ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ದೆಹಲಿ ವಾಯುಮಾಲಿನ್ಯ ಮತ್ತು ನಾಗರಿಕರ ಪ್ರತಿಭಟನೆಯ ಬಗ್ಗೆ ಪೋಸ್ಟ್ ಮಾಡಿರುವ ಲಿಯೊನಾರ್ಡೊ ಡಿಕಾಪ್ರಿಯೊ

ಇತ್ತೀಚಿಗೆ ಭಾರತವು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಲಿಯೊನಾರ್ಡೊ ಡಿಕಾಪ್ರಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿಯೆತ್ತಿರುವುದು ಇದೇ ಮೊದಲಲ್ಲ, ಈ ಹಿಂದೇ ಚೆನ್ನೈನಲ್ಲಿ ನೀರಿನ ಕೊರತೆಯ ಬಗ್ಗೆಯೂ ಮಾತನಾಡಿದ್ದರು.

ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ದೆಹಲಿ ವಾಯುಮಾಲಿನ್ಯ ಮತ್ತು ನಾಗರಿಕರ ಪ್ರತಿಭಟನೆಯ ಬಗ್ಗೆ ಪೋಸ್ಟ್ ಮಾಡಿರುವ ಲಿಯೊನಾರ್ಡೊ ಡಿಕಾಪ್ರಿಯೊ

Wednesday November 20, 2019,

2 min Read

ಹಲವಾರು ನಕಾರಾತ್ಮಕ ಬೆಳವಣಿಗೆಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಸದಾ ಸುದ್ದಿಯಲ್ಲಿದೆ. ಪ್ರಸ್ತುತ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ಜಗತ್ತಿನೆಲ್ಲೆಡೆ ಪರಿಸರವಾದಿಗಳ ಕಳವಳಕ್ಕೆ ಕಾರಣವಾಗಿದೆ.


ಈಗ, ಪ್ರಸಿದ್ಧ ಹಾಲಿವುಡ್ ನಟ ಮತ್ತು ಪರಿಸರವಾದಿ ಲಿಯೊನಾರ್ಡೊ ಡಿಕಾಪ್ರಿಯೊ ಅವರು ಇನ್ಸ್ಟಾಗ್ರಾಮ್ ನಲ್ಲಿ ಈ ಕುರಿತು ಧ್ವನಿಯೆತ್ತಿದ್ದಾರೆ, ದೇಶದಲ್ಲಿ, ವಿಶೇಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ವಾಯುಮಾಲಿನ್ಯವನ್ನು ಎದುರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಭಾರತೀಯ ನಾಗರಿಕರ ಧ್ವನಿಯನ್ನು ಲಿಯೊನಾರ್ಡೊ ಡಿಕಾಪ್ರಿಯೊ ಎತ್ತಿ ಎತ್ತಿಹಿಡಿದ್ದಿದ್ದಾರೆ.


ಲಿಯೊನಾರ್ಡೊ ಡಿಕಾಪ್ರಿಯೊ (ಚಿತ್ರ ಕೃಪೆ: ಫೇಸ್ ಬುಕ್)


ಮಗು ತಂದೆಯ ಹೆಗಲ ಮೇಲೆ ಕುಳಿತು "ನನಗೆ ಉತ್ತಮ ಭವಿಷ್ಯ ಬೇಕು" ಎಂದು ಬರೆಯುವ ಫಲಕವನ್ನು ಹಿಡಿದಿರುವ ಅವರ ಪೋಸ್ಟ್ ನಲ್ಲಿ,


ನಗರದ ಅಪಾಯಕಾರಿ ಮಾಲಿನ್ಯ ಮಟ್ಟವನ್ನು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 1500 ಕ್ಕೂ ಹೆಚ್ಚು ನಾಗರಿಕರು ನ್ಯೂ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಜಮಾಯಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ ವಾಯುಮಾಲಿನ್ಯವು ಪ್ರತಿವರ್ಷ ಸುಮಾರು 1.5 ದಶಲಕ್ಷ ಜನರನ್ನು ಕೊಲ್ಲುತ್ತದೆ ಎಂದು ಅಂದಾಜಿಸಲಾಗಿದೆ; ಈ ಅಂಕಿಅಂಶಗಳು ವಾಯುಮಾಲಿನ್ಯವನ್ನು ಭಾರತದ ಐದನೇ ಅತಿದೊಡ್ಡ ಕೊಲೆಗಾರನನ್ನಾಗಿ ಮಾಡಿದೆ.


ನವೆಂಬರ್ 5 ರಂದು ಇಂಡಿಯಾ ಗೇಟ್‌ನಲ್ಲಿ ನಡೆದ ಪ್ರತಿಭಟನೆಯನ್ನು ಡಿಕಾಪ್ರಿಯೊ ಉಲ್ಲೇಖಿಸಿದ್ದಾರೆ. ದೆಹಲಿಯ ಅನೇಕ ನಿವಾಸಿಗಳು ಸರ್ಕಾರದಿಂದ ಕಠಿಣ ಮತ್ತು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿದ್ದಂತೆ, ಮಾಲಿನ್ಯವನ್ನು ನಿಗ್ರಹಿಸಲು ಸಂಚಾರ ನಿರ್ವಹಣೆಗೆ ಬೆಸ-ಸಮ ಯೋಜನೆಗಿಂತ ಉತ್ತಮ ಯೋಜನೆಯನ್ನು ತರಲು ವಿಫಲವಾದ ಕಾರಣಕ್ಕಾಗಿ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. "ದೆಹಲಿ ಗ್ಯಾಸ್ ಚೇಂಬರ್" ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿದೆ.


ಡಿಕಾಪ್ರಿಯೊ ತಮ್ಮ ಪೋಸ್ಟ್ ಅಲ್ಲಿ ಈ ಕುರಿತು ಧನಿಯೆತ್ತಿದ ಕೆಲವೇ ಗಂಟೆಗಳ ನಂತರ, ಪ್ರಧಾನ ಮಂತ್ರಿಗಳ ಕಚೇರಿ ಈ ಸಮಸ್ಯೆಯನ್ನು ಪರಿಹರಿಸಲು ವಿಶೇಷ ಬೋರ್ಡ್ ಅನ್ನು ರಚಿಸಿತು ಮತ್ತು ಮುಂದಿನ ಎರಡು ವಾರಗಳಲ್ಲಿ ಈ ವಿಷಯದ ಬಗ್ಗೆ ವರದಿ ಮಾಡುವುದಾಗಿ ಹೇಳಿದೆ.

ನಟನ ಪೋಸ್ಟ್‌ ನಲ್ಲಿ,


ದೆಹಲಿಯ ಬೆಳೆ ತ್ಯಾಜ್ಯ ಸುಡುವ ಸಮಸ್ಯೆಯನ್ನು ಒಂದು ವಾರದೊಳಗೆ ಸರಿಪಡಿಸಲು ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳನ್ನು ಕೇಳಿದೆ. ವಿಷಕಾರಿ ವಾಯುಮಾಲಿನ್ಯವನ್ನು ಎದುರಿಸಲು ಹಸಿರು ನಿಧಿಯನ್ನು ಬಳಸಲಾಗುವುದು ಎಂದು ಕೇಂದ್ರವು ಒಪ್ಪಿಕೊಂಡಿತು.


"ಬೆಳೆ ಸುಡುವಿಕೆ ಇನ್ನು ಮುಂದೆ ಅಗತ್ಯವಿಲ್ಲದ ಕಾರಣ ತುರ್ತಾಗಿ ಉಪಕರಣಗಳನ್ನು ವಿತರಿಸುವಂತೆ ಭಾರತೀಯ ಪ್ರಧಾನಿ ಕೃಷಿ ಸಚಿವಾಲಯವನ್ನು ಕೇಳಿದರು. ಈ ಭರವಸೆಗಳ ಹೊರತಾಗಿಯೂ, ಗಾಳಿಯು ಇನ್ನೂ ಅಸುರಕ್ಷಿತವಾಗಿದೆ ಮತ್ತು ವಾಯುಮಾಲಿನ್ಯವು ಸುರಕ್ಷಿತ ಮಟ್ಟವನ್ನು ತಲುಪುವವರೆಗೆ ಕಾರ್ಯಕರ್ತರು ಹೊರಾಡುತ್ತಾರೆ."


ಚಳವಳಿಗಳ ಸಹಯೋಗದಿಂದ ಪ್ರತಿಭಟನೆಯನ್ನು ಆಯೋಜಿಸಲಾಯಿತು; @rexrebellionind etLetMeBreathe_In @FridaysForFutureIndia_ ಜೊತೆಗೆ ಇತರ ಕಾರ್ಯಕರ್ತರು.


ಭಾರತವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗಾಗಿ ಲಿಯೊನಾರ್ಡೊ ಡಿಕಾಪ್ರಿಯೊ ಸಾಮಾಜಿಕ ಮಾಧ್ಯಮಗಳಿಗೆ ಮೊರೆ ಹೋಗುವುದು ಇದೇ ಮೊದಲಲ್ಲ. ಹಿಂದಿನ ಪೋಸ್ಟ್ ನಲ್ಲಿ ಚೆನ್ನೈನಲ್ಲಿ ನೀರಿನ ಕೊರತೆಯ ಬಗ್ಗೆ ಮಾತನಾಡಿದ್ದರು. "ಮಳೆಯಿಂದ ಮಾತ್ರ ಚೆನ್ನೈ ಉಳಿಸಬಹುದು" ಎಂದು ಆಸ್ಕರ್ ವಿಜೇತರಾದ ಲಿಯೊನಾರ್ಡೊ ಡಿಕಾಪ್ರಿಯೊ ಅಭಿಪ್ರಾಯಪಟ್ಟಿದ್ದರು.