳೆಂದರೆ- ಪಥವನ್ನು ನಿಖರವಾಗಿ ಗುರುತಿಸುವುದು; ಆಳವಾದ ಬಾಹ್ಯಾಕಾಶ ಸಂವಹನ ನಡೆಸುವುದು; ಟ್ರಾನ್ಸ್-ಲುನಾರ್ ಇಂಜೆಕ್ಷನ್, ಚಂದ್ರನ ಸುತ್ತಲೂ ಸುತ್ತುವುದು, ಚಂದ್ರನ ಮೇಲ್ಮೈ ಮೇಲೆ ಸೂಕ್ಷ್ಮವಾಗಿ ಇಳಿಯುವುದು ಮತ್ತು ವಿಪರೀತ ತಾಪಮಾಣ ಮತ್ತು ವಾಕ್ಯೂಮ್ ಅನ್ನು ಎದುರಿಸುವುದು.


ಈ ಆರಂಭಿಕ ಉಡಾವಣಾ ದಿನಾಂಕವು ಜನವರಿ ಮತ್ತು ಫೆಬ್ರುವರಿಯ ಮಧ್ಯದಲ್ಲಿ ನಿರ್ಧರಿತವಾಗಿತ್ತು ಆದರೆ ಇಸ್ರೇಲ್ ನ ಪ್ರಯತ್ನ ವಿಫಲವಾದಾಗ ಇಸ್ರೋ ಚಂದ್ರಯಾನವನ್ನು ಮುಂದುಡಿತು.


ಮೊದಲಿನ ಹೇಳಿಕೆಯಲ್ಲಿ ಇಸ್ರೋ ಅಧಿಕಾರಿ ಹೀಗೆ ಹೇಳಿದರು, “ನಾವು ಇಸ್ರೇಲ್ ವಿಫಲವಾದದ್ದನ್ನು ನೋಡಿದೆವು ಮತ್ತು ನಮಗೆ ಅಪಾಯವನ್ನು ಎದುರು ಹಾಕಿಕೊಳ್ಳುವುದು ಬೇಕಾಗಿರಲಿಲ್ಲ. ಇಸ್ರೇಲ್ ತಂತ್ರಜ್ಞಾನದಲ್ಲಿ ಅಷ್ಟೋಂದು ಮುಂದುವರೆದ ದೇಶವಾಗಿದ್ದರೂ ಅವರ ಯೋಜನೆ ವಿಫಲವಾಯಿತು. ನಮಗೆ ನಮ್ಮ ಯೋಜನೆ ಯಶಸ್ವಿಯಾಗಬೇಕಾಗಿದೆ.”

ಈ ವರ್ಷ, ಭಾರತವು 32 ಯೋಜನೆಗಳನ್ನು ರೂಪಿಸಿಕೊಂಡಿದೆ, ಅದರಲ್ಲಿ ಬಹು ಕಠಿಣ ಚಂದ್ರಯಾನ-2 ಯೋಜನೆ ಕೂಡ ಒಂದಾಗಿದೆ ಎಂದು ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ ಹೇಳಿತು.