‘ಗಲ್ಲಿʼಯಿಂದ ನವೋದ್ಯಮಿಯಾದ ಕ್ರಿಕೆಟಿಗ್ ಕೆ ಎಲ್‌ ರಾಹುಲ್

ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕರಾಗಿ ಹಾಗೂ ‘ಗಲ್ಲಿʼ ಫ್ಯಾಶನ್‌ ಬ್ರಾಂಡ್‌ನ ಸಂಸ್ಥಾಪಕರಾಗಿ ಕ್ರಿಕೆಟಿಗ ಕೆ.ಎಲ್.ರಾಹುಲ್‌ ತುಂಬಾ ಬ್ಯೂಸಿಯಾಗಿದ್ದಾರೆ. ವೈಎಸ್ ವೀಕೆಂಡರ್‌ನೊಂದಿಗಿನ ವಿಶೇಷ ಸಂದರ್ಶನದಲ್ಲಿ, ಅವರು ತಮ್ಮ ಉದ್ಯಮಶೀಲತೆಯ ಪ್ರಯಾಣ, ಕ್ರಿಕೆಟ್ ಬಗೆಗಿನ ಅವರ ಉತ್ಸಾಹ ಮತ್ತು ಇನ್ನೂ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

7th Feb 2020
  • +0
Share on
close
  • +0
Share on
close
Share on
close

ಕ್ರಿಕೆಟಿಗ ಕೆ.ಎಲ್.ರಾಹುಲ್ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಈ ವರ್ಷದ ಅವರ ಸಾಧನೆ ಕಳೆದ ವರ್ಷದ ಅವರ ವಿವಾದವನ್ನು ಮುಚ್ಚಿಹಾಕಿದಂತಿದೆ.


ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಭಾಗಿಯಾಗಿದ್ದ ಚಾಟ್ ಶೋದಿಂದ ಪಡೆದ ಕುಖ್ಯಾತಿಯ ಹೊರತಾಗಿಯೂ, ಕ್ರಿಕೆಟಿಗ ರಾಹುಲ್ ಇತ್ತೀಚಿನ ಪಂದ್ಯಗಳಲ್ಲಿ ಅಭೂತಪೂರ್ವ ರನ್ ಗಳಿಸಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.


ಕ್ರಿಕೆಟ್ ಪಂಡಿತರು ನ್ಯೂಜಿಲೆಂಡ್‌ನಲ್ಲಿನ ಅವರ ಇತ್ತೀಚಿನ ಪ್ರದರ್ಶನವನ್ನು "ಪ್ರಬುದ್ಧ ಆಟ”ವೆಂದೇ ಕರೆದಿದ್ದಾರೆ, ಅವರು ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ತಮ್ಮ ಆಟವನ್ನು ಸಮರ್ಥವಾಗಿ ನಿರ್ವಹಿಸಿ ಸತತವಾಗಿ ರನ್ ಗಳಿಸಿ ಕಿವೀಸ್ ತಂಡದ ವಿರುದ್ಧ ಜಯಗಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಕ್ರಿಕೆಟ್‌ ಹೊರತುಪಡಿಸಿದರೆ ರಾಹುಲ್‌, ಕಳೆದ ವರ್ಷ ತಮ್ಮ ಕಲ್ಟ್‌ ಸ್ಟ್ರೀಟ್‌ ಫ್ಯಾಶನ್‌ ಬ್ರಾಂಡ್‌ ‘ಗಲ್ಲಿ’ ಸ್ಥಾಪಿಸಿ ನವೋದ್ಯಮಿ ಆಗಿದ್ದಾರೆ.


ವೈಎಸ್ ವೀಕೆಂಡರ್‌ನೊಂದಿಗಿನ ತಮ್ಮ ಮಾತುಕತೆಯಲ್ಲಿ ಅವರು ಗಲ್ಲಿ ಬ್ರಾಂಡ್‌ನ ಮುಂದಿನ ಗುರಿಯ ಕುರಿತು, ಅವರ ಇತ್ತೀಚಿನ “ಉತ್ತಮ” ಪ್ರದರ್ಶನ ಹಾಗೂ ಈ ವರ್ಷದ ಐಪಿಎಲ್‌ಅನ್ನು ಅವರು ಹೇಗೆ ಎದುರು ನೋಡುತ್ತಿದ್ದಾರೆ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.


ಕೆ ಎಲ್‌ ರಾಹುಲ್


ವೈ.ಎಸ್.ವೀಕೆಂಡರ್‌ : ವೆಸ್ಟ್‌ ಇಂಡೀಸ್‌ ಜೊತೆಗಿನ ಇತ್ತೀಚಿನ ಸರಣಿಯಲ್ಲಿನ ನಿಮ್ಮ ಪ್ರದರ್ಶನದ ಬಗ್ಗೆ ಏನಂತೀರಿ?

ಕೆ ಎಲ್‌ ರಾಹುಲ್: ಸರಣಿ ಅದ್ಭುತವಾಗಿತ್ತು, ವೀಕ್ಷಕರಿಗೆ ವೀಕ್ಷಿಸಲು ಸಹ ಇದೊಂದು ಅದ್ಭುತ ಸರಣಿಯಾಗಿತ್ತು ಅಂತ ನಾನು ಭಾವಿಸುತ್ತೇನೆ. ಎರಡೂ ತಂಡಗಳು ಬಹಳಷ್ಟು ಶ್ರಮಪಟ್ಟವು. ನಿಮಗೂ ತಿಳಿದಿರಬಹುದು, ವೆಸ್ಟ್ ಇಂಡೀಸ್ ಬಹಳ ಸ್ಪರ್ಧಾತ್ಮಕ ತಂಡ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಳ್ಳೇಯ ಹೆಸರಿರುವ ತಂಡ. ಸಣ್ಣ ಸ್ವರೂಪದ ಆಟಗಳಲ್ಲಿಯೂ ಅವರು ಚುರುಕಾಗಿದ್ದಾರೆ ಮತ್ತು ಅವರೊಂದಿಗಿನ ಪಂದ್ಯ ಒಂದೊಳ್ಳೆಯ ಸೆಣೆಸಾಟವಾಗುತ್ತದೆಂದು ನಮಗೂ ಗೊತ್ತಿತ್ತು.


ಕಳೆದ ಎರಡೂ ಮೂರು ವರ್ಷಗಳಿಂದ ನಾವು ಒಳ್ಳೆಯ ಫಾರ್ಮ್‌ನಲ್ಲಿದ್ದೇವೆ. ನಾನೂ ಸಹ ಫಾರ್ಮ್‌ನಲ್ಲಿದ್ದಿದ್ದರಿಂದ ನನಗೆ ಎಲ್ಲಾ ಆಟಗಳನ್ನು ಆಡುವ ಹೊಸ ಅವಕಾಶ ಸಿಕ್ಕಿತ್ತು. ನಾನು ನನ್ನ ದೇಶದ ಗೆಲುವಿಗಾಗಿ ಆ ಫಾರ್ಮ್‌ಅನ್ನು ಪ್ರದರ್ಶನರೂಪಕ್ಕೆ ಪರಿವರ್ತಿಸಿ ಉಪಯೋಗಿಸಿದ್ದು ಖುಷಿಯ ವಿಚಾರವೇ.


ವೈ.ಎಸ್.ವೀ: ಒಂದು ಬಾಲ್‌ಅನ್ನು ಎದುರಿಸಬೇಕಾದಾಗ ನಿಮ್ಮ ತಲೆಯಲ್ಲಿ ಏನೇನು ಓಡುತ್ತಿರತ್ತೆ? ಅದನ್ನು ಯಾವ ರೀತಿಯಲ್ಲಿ ಎದುರಿಸಬೇಕು ಅಂತ ಹೇಗೆ ನಿರ್ಣಯಿಸುತ್ತೀರಿ?

ಕೆ.ಎಲ್.ರಾ: ಕ್ರಿಕೆಟ್‌ನಲ್ಲಿ ತುಂಬಾ ಸರಳವೆನಿಸುವ ಕೆಲಸವೂ ಕಷ್ಟದ್ದಾಗಿರುತ್ತೆ. ನಾನು ಬರಿ ಚೆಂಡನ್ನು ನೋಡುತ್ತೇನೆ. ಮುಂದಿನ ನಿರ್ಣಯವನ್ನು ನನ್ನ ಸಹಜ ಪ್ರವೃತ್ತಿಯೇ ಸ್ವಾಧೀನಪಡಿಸಿಕೊಂಡು ನಿರ್ಧರಿಸುತ್ತೆ. ನಾವು ಹತ್ತು-ಹನ್ನೊಂದರ ವಯಸ್ಸಿನವರಾಗಿದ್ದಾಗಿನಿಂದಲೇ ಹಲವಾರು ಗಂಟೆಗಳ ಕಾಲ ಅಭ್ಯಾಸ ನಡೆಸಿ ನಮಗೆ ಅನುಭವವಿರುತ್ತದೆ.


ಒಂದು ಚೆಂಡು ನಮ್ಮೆಡೆಗೆ ಬಂದಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ನಮ್ಮ ದೇಹಕ್ಕೆ ತಿಳಿದಿರುತ್ತದೆ ಆದರೂ, ಪರಿಸ್ಥಿತಿಗೆ ಅನುಗುಣವಾಗಿ ಅದರಲ್ಲೂ ನಮ್ಮ ದೇಶವನ್ನು ಪ್ರತಿನಿಧಿಸುವಾಗ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ, ಒತ್ತಡ ಇರುತ್ತದೆ.


ಹಾಗಾಗಿ, ಆಟವನ್ನು ಸರಳವಾಗಿಆಡಲು ಯಾರು ಮರೆಯುವುದಿಲ್ಲವೋ, ಅವರೇ ಉತ್ತಮ ಆಟಗಾರರು. ಅದಕ್ಕಾಗಿಯೇ ನಾನು ಸರಳತೆಯಿಂದಿರಲು ಮತ್ತು ಅಭಿವೃದ್ಧಿಹೊಂದಲು ಮತ್ತು ಅದನ್ನು ಆಟಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ನಾನು ನನ್ನ ದಾರಿಯಲ್ಲಿ ಎದುರಾಗುವದೆಲ್ಲದಕ್ಕು ಪ್ರತಿಕ್ರಿಯಿಸದೆ, ವರ್ತಮಾನದಲ್ಲಿ ಉಳಿಯಲು ಪ್ರಯತ್ನಿಸುತ್ತೇನೆ.


ವೈ.ಎಸ್.ವೀ: ನಿಮ್ಮ ಫ್ಯಾಶನ್‌ ಬ್ರಾಂಡ್‌ ಗಲ್ಲಿ ಬಗ್ಗೆ ಹೇಳಿ. ನಿಮಗೆ ನವೋದ್ಯಮಿಗಳಾಗಬೇಕು ಅಂತ ಅನಿಸಿದ್ದೇಕೆ?

ಕೆ.ಎಲ್.ರಾ: ನನಗೆ ಮೊದಲಿನಿಂದಲೂ ಫ್ಯಾಶನ್‌ ಬಗ್ಗೆ ಒಂದು ಉತ್ಸಾಹದ ದೃಷ್ಟಿಯಿತ್ತು ಹಾಗೂ ಹೊಸ ಹೊಸ ಸ್ಟೈಲ್‌ಗಳನ್ನು ನಾನು ಆನಂದಿಸುತ್ತೇನೆ. ಅರ್ಜವಿ ಷಾ ಮಾರ್ವಾಹಾ (ಗಲ್ಲಿಯ ಸಹ-ಸಂಸ್ಥಾಪಕ) ಮತ್ತು ನಾನು ಇದರ ಕುರಿತು ಮಾತನಾಡಿದಾಗ, ನಮ್ಮಬ್ಬಿರ ಆಸಕ್ತಿಯು ಒಂದೇಯಾಗಿವೆ ಎಂದು ತಿಳಿಯಿತು. ಪುರುಷರ ವಸ್ತ್ರ ವಿನ್ಯಾಸ ಶೈಲಿಯ ಬಗ್ಗೆ ಅವರ ಕಲ್ಪನೆಯು ಥೇಟು ನನ್ನದರಂತೆಯೇ ಇತ್ತು. ಜನ ನಮ್ಮ ಬ್ರಾಂಡ್‌ಅನ್ನು ಒಪ್ಪಿಕೊಂಡು, ಗಲ್ಲಿಯ ಬಟ್ಟೆಗಳನ್ನು ಧರಿಸುತ್ತಿರುವುದು ಹಾಗೂ ಮುಂದೆ ನಾವು ಏನು ಮಾಡುತ್ತೇವೆ ಎಂಬುದನ್ನು ಸದಾ ಎದುರು ನೋಡುತ್ತಿರೋದು ಖುಷಿಯ ವಿಚಾರ.


ವೈ.ಎಸ್.ವೀ: ಗಲ್ಲಿ ಯಾವ ವರ್ಗದ ಮೇಲೆ ಕೇಂದ್ರೀಕೃತವಾಗಿದೆ?

ಕೆ.ಎಲ್.ರಾ: ಪ್ರತಿಯೊಬ್ಬರೂ ಚೆನ್ನಾಗಿ, ಕೂಲ್‌ ಆಗಿ ಕಾಣಬೇಕೆಂದು ಬಯಸುತ್ತಾರೆ, ಆದ್ದರಿಂದ ಇದು ಪ್ರತಿಯೊಬ್ಬರನ್ನೂ ಗಮನದಲ್ಲಿರಿಸಿದೆ. ಗಲ್ಲಿಯ ಶೈಲಿಯ ಸಂಸ್ಕೃತಿ ಇದು ಸ್ಕಿನ್ನಿ ಜೀನ್ಸ್ ಅಥವಾ ಬಾಡಿ ಫಿಟ್ಟಿಂಗ್ ಟೀ ಶರ್ಟ್ ಧರಿಸುವುದರ ಬಗ್ಗೆ ಬಗ್ಗೆಮಾತ್ರವಲ್ಲದೆ ಸ್ಟ್ರೀಟ್‌, ಹಿಪ್-ಹಾಪ್, ಕೂಲ್‌‌ ಸ್ವ್ಯಾಗ್‌ ರೀತಿಯದ್ದಾಗಿ ಮತ್ತು ಆರಾಮದಾಯಕವಾಗಿದೆ. ನಮ್ಮ ವಸ್ತ್ರಗಳನ್ನು ನೀವು ಮನೆಯಲ್ಲಿ ಅಥವಾ ಕ್ಲಬ್‌ನಲ್ಲಿ ಸಹ ಧರಿಸಬಹುದು.


ಕೆ ಎಲ್ ರಾಹುಲ್ ಗಲ್ಲಿ ಎಂಬ ಸ್ಟ್ರೀಟ್‌ ಫ್ಯಾಶನ್ ಬ್ರಾಂಡ್ ಅನ್ನು ಬಿಡುಗಡೆ ಮಾಡಿದ್ದಾರೆ


ವೈ.ಎಸ್‌.ವೀ : ಆದಾಯದ ದೃಷ್ಟಿಯಿಂದ ನಿಮ್ಮ ಬ್ರಾಂಡ್‌ಅನ್ನು ಮುಂದಿನ ಐದು ವರ್ಷದಲ್ಲಿ ಯಾವ ಮಟ್ಟದಲ್ಲಿ ನೋಡಲು ಬಯಸುತ್ತೀರಿ?

ಕೆ.ಎಲ್.ರಾ: ನಾವಿನ್ನೂ ಅಷ್ಟು ದೂರದೃಷ್ಟಿಯಿಂದ ಯೋಚಿಸಿಲ್ಲ. ನಮ್ಮ ಬ್ರಾಂಡ್‌ ಮಾರುಕಟ್ಟೆಗೆ ಹೊಸದಾಗಿರುವುದರಿಂದ ನಾವು ಎಲ್ಲವನ್ನೂ ಬಂದಂತೆ ಸ್ವೀಕರಿಸುತ್ತಿದ್ದೇವೆ. ನಮಗೆ ಯಾವುದು ಉತ್ತಮವಾಗಿ ಹೊಂದುತ್ತದೆ ಎಂಬುದನ್ನು ನಾವಿನ್ನು ಪ್ರಯೋಗಿಸಬೇಕಿದೆ. ನಿಸ್ಸಂಶಯವಾಗಿ, ಪ್ರತಿಯೊಬ್ಬರೂ ಯಶಸ್ವಿಯಾಗಲು ಮತ್ತು ಸುಸ್ಥಿರ ಬ್ರಾಂಡ್ ಆಗಲು ಬಯಸುತ್ತಾರೆ ಮತ್ತು ನಾವು ಸಹ ಹಾಗೆಯೇ ಮಾಡುತ್ತೇವೆ. ಇದು ಏನಿದ್ದರೂ ಜನರಿಗೆ ಕೂಲ್‌ ಎನಿಸುವ ಹಾಗೂ ಮೋಜೆನಿಸುವ ಶೈಲಿಯ ಬಟ್ಟೆಗಳನ್ನು ಹಾಗೂ ಹಳೆಯ ಶೈಲಿಯನ್ನು ಮರುಪ್ರಯೋಗಿಸುವ ಅಥವಾ ಅತಿಯಾದ, ಆಡಂಭರ ಶೈಲಿಯ ಬಟ್ಟೆಗಳನ್ನು


ತಯಾರಿಸಿ ಜನರಿಗೆ ತಲುಪಿಸಿ ಅವರ ಪ್ರತಿಕ್ರಿಯೆಯನ್ನು ಗಮನಿಸುವ ಪ್ರಯೋಗವಾಗಿದೆ.


ವೈ.ಎಸ್‌.ವೀ : ನೀವು ಮೊದಲಿನಿಂದಲೂ ಕ್ರಿಕೆಟಿಗರಾಗಲು ಬಯಸಿದ್ರ? ಅದೃಷ್ಟ ಅಥವಾ ಡೆಸ್ಟಿನಿ ನಿಮ್ಮ ಜೀವನದಲ್ಲಿ ಪಾತ್ರವಹಿಸಿದೆ ಅಂತೀರಾ?

ಕೆ.ಎಲ್.ರಾ: ನನಗೆ ನೆನಪಿರುವ ಮಟ್ಟಿಗೆ, ನಾನು ಯಾವುದರಲ್ಲಾದರು ತುಂಬಾನೇ ಚೆನ್ನಾಗಿದ್ದರೆ ಅದು ಕ್ರೀಡೆಯಲ್ಲಿ ಮಾತ್ರ ಹಾಗೂ ನಮ್ಮ ಕುಟುಂಬದಲ್ಲಿ ಎಲ್ಲರೂ ಕ್ರಿಕೆಟ್ ಆಡುತ್ತಿದ್ದಿದ್ದರಿಂದ ಕ್ರಿಕೆಟ್‌ಅನ್ನು ನಾನು ಸ್ವಾಭಾವಿಕವಾಗಿ ಆರಿಸಿಕೊಂಡೆ. ಅದೇ ನನಗೂ ಇಷ್ಟವಾಯಿತು. ಹೌದು, ಇದು ಸ್ವಲ್ಪ ನಂಬಿಕೆ ಹಾಗೂ ಸ್ವಲ್ಪ ಅದೃಷ್ಟದ ಮೇಲೆಯೂ ನಿಂತಿದೆ ಎಂದು ನಾನು ನಂಬುತ್ತೇನೆ. ನನ್ನನ್ನು ಕ್ರಿಕೆಟ್‌ ಆಡಲೆಂದೇ ಭೂಮಿಗೆ ಕಳುಹಿಸಲಾಗಿದೆ ಎಂದೇ ನಾನು ಊಹಿಸುತ್ತೇನೆ.


ಮತ್ತು ನನ್ನ ಕುಟುಂಬದ ಬೆಂಬಲವೂ ನನಗಿತ್ತು. ನಾನು ಸರಿಯಾದ ಸಮಯದಲ್ಲಿ ಸರಿಯಾದ ಜನರೊಂದಿಗೆ ಇದ್ದೆ ಮತ್ತು ನನಗೂ ಅವಕಾಶ ಸಿಕ್ಕಿತು. ಸ್ಪಷ್ಟವಾಗಿ ಹೇಳುವುದಾದರೆ, ಇದರಲ್ಲಿ ಎಲ್ಲರದೂ ಒಂದಷ್ಟು ಪಾಲಿದೆ.


ವೈ.ಎಸ್‌.ವೀ : ನಿಮ್ಮ ಬಾಲ್ಯದ ಬಗ್ಗೆ ಒಂದಿಷ್ಟು ಮೆಲುಕು ಹಾಕಬಹುದೆ?

ಕೆ.ಎಲ್..ರಾ: ನನ್ನ ಬಾಲ್ಯವು ಕ್ರೀಡೆಯಿಂದಲೇ ಕೂಡಿತ್ತು. ನಾನು XI ಅಥವಾ XII ನೇ ತರಗತಿಯಲ್ಲಿದ್ದಾಗ, ನನ್ನ ತಂದೆ ಕೂಡ ಆಡುತ್ತಿದ್ದರಿಂದ ನಾನು ಕ್ರಿಕೆಟ್ ಆಯ್ದುಕೊಳ್ಳಲು ನಿರ್ಧರಿಸಿದೆ ಮತ್ತು ನಾನು ಕ್ರೀಡೆಯಲ್ಲಿ ಮುಂದುವರಿಸಬೇಕೆಂಬುದು ನಮ್ಮ ತಂದೆಯ ಆಸೆಯೂ ಆಗಿತ್ತು. ನಾನು ಕಡಲತೀರದ ಪಕ್ಕದಲ್ಲಿ ಬೆಳೆದಿದ್ದೇನೆ, ಹಾಗಾಗಿ ನಾನು ಫುಟ್‌ಬಾಲ್ ಸೇರಿದಂತೆ ಕಡಲತೀರದ ಮೇಲೆ ಸಾಕಷ್ಟು ಆಟಗಳನ್ನು ಆಡುತ್ತಿದ್ದೆ. ನನ್ನ ಕುಟುಂಬವು ತುಂಬಾ ಬೆಂಬಲ ನೀಡಿದ್ದರೂ, ನನ್ನ ಶ್ರೇಣಿಗಳನ್ನು ಹೆಚ್ಚಿಸಲು ಸಾಧ್ಯವಾದರೆ ಮಾತ್ರ ಅವರು ನನಗೆ ಕ್ರಿಕೆಟ್ ಆಡಲು ಅವಕಾಶ ನೀಡುತ್ತೇವೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು.


ವೈ.ಎಸ್.ವೀ: ನಿಮ್ಮ ತರಬೇತಿಯ ದಿನಚರಿ ಹೇಗಿದೆ? ಉದಾಹರಣೆಗೆ, ಒಂದು ದಿನದ ಪಂದ್ಯಕ್ಕೆ ಹೋಲಿಸಿದರೆ, ಟಿ 20 ಗಾಗಿ ನಿಮ್ಮ ತಂತ್ರಗಳು ಹೇಗೆ ಭಿನ್ನವಾಗಿವೆ?

ಕೆ.ಎಲ್.ರಾ: ತರಬೇತಿ ಎರಡಕ್ಕೂ ವಿಭಿನ್ನವಾಗಿದ್ದರೂ, ವಿಭಿನ್ನವಾಗಿ ತರಬೇತಿ ಪಡೆಯಲು ನಮಗೆ ಹೆಚ್ಚಿನ ಸಮಯ ಸಿಗುವುದಿಲ್ಲ. ಸೀಸನ್‌ಗಳ ನಡುವಿನ ಸಮಯದಲ್ಲಿ ನಾವು ನಿಜವಾಗಿಯೂ ತರಬೇತುದಾರರೊಂದಿಗೆ ಕಾರ್ಯತಂತ್ರವನ್ನು ಚರ್ಚಿಸುತ್ತೇವೆ ಮತ್ತು ನಾವು ನಿಖರವಾಗಿ ಯಾವಾಗ ಏನು ಮಾಡಬೇಕೆಂದು ಮಾರ್ಗಸೂಚಿಯನ್ನು ತಯಾರಿಸುತ್ತೇವೆ.


ಟಿ20 ಆಡಲಿಕ್ಕೆ ಬಹಳಷ್ಟು ಮಾನಸಿಕ ಪೂರ್ವ ಸಿದ್ಧತೆಗಳು ಬೇಕು ಹಾಗೂ ಅದು ನಾವು ಎಷ್ಟರಮಟ್ಟಿಗೆ ದೈಹಕಿವಾಗಿ ಶಕ್ತರಾಗಿಯೂ, ಮಾನಸಿಕವಾಗಿ ಹಸಿವಿನಿಂದ ಉಳಿಯಬಲ್ಲೆವು ಎಂಬುದರ ಮೇಲೆ ನಿಂತಿದೆ. ಕೆಲವೊಮ್ಮೆ, ಪ್ರತಿದಿನ ಹೊಸ ಸವಾಲುಗಳು ಬರುವಾಗ ಮಾನಸಿಕ ಸಿದ್ಧತೆ ಸ್ವಲ್ಪ ಹೆಚ್ಚು ಬೇಕಾಗುತ್ತದೆ. ನನ್ನ ದೇಹವನ್ನ ಯೋಗ್ಯವಾದ ಆಕಾರದಲ್ಲಿಡಲು ಬಯಸುತ್ತೇನೆ. ಬಹುಮುಖ್ಯವಾಗಿ, ನಾನು ಚೆನ್ನಾಗಿ ವಿಶ್ರಾಂತಿ ಪಡೆಯುತ್ತೇನೆ. ಇದು ನನ್ನನ್ನು ಸದಾ ಫ್ರೆಶ್‌ ಆಗಿರುವಂತೆ ಹಾಗೂ ಆಟದ ಹಸಿವಿನಿಂದ ಕಾತರಿಸುವಂತೆ ಮಾಡುತ್ತದೆ.


ಉತ್ತಮ ಕ್ರಿಕೆಟಿಗನಿಗೆ ಮಾನಸಿಕ ಶಕ್ತಿ ಮತ್ತು ಶಿಸ್ತು ಬೇಕು


ವೈ.ಎಸ್.ವೀ : ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕರಾಗಿ, ನಾಯಕ ಸ್ಥಾನದ ಉತ್ಸುಕತೆ ನಿಮ್ಮಲ್ಲಿ ಹೇಗಿದೆ?

ಕೆ.ಎಲ್‌.ರಾ: ಇದೊಂದು ದೊಡ್ಡ ಜವಾಬ್ದಾರಿ. ಆಟಗಾರನೊಬ್ಬನಿಗೆ ನಾಯಕತ್ವದ ಹೊಣೆ ಹೊರುವುದು ಒಂದು ದೊಡ್ಡ ಹೆಜ್ಜೆಯೇ. ಅದೃಷ್ಟವಶಾತ್‌, ನಾನು ಅದ್ಭುತ ಕ್ಯಾಪ್ಟನ್‌ಗಳಿದ್ದ ತಂಡದಲ್ಲಿದ್ದೆ. ನಾನು ಭಾರತ ತಂಡಕ್ಕೆ ಆಡಿದ್ದು ಪ್ರಪಂಚದ ಅತ್ಯುತ್ತಮ ಕ್ಯಾಪ್ಟನ್ ಎಂ.ಎಸ್‌. ಧೋನಿಯವರ ನಾಯಕತ್ವದಡಿಯಲ್ಲಿ. ಅವರ ಆಟವನ್ನು ನೋಡುತ್ತ, ಅವರ ಅಡಿಯಲ್ಲಿ ಆಡುತ್ತ ನಾನು ಬಹಳಷ್ಟು ಕಲಿತಿದ್ದೇನೆ.


ವಿರಾಟ್‌ ಕೋಹ್ಲಿಯವರ ವಿಷಯದಲ್ಲೂ ಅದೇ ಆಗುತ್ತದೆ. ಯಾರೂ ಊಹಿಸದ ಸ್ಥಾನಕ್ಕೆ ಭಾರತವನ್ನು ಅವರು ಕೊಂಡೊಯ್ದಿದ್ದಾರೆ. ನಾನು ರೋಹಿತ್‌ ಶರ್ಮರ ನಾಯಕತ್ವದಡಿಯಲ್ಲಿಯೂ ಆಡಿದ್ದೇನೆ. ಅವರು ಅತೀ ಹೆಚ್ಚು ಯಶಸ್ಸು ಕಂಡ ಐಪಿಎಲ್‌ ಕ್ಯಾಪ್ಟನ್.‌ ನಾನು ನಂಬಿರುವಂತೆ, ಈ ಎಲ್ಲಾ ಅನುಭವಗಳು ನನ್ನನ್ನು ಉತ್ತಮ ಸ್ಥಾನದಲ್ಲಿರಿಸುತ್ತವೆ ಎಂದು ಕೊಂಡಿದ್ದೇನೆ.


ವೈಎಸ್.ವೀ ಮುಂದೇನು? ವೈಯಕ್ತಿಕವಾಗಿಯೂ ಹಾಗೂ ನವೋದ್ಯಮಿಗಳಾಗಿಯೂ 2020ರಲ್ಲಿ ತಮ್ಮ ಗುರಿಯೇನು?

ಕೆ.ಎಲ್.ರಾ: ಎಷ್ಟು ರನ್‌ಗಳಿಸಬೇಕು ಎಂಬುದನ್ನು, ಎಷ್ಟು ಹಣಗಳಿಸಬೇಕೆಂಬುದನ್ನು ಅಥವಾ ನಾನು ಎಷ್ಟು ಯಶಸ್ಸು ಹೊಂದಬೇಕೆಂಬುದನ್ನು ಎಂದಿಗೂ ಯೋಚಿಸುವುದಿಲ್ಲ. ನಾನು ಎಂದಿಗೂ ನನಗಾಗಿ ಗುರಿಗಳನ್ನು ಇಟ್ಟುಕೊಳ್ಳುವುದಿಲ್ಲ ಯಾಕೆಂದರೆ, ಕೆಲವೊಮ್ಮೆ ಇಟ್ಟುಕೊಂಡ ಗುರಿಗಿಂತ ಹೆಚ್ಚು ಕೆಲಸವಾಗಬಹುದು ಅಥವಾ ತೀರಾ ಕಡಿಮೆಯೂ ಆಗಬಹುದು. ಇಟ್ಟುಕೊಂಡ ಗುರಿಯನ್ನೇನಾದರು ತಲುಪದಿದ್ದರೆ, ಅದೇ ನಮ್ಮನ್ನು ನೋವಿಗೆ ದೂಡಿ, ನಮ್ಮ ಮೇಲೆ ಹೆಚ್ಚು ಒತ್ತಡ ತರಿಸುತ್ತದೆ. ನನ್ನ ಮಟ್ಟಿಗೆ ಗುರಿಯೆಂದರೆ, ಪ್ರತಿದಿನವನ್ನೂ ಬಂದಂತೆಯೇ ಸ್ವೀಕರಿಸುವುದು ಹಾಗೂ ನಾನು ವೈಯಕ್ತಿಕವಾಗಿ, ಕ್ರೀಡಾಪಟುವಾಗಿ ಹಾಗೂ ನವೋದ್ಯಮಿಯಾಗಿ ಏನು ಮಾಡಬೇಕೊ ಅದನ್ನು ಮಾಡುತ್ತೇನೆ. ಯಶಸ್ಸು ಹೊಂದಲು ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ. ನಾನು ನನ್ನನ್ನು ಅತ್ಯುತ್ತಮವಾದುದಕ್ಕೆ ರೂಪುಗೊಳಿಸುತ್ತೇನೆ ಹಾಗೂ ನಂತರ ನನ್ನ ದಾರಿಗೆ ಏನೇ ಬಂದರೂ ನಾನು ಅದನ್ನು ಸ್ವೀಕರಿಸಲು ತಯಾರಿರುತ್ತೇನೆ.

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India