7.5 ಕೋಟಿ ₹ ಜಾಗತಿಕ ಶಿಕ್ಷಕ ಪ್ರಶಸ್ತಿ ಗೆದ್ದ ಮಹಾರಾಷ್ಟ್ರದ ರಣಜಿತ್‌ಸಿನ್ಹ್‌ ದಿಸಾಲೆ

140 ದೇಶಗಳ 12,000 ಸ್ಪರ್ಧಿಗಳ ನಡುವೆ ಸೊಲ್ಹಾಪುರದ ರಣಜಿತ್‌ಸಿನ್ಹ್‌ ದಿಸಾಲೆ ಅವರನ್ನು ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂನಲ್ಲಿ ನಡೆದ ವರ್ಚುಅಲ್‌ ಸಭೆಯೊಂದರಲ್ಲಿ ಜಾಗತಿಕ ಶಿಕ್ಷಕ ಪ್ರಶಸ್ತಿಯ ವಿಜೇತರೆಂದು ಘೋಷಿಸಲಾಗಿದೆ.

7.5 ಕೋಟಿ ₹ ಜಾಗತಿಕ ಶಿಕ್ಷಕ ಪ್ರಶಸ್ತಿ ಗೆದ್ದ ಮಹಾರಾಷ್ಟ್ರದ ರಣಜಿತ್‌ಸಿನ್ಹ್‌ ದಿಸಾಲೆ

Friday December 04, 2020,

2 min Read

ಯುನೇಸ್ಕೋದ ಸಹಭಾಗಿತ್ವದಲ್ಲಿ ಜಾಗತಿಕ ಶಿಕ್ಷಕ ಪ್ರಶಸ್ತಿ 2020ಅನ್ನು ಗೆದ್ದು ಸೊಲ್ಹಾಪುರದ ರಣಜಿತ್‌ಸಿನ್ಹ್‌ ದಿಸಾಲೆ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾರೆ.


ಕಳೆದ ಆರು ವರ್ಷಗಳಿಂದ ವರ್ಕಿ ಫೌಂಡೇಶನ್‌ ನೀಡುತ್ತಿರುವ 7.5 ಕೋಟಿ ರೂಪಾಯಿಯ ಪ್ರಶಸ್ತಿ ಅತಿ ದೊಡ್ಡ ಪ್ರಶಸ್ತಿಯಾಗಿದೆ. ಭಾರತೀಯರಾದ ಸನ್ನಿ ವರ್ಕಿಯವರು 2014 ರಲ್ಲಿ ಸ್ಥಾಪಿಸಿದ ಜಾಗತಿಕ ಶಿಕ್ಷಕ ಪ್ರಶಸ್ತಿ ಪ್ರತಿ ವರ್ಷ ಸಮಾಜದಲ್ಲಿ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸುತ್ತದೆ.


ಸೊಲ್ಹಾಪುರದ ಪರಿತಾವಾಡಿಯ ಜಿಲ್ಲಾ ಪರಿಷದ್‌ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ಜೀವನದಲ್ಲಿ ಬದಲಾವಣೆ ತಂದಿದ್ದಕ್ಕಾಗಿ 32 ರ ಹರೆಯದ ಪ್ರಾಥಮಿಕ ಶಾಲಾ ಶಿಕ್ಷಕ ರಣಜಿತ್‌ಸಿನ್ಹ್‌ ದಿಸಾಲೆ ಅವರನ್ನು ಪ್ರಶಸ್ತಿಗೆ ನೀಡಲಾಗಿದೆ.

ರಣಜಿತ್‌ಸಿನ್ಹ್‌ ದಿಸಾಲೆ


ಪ್ರಶಸ್ತಿ ಗೆದ್ದ ಬಳಿಕ ಮಾತನಾಡುತ್ತಾ ರಣಜಿತ್‌ಸಿನ್ಹ್‌, ಗೆದ್ದ ಪ್ರಶಸ್ತಿ ಹಣವನ್ನು ಅಂತಿಮ ಸುತ್ತಿನಲ್ಲಿದ್ದ 9 ಸ್ಪರ್ಧಿಗಳ ನಡುವೆ ಹಂಚಿಕೊಳ್ಳುತ್ತೇನೆ ಎಂದರು. ಹಾಗಾಗಿ ಅಂತಿಮ ಸುತ್ತಿನ 9 ಸ್ಪರ್ಧಿಗಳಿಗೆ ಒಬ್ಬೊಬ್ಬರಿಗೆ 4 ಲಕ್ಷ ರೂ ಲಭಿಸಲಿದೆ ಮತ್ತು ಪ್ರಶಸ್ತಿ ಹಣವನ್ನು ಹಂಚಿಕೊಳ್ಳುತ್ತಿರುವವರಲ್ಲಿ ರಣಜಿತ್‌ಸಿನ್ಹ್‌ ದಿಸಾಲೆಯವರೇ ಮೊದಲಿಗರು.


“ಹಲವು ವಿಧಗಳಲ್ಲಿ ಕೋವಿಡ್‌-19 ಸಾಂಕ್ರಾಮಿಕವು ಶಿಕ್ಷಣ ಕ್ಷೇತ್ರವನ್ನು ಮತ್ತದು ಸೇವೆ ಮಾಡುವ ಸಮುದಾಯಗಳನ್ನು ಭಾದಿಸಿದೆ. ಆದರೆ ಇಂತಹ ಕಷ್ಟ ಕಾಲದಲ್ಲಿ ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂದು ಹಲವು ರೀತಿಯಲ್ಲಿ ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ.”


ಬಳಪದಿಂದಲೆ ಹಲವು ಸವಾಲುಗಳನ್ನು ಎದುರಿಸುತ್ತ ಮಕ್ಕಳ ಜೀವನದಲ್ಲಿ ಬದಲಾವಣೆ ತರುತ್ತಿರುವ ಶಿಕ್ಷಕರು ನಿಜವಾದ ಬದಲಾವಣೆಯ ಹರಿಕಾರರು, ಅವರು ಕೊಡುವುದು ಮತ್ತು ಹಂಚಿಕೊಳ್ಳುವುದರ ಮೇಲೆ ನಂಬಿಕೆ ಇಡುತ್ತಾರೆ ಎಂದು ರಣಜಿತ್‌ಸಿನ್ಹ್‌ ದಿಸಾಲೆ ವರ್ಚುವಲ್‌ ಸಮಾರಂಭದಲ್ಲಿ ಮಾತನಾಡಿದರು.


ಜಾಗತಿಕ ಶಿಕ್ಷಕ ಪ್ರಶಸ್ತಿಯ ಸಂಸ್ಥಾಪಕ ಸನ್ನಿ ವರ್ಕಿ, “2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ ಗೆದ್ದಿದ್ದಕ್ಕಾಗಿ ರಣಜಿತ್‌ಸಿನ್ಹ್‌ ದಿಸಾಲೆ ಅವರಿಗೆ ಅಭಿನಂದನೆಗಳು. ಪ್ರಶಸ್ತಿ ಹಣವನ್ನು ಹಂಚಿಕೊಂಡು ನೀವು ಜಗತ್ತಿಗೆ ಕೊಡುವುದರ ಮಹತ್ವವನ್ನು ಸಾರಿದ್ದೀರಿ. ನೀವು ಈ ವೇದಿಕೆಯನ್ನು ಬಳಸಿಕೊಂಡು ಶಿಕ್ಷಕರ ಧ್ವನಿಯಾಗಬೇಕು ಎಂದು ಕೇಳಿಕೊಳ್ಳುತ್ತೇನೆ,” ಎಂದರು.


ಸಮಾರಂಭದಲ್ಲಿ ವರ್ಕಿ ಫೌಂಡೇಶನ್‌ ಚೆಗ್ಗ್.ಓಆರ್‌ಜಿ ಜಾಗತಿಕ ವಿದ್ಯಾರ್ಥಿ ಪ್ರಶಸ್ತಿಯನ್ನು ಘೋಷಿಸಿತು. ಇದರಲ್ಲಿ 4 ಲಕ್ಷ ಬಹುಮಾನ ನೀಡಲಾಗುತ್ತಿದ್ದು, 2021 ಕ್ಕೆ ಅರ್ಜಿಗಳನ್ನು ಪಡೆಯಲಾಗುವುದು.


ಜಾಗತಿಕ ಶಿಕ್ಷಕ ಪ್ರಶಸ್ತಿ ಕಲಿಕೆಯಲ್ಲಿ, ತಮ್ಮ ಜತೆಗಾರರ ಜೀವನದಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆಗೆ ಕಾರಣರಾಗುತ್ತಿರುವ ವಿಶ್ವದೆಲ್ಲಡೆಯಿರುವ ವಿದ್ಯಾರ್ಥಿಗಳಿಗೆ ಧ್ವನಿ ನೀಡುವ ವೇದಿಕೆಯಾಗಿದೆ.