ತಮ್ಮ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಿದ ಕೋಮಲ್ ಹಡಾಲಾ

21 ವರ್ಷದ ವಯಸ್ಸಿನ ಕೋಮಲ್ ಹಾಡಲ್ ಅವರು ಉತ್ತರ ಪ್ರದೇಶದ ನಿಥೋರ್ ಹಳ್ಳಿಯಲ್ಲಿ 250 ಶೌಚಾಲಯಗಳನ್ನು ನಿರ್ಮಿಸಿ ತಮ್ಮ ಗ್ರಾಮದಲ್ಲಿ ಬಯಲು ಬಹಿರ್ದೆಸೆಯನ್ನು ನಿರ್ಮೂಲನೆಗೊಳಿಸುವಲ್ಲಿ ಕಾರಣಿಭೂತರಾಗಿದ್ದಾರೆ.

ತಮ್ಮ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಿದ ಕೋಮಲ್ ಹಡಾಲಾ

Friday February 28, 2020,

2 min Read

ನಮ್ಮ ದೇಶದ ಕೆಲವು ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಇನ್ನೂ ನಡೆಯುತ್ತಿದೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳ ಹೊರತಾಗಿಯೂ, ಭಾರತದಲ್ಲಿ ಬಯಲು ಬಹಿರ್ದೆಸೆ ಇಂದಿಗೂ ಚಾಲ್ತಿಯಲ್ಲಿರುವುದು ವಿಷಾದನೀಯ.


ಉತ್ತರಪ್ರದೇಶದ ನಿಥೋರಾದಲ್ಲಿ ಎರಡು ವರ್ಷಗಳಲ್ಲಿ 250 ಶೌಚಾಲಯಗಳನ್ನು ನಿರ್ಮಿಸಿದ ಇಪ್ಪತ್ತೊಂದು ವರ್ಷದ ಕೋಮಲ್ ಹಡಾಲಾ ಅವರ ಪರಿಶ್ರಮದ ಫಲವಾಗಿ ಈ ಗ್ರಾಮವನ್ನು ಈಗ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ.


ಏತನ್ಮಧ್ಯೆ ಹೊಸದಾಗಿ ಮದುವೆಯಾದ ಈ ಮಹಿಳೆಯರಿಗೆ ಮತ್ತು ಕಟ್ಟುಪಾಡುಗಳನ್ನು ನಂಬಿಕೊಂಡು ಬಂದ ಜನರಿಗೆ ಮನವರಿಕೆ ಮಾಡುವುದು ಮತ್ತು ಅವರ ನಂಬಿಕೆಗಳನ್ನು ಮುರಿಯುವುದು ಸುಲಭವಲ್ಲ.


ಕೋಮಲ್ ಹಡಾಲಾ (ಚಿತ್ರ: ದಿ ಗಾರ್ಡಿಯನ್)


ದಿ ಬೆಟರ್ ಇಂಡಿಯಾದೊಂದಿಗೆ ಮಾತನಾಡುತ್ತಾ, ಕೋಮಲ್,


ಕಾರ್ಯವು ಮೂಲತಃ ಕಷ್ಟಕರವಾಗಿತ್ತು. ಕೆಲವೊಮ್ಮೆ ಜನರು ನಮ್ಮನ್ನು ಬೈಯುತ್ತಿದ್ದರು. ಕೆಲವೊಮ್ಮೆ ಅವರು ‘ನಿರುದ್ಯೋಗಿ’ ಎಂದು ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದರು ಮತ್ತು ನಿಂದಿಸುತ್ತಿದ್ದರು,” ಎಂದರು.


ದೆಹಲಿಯಲ್ಲಿ ಹುಟ್ಟಿ ಬೆಳೆದ ಕೋಮಲ್ ಅವರು 2017 ರಲ್ಲಿ ವಿವಾಹವಾದಾಗ ತಮ್ಮ ಗ್ರಾಮವನ್ನು ಬಯಲು ಬಹಿರ್ದೆಸೆಯಿಂದ ಮುಕ್ತಗೊಳಿಸುವ ಉದ್ದೇಶವು ಪ್ರಾರಂಭವಾಯಿತು. ನಗರದಲ್ಲಿ ಬೆಳೆದ ಕೋಮಲ್ ಅವರಿಗೆ, ಹಳ್ಳಿಯ ಶೌಚಾಲಯವಿಲ್ಲದ ಮನೆಯಲ್ಲಿ ತನ್ನ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಆದರೆ ಅವರು ಮದುವೆಯಾಗಿ ನಿಥೋರಾಗೆ ಬಂದಮೇಲೆ ಶೌಚಾಲಯಕ್ಕೆ ಬಯಲನ್ನೇ ಆಶ್ರಯಿಸಬೇಕಾಯಿತು.


“ನಾವು ಏಕಾಂತ ಸ್ಥಳವನ್ನು ಹುಡುಕಲು ಕಿಲೋಮೀಟರ್‌ಗಳಷ್ಟು ಗುಂಪುಗಳಾಗಿ ನಡೆಯುತ್ತೇವೆ. ಪುರುಷರು ನಮ್ಮನ್ನು ಗೇಲಿ ಮಾಡುತ್ತಿದ್ದರು, ಮತ್ತು ಕೆಲವೊಮ್ಮೆ, ರೈತರು ತಮ್ಮ ಜಮೀನುಗಳ ಸಮೀಪದಿಂದ ನಮ್ಮನ್ನು ದೂರವಿಡುತ್ತಿದ್ದರು. ಇದು ಅತ್ಯಂತ ಮುಜುಗರದ ಸಂಗತಿಯಾಗಿದೆ,” ಎಂದು ಅವರು ದಿ ಬೆಟರ್ ಇಂಡಿಯಾದ ಜೊತೆ ಮಾತನಾಡುತ್ತ ತಮ್ಮ ನೋವನ್ನು ಹಂಚಿಕೊಂಡರು.


ಶೀಘ್ರದಲ್ಲೇ, ಕೋಮಲ್, ಈ ವಿಷಯವಾಗಿ ಗಂಭೀರವಾಗಿ ಯೋಚಿಸಲು ಶುರು ಮಾಡಿದರು.


ಚಿತ್ರಕೃಪೆ: ಗಾರ್ಡಿಯನ್


ಅವರು ಹಳ್ಳಿಯ ಜನರನ್ನು ತಲುಪುವ ಮೊದಲು, ಕೋಮಲ್ ತನ್ನ ಕುಟುಂಬದ ಸದಸ್ಯರು ಮತ್ತು ತನ್ನ ಪತಿಯ ಮನವೋಲಿಸಿ. ನಂತರ, ಹೊಸ ಶೌಚಾಲಯಗಳನ್ನು ನಿರ್ಮಿಸಲು ಕೇಳಲು ಗ್ರಾಮದ ಮುಖ್ಯಸ್ಥರ ಬಳಿಗೆ ಹೋದಾಗ, ಅವರನ್ನು ಬೆಂಬಲಿಸಿದ ಕೆಲವು ಹಳ್ಳಿ ಮಹಿಳೆಯರು ಸೇರಿಕೊಂಡರು.


ಕೆಲವು ರೈತರು ಮತ್ತು ಸರ್ಕಾರದ ಬೆಂಬಲದೊಂದಿಗೆ ಕೋಮಲ್ ಶೌಚಾಲಯ ನಿರ್ಮಿಸಲು ಹಣವನ್ನು ಸಂಗ್ರಹಿಸಿದರು


ನಮ್ಮ ಹುಟ್ಟಿನಿಂದಲೇ ನಾವು ಹೊಲಗಳಿಗೆ ಹೋಗುತ್ತಿದ್ದೆವು. ಒಂದು ದಿನದಲ್ಲಿ ಅದು ಹೇಗೆ ಬದಲಾಗುತ್ತದೆ? ಇದು ಸಮಯ ತೆಗೆದುಕೊಂಡಿತು, ಆದರೆ ಸನ್ನಿವೇಶವು ಅಂತಿಮವಾಗಿ ಬದಲಾಯಿತು,” ಎಂದು ಕೋಮಲ್ ಭಾರತೀಯ ಮಹಿಳಾ ಬ್ಲಾಗ್‌ಗೆ ತಿಳಿಸಿದರು.


ಈಗ, ಕೋಮಲ್ ನಿಗ್ರಾನಿ ಸಮಿತಿ ಎಂಬ ಸರ್ಕಾರ ನಡೆಸುವ ಒಡಿಎಫ್ ಯೋಜನೆಯ ಸದಸ್ಯರಾಗಿದ್ದಾರೆ. ಇವರಿಗೆ ನಾರ್ವೇಜಿಯನ್ ಪಿಎಂ ಎರ್ನಾ ಸೋಲ್ಬರ್ಗ್ ಅವರು 2019 ರಲ್ಲಿ ಮೆಚ್ಚಿಗೆಯನ್ನು ಸೂಚಿಸಿದ್ದಾರೆ.