90 ವರ್ಷದ ಅಜ್ಜಿ ಪೊಟ್ಲಿ ಚೀಲದ ಸ್ವಂತ ಆನ್ ಲೈನ್ ಉದ್ಯಮ ಆರಂಭಿಸಿದ್ದಾರೆ

ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಉತ್ಸಾಹವನ್ನು ಅದು ಎಂದಿಗೂ ಕುಗ್ಗಿಸುವುದಿಲ್ಲ, ಮತ್ತು 90 ವರ್ಷದ ಅಜ್ಜಿ ಲತಿಕಾ ಚಕ್ರವರ್ತಿ ಅವರು ಪೊಟ್ಲಿ (ಬಂಡಲ್) ಚೀಲಗಳನ್ನು ತಯಾರಿಸುವ ಮೂಲಕ ಇದಕ್ಕೆ ಉದಾಹರಣೆಯಾಗಿ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸುತ್ತಿದ್ದಾರೆ.

90 ವರ್ಷದ ಅಜ್ಜಿ ಪೊಟ್ಲಿ ಚೀಲದ ಸ್ವಂತ ಆನ್ ಲೈನ್ ಉದ್ಯಮ ಆರಂಭಿಸಿದ್ದಾರೆ

Friday October 18, 2019,

2 min Read

ಲತಿಕಾ ಚಕ್ರವರ್ತಿ (ಚಿತ್ರ ಕೃಪೆ: ಸ್ಕೂಪ್ ವೂಪ್)

ಡಿಜಿಟಲ್ ಮಾರುಕಟ್ಟೆಗೆ ಹೊಸ ಪ್ರವೇಶ ಪಡೆದ ಇವರು ಕಳೆದ ಕೆಲವು ವರ್ಷಗಳಿಂದ ತಮ್ಮದೇ ಆದ ‘ಲತಿಕಾ ಬ್ಯಾಗ್ಸ್' ಎಂಬ ಆನ್ ಲೈನ್ ವೆಬ್‌ಸೈಟ್‌ ಹೊಂದಿದ್ದಾರೆ. ಈ ವೆಬ್ ಸೈಟ್‌ ಗೆ ಈಗಾಗಲೇ ಜರ್ಮನಿ, ನ್ಯೂಜಿಲೆಂಡ್ ಮತ್ತು ಒಮಾನ್‌ ದೇಶಗಳಿಂದ ಆದೇಶಗಳು ಬಂದಿವೆ. ಕೆಲವೊಮ್ಮೆ, ಬರುವ ಆದೇಶಗಳ ಪ್ರಮಾಣವು ಬಹಳ ದೊಡ್ಡದಾಗಿರುತ್ತದೆ ಮತ್ತು ಅವರು ಈ ತರಹದ ಬೇಡಿಕೆಯನ್ನು ಮುಂದೆಯೂ ಉಳಿಸಿಕೊಳ್ಳಬಹುದೇ ಎಂಬುದು ಅವರಿಗೆ ಖಚಿತವಾಗಿ ತಿಳಿದಿಲ್ಲ. ಲತಿಕಾ ಅವರು ತಯಾರಿಸುವ ಪೊಟ್ಲಿ ಚೀಲಗಳ ವಿಶಿಷ್ಟ ವಿನ್ಯಾಸವು ಜನರು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಒಂದು ಕಾರಣವಾಗಿದೆ. ಆನ್‌ಲೈನ್‌ನಲ್ಲಿ ಚೀಲಗಳು 500 ರಿಂದ 1,500 ರೂ. ಬೆಲೆಯ ತನಕ ಲಭ್ಯವಿದೆ.


ಲತಿಕಾ ಅಸ್ಸಾಂನ ಧುರ್ಬಿಯಲ್ಲಿ ಜನಿಸಿದರು ಹಾಗೂ ಅಲ್ಲಿಯೇ ಶಾಲಾ ಶಿಕ್ಷಣವನ್ನು ಪೂರೈಸಿದರು. ತಮ್ಮ ವಿದ್ಯಾಭ್ಯಾಸ ಮುಗಿದ ನಂತರ, ಸರ್ವೆ ಆಫ್ ಇಂಡಿಯಾದ ಅಧಿಕಾರಿ ಕೃಷ್ಣ ಲಾಲ್ ಚಕ್ರವರ್ತಿಯೊಂದಿಗೆ ವಿವಾಹವಾದರು ಲತೀಕ. ಅವರ ಗಂಡನ ಕೆಲಸಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಅಗತ್ಯವಿತ್ತು ಮತ್ತು ಲತಿಕಾ ಹೊಸ ಸ್ಥಳಗಳನ್ನು ನೋಡಲು ಸಹಾಯವಾಯಿತು. ಅವರ ಈ ವ್ಯಾಪಕ ಪ್ರಯಾಣವು ಲತಿಕಾರವರನ್ನು ಹೊಲಿಗೆ ಮಾಡಲು ಪ್ರೇರೇಪಿಸಿತು, ಏಕೆಂದರೆ ವಿವಿಧ ರಾಜ್ಯಗಳಿಂದ ಬಟ್ಟೆಯ ವಿಭಿನ್ನ ವಿನ್ಯಾಸಗಳನ್ನು ಪ್ರದರ್ಶಿಸಲು ಸಹಾಯವಾಗುತ್ತದೆ. ಹೊಲಿಗೆ ಲತಿಕಾರ ಒತ್ತಡದ ನಿವಾರಿಸುವ ವಿಧಾನ ಕೂಡ ಆಗಿತ್ತು, ಏಕೆಂದರೆ ಅವರು ತಮ್ಮ ಮಗುವಿಗೆ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಅವರ ಮಗು ಬೆಳೆದಂತೆ ಅವರು ಗೊಂಬೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಆ ಕ್ಷಣವೇ ಅವರು ಹೊಲಿಗೆಗೆ ಒಂದು ಮಹತ್ವ ಮತ್ತು ಬೆಲೆ ಇದೆ ಎಂದು ಅರಿತುಕೊಂಡರು.


ಪತಿ ತೀರಿಕೊಂಡ ನಂತರ, ಭಾರತೀಯ ನೌಕಾಪಡೆಯ ಕ್ಯಾಪ್ಟನ್ ಆಗಿದ್ದ ತನ್ನ ಮಗನೊಂದಿಗೆ ತೆರಳಿದರು. ತನ್ನ ಮಗ ಕರ್ತವ್ಯದಲ್ಲಿದ್ದ ಸಮಯದಲ್ಲಿ ಮನೆಯಲ್ಲಿಯೇ ಇದ್ದು, ಹೆಚ್ಚು ಸಮಯ ಮತ್ತು ಶ್ರದ್ಧೆಯೊಂದಿಗೆ ಹೊಲಿಯುವ ಆಸಕ್ತಿಯನ್ನು ಅವರು ಮುಂದುವರಿಸಿದರು ಎಂದು ಡೈಲಿ ಹಂಟ್ ವರದಿ ಮಾಡಿದೆ.


ಚಿತ್ರಕೃಪೆ: ಸ್ಕೂಪ್ ವೂಪ್

ಕೆಲವು ವರ್ಷಗಳ ಹಿಂದೆ, ಲತಿಕಾ ಸಣ್ಣ ಪೊಟ್ಲಿ ಚೀಲಗಳನ್ನು ತಯಾರಿಸಲು ಪ್ರಾರಂಭಿಸಿದರು. ಅವರು ತಮ್ಮ ಹಳೆಯ ಸೀರೆಗಳು ಮತ್ತು ಕುರ್ತಾಗಳನ್ನು ಬಳಸಿ ಬ್ಯಾಗ್ ತಯಾರಿಸುವುದರಿಂದ ಅವರ ಚೀಲಗಳು ವಿಭಿನ್ನ ಎಂದು ಎನಿಸುತ್ತದೆ. ಇದು ಸಾಂಪ್ರಾದಾಯಿಕ ಉಡುಗೆಗಳೊಂದಿಗೆ ಹೊರ ಹೋಗಲು ಉತ್ತಮ ವಸ್ತುವಾಗಿದೆ. ಅವರು ಸಾಮಾನ್ಯವಾಗಿ ಆ ಚೀಲಗಳನ್ನು ತನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ನೀಡುತ್ತಾರೆ. ಮತ್ತು ಇಲ್ಲಿಯವರೆಗೆ ಅವರು ಸುಮಾರು 300 ಚೀಲಗಳನ್ನು ತಯಾರಿಸಿದ್ದಾರೆ. ಆನ್‌ಲೈನ್ ಉದ್ಯಮವು ಲತಿಕಾ ಅವರ ಮೊಮ್ಮಗ ಜಾಯ್ ಚಕ್ರವರ್ತಿಯ ಕಲ್ಪನೆಯಾಗಿದ್ದು, ಅವರ ಚೀಲಗಳ ವಿನ್ಯಾಸದಲ್ಲಿ ಅನನ್ಯತೆ ಮತ್ತು ಸೃಜನಶೀಲತೆಯನ್ನು ಕಂಡಿದ್ದಾರೆ. ಹಾಗಾಗಿ ಯಾವುದೇ ಸಮಯವನ್ನು ವ್ಯರ್ಥ ಮಾಡದೆ, ಅವರು ಲತಿಕಾ ಬ್ಯಾಗ್ಸ್ ಎಂಬ ವೆಬ್‌ಸೈಟ್ ಅನ್ನು ಆರಂಭಿಸಿದ್ದಾರೆ. ಅವರು ಜರ್ಮನಿಯಲ್ಲಿ ವಾಸಿಸುತ್ತಿದ್ದು ಮತ್ತು ಆಗಾಗ್ಗೆ ಅವರ ಹೆತ್ತವರನ್ನು ಭೇಟಿ ಮಾಡಲು ಬರುತ್ತಾರೆ.


ಅವರು ತಮ್ಮನ್ನು ಹೇಗೆ ಪ್ರೇರೆಪಿಸಿಕೊಳ್ಳುತ್ತಾರೆ ಮತ್ತು ಕೆಲಸ ಮಾಡುವ ಉತ್ಸಾಹವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದರ ಕುರಿತು ಸ್ಕೂಪ್ ವುಪ್ ಗೆ ನೀಡಿದ ಸಂದರ್ಶನದಲ್ಲಿ,

"ನಾನು ಬಹಳ ಶಿಸ್ತುಬದ್ಧ ಜೀವನವನ್ನು ಹೊಂದಿದ್ದೇನೆ. ಇದು ನನ್ನನ್ನು ಆರೋಗ್ಯಕರ ಮತ್ತು ಶಾಂತಿಯುತವಾಗಿರಿಸುತ್ತದೆ. ನಾನು ಬೇಗನೆ ಮಲಗಲು ಮತ್ತು ಬೇಗನೆ ಏಳುವುದು ಒಳ್ಳೆಯದು ಎಂದು ನಂಬುತ್ತೇನೆ" ಎಂದು ಹೇಳುತ್ತಾರೆ.