ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದ ಟೀ ಮಾರುವವರ ಮಗಳು

ಈ ಪಂದ್ಯಾವಳಿಯಲ್ಲಿ ನಡೆದ ಅಂಡರ್ -17 ಲಾಂಗ್ ಜಂಪ್ ಸ್ಪರ್ಧೆಯಲ್ಲಿ ನಂದಿನಿ 5.65 ಮೀಟರ್ ದೂರಕ್ಕೆ ಜಿಗಿದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗುಜರಾತ್‌ನ ನಿರ್ಮಾ ಅಸಾರಿ ಮತ್ತು ಕೇರಳದ ಅಭಿರಾಮಿ ಬಾಲಕೃಷ್ಣ ವಿ.ಎಂ. ಪಡೆದಿದ್ದಾರೆ.

16th Jan 2020
  • +0
Share on
close
  • +0
Share on
close
Share on
close

ನಾವೆಲ್ಲರೂ ಕಡು ಬಡತನದಿಂದ ಬಂದು ಆಗರ್ಭ ಶ್ರೀಮಂತರಾದವರ ಕಥೆಗಳನ್ನು ಕೇಳಿದ್ದೇವೆ. ಅವರಲ್ಲಿ ಒಬ್ಬರು ಕ್ರಿಕೆಟಿಗ ಯಶಸ್ವಿ ಜೈಸ್ವಾಲ್, ಒಮ್ಮೆ ಪಾನಿ ಪುರಿಯನ್ನು ಜೀವನೋಪಾಯಕ್ಕಾಗಿ ಮಾರುತ್ತಿದ್ದರು. ನಂತರ ಅವರನ್ನು ಮುಂಬರುವ ಐಪಿಎಲ್‌ಗಾಗಿ ರಾಜಸ್ಥಾನ್ ರಾಯಲ್ಸ್ ತಮ್ಮ ತಂಡಕ್ಕೆ ಆಯ್ಕೆ ಮಾಡಿತು.


ಅಂತೆಯೇ, ಗುವಾಹಟಿಯಲ್ಲಿ ಶನಿವಾರ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ರಲ್ಲಿ ನಡೆದ ಅಂಡರ್ -17 ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಚಹಾ ಮಾರಾಟಗಾರರ ಪುತ್ರಿ ನಂದಿನಿ ಅಗಾಸರಾ ತೆಲಂಗಾಣಕ್ಕೆ ಚಿನ್ನದ ಪದಕ ಗೆದ್ದಿದ್ದಾರೆ. ಸಂಸಾರ ನಿಭಾಯಿಸಲು ಯುವ ಕ್ರೀಡಾಪಟುವಾದ ನಂದಿನಯವರ ತಂದೆ ದಿನವು ಎರೆಡೆರೆಡು ಕಡೆ ಕೆಲಸ ಮಾಡುತ್ತಿದ್ದರು. ಸೆಕ್ಯುರಿಟಿ ಗಾರ್ಡ್‌ನ ಟೋಪಿ ಧರಿಸುವುದರಿಂದ ಹಿಡಿದು ಸಿಕಂದರಾಬಾದ್‌ನ ಕಪ್ರನ್‌ನಲ್ಲಿ ಟೀ ಸ್ಟಾಲ್ ಸ್ಥಾಪಿಸುವವರೆಗೆ ಕೆಲಸ ಮಾಡುತ್ತಿದ್ದರು.


ಚಿತ್ರಕೃಪೆ : ಸಿಸಟ್‌


ತೆಲಂಗಾಣ ಟುಡೆ ಜೊತೆಗಿನ ಸಂವಾದದಲ್ಲಿ ನಂದಿನಿ,


“ನಾನು ಈ ಪದಕವನ್ನು ನನ್ನ ತಂದೆ ಮತ್ತು ನನ್ನ ತರಬೇತುದಾರರಾದ ರಮೇಶ್, ನಾಗರಾಜ್ ಮತ್ತು ಪ್ರವೀಣ್ ಸರ್ ಅವರಿಗೆ ಅರ್ಪಿಸುತ್ತೇನೆ. ನನ್ನ ವೃತ್ತಿಜೀವನವನ್ನು ಮುಂದುವರಿಸಲು ಸಹಾಯ ಮಾಡಲು ನನ್ನ ನಾನಾ (ತಂದೆ) ಪ್ರತಿ ರೂಪಾಯಿಯನ್ನೂ ಉಳಿಸಿದ್ದಾರೆ. ದೊಡ್ಡ ಪಂದ್ಯಗಳಲ್ಲಿ ಓಡಬೇಕೆಂಬ ನನ್ನ ಕನಸುಗಳಿಗೆ ಅವರು ಎಂದಿಗೂ ಇಲ್ಲ ಎಂದು ಹೇಳಲಿಲ್ಲ. ನನ್ನ ತಂದೆ ತಾಯಿ ಇಬ್ಬರೂ ನನಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನಾವು ನನ್ನ ಇಬ್ಬರು ಕಿರಿಯ ಸಹೋದರರೊಂದಿಗೆ ಸಣ್ಣ ಒಂದು ಮಲಗುವ ಕೋಣೆಯಲ್ಲಿ ಇರುತ್ತೇವೆ,” ಎಂದರು.


ಈ ಸ್ಪರ್ಧೆಯಲ್ಲಿ ನಂದಿನಿ 5.65 ಮೀಟರ್ ದೂರಕ್ಕೆ ಜಿಗಿದು ಚಿನ್ನದ ಪದಕ ಪಡೆದರು. ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗುಜರಾತ್‌ನ ನಿರ್ಮಾ ಅಸಾರಿ ಮತ್ತು ಕೇರಳದ ಅಭಿರಾಮಿ ಬಾಲಕೃಷ್ಣ ವಿ.ಎಂ. ಪಡೆದಿದ್ದಾರೆ.


ಸಿಯಾಸತ್ ಪ್ರಕಾರ, ಎರಡು ವರ್ಷಗಳ ಹಿಂದೆ, ಕೇಂದ್ರೀಯ ವಿದ್ಯಾಲಯದ ಶಾಲೆಯ ತರಬೇತುದಾರರೊಬ್ಬರು ಅವರನ್ನು ಪ್ರೇರೇಪಿಸಿದ್ದರು. ಅವರ ಸಾಮರ್ಥ್ಯಗಳಿಗೆ ಸಾಕ್ಷಿಯಾದ ನಂತರ, ತರಬೇತುದಾರರು ಅವರಿಗೆ ತರಬೇತಿ ನೀಡಲು ಮುಂದಾದರು, ನಂತರ ಅವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅವರ ಸತತ ಅಭ್ಯಾಸದ ನಂತರ ಹೆಚ್ಚಿನ ತರಬೇತಿಗಾಗಿ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಎನ್ ರಮೇಶ್ ಅವರಲ್ಲಿಗೆ ಕಳುಹಿಸಲಾಯಿತು.


"ದೊಡ್ಡ ಪಂದ್ಯಾವಳಗಳಲ್ಲಿ ಅವರು ಉತ್ತಮವಾಗಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಮೈದಾನದಲ್ಲಿ ಓಡುವಾಗ ಅವರನ್ನು ಕರೆದುಕೊಂಡು ಹೋಗಲು ನನಗೆ ಯಾವುದೇ ಹಿಂಜರಿಕೆ ಇರಲಿಲ್ಲ. ಅವರು ಉತ್ತಮ ಆಲ್ರೌಂಡ್ ಅಥ್ಲೀಟ್ ಆಗಿದ್ದಾರೆ ಮತ್ತು ಭವಿಷ್ಯದಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲಬಹುದು,” ಎಂದು ಎನ್ ರಮೇಶ್ ಸಿಯಾಸತ್ಗೆ ತಿಳಿಸಿದರು.
  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India