ತಮ್ಮ ಜವಳಿ ಮಳಿಗೆಯ ಸಂಪೂರ್ಣ ದಾಸ್ತಾನನ್ನು ಕೇರಳದ ಪ್ರವಾಹ ಪೀಡಿತರಿಗೆ ದಾನ ಮಾಡಿದ ಕೇರಳದ ವ್ಯಾಪಾರಿ

ಮಲಬಾರ್ ಪ್ರದೇಶದ ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುತ್ತಿರುವ ಮಲಯಾಳಂ ನಟ ರಾಜೇಶ್ ಶರ್ಮ ನೇತೃತ್ವದ ಕಾರ್ಯಕರ್ತರ ತಂಡಕ್ಕೆ ತಮ್ಮ ಮಳಿಗೆಗೆ ಬಂದ ಹೊಸ ಬಟ್ಟೆಯ ದಾಸ್ತಾನನ್ನು ನೀಡಿದ್ದಾರೆ ವರ್ತಕ ನೌಶದ್.

ತಮ್ಮ ಜವಳಿ ಮಳಿಗೆಯ ಸಂಪೂರ್ಣ ದಾಸ್ತಾನನ್ನು ಕೇರಳದ ಪ್ರವಾಹ ಪೀಡಿತರಿಗೆ ದಾನ ಮಾಡಿದ ಕೇರಳದ ವ್ಯಾಪಾರಿ

Monday August 19, 2019,

1 min Read

ಮಳೆಯ ನರ್ತನಕ್ಕೆ ನಲುಗಿರುವ ದೇಶದ ಇತರ ಭಾಗಗಳಂತೆ ಕೇರಳವೂ ಸಹ ಕಳೆದ ವರ್ಷದ ಪ್ರವಾಹದಿಂದ ಚೇತರಿಸಿಕೊಳ್ಳುವ ಮುನ್ನವೆ ಮತ್ತೊಂದು ವಿನಾಶಕಾರಿ ಪ್ರವಾಹಕ್ಕೆ ಒಳಗಾಗಿದೆ.


ಆದರೆ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟದ ಸುದ್ದಿಗಳ ಮಧ್ಯೆ, ದೇವರ ಸ್ವಂತ ನಾಡಿನಲ್ಲಿ ಓರ್ವ ದೊಡ್ಡ ಮನಸ್ಸಿನ ಜವಳಿ ವ್ಯಾಪಾರಿ ಅಸಂಭವ ನಾಯಕನಾಗಿ ಹೊರಹೊಮ್ಮಿದ್ದಾರೆ.


ಕೇರಳದ ಸ್ಥಳೀಯ ವರ್ತಕ, ಜವಳಿ ವ್ಯಾಪಾರಿ ನೌಶದ್ ಹೊಸ ಬಟ್ಟೆಯ ಇಡೀ ದಾಸ್ತಾನನ್ನು ಪ್ರವಾಹ ಪೀಡಿತರಿಗೆ ದಾನಮಾಡಿದ್ದಾರೆ. ಎರ್ನಾಕುಲಂನ ಮತ್ತನಚೆರ್ರಿಯ ಈ ವ್ಯಾಪಾರಿ ಬಕ್ರೀದ್ ಹಬ್ಬದ ಮಾರಾಟಕ್ಕೆಂದು ತಂದಿದ್ದ ಎಲ್ಲಾ ರೀತಿಯ ಹೊಸ ಬಟ್ಟೆಗಳನ್ನು ನೆರೆ ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ನೀಡಿದ್ದಾರೆ.


w

ನೌಶದ್ (ಚಿತ್ರ: ನ್ಯೂಸ್ 18)


ದಿ ಲಾಜಿಕಲ್ ಇಂಡಿಯನ್‌ನ ಪ್ರಕಾರ, ನೌಶದ್, ಮಲಯಾಳಂ ನಟ ರಾಜೇಶ್ ಶರ್ಮ ನೇತೃತ್ವದ ಮಲಬಾರ್ ಪ್ರದೇಶದ ಪ್ರವಾಹ ಪರಿಹಾರ ಸಂಗ್ರಹಣಾ ತಂಡಕ್ಕೆ ನೀಡಿದ್ದಾರೆ.


ತಂಡ ಚಿತ್ರೀಕರಿಸಿದ ದೃಶ್ಯವೊಂದರಲ್ಲಿ, ನೌಶದ್,


"ನಾವು ಪ್ರಪಂಚ ತೊರೆದು ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ನನ್ನ ಲಾಭವಿರೋದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ. ನಾಳೆ ಬಕ್ರೀದ್, ಅದನ್ನು ನಾನು ಆಚರಿಸುತ್ತಿರೋದು ಹೀಗೆ. ಕಳೆದ ಬಾರಿ ರಾಜ್ಯಕ್ಕೆ ಪ್ರವಾಹ ಬಂದಾಗಲೂ ಹೀಗೆಯೇ ಮಾಡಿದ್ದೆ. ನಾನೆನೇ ಏನೇ ಕೊಟ್ಟಿದ್ದರೂ ಅದೆಲ್ಲ ಬಂದಿರೋದು ದೇವರಿಂದ. ಎಂದು, ನ್ಯೂಸ್ 18 ವರದಿ ಮಾಡಿದೆ. ನೌಶಾದ್, ಪ್ರವಾಹ ಪರಿಹಾರಕ್ಕಾಗಿ ಐದು ಚೀಲಗಳಲ್ಲಿ ಬಟ್ಟೆಗಳನ್ನು ನೀಡಿದ್ದಾರೆ.


ಮಲಯಾಳಂ ನಟ ಆಸಿಫ್ ಅಲಿ ಫೇಸ್ಬುಕ್ ಪೋಸ್ಟ್‌ನಲ್ಲಿ,


"ಅಭಿಪ್ರಾಯ ಭೇದವನ್ನೆಲ್ಲ ಬದಿಗಿರಿಸಿ, ಸಹಾಯ ಮಾಡಲು ಸಿದ್ಧರಾಗಿರುವ ನೌಶಾದ್ ಅವರಂತಹ ಸಾವಿರಾರು ಜನರನ್ನು ನಾವು ಪಡೆದಿರುವವರೆಗೂ ಯಾರೂ ನಮ್ಮನ್ನು ವಿಫಲಗೊಳಿಸಲು ಸಾಧ್ಯವಿಲ್ಲ.”


ನಿರಂತರ ಮಳೆಯಿಂದಾಗಿ ಕೇರಳದಲ್ಲಿ 2.27 ಲಕ್ಷ ಜನರನ್ನು ತಮ್ಮ ನಿವಾಸಗಳಿಂದ ಸ್ಥಳಾಂತರಗೊಳಿಸಿ ನೆರೆ ಸಂತ್ರಸ್ತರ ಕೇಂದ್ರಕ್ಕೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 104 ತಲುಪಿದ್ದು, ಹವಾಮಾನ ಇಲಾಖೆಯ ಪ್ರಕಾರ ಬರುವ ದಿನಗಳಲ್ಲಿ ರಾಜ್ಯವು ಇನ್ನೂ ಹೆಚ್ಚಿನ ಮಳೆಯನ್ನು ಕಾಣಲಿದೆ ಎನ್ನಲಾಗಿದೆ.