ಲಕ್ನೋ ನಿವಾಸಿ ನಿತೀಶ್ ಅಗರ್ವಾಲ್ ಶಾಲೆ ಬಿಟ್ಟು ಚಿಕ್ಕ ವಯಸ್ಸಿನಲ್ಲಿ ಚಿಕನ್ ಕರಿ ಕಲಾ ಉದ್ಯಮದಿಂದ ಮೂರು ಕೋಟಿ ಗಳಿಸಿದ ಕಥೆ

ಮನೆಯಲ್ಲಿ ಹಣಕಾಸಿನ ತೊಂದರೆಯಿಂದಾಗಿ ಶಾಲೆಯಿಂದ ದೂರ ಉಳಿದ ನಿತೀಶ್ ಅಗರ್ವಾಲ್ ಕೇವಲ 19 ವರ್ಷದವರಾಗಿದ್ದಾಗ ತ್ರಿವೇಣಿ ಚಿಕಾನ್ ಆರ್ಟ್ಸ್ ಪ್ರಾರಂಭಿಸಿದರು.

ಲಕ್ನೋ ನಿವಾಸಿ ನಿತೀಶ್ ಅಗರ್ವಾಲ್ ಶಾಲೆ ಬಿಟ್ಟು ಚಿಕ್ಕ ವಯಸ್ಸಿನಲ್ಲಿ ಚಿಕನ್ ಕರಿ ಕಲಾ ಉದ್ಯಮದಿಂದ ಮೂರು ಕೋಟಿ ಗಳಿಸಿದ ಕಥೆ

Wednesday October 23, 2019,

4 min Read

ವಿಶ್ವಪ್ರಸಿದ್ಧ ಚಿಕನ್ ಕಸೂತಿಗೆ ಹೆಸರುವಾಸಿಯಾದ ಲಕ್ನೋ, 17 ನೇ ಶತಮಾನದ ಮೊಘಲರ ಕಾಲದ ಇತಿಹಾಸ ಹೊಂದಿದೆ. ಚಿಕನ್ ಕಸೂತಿ ಪ್ರಾಚೀನ ಕರಕುಶಲ-ರೂಪದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅನೇಕ ವ್ಯವಹಾರಗಳಲ್ಲಿ ಒಂದು ಎಂದರೆ ಆಶ್ಚರ್ಯವೇನಿಲ್ಲ.


ಲಕ್ನೋ ದ ಮಧ್ಯಮ-ವರ್ಗದ ಕುಟುಂಬದಿಂದ ಬಂದ ನಿತೀಶ್ ಅವರು 19 ವರ್ಷ ವಯಸ್ಸಿನವರಾಗಿದ್ದಾಗ ಚಿಕನ್ ಕರಿ ವ್ಯವಹಾರ ಪ್ರಾರಂಭಿಸಲು ನಿರ್ಧರಿಸಿದರು. ಅವರು ಪ್ರೌಢ ಶಾಲಾ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುವಲ್ಲಿ ಮಾತ್ರ ಶಕ್ತರಾದರು ಮತ್ತು ಮನೆಯಲ್ಲಿ ಹಣಕಾಸಿನ ತೊಂದರೆ ಎದುರಿಸುತ್ತಿದ್ದರಿಂದ ಅವರು ವಿಧ್ಯಾಭ್ಯಾಸವನ್ನು ನಿಲ್ಲಿಸಿದರು ಎಂದು ತಿಳಿಸಿದರು.


ನಿತೀಶ್ ಅಗರ್ವಾಲ್


ಜೀವನೋಪಾಯಕ್ಕಾಗಿ, ನಿತೇಶ್ 2011 ರಲ್ಲಿ ಲಖನೌದಲ್ಲಿ ತ್ರಿವೇಣಿ ಚಿಕನ್ ಆರ್ಟ್ಸ್ ಅನ್ನು ಸ್ಥಾಪಿಸಿದರು. 400 ವರ್ಷದ ಲಕ್ನೋಯಿ ಚಿಕನ್ ಆರ್ಟ್ಸ್ ಪ್ರಕಾರವನ್ನು ಜಗತ್ತಿನಾದ್ಯಂತ ಅತ್ಯುತ್ತಮ ಕಸೂತಿ ಉತ್ಪನ್ನಗಳ ತಜ್ಞರ ಹತ್ತಿರ ಕೊಂಡೊಯ್ಯುವುದು ತಮ್ಮ ಉದ್ದೇಶ ಎಂದು 32 ವರ್ಷದ ನಿತೇಶ್ ಹೇಳುತ್ತಾರೆ.


ಕೈ ಕಸೂತಿ ಮಾಡಿದ ಚಿಕನ್ ಕರಿ ಕುರ್ತಾಗಳು, ಟ್ಯೂನಿಕ್ಸ್, ಸೀರೆಗಳು, ಪುರುಷರ ಕುರ್ತಾಗಳು, ಮಹಿಳೆಯರ ಸೂಟ್‌ಗಳು, ಲೆಹೆಂಗಾಗಳು ಮತ್ತು ಇತರ ಕರಕುಶಲ ವಸ್ತುಗಳು ಮತ್ತು ಉಡುಪುಗಳ ತಯಾರಿಕೆ ಮತ್ತು ರಫ್ತು ಮಾಡುವಲ್ಲಿ ಕಂಪನಿಯು ವ್ಯವಹರಿಸುತ್ತದೆ.


13,000 ರೂ. ಗಳ ಆರಂಭಿಕ ಹೂಡಿಕೆಯೊಂದಿಗೆ ಪ್ರಾರಂಭಿಸಿದ ಈ ವ್ಯವಹಾರ ಈಗ ವಾರ್ಷಿಕ ಸುಮಾರು 3 ಕೋಟಿ ರೂಗಳಿಗೆ ಬೆಲೆ ಬಾಳುವ ದೊಡ್ಡ ಕಂಪನಿಯಾಗಿದೆ.


ತ್ರಿವೇಣಿ ಚಿಕನ್ ಆರ್ಟ್ಸ್ ಪ್ರಸ್ತುತ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತದೆ. ಇದು ತನ್ನ ಉತ್ಪನ್ನಗಳನ್ನು ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುರೋಪ್, ಸಿಂಗಾಪುರ್, ಇಂಡೋನೇಷ್ಯಾ, ಬರ್ಮಾ, ಯುಎಸ್, ಯುಕೆ ಮತ್ತು ಇತರ ದೇಶಗಳಿಗೆ ರಫ್ತು ಮಾಡುತ್ತದೆ.

ನಿತೇಶ್ ರವರ ಆರಂಭದ ದಿನಗಳು

ನಿತೇಶ್ 2005 ರಲ್ಲಿ ಕೇವಲ 19 ವರ್ಷ ವಯಸ್ಸಿನವರಾಗಿದ್ದಾಗ ಅನೌಪಚಾರಿಕವಾಗಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ್ದರು ಮತ್ತು ಲಕ್ನೋದಲ್ಲಿ ಕೆಲವು ಸ್ಥಳೀಯ ರಫ್ತುದಾರರಿಗೆ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದರು. ಮಾರುಕಟ್ಟೆಯಲ್ಲಿರುವ ಪ್ರತಿಯೊಬ್ಬರೂ ಅವರನ್ನು ತಿಳಿದಿದ್ದರಿಂದ, ಮಾರಾಟವಾಗದ ಸ್ಟಾಕ್ ಅನ್ನು ಸಹ ಕೊಂಡುಕೊಂಡರು. ನಿತೇಶ್ ಈ ಸ್ಟಾಕ್ ಅನ್ನು ಮುಂಬೈ ಮತ್ತು ಇತರ ನಗರಗಳಲ್ಲಿನ ವಿದೇಶಿ ಚಿಕನ್ ರಫ್ತುದಾರರಿಗೆ ಮತ್ತು ಅಂಗಡಿಗಳಿಗೆ ಮಾರಾಟ ಮಾಡಿದರು.


ಸ್ವಲ್ಪ ಅನುಭವವನ್ನು ಮತ್ತು ಬಂಡವಾಳವನ್ನು ಗಳಿಸಿದ ನಂತರ, ಅವರು ಡಿಸಿಎಚ್ ಲಕ್ನೋದಲ್ಲಿ ನೋಂದಾಯಿಸಿಕೊಂಡರು, ಅಲ್ಲಿ ಅವರು ರಫ್ತು ವ್ಯವಹಾರದ ಬಗ್ಗೆ ಜ್ಞಾನವನ್ನು ಪಡೆದರು.


ಸಿಂಗಾಪುರದಲ್ಲಿ ನಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶವೂ ಸಿಕ್ಕಿತು, ಅಲ್ಲಿ ಅವರು ಜನರನ್ನು ಭೇಟಿಯಾಗಿ ಮತ್ತು ಸಂಪರ್ಕಗಳನ್ನು ಪಡೆದುಕೊಂಡರು. ಲಖನೌದಲ್ಲಿನ ರಫ್ತು ಪ್ರಚಾರ ಬ್ಯೂರೋ ಜಾಗತಿಕವಾಗಿ ವ್ಯವಹಾರವನ್ನು ಉತ್ತೇಜಿಸುವ ಬಗ್ಗೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸುವಲ್ಲಿ ಜ್ಞಾನವನ್ನು ನೀಡಲು ಸಹಕಾರಿಯಾಗಿದೆ ಎಂದು ಅವರು ಹೇಳುತ್ತಾರೆ.


"ಇಂದು, 15 ಜನರ ತಂಡ ನಮ್ಮೊಂದಿಗೆ ನೇರವಾಗಿ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ನನ್ನ ಕುಟುಂಬದ ನಾಲ್ಕು ಸದಸ್ಯರೂ ಸೇರಿದ್ದಾರೆ."


ಇದಲ್ಲದೆ, ಸುಮಾರು 200 ಮಹಿಳೆಯರು ಮತ್ತು ಪುರುಷರ ತಂಡ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಈ ಕುಶಲಕರ್ಮಿಗಳು ಕೈಯಿಂದ ಕಸೂತಿ ಕೆಲಸ ಮಾಡುತ್ತಾರೆ, ಕೈಯಿಂದ ಮಾಡಿದ ಕಸೂತಿಗಳನ್ನು ಹೊಲಿಯುತ್ತಾರೆ, ಹೊಲಿಗೆ ಗುಂಡಿಗಳು, ಅಪ್ಲಿಕ್ ಕೆಲಸ ಮತ್ತು ಕತಿಯಾ-ಜಾಲಿ ಎಂಬ ಕೆಲಸ ಮಾಡುತ್ತಾರೆ ಮತ್ತು ವಿವಿಧ ರೀತಿಯ ಕಸೂತಿ ಕೆಲಸಗಳಲ್ಲಿ ಪರಿಣತಿ ಹೊಂದಿದ್ದಾರೆ.


ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳನ್ನು ದೊಡ್ಡ ಕೈಗಾರಿಕೆಗಳು ತಲುಪಿಲ್ಲ. ನಮ್ಮೊಂದಿಗೆ ಕೆಲಸ ಮಾಡುವ ಮಹಿಳೆಯರು ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಜೀವನೋಪಾಯವನ್ನು ಮಾಡುತ್ತಿದ್ದಾರೆ. ಅವರು ಸ್ವಾವಲಂಬಿಗಳಾಗಲು ಇದು ಒಂದು ಸಣ್ಣ ಹೆಜ್ಜೆಯಾಗಿದೆ” ಎಂದು ನಿತೇಶ್ ಹೇಳುತ್ತಾರೆ.


ಅವರ ಉತ್ಪನ್ನಗಳ ವಿಶೇಷತೆಯ ಬಗ್ಗೆ ಮಾತನಾಡುತ್ತಾ, “ನಮ್ಮ ಉತ್ಪನ್ನಗಳು ವಿಶಿಷ್ಟವಾಗಿವೆ ಏಕೆಂದರೆ ಅವುಗಳು ಪ್ರಕೃತಿಯಲ್ಲಿ ವಿಶ್ವಾಸಾರ್ಹವಾಗಿವೆ ಮತ್ತು ಸಂಪೂರ್ಣವಾಗಿ ಕರಕುಶಲವಾಗಿವೆ ಮತ್ತು ಲಕ್ನೋದಲ್ಲಿ ತಯಾರಿಸಲ್ಪಟ್ಟಿವೆ. ನಾವು ಅತ್ಯಂತ ಸೂಕ್ಷ್ಮವಾದ ಮತ್ತು ಅಂದವಾಗಿ ಮಾಡಿದ ಕಸೂತಿಯನ್ನು ತಯಾರಿಸುತ್ತೇವೆ ಎಂದು ತಿಳಿಸಿದರು.

ಪ್ರಮುಖ ಅಡಚಣೆಗಳು

ಚಿಕನ್ ಕರಿ ಕೆಲಸವು ಅತ್ಯಂತ ದೀರ್ಘ ಮತ್ತು ಬೇಸರದ ಪ್ರಕ್ರಿಯೆಯಾಗಿದ್ದು, ಇದಕ್ಕೆ ಸಾಕಷ್ಟು ತಾಳ್ಮೆ ಬೇಕು. ನಿತೇಶ್ ಅವರ ಪ್ರಕಾರ, ಬ್ರ್ಯಾಂಡ್ ಅಂಗಡಿಗಳಲ್ಲಿ ಲಭ್ಯವಿರುವ ರೆಡಿಮೇಡ್ ಉಡುಪುಗಳಿಗೆ ಹೋಲಿಸಿದರೆ ಅವರ ಉತ್ಪನ್ನಗಳು ನಿರೀಕ್ಷಿತ ಬೆಲೆಯನ್ನು ಪಡೆಯುವುದಿಲ್ಲ.


ಸ್ಥಳೀಯ ಕುಶಲಕರ್ಮಿಗಳ ಪರವಾಗಿ ಉತ್ಪನ್ನಗಳನ್ನು ಜಾಹೀರಾತು ಮಾಡಲು ಸರ್ಕಾರ ಸಹಾಯ ಮಾಡಿದರೆ, ಚಿಕನ್ ಕಸೂತಿ ಪ್ರಕ್ರಿಯೆಯಲ್ಲಿ ತೊಡಗಿರುವ ಕಷ್ಟಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು. ಇದು ಹಳ್ಳಿಗಳಲ್ಲಿ ಮಹಿಳಾ ಕುಶಲಕರ್ಮಿಗಳಿಗೆ ನೀಡಲಾಗುವ ವೇತನವನ್ನು ಸುಧಾರಿಸುತ್ತದೆ.


ನಿತೇಶ್ ಅವರ ಪ್ರಕಾರ, ನೋಟು ಅಮಾನ್ಯಿಕರಣದಿಂದ ದೇಶದ ಅನೇಕ ಮಾರುಕಟ್ಟೆಗಳು ಸ್ಥಗಿತಗೊಂಡವು. ಇದರಿಂದ ಅವರ ರಫ್ತು ವ್ಯವಹಾರದ ಮೇಲೂ ಪರಿಣಾಮ ಬೀರಿದೆ ಮತ್ತು ಸೂರತ್‌ನ ಪ್ರಮುಖ ರಫ್ತು ಕೇಂದ್ರವು ಎರಡು ತಿಂಗಳಿಗಿಂತ ಹೆಚ್ಚು ಕಾಲ ಸಕ್ರಿಯವಾಗಿರಲಿಲ್ಲ. ಈ ಕಾರಣದಿಂದಾಗಿ, ಬೇಡಿಕೆ ಕಡಿಮೆಯಾಯಿತು ಮತ್ತು ಆ ವರ್ಷದ ದೀಪಾವಳಿ ಮತ್ತು ಹೊಸ ವರ್ಷದ ಸಮಯದಲ್ಲಿ ವಿದೇಶಿ ಖರೀದಿದಾರರು ಭಾರತಕ್ಕೆ ಭೇಟಿ ನೀಡಲಿಲ್ಲ.


ನಿತೇಶ್ ಅವರ ಕಾರ್ಯಾಗಾರದಲ್ಲಿ ಮಹಿಳಾ ಕಸೂತಿ ಕೆಲಸಗಾರರು


ಹೊಸ ಜಿ ಎಸ್‌ ಟಿ ನಿಯಮ ಜಾರಿಯಾಗಿದ್ದು ಸಹ ಕರಕುಶಲ ಮಾರುಕಟ್ಟೆಗಳ ಮೇಲೆ ದೊಡ್ಡ ಪರಿಣಾಮ ಬೀರಿತು, ಏಕೆಂದರೆ ಉಡುಪುಗಳ ಬೆಲೆಗಳು ಶೇಕಡಾ 20 ರಷ್ಟು ಹೆಚ್ಚಾಗಿದೆ ಮತ್ತು ಹೆಚ್ಚು ದುಬಾರಿಯಾಗಿದೆ. ಚಿಕನ್ ಕೆಲಸದ ವ್ಯವಹಾರಕ್ಕೂ ಸರ್ಕಾರ ತೆರಿಗೆ ವಿಧಿಸಿತು ಎಂದು ನಿತೇಶ್ ಹೇಳಿದರು.


"ಚೀನಾದಿಂದ ಭಾರಿ ಸ್ಪರ್ಧೆ ಇರುವುದರಿಂದ ಮಾರುಕಟ್ಟೆಯಲ್ಲಿ ಉಳಿಯುವುದು ನಮಗೆ ಕಷ್ಟವಾಗುತ್ತಿದೆ".


ಅವಧಿ ರಾಜ ಮನೆತನದ ಸಂಸ್ಕೃತಿಯ ಪರಂಪರೆಯಾದ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಅಡಿಯಲ್ಲಿ ಬರುವ ಚಿಕನ್ ಕೆಲಸದ ಮೇಲಿನ ತೆರಿಗೆಯನ್ನು ತೆಗೆದುಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದರು.


ಸರ್ಕಾರವು ರಫ್ತುದಾರರಿಗೆ ತ್ವರಿತ ಜಿ ಎಸ್‌ ಟಿ ರಿಟರ್ನ್ ಅನ್ನು ಮರುಪಾವತಿಸಬೇಕಾಗಿದೆ ಅಥವಾ ರಫ್ತುದಾರರಿಗೆ ಬಿಲ್ ಅನ್ನು ಯಾವುದೇ ಜಿ ಎಸ್‌ ಟಿ ಇಲ್ಲದೆ ನೀಡಬೇಕು. ಹೊಸ ಕಾರ್ಖಾನೆಗಳನ್ನು ವಿಸ್ತರಿಸಲು ಮತ್ತು ತೆರೆಯಲು ಸರ್ಕಾರವು ನಮಗೆ ಸಾಕಷ್ಟು ಸ್ಥಳವನ್ನು ಒದಗಿಸಬೇಕು. ಕಡಿಮೆ ಗುಣಮಟ್ಟದ ಮತ್ತು ನಕಲಿ ಚಿಕನ್ ಉತ್ಪನ್ನಗಳ ಸರಬರಾಜನ್ನು ತಡೆಯಲು ನಗರದಲ್ಲಿ ಸರ್ಕಾರಿ ಮಾನ್ಯತೆ ಪಡೆದ ಗುಣಮಟ್ಟದ ನಿಯಂತ್ರಣ ವಿಭಾಗ ಇರಬೇಕು,” ಎಂದು ಅವರು ಹೇಳುತ್ತಾರೆ.

ಮುಂದಿನ ಯೋಜನೆಗಳು

ನಿತೇಶ್ ತಮ್ಮ ಉತ್ಪನ್ನಗಳನ್ನು 15 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲು ಯೋಜಿಸಿದ್ದಾರೆ ಮತ್ತು ಮುಂಬರುವ ವರ್ಷಗಳಲ್ಲಿ ತ್ರಿವೇಣಿ ಚಿಕನ್ ಅನ್ನು ಅಂತರರಾಷ್ಟ್ರೀಯ ಬ್ರ್ಯಾಂಡ್ ಮಾಡಲು ಬಯಸುತ್ತಾರೆ. "ನಾವು ವೈವಿಧ್ಯಮಯ ಮತ್ತು ವಿಭಿನ್ನವಾದದ್ದನ್ನು ರಚಿಸಲು ಹೊಸ ಮತ್ತು ನವೀನ ಆಲೋಚನೆಗಳನ್ನು ಎದುರು ನೋಡುತ್ತಿದ್ದೇವೆ ಮತ್ತು ನಮಗೆ ಸಹಾಯ ಮಾಡಲು ಉತ್ಸಾಹ ಮತ್ತು ಸೃಜನಶೀಲ ಜನರನ್ನು ಹುಡುಕುತ್ತಿದ್ದೇವೆ" ಎಂದು ತಿಳಿಸಿದರು.


ಈ ಕ್ಷೇತ್ರದಲ್ಲಿ ಹೊಸ ಉದ್ಯಮಿಗಳಿಗೆ ಅವರು ನೀಡಲು ಬಯಸುವ ಏಕೈಕ ಸಲಹೆಯೆಂದರೆ, ಪ್ರಾಮಾಣಿಕವಾಗಿರಬೇಕು ಮತ್ತು ತಮ್ಮ ಮೇಲೆ ತಮಗೆ ನ೦ಬಿಕೆಯಿರಬೇಕು, ವ್ಯವಹಾರದಲ್ಲಿ ತಮ್ಮ ತಂಡದ ಕೆಲಸವನ್ನು ಅನುಮಾನಿಸಬಾರದು.