ಮಾನವರಹಿತ ಗಗನಯಾನದಲ್ಲಿ ರೋಬೋಟ್ ‘ವ್ಯೋಮಮಿತ್ರ' ನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಜ್ಜಾದ ಇಸ್ರೋ

ಇಸ್ರೊ ಅಧ್ಯಕ್ಷ ಕೆ. ಶಿವನ್ ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಧ ಮಾನವಾಧಾರಿತ ವ್ಯೋಮಮಿತ್ರ ಬಾಹ್ಯಾಕಾಶದಲ್ಲಿ ಮಾನವ ಕಾರ್ಯಗಳನ್ನು ಅನುಕರಿಸುತ್ತದೆ ಮತ್ತು ಪರಿಸರ ನಿಯಂತ್ರಣ ಜೀವನ ಬೆಂಬಲ ವ್ಯವಸ್ಥೆಯೊಂದಿಗೆ ಸಂವಹನ ನಡೆಸಲಿದೆ ಎಂದಿದ್ದಾರೆ.

ಮಾನವರಹಿತ ಗಗನಯಾನದಲ್ಲಿ ರೋಬೋಟ್ ‘ವ್ಯೋಮಮಿತ್ರ' ನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಜ್ಜಾದ ಇಸ್ರೋ

Thursday January 23, 2020,

2 min Read

2021 ರ ಡಿಸೆಂಬರ್‌ನಲ್ಲಿ ಭಾರತದ ಮೊದಲ ಮಾನವಸಹಿತ ಕಾರ್ಯಾಚರಣೆಯಲ್ಲಿ ಗಗನಯಾತ್ರಿಗಳನ್ನು ಪರಿಭ್ರಮಿಸುವ ಮೊದಲು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾನವರಹಿತ ಗಗನಯಾನ ಬಾಹ್ಯಾಕಾಶ ನೌಕೆಯಲ್ಲಿ ‘ಲೇಡಿ ರೋಬೋಟ್' ‘ವ್ಯೋಮಮಿತ್ರ' ಅನ್ನು ಕಳುಹಿಸುತ್ತದೆ.


ಬುಧವಾರ ನಡೆದ ಮಾನವ ಬಾಹ್ಯಾಕಾಶ ಹಾರಾಟ ಮತ್ತು ಪರಿಶೋಧನೆ - ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ಪ್ರವೃತ್ತಿಗಳ ಉದ್ಘಾಟನಾ ಅಧಿವೇಶನದಲ್ಲಿ ರೋಬೋಟ್ ಆಕರ್ಷಣೆಯ ಕೇಂದ್ರವಾಗಿತ್ತು.


ವ್ಯೋಮಮಿತ್ರ, ಎರಡು ಸಂಸ್ಕೃತ ಪದಗಳಾದ ವ್ಯೋಮಾ (ಬಾಹ್ಯಾಕಾಶ) ಮತ್ತು ಮಿತ್ರ (ಸ್ನೇಹಿತ) ಪದಗಳ ಸಂಯೋಜನೆಯಾಗಿದೆ. ಅಲ್ಲಿ ನೆರೆದಿದ್ದ ಜನರಿಗೆ ರೋಬೋ ತನ್ನನ್ನು ತಾನು ಪರಿಚಯಿಸಿಕೊಂಡಾಗ ಎಲ್ಲರೂ ಆಶ್ಚರ್ಯಚಕಿತರಾದರು.
Q

ವ್ಯೋಮ ಮಿತ್ರಾ(ಎಡ)(ಚಿತ್ರಕೃಪೆ: ಟ್ವಿಟರ್)




"ಎಲ್ಲರಿಗೂ ನಮಸ್ಕಾರ. ನಾನು ಅರ್ಧ ಮಾನವನ ಮೂಲಮಾದರಿಯ ವ್ಯೋಮ ಮಿತ್ರ, ಮೊದಲ ಮಾನವರಹಿತ ಗಗನಯಾನ ಮಿಷನ್‌ಗಾಗಿ ತಯಾರಿಸಲ್ಪಟ್ಟಿದೆನೆ," ಎಂದು ರೋಬೋಟ್ ಹೇಳಿದೆ. ಮಿಷನ್‌ನಲ್ಲಿನ ಪಾತ್ರದ ಬಗ್ಗೆ ವಿವರಿಸಿದ ಅದು, "ನಾನು ಮಾಡ್ಯೂಲ್ ನಿಯತಾಂಕಗಳ ಮೂಲಕ ಮೇಲ್ವಿಚಾರಣೆ ಮಾಡಬಹುದು, ನಿಮ್ಮನ್ನು ಎಚ್ಚರಿಸಬಹುದು ಮತ್ತು ಜೀವ ಬೆಂಬಲ ಕಾರ್ಯಾಚರಣೆಗಳನ್ನು ಮಾಡಬಹುದು. ಸ್ವಿಚ್ ಪ್ಯಾನಲ್ ಕಾರ್ಯಾಚರಣೆಗಳಂತಹ ಚಟುವಟಿಕೆಗಳನ್ನು ನಾನು ಮಾಡಬಹುದು," ಎಂದು ಹೇಳಿದೆ.


ಸಹಚರನಾಗಿರಬಹುದು ಮತ್ತು ಗಗನಯಾತ್ರಿಗಳೊಂದಿಗೆ ಮಾತುಕತೆ ನಡೆಸಬಹುದು, ಅವರನ್ನು ಗುರುತಿಸಬಹುದು ಮತ್ತು ಅವರ ಪ್ರಶ್ನೆಗಳಿಗೆ ಸಹ ಪ್ರತಿಕ್ರಿಯಿಸಬಹುದು ಎಂದು ರೋಬೋಟ್ ಹೇಳಿತು.


ಇಸ್ರೋ ಅಧ್ಯಕ್ಷ ಕೆ. ಶಿವನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರ್ಧ ಮಾನವಾಧಾರದ ಈ ರೋಬೋಟ್ ಬಾಹ್ಯಾಕಾಶದಲ್ಲಿ ಮಾನವ ಕಾರ್ಯಗಳನ್ನು ಅನುಕರಿಸುತ್ತದೆ ಮತ್ತು ಪರಿಸರ ನಿಯಂತ್ರಣ ಜೀವನ ಬೆಂಬಲ ವ್ಯವಸ್ಥೆಯೊಂದಿಗೆ ಸಂವಹನ ನಡೆಸುತ್ತದೆ.


"ಇದು ಅಲ್ಲಿನ ಮಾನವ ಕಾರ್ಯಗಳನ್ನು (ಬಾಹ್ಯಾಕಾಶದಲ್ಲಿ) ನಿಖರವಾಗಿ ಅನುಕರಿಸುತ್ತದೆ. ಇದು ವ್ಯವಸ್ಥೆಯು ಸರಿಯಾಗಿದೆಯೇ ಎಂದು ಪರಿಶೀಲಿಸುತ್ತದೆ.


ಹಾಗೂ ಮನುಷ್ಯನು ಹಾರುತ್ತಿರುವಂತೆ ಅನುಕರಿಸಲು ಇದು ತುಂಬಾ ಉಪಯುಕ್ತವಾಗಿದೆ," ಎಂದು ಅವರು ಹೇಳಿದರು.


ಇದಕ್ಕೂ ಮೊದಲು ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಿವನ್, ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಉದ್ಯಮ 'ಗಗನಯಾನ' ಅನ್ನು 2021 ರ ಡಿಸೆಂಬರ್‌ನಲ್ಲಿ ಪ್ರಾರಂಭಿಸುವ ಮುನ್ನ, ಇಸ್ರೋ ಡಿಸೆಂಬರ್ 2020 ಮತ್ತು ಜೂನ್ 2021 ರಲ್ಲಿ ಎರಡು ಮಾನವರಹಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದ್ದು, ಅವುಗಳಲ್ಲಿ ವ್ಯೋಮ ಮಿತ್ರ ಹಾರಾಟ ನಡೆಸಲಿದೆ.


"ನಾವು ವೇಳಾಪಟ್ಟಿಯಂತೆಯೆ ಕಾರ್ಯನಿರ್ವಹಿಸುತ್ತಿದ್ದೇವೆ(ಗಗನಯಾತ್ರೆಗೆ ಸಂಬಂಧಿಸಿದಂತೆ). ನಾವು ಈ ವರ್ಷ ಸಾಕಷ್ಟು ಪ್ರದರ್ಶನ ಪರೀಕ್ಷೆಗಳನ್ನು ಮಾಡಲಿದ್ದೇವೆ. ಈ ವರ್ಷಾಂತ್ಯದಲ್ಲಿ ನಮ್ಮ ಮಾನವರಹಿತ ಮಿಷನ್ ಕಳುಹಿಸುತ್ತೇವೆ. ಇಂದು ನೀವು ನೋಡಿದ ಅರ್ಧ ಮಾನವಾಧಾರದ ರೋಬೋಟ್ ಅದರಲ್ಲಿ ಹಾರಲು ಹೊರಟಿದೆ," ಎಂದು ಅವರು ಹೇಳಿದರು.


ರೋಬೋಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ಶಿವನ್ ಅವರು ಮಾನವ ಸಿಮ್ಯುಲೇಶನ್ ವ್ಯವಸ್ಥೆಯನ್ನು ಅದು ಹೊಂದಿದೆ ಎಂದರು.


ಪರಿಸರ ನಿಯಂತ್ರಣ ಜೀವನ ಬೆಂಬಲ ವ್ಯವಸ್ಥೆಯಲ್ಲಿ ಮಾನವ ವ್ಯವಸ್ಥೆಯು ಹೇಗೆ ವರ್ತಿಸುತ್ತದೆ ಎಂಬುದನ್ನು ಇಸ್ರೋ ಮೇಲ್ವಿಚಾರಣೆ ಮಾಡುತ್ತದೆ.


"ಮಾನವ ಆಧಾರದ ಈ ಯೋಜನೆ ಬಹುತೇಕ ಪೂರ್ಣಗೊಂಡಿದೆ," ಎಂದು ಶಿವನ್ ಹೇಳಿದರು.


ಕೇಂದ್ರ ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಇಲಾಖೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕೂಡ ಬುಧವಾರ ಈ ಮಾನವಾಧಾರದ ರೋಬೋಟ್ ನ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು "ಇಸ್ರೋದಲ್ಲಿ ಭಾರತ ನಡೆಸಲಿರುವ ಮೊದಲ ಮಾನವ ಬಾಹ್ಯಾಕಾಶ ಮಿಷನ್ ‘ವ್ಯೋಮ ಮಿತ್ರ', ಗಗಯಾನಯಾನ ಅನಾವರಣಗೊಂಡಿದೆ. ಗಗನಯಾನಕ್ಕೆ ಯಾತ್ರಿಗಳು ಹೋಗುವ ಮೊದಲು ಈ ಮಾನವಾದಾರದ ಮೂಲಮಾದರಿಯು ಪ್ರಯೋಗವಾಗಿ ಹೋಗುತ್ತದೆ," ಎಂದು ಬರೆದಿದ್ದಾರೆ.