ವಿಧ್ಯುತ ಸಹಾಯವಿಲ್ಲದೆ ಪ್ರತಿದಿನ 500 ಲೀ ನೀರನ್ನು ಶುದ್ಧೀಕರಿಸುವ ಫಿಲ್ಟರ್

ಜಿತೇಂದ್ರ ಚೌಧರಿರವರ ನೀರಿನ ಫಿಲ್ಟರ್ ಶುದ್ಧಂ 7,000 ರೂಪಾಯಿಗಳಲ್ಲಿ ನಿರ್ಮಿಸಲಾಗಿದೆ. ಇದು ಪ್ರತಿದಿನ 500 ಲೀಟರ್ ಗಳಷ್ಟು ಹೊಲಸಾದ ನೀರನ್ನು ಕುಡಿಯಲು ಮತ್ತು ಅಡುಗೆಗೆ ಹೊರತುಪಡಿಸಿ ಎಲ್ಲ ಬಗೆಯ ಮನೆಯ ಕೆಲಸಗಳಿಗೆ ಪುನರ್ಬಳಸುವಂತೆ ಮಾಡಬಲ್ಲದು.

ವಿಧ್ಯುತ ಸಹಾಯವಿಲ್ಲದೆ ಪ್ರತಿದಿನ 500 ಲೀ ನೀರನ್ನು ಶುದ್ಧೀಕರಿಸುವ ಫಿಲ್ಟರ್

Thursday July 18, 2019,

2 min Read

ಸದ್ಯಕ್ಕಂತು ನೀರಿನ ಬಿಕ್ಕಟ್ಟಿಗೆ ಅಂತ್ಯವಂತು ಕಾಣಿಸುತ್ತಿಲ್ಲ. ಪರಿಸರವಾದಿಗಳು ಎಚ್ಚರಿಸುವುದೇನೆಂದರೆ ಒಣಗುತ್ತಿರುವ ಸರೋವರಗಳಿಂದಾಗಿ, ಕುಸಿಯುತ್ತಿರುವ ನೀರಿನ ಮಟ್ಟ ಹಾಗೂ ಮಳೆಯ ಕೊರತೆಯಿಂದಾಗಿ ಇಷ್ಟರಲ್ಲೇ ನೀರಿಗಾಗಿ ಕದನವಾಗಬಹುದು ಎಂದು. ಡೇ ಜಿರೊ ಅನ್ನು ಮೊದಲು ಕೆಪ್ ಟೌನ್ ನಲ್ಲಿ ಗುರುತಿಸಲಾಯಿತು, ಆ ದಿನ ನೀರಿನ ಬಳಕೆಯ ಬಗ್ಗೆ ಬೆಳಕು ಚೆಲ್ಲಲು ನಗರದ ಎಲ್ಲ ನಲ್ಲಿಗಳನ್ನು ಬಂದ್ ಮಾಡಲಾಗಿತ್ತು.


ಭಾರತದಲ್ಲೂ ಕೆಲವು ರಾಜ್ಯ ಸರಕಾರಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳು ಹೊಸದಾದ ಉಪಾಯಗಳಿಂದ ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.


ರಾಜಸ್ಥಾನ್ ಮೂಲದ 25 ವರ್ಷದ ಜಿತೇಂದ್ರ ಚೌಧರಿ ಇದಕ್ಕಾಗಿ ಶುದ್ಧಂ ಎನ್ನುವ ನೀರಿನ ಫಿಲ್ಟರ್ ಕಂಡುಹಿಡಿದಿದ್ದಾರೆ. ಇದು ಬಳಸಿದ ನೀರನ್ನು ಯಾವುದೇ ವಿದ್ಯುತ್ ನ ಸಹಾಯವಿಲ್ಲದೆ ಪುನರ್ಬಳಸಲು ಯೋಗ್ಯವಾದ ನೀರನ್ನಾಗಿ ಪರಿವರ್ತಿಸಬಲ್ಲದು. ಈ ಫಿಲ್ಟರ್ ನ ಬೆಲೆ 7,000 ರೂಪಾಯಿಯಾಗಿದ್ದು, ದಿನಕ್ಕೆ 500 ಲೀಟರ್ ಗಳಷ್ಟು ನೀರನ್ನು ಫಿಲ್ಟರ್ ಮಾಡಬಲ್ಲದು.


g

ಜಿತೇಂದ್ರ ಚೌಧರಿ (ಚಿತ್ರ:ಎಫರ್ಟ್ಸ್ ಫಾರ್ ಗುಡ್)

ದಿನ ನಿತ್ಯದ ನೀರಿನ ಬಳಕೆಯ ಒಂದು ಅಂದಾಜು ಮಾಡುವುದಾದರೆ, ಒಟ್ಟು ಬಳಕೆಯ ಶೇಕಡಾ 20% ಮಾತ್ರ ಕುಡಿಯಲು ಮತ್ತು ಆಡಿಗೆಗೆ ಬಳಕೆಯಾಗುತ್ತಿದೆ, ಉಳಿದಿರುವ 80% ನೀರು ಸ್ನಾನಕ್ಕೆ, ಸ್ವಚ್ಛತೆಗೆ, ಫ್ಲಶಿಂಗ್ ಮತ್ತು ಇತರ ಕೆಲಸಗಳಿಗೆ ಬಳಕೆಯಾಗುತ್ತದೆ.


ಜಿತೇಂದ್ರರವರು ಫಿಲ್ಟರ್ ನ ಬಗ್ಗೆ ಎಫರ್ಟ್ಸ ಫಾರ್ ಗುಡ್ ಗೆ ಮಾತನಾಡುತ್ತ,


“ಶುದ್ಧಂ ನೀರಿನ ಫಿಲ್ಟರ್ ಗಳು ಹೊಸ ಬಗೆಯ ಫಿಲ್ಟರ್ ಗಳಾಗಿದ್ದು, ಇದು ಪ್ರತಿದಿನ 500 ಲೀಟರ್ ಗಳಷ್ಟು ಬಳಕೆಯಾದ ನೀರನ್ನು ಅಡಿಗೆಗೆ ಮತ್ತು ಕುಡಿಯಲು ಬಿಟ್ಟು ಮನೆಯ ದಿನನಿತ್ಯದ ಕೆಲಸಗಳಿಗೆ ಪುನಃ ಬಳಸುವಂತೆ ಪರಿವರ್ತಿಸುತ್ತವೆ. ಈ ಒಂದು ಫಿಲ್ಟರ್ ನ ಬೆಲೆ ಕೇವಲ 7,000 ರೂಪಾಯಿಗಳಾಗಿದ್ದು, ಇದರ ನಿರ್ವಹಣೆಗೆ ಪ್ರತಿ ವರ್ಷ 540 ರೂಪಾಯಿ ಬೇಕಾಗುತ್ತದೆ.”


ಈ ಫಿಲ್ಟರ್ ಗುರುತ್ವಾಕರ್ಷಣೆಯ ತತ್ವದ ಮೇಲೆ ಕೆಲಸ ಮಾಡುತ್ತದೆ. ಶುದ್ಧೀಕರಿಸಿದ ನೀರನ್ನು ವಾಶ್ ರೂಮಗಳಲ್ಲಿ ಸರಣಿ ಫಿಲ್ಟರೆಶನ್ ವಿಧಾನದ ಮೂಲಕ ಮರುಬಳಸಲಾಗುತ್ತದೆ. ಮರುಬಳಕೆಯ ನೀರನ್ನು ಅತ್ಯಂತ ಕೆಳಗಡೆಯ ಒಂದು ಭಾಗದಿಂದ ಬಿಡುಗಡೆ ಮಾಡಲಾಗುತ್ತದೆ.


g

ಶುದ್ಧಂ ನೀರಿನ ಫಿಲ್ಟರ್ (ಚಿತ್ರ:ಎಫರ್ಟ್ಸ್ ಫಾರ್ ಗುಡ್)

ನೀರಿನ ಶುದ್ಧಿಕರಣ ವಿಧಾನದ ಬಗ್ಗೆ ಕೆಟ್ಟೊಗೆ ಮಾತನಾಡುತ್ತಾ ಹೀಗೆ ಹೇಳಿದರು,


“ಗ್ರಾನ್ಯುಲಾರ್ ಸಿವಿಂಗ್ ನ ಮೂಲಕ ನೀರನ್ನು ಕೇಲವೇ ನಿಮಿಷಗಳಲ್ಲಿ ಸ್ವಚ್ಚಗೊಳಿಸಲಾಗುತ್ತದೆ, ಇದನ್ನು ನಂತರ ಆಕ್ಟಿವ್ ಕಾರ್ಬನ್ ಅಲ್ಟ್ರಾಫಿಲ್ಟ್ರೇಶನ್ ಮಾಡಲಾಗುತ್ತದೆ. ಈ ಮಷಿನ್ ನಲ್ಲಿ ಆಂಟಿ ಚೋಕ್ ತಂತ್ರಜ್ಞಾನದ ಸಲಕರಣೆಗಳನ್ನು ಅಳವಡಿಸಲಾಗಿದ್ದು, ಇದು ನೀರು ಎಲ್ಲಿಯೂ ನಿಲ್ಲದೇ ಸರಾಗವಾಗಿ ಹರಿಯುವಂತೆ ಮತ್ತು ಗ್ರಾನ್ಯುಲ್ಸಗಳು ಶುದ್ದ ಫಿಲ್ಟರ್ ಮಾಡಿದ ನೀರನ್ನು ಹೊಲಸಾದ ನೀರಿನ ಜೊತೆ ಬೆರೆಯದಂತೆ ತಡೆಹಿಡಿಯುತ್ತದೆ.”


ಜಿತೇಂದ್ರರವರು 2017 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ ಮುಗಿಸಿದ್ದು, ಮಹಕಾಲ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲೊಜಿ (MIT) ಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕೆಲಸ ಮಾಡಿದ್ದಾರೆ. ಮುಂದೆ ಎಮ್ ಐ ಟಿ ಗ್ರೂಪ್ ಆಪ್ ಇನ್ಸ್ಟಿಟ್ಯೂಷನ್ ನಲ್ಲಿ ರಿಸರ್ಚ್ ಅಸಿಸ್ಟಂಟ್ ಆಗಿ ಕೆಲಸ ಮಾಡಿದರು. ಎಮ್ ಐ ಟಿ ಕಾಲೇಜ್ ಹಾಸ್ಟೆಲ್ ನಲ್ಲಿ ಇವರು ತಯಾರಿಸಿದ ಫಿಲ್ಟರ್ ನ್ನು ಅಳವಡಿಸಲಾಗಿದ್ದು, ಇದು ಪ್ರತಿದಿನ 500 ಲೀಟರ್ ಗಳಷ್ಟು ನೀರನ್ನು ಶುದ್ದಿಕರಿಸುತ್ತಿದೆ. 6 ತಿಂಗಳಿಗೊಮ್ಮೆ ಈ ಫಿಲ್ಟರ್ 90,000 ಲೀಟರ್ ನೀರನ್ನು ಶುದ್ಧೀಕರಣ ಮಾಡಿದ ನಂತರ ಇದರ ಗ್ರಾನ್ಯುಲ್ಸಗಳನ್ನು ಬದಲಾಯಿಸಬೇಕಾಗುತ್ತದೆ.


ಜಿತೇಂದ್ರರವರ ಈ ಕಾರ್ಯಕ್ಕೆ ಮಧ್ಯಪ್ರದೇಶ ಕೌನ್ಸಿಲ್ ಆಪ್ ಸೈನ್ಸ್ ಮತ್ತು ಟೆಕ್ನೋಲಜಿಯವರಿಂದ ಕಿರಿಯ ವಿಜ್ಞಾನಿ ಎಂಬ ಬಿರುದು ದೊರಕಿದೆ. ಇಲ್ಲಿಯವರೆಗೆ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ 4 ಪೇಪರ್ ಗಳನ್ನು ಪ್ರಕಟಿಸಿದ್ದಾರೆ. ಈಗ ಜಿತೇಂದ್ರರವರು ಫಿಲ್ಟರ್ ನ ಬೆಲೆ ಕಡಿಮೆಗೊಳಿಸಲು ಮತ್ತು ಬರ ಪ್ರದೇಶಗಳಿಗೆ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಅದರ ಆಕಾರ ಮತ್ತು ವಿನ್ಯಾಸಗಳ ಮೇಲೆ ಕೆಲಸ ಮಾಡುತ್ತಿದ್ದಾರೆ.