ಕೇರಳದ ಕೊಡುಂಗಲ್ಲೂರ್ ಪುರಸಭೆಯೊಂದು ಹಸಿರಿಕರಣಕ್ಕೆ ಒತ್ತು ನೀಡಿದ್ದು, ಮನೆಯನ್ನು ನೋಂದಾಯಿಸಲು ಎರಡು ಮರಗಳನ್ನು ನೆಡಬೇಕು ಎಂಬ ಆದೇಶ ಹೊರಡಿಸಿದೆ

ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿರುವ ಕೊಡುಂಗಲ್ಲೂರ್ ಪುರಸಭೆಯು ಪ್ರತಿ ಹೊಸ ಮನೆ ಮತ್ತು ಕಟ್ಟಡದ ನಿರ್ಮಾಣದ ಜೊತೆಗೆ ಕನಿಷ್ಠ ಎರಡು ಹಣ್ಣು ಬಿಡುವ ಮರಗಳನ್ನು ನೆಡುವುದನ್ನು ಕಡ್ಡಾಯಗೊಳಿಸಿದೆ.

ಕೇರಳದ ಕೊಡುಂಗಲ್ಲೂರ್ ಪುರಸಭೆಯೊಂದು ಹಸಿರಿಕರಣಕ್ಕೆ ಒತ್ತು ನೀಡಿದ್ದು, ಮನೆಯನ್ನು ನೋಂದಾಯಿಸಲು ಎರಡು ಮರಗಳನ್ನು ನೆಡಬೇಕು ಎಂಬ ಆದೇಶ ಹೊರಡಿಸಿದೆ

Friday August 23, 2019,

2 min Read

ಚೆನ್ನೈ ನೀರಿನ ಬಿಕ್ಕಟ್ಟು ನಾವು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ದಯವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ವರ್ಷಗಳಿಂದ ಅಭಿವೃದ್ಧಿಯ ಹೆಸರಿನಲ್ಲಿ, ಅನೇಕ ಮರಗಳು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕೊಡಲಿಗೆ ಬಲಿಯಾಗಿವೆ, ಇದು ಮುಖ್ಯವಾಗಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗಿದೆ.


"ಹವಾಮಾನ ಬದಲಾವಣೆಯ ಬಗ್ಗೆ ಮತ್ತು ಅದರಲ್ಲಿರುವ ಅಪಾಯಗಳ ಬಗ್ಗೆ ಈಗ ಜನರಿಗೆ ಅರಿವು ಮೂಡುತ್ತಿದ್ದು, ಜನರು ಪರಿಸರ ಸಂರಕ್ಷಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ".


ಇಂತಹ ಒಂದು ನೇತೃತ್ವವನ್ನು ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರ್ ಪುರಸಭೆ ಕೈಗೊಂಡಿದೆ. ಪ್ರತಿ ಹೊಸ ಕಟ್ಟಡ ಅಥವಾ ಮನೆ ನಿರ್ಮಿಸಿದ ವಾರದೊಳಗಡೆ ಕನಿಷ್ಠ ಎರಡು ಹಣ್ಣು ಬಿಡುವ ಮರಗಳಾದ ಮಾವು ಮತ್ತು ಹಲಸು ಮುಂತಾದ ಮರಗಳನ್ನು ನೆಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿದೆ.


ಚಿತ್ರ: ಎನ್ ಡಿಟಿವಿ


ಈ ಒಂದು ನೇತೃತ್ವದ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಕೊಡುಂಗಲ್ಲೂರ್ ಪುರಸಭೆಯ ಅಧ್ಯಕ್ಷ ಕೆ. ಆರ್. ಜೈತ್ರಾನ್,


“ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗುವುದು, ಮೊದಲನೆಯದಾಗಿ ಕಟ್ಟಡದ ಪರವಾನಗಿ ಪಡೆಯಲು ವ್ಯಕ್ತಿಗಳು ಸ್ಥಳೀಯ ಸಂಸ್ಥೆಗೆ ಬಂದಾಗ, ಅವರು ಮನೆಯ ಯೋಜನೆಯನ್ನು ತರಬೇಕಾಗುತ್ತದೆ. ಮರಗಳಿಗಾಗಿ ಮೀಸಲಿಟ್ಟ ಸ್ಥಳವನ್ನು ಯೋಜನೆಯಲ್ಲಿ ನಿರ್ದಿಷ್ಟ ಪಡಿಸಬೇಕಾಗುತ್ತದೆ. ಎರಡನೆಯದಾಗಿ, ಕಟ್ಟಡದ ನಿರ್ಮಾಣದ ನಂತರ ಮತ್ತು ಮನೆ ಸಂಖ್ಯೆಯನ್ನು ಹಂಚುವ ಮೊದಲು ನಮ್ಮ ಪುರಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೊಸದಾಗಿ ನಿರ್ಮಿಸಿದ ಕಟ್ಟಡವನ್ನು ಪರಿಶೀಲಿಸುತ್ತಾರೆ. ಹಂಚಿಕೆಯಾದ ಪ್ರದೇಶದಲ್ಲಿ ಎರಡು ಹಣ್ಣು ಬಿಡುವ ಮರಗಳನ್ನು ನೆಟ್ಟಿದ್ದರೆ, ನಾವು ಅವರಿಗೆ ಮನೆ ಸಂಖ್ಯೆಯನ್ನು ನೀಡುತ್ತೇವೆ, ಇಲ್ಲದಿದ್ದರೆ ಮನೆ ಸಂಖ್ಯೆಯನ್ನು ನೀಡಲಾಗುವುದಿಲ್ಲ.”


ಜಿಲ್ಲೆಯ ಪುರಸಭೆಯು ಈ ಯೋಜನೆಯೊಂದಿಗೆ ಮುಂದುವರಿಯಲು ನಿರ್ಧರಿಸಿದ್ದರೂ, ಅದನ್ನು ಕಾರ್ಯಗತಗೊಳಿಸಲು ರಾಜ್ಯ ಸರಕಾರವು ಇನ್ನೂ ಹಸಿರು ಸಂಕೇತವನ್ನು ಸೂಚಿಸಿಲ್ಲ. ನಿಯಮದ ಪ್ರಕಾರ 1,500 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಅಥವಾ ಎಂಟು ಸೆಂಟ್ಸ್ ಎತ್ತರದಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಕನಿಷ್ಠ ಎರಡು ಮರಗಳನ್ನು ನೆಡಬೇಕಾಗುತ್ತದೆ.


ನಾಗರಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವಲ್ಲಿ ಸಹಾಯ ಮಾಡಲು, ಪುರಸಭೆಯು ಕಡಿಮೆ ಭೂಪ್ರದೇಶದಲ್ಲಿ ನಿರ್ಮಿಸಲಾದ ಮನೆಗಳಿಗೆ ಸಸಿಗಳನ್ನು ನೆಡಲು ಮಾರ್ಗಸೂಚಿಗಳನ್ನು ಸಹ ಒದಗಿಸುತ್ತದೆ.


ಇದಲ್ಲದೆ, ಪುರಸಭೆಯ ನೆರವಿನೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸುಮಾರು 1,140 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮನೆಗಳಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುವುದು.


ಯಾವುದೇ ವ್ಯಕ್ತಿಯು ನ್ಯಾಯಾಲಯದಲ್ಲಿ ಈ ನಿಯಮದ ಬಗ್ಗೆ ಪ್ರಶ್ನಿಸಿದರೆ, ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜೈತ್ರನ ಅವರು ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡುತ್ತ ಹೇಳಿದರು,

“ಕೇರಳ ಮುನ್ಸಿಪಲ್ ಕಟ್ಟಡ ನಿಯಮಗಳ ಪ್ರಕಾರ ಮಾತ್ರ ಸ್ಥಳೀಯ ಸಂಸ್ಥೆ ನಿರ್ಮಾಣಕ್ಕೆ ಅನುಮತಿ ನೀಡುತ್ತದೆ. ಆದ್ದರಿಂದ ನ್ಯಾಯಾಲಯದಲ್ಲಿ ನಮ್ಮ ಹೊಸ ನಿಯಮವನ್ನು ಯಾರಾದರೂ ಹೋಗಿ ಸವಾಲು ಮಾಡುತ್ತಾರೆಯೇ ಎಂಬ ಆತಂಕ ನಮಗಿದೆ. ಅದನ್ನು ಎದುರಿಸಲು ಈಗಾಗಲೇ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದೇವೆ. ಪರಿಸರ ಮಾಲಿನ್ಯವನ್ನು ಮುಕ್ತಗೊಳಿಸಲು ನಾವು ಈಗಿರುವ ನಿಯಮದಲ್ಲಿ ತಿದ್ದುಪಡಿ ಮಾಡಬೇಕೆಂದು ವಿನಂತಿಯನ್ನು ಸಹ ನೀಡಿದ್ದೇವೆ.”