ಇಂಡೋ-ಪೆಸಿಫಿಕ್ ಸಾಗರದ ಶೀಘ್ರ ತಾಪಮಾನದ ಕಾರಣದಿಂದ ಉತ್ತರ ಭಾರತದಲ್ಲಿ ಕಡಿಮೆ ಮಳೆ

ವಿಶ್ವದ ಕೆಲವು ಭಾಗಗಳು ಭಾರೀ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದರೆ ಉತ್ತರ ಭಾರತ ಸೇರಿದಂತೆ ಇತರ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿದೆ. ಇದಕ್ಕೆ ಇಂಡೋ-ಪೆಸಿಫಿಕ್ ಸಾಗರದ ಶೀಘ್ರ ತಾಪಮಾನದ ಏರಿಕೆಯಿಂದಾಗಿರುವ ಅನಿರ್ದಿಷ್ಟ ಮಳೆ ಮಾದರಿಗಳೆ ಕಾರಣವಾಗಿರಬಹುದೆಂದು ಹೊಸ ಅಧ್ಯಯನವು ತಿಳಿಸಿದೆ.

2nd Dec 2019
  • +0
Share on
close
  • +0
Share on
close
Share on
close

ಸಾಂಕೇತಿಕ ಚಿತ್ರ


ಪುಣೆ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೊರಾಲಜಿ (ಐಐಟಿಎಂ) ಯ ರಾಕ್ಸಿ ಮ್ಯಾಥ್ಯೂ ಕೋಲ್ ನೇತೃತ್ವದ ಅಧ್ಯಯನವು, ಸಮುದ್ರದ ಉಷ್ಣತೆಯು ಹವಾಮಾನ ಏರಿಳಿತದ ಅತ್ಯಂತ ಪ್ರಬಲವಾದ ವಿಧಾನವನ್ನು ಬದಲಿಸಿದೆ ಎಂದು ಎಚ್ಚರಿಸಿದೆ, ಇದನ್ನು ಮ್ಯಾಡೆನ್ ಜೂಲಿಯನ್ ಆಸಿಲೇಷನ್ (ಎಂಜೆಒ) ಎಂದು ಕರೆಯಲಾಗುತ್ತದೆ. ಇದು ಉತ್ತರ ಭಾರತದಲ್ಲಿ ನವೆಂಬರ್ ಮತ್ತು ಏಪ್ರಿಲ್ ತಿಂಗಳ ನಡುವೆ ಮಳೆಯ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಅಧ್ಯಯನ ಹೇಳಿದೆ.


"ಇಂಡೋ-ಪೆಸಿಫಿಕ್ ಮಹಾಸಾಗರದ ಶೀಘ್ರ ತಾಪಮಾನ ಏರಿಕೆಯಿಂದಾಗಿ ಜಗತ್ತಿನಾದ್ಯಂತ ಮಳೆ ಬೀಳುವ ರೀತಿಯು ಬದಲಾಗುತ್ತಿದೆ" ಎಂದು ಅದು ಹೇಳಿದೆ, ಎಂಜೆಒ ನಡವಳಿಕೆಯ ಬದಲಾವಣೆಯಿಂದ ಉತ್ತರ ಆಸ್ಟ್ರೇಲಿಯಾ, ಪಶ್ಚಿಮ ಪೆಸಿಫಿಕ್, ಅಮೆಜಾನ್ ಜಲಾನಯನ ಪ್ರದೇಶ, ನೈಋತ್ಯ ಮತ್ತು ಆಗ್ನೇಯ ಆಫ್ರಿಕಾದಲ್ಲಿ ಮಳೆ ಹೆಚ್ಚಾಗಿಸಿದೆ ಎಂದು ವರದಿ ಹೇಳಿದೆ.


"ಇದೇ ಸಮಯದಲ್ಲಿ ಈ ಬದಲಾವಣೆಗಳು ಮಧ್ಯ ಪೆಸಿಫಿಕ್, ಯುನೈಟೆಡ್ ಸ್ಟೇಟ್ಸ್ನ ಪಶ್ಚಿಮ ಮತ್ತು ಪೂರ್ವ ಕರಾವಳಿ, ಉತ್ತರ ಭಾರತ, ಪೂರ್ವ ಆಫ್ರಿಕಾ ಮತ್ತು ಚೀನಾದಲ್ಲಿನ ಯಾಂಗ್ಟ್ಜಿ ಜಲಾನಯನ ಪ್ರದೇಶಗಳಲ್ಲಿ ಮಳೆಯು ಕಡಿಮೆಯಾಗಲು ಕಾರಣವಾಗಿದೆ” ಎಂದು ಅಧ್ಯಯನ ಹೇಳಿದೆ.


ಭಾರತದ ಭೂ ವಿಜ್ಞಾನ ಸಚಿವಾಲಯ ಮತ್ತು ಯುಎಸ್ ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (ಎನ್ಒಎಎ) ಸಂಸ್ಥೆಗಳ ನಡುವಿನ ಈ ಅಧ್ಯಯನವು ಇಂಡೋ-ಯುಎಸ್ ಸಹಯೋಗದ ಒಂದು ಭಾಗವಾಗಿದೆ. ಇದು ಯುಎಸ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನಿಂದ ಸಹಾಯವನ್ನು ಪಡೆದಿದೆ.


ವಿಜ್ಞಾನಿಗಳಾದ ಪಾಣಿನಿ ದಾಸ್‌ಗುಪ್ತಾ (ಐಐಟಿಎಂ), ಮೈಕೆಲ್ ಮ್ಯಾಕ್‌ಫ್ಯಾಡೆನ್ ಮತ್ತು ಚಿದಾಂಗ್ ಜಾಂಗ್ (ಎನ್‌ಒಎಎ), ಡೆಹಿಯುನ್ ಕಿಮ್ (ವಾಷಿಂಗ್ಟನ್ ವಿಶ್ವವಿದ್ಯಾಲಯ) ಮತ್ತು ತಮಾಕಿ ಸುಮಾತ್ಸು (ಟೋಕಿಯೊ ವಿಶ್ವವಿದ್ಯಾಲಯ) ಇವರ ಸಹಯೋಗದೊಂದಿಗೆ ಈ ಸಂಶೋಧನೆಯನ್ನು ನಡೆಸಲಾಗಿದೆ.


ಉಷ್ಣವಲಯದ ಮೇಲೆ ಪೂರ್ವಕ್ಕೆ ಚಲಿಸುವ ಮಳೆ ಮೋಡಗಳ ತಂಡದಿಂದ ಎಂಜೆಒ ರೂಪುಗೊಳ್ಳುತ್ತದೆ. ಎಂಜೆಒ ಉಷ್ಣವಲಯದ ಚಂಡಮಾರುತಗಳು, ಮಾನ್ಸೂನ್ ಮತ್ತು ಎಲ್ ನಿ ಒ ಚಕ್ರವನ್ನು ನಿಯಂತ್ರಿಸುತ್ತದೆ ಮತ್ತು ಸಾಂದರ್ಭಿಕವಾಗಿ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್ ಮತ್ತು ಅಮೆರಿಕಾದಲ್ಲಿ ತೀವ್ರ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳಿದೆ.


"ಎಂಜೆಒ ಉಷ್ಣವಲಯದ ಸಾಗರಗಳ ಮೇಲೆ 12,000-20,000 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ, ಮುಖ್ಯವಾಗಿ ಇಂಡೋ-ಪೆಸಿಫಿಕ್ ಬಿಸಿ ಪೂಲ್ ಮೇಲೆ ಪ್ರಯಾಣಿಸುತ್ತದೆ, ಈ ಸಾಗರ ತಾಪಮಾನವು ಸಾಮಾನ್ಯವಾಗಿ 28 ಸೇಲ್ಸಿಯಸ್ ಗಿಂತಲೂ ಬೆಚ್ಚಗಿರುತ್ತದೆ. ಈ ಇಂಡೋ-ಪೆಸಿಫಿಕ್ ಬಿಸಿ ಪೂಲ್ ಇತ್ತೀಚಿನ ದಶಕಗಳಲ್ಲಿ ವೇಗವಾಗಿ ಬೆಚ್ಚಗಾಗುತ್ತಿದೇ. ಇದು ಹೆಚ್ಚುತ್ತಿರುವ ಇಂಗಾಲದ ಹೊರಸೂಸುವಿಕೆಯ ಪರಿಣಾಮವಾಗಿದೆ.”


"ಈ ಬಿಸಿ ಪೂಲ್ ತನ್ನ ಗಾತ್ರದ ಎರಡರಷ್ಟು ಹೆಚ್ಚಿದೆ ಅಂದರೆ ಈ ಸಾಗರವು 1900 ರಿಂದ 1980 ರಲ್ಲಿ 2.2 107 ಚದರ ಕಿ.ಮೀ ವಿಸ್ತೀರ್ಣದಿಂದ 1981 ರಿಂದ 2018 ರ ಅವಧಿಯಲ್ಲಿ 4 107 ಚದರ ಕಿ.ಮೀ ವಿಸ್ತೀರ್ಣಕ್ಕೆ ವಿಸ್ತರಿಸಿತು. ವಿಸ್ತರಣೆಯ ದರವು ಪ್ರತಿವರ್ಷಕ್ಕೆ 4, 105 ಚದರ ಕಿ.ಮೀ ಎಂದು ವರದಿ ಹೇಳಿದೆ. ಈ ಗಾತ್ರವು ಕ್ಯಾಲಿಫೋರ್ನಿಯಾ ಪ್ರದೇಶದ ಗಾತ್ರಕ್ಕೆ ಸರಿಸಮನಾಗಿದೆ," ಎಂದು ಐಐಟಿಎಂ ಪುಣೆಯ ಅಧ್ಯಯನವು ಹೇಳುತ್ತದೆ.‌


ಇಡೀ ಇಂಡೋ-ಪೆಸಿಫಿಕ್ ಬೆಚ್ಚಗಾಗಿದ್ದರೂ, ಬೆಚ್ಚಗಿನ ನೀರು ಪಶ್ಚಿಮ ಪೆಸಿಫಿಕ್ ಮೇಲೆ ಇದ್ದು, ತಾಪಮಾನದ ವ್ಯತಿರಿಕ್ತತೆಯನ್ನು ಸೃಷ್ಟಿಸುತ್ತದೆ, ಇದು ಹಿಂದೂ ಮಹಾಸಾಗರದಿಂದ ಪಶ್ಚಿಮ ಪೆಸಿಫಿಕ್ ಕಡಲ ಖಂಡಕ್ಕೆ ತೇವಾಂಶವನ್ನು ತರುತ್ತದೆ, ಅಲ್ಲಿ ಮೋಡಗಳ ರಚನೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ, ಎಂಜೆಒ ಜೀವನಚಕ್ರ ಬದಲಾಗಿದೆ ಎಂದು ಕೋಲ್ ಹೇಳಿದರು.


ಹವಾಮಾನ ಮಾದರಿ ಸಿಮ್ಯುಲೇಶನ್‌ಗಳು ಇಂಡೋ-ಪೆಸಿಫಿಕ್ ಮಹಾಸಾಗರದ ನಿರಂತರ ತಾಪಮಾನವು ಹೆಚ್ಚುವ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ, ಇದು ಮುಂದಿನ ದಿನಗಳಲ್ಲಿ ಮಳೆಯಲ್ಲಿ ಈ ಬದಲಾವಣೆಗಳನ್ನು ಇನ್ನಷ್ಟು ಹೆಚ್ಚಿಸಬಹುದು" ಎಂದು ಕೋಲ್ ಹೇಳಿದರು, "ಇದರರ್ಥ ನಾವು ನಮ್ಮ ಸಾಗರ, ಸಮುದ್ರಗಳ ಮೇಲೆ ನಿಗಾವಹಿಸಬೇಕು. ಈ ಬದಲಾವಣೆಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಿ ಮತ್ತು ತಾಪಮಾನ ಏರಿಕೆಯ ಸವಾಲುಗಳನ್ನು ಕೌಶಲ್ಯದಿಂದ ಎದುರಿಸಲು ನಮ್ಮ ಹವಾಮಾನ ಮಾದರಿಗಳನ್ನು ನವೀಕರಿಸಬೇಕಾಗಿದೆ.”


  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India