ಹುತಾತ್ಮರಿಗೆ ಗೌರವಾರ್ಥವಾಗಿ ಮಹಾರಾಷ್ಟ್ರದಲ್ಲಿ 700 ಕ್ಕೂ ಹೆಚ್ಚು ಮರಗಳನ್ನು ನೆಟ್ಟು ‘ಕ್ರಾಂತಿವನ’ವನ್ನು ನಿರ್ಮಿಸಿದ 77 ವರ್ಷದ ಅಜ್ಜ

ಸಂಪತ್ರಾವ್ ಪವಾರ್ ಹುತಾತ್ಮರಿಗೆ ಗೌರವಾರ್ಥವಾಗಿ ಹಸಿರು ಸ್ಮಾರಕವೊಂದನ್ನು ನಿರ್ಮಿಸಿದ್ದಾರೆ. ವನದೊಳಗಿನ ಪ್ರತಿಯೊಂದು ಮರಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಟ್ಟಿದ್ದಾರೆ.

15th Aug 2019
  • +0
Share on
close
  • +0
Share on
close
Share on
close


ವ

ಕ್ರಾಂತಿವನದ ಮಡಿಲಲ್ಲಿ ಕುಳಿತ ಸಂಪತ್ ರಾವ್


ವಿದ್ಯಾರ್ಥಿಯೊಬ್ಬ ನೆಲ ಅಗೆಯುತ್ತಿರುವುದನ್ನೇ ಗಮನಿಸುತ್ತಿದ್ದ ಸಂಪತ್ರಾವ್ ಅವರು “ಅಗಿ ! ಮತ್ತಷ್ಟು ಆಳಕ್ಕೆ ಅಗಿ. ಹೀಗೇಕೆ ಹೇಳ್ತಿದೀನಿ ಗೊತ್ತಾ ?” ಆ ವಿದ್ಯಾರ್ಥಿ ತುಟಿಬಿಚ್ಚಲಿಲ್ಲ. ಅವನ ಭುಜದ ಮೇಲೆ ಕೈಯಿಟ್ಟು, ಅವನನ್ನು ಹುರಿದುಂಬಿಸುತ್ತಾ ಸಂಪತ್ರಾವ್ ಹೇಳಿದರು - “ಸಸ್ಯವನ್ನು ಆದಷ್ಟು ಆಳದಲ್ಲಿ ಹೂತಿಡಬೇಕಾಗುತ್ತದೆ. ತಗ್ಗು ಆಳವಾಗಿ, ಅಗಲವಾಗಿ ಇದ್ದಲ್ಲಿ ಗಿಡ ಸದೃಢವಾಗಿ ಬೆಳೆಯುತ್ತದೆ.”


ಮಹಾರಾಷ್ಟ್ರದ ಕುಗ್ರಾಮವಾದ ಬಾಲೆವಾಡಿಯಲ್ಲಿ ಭಾರತದ ಧೀರ ಸ್ವಾತಂತ್ರ್ಯ ಹೋರಾಟಗಾರರ ಸ್ಮೃತಿಯಲ್ಲಿ ಬೆಳೆದ ಅರಣ್ಯಸೀಮೆಯೊಂದಿದೆ. ವೃತ್ತಿಯಲ್ಲಿ ಕಬ್ಬು ಬೆಳೆಗಾರರಾದ 77 ವರ್ಷದ ಸಂಪತ್ರಾವ್ ಈ ಕೆಲಸದ ಹಿಂದಿರುವ ವ್ಯಕ್ತಿ.


ಈ ಬೃಹತ್ ಕಾಡಿಗೆ ಸಂಪತ್ರಾವ್ ಅವರು ಕೊಟ್ಟ ಹೆಸರು ‘ಕ್ರಾಂತಿವನ್’- ಅಂದರೆ ‘ಕ್ರಾಂತಿಯ ವನ’ ಎಂದರ್ಥ. ಈ ವನದೊಳಗಿನ ಪ್ರತಿಯೊಂದು ಮರಕ್ಕೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣವನ್ನು ತ್ಯಜಿಸಿದ ವೀರ ಹುತಾತ್ಮರ ಹೆಸರಿಡಲಾಗಿದೆ. “ಸ್ವಾತಂತ್ರ್ಯ ಹೋರಾಟಗಾರರ ಅನುಪಮ ಕೊಡುಗೆಗಾಗಿ ನಾನು ಸಲ್ಲಿಸುತ್ತಿರುವ ಗೌರವವಿದು. ನನ್ನ ಈ ಪ್ರಯತ್ನದಿಂದ ಹುತಾತ್ಮರು ಸಾವಿನ ನಂತರವೂ ಜೀವಂತವಾಗಿ ಉಳಿಯುತ್ತಾರೆ. ಅದನ್ನೇ ಕ್ರಾಂತಿವನವು ಅರ್ಥೈಸುತ್ತದೆ.” ಎಂದು ಸಂಪತ್ರಾವ್ ಯುವರ್ ಸ್ಟೋರಿ ಜೊತೆಗೆ ಹಂಚಿಕೊಂಡಿದ್ದಾರೆ‌‌.


ಆದಿವಾಸಿಗಳ ವಿಮೋಚನೆಗಾಗಿ ಅವಿರಾಮ ಶ್ರಮಿಸಿದಂತಹ ಬಿಸ್ರಾ ಮುಂಡಾ, ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಬೆಳಗಾವಿಯ ಬಾಬಾಸಾಹೇಬ್ ನರಗುಂದಕರ್ ಅವರಿಂದ ಹಿಡಿದು ಧೀರನಾದ ಚಂದ್ರಶೇಖರ್ ಆಜಾದ್ ವರೆಗೂ ಎಲ್ಲರ ಹೆಸರಲ್ಲಿ ಇಲ್ಲಿನ ಮರಗಳನ್ನು ನಾಮಕರಣ ಮಾಡಲಾಗಿದೆ.


ಸ್ವಾತಂತ್ರ್ಯದ ಬೇರುಗಳುಕ

ಸ್ವಯಂಸೇವಕರೊಂದಿಗೆ ಸಸ್ಯಗಳನ್ನು ನೆಡುತ್ತಿರುವ ಸಂಪತ್ರಾವ್ (ಎಡ ಬದಿಯ ಚಿತ್ರ)


1992ಕ್ಕೆ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ ಚಳವಳಿ) ಆಂದೋಲನಕ್ಕೆ ಐವತ್ತು ವರ್ಷ ತುಂಬಿತು. ಅದೇ ಸಮಯಕ್ಕೆ ಸಂಪತ್ರಾವ್ ವೀರಯೋಧರ ದಿವ್ಯಸ್ಮೃತಿಗೆ ಗೌರವ ಸಲ್ಲಿಸಲು ಸ್ಮಾರಕ ನಿರ್ಮಿಸಬೇಕೆಂದು ಬಯಸಿದರು. ಬಂಜರು ಭೂಮಿಯಲ್ಲಿ ಮರಗಳನ್ನು ಬೆಳೆಸುವುದು ಸುಲಭವಲ್ಲ ಎಂದು ಅವರಿಗೆ ಗೊತ್ತು. ಸಂಪತ್ರಾವ್ ಮೊದಲಿಗೆ ಗ್ರಾಮಸ್ಥರನ್ನು ಸಂಪರ್ಕಿಸಿ ಸಹಾಯ ಕೋರಿಕೊಂಡರು. ಆದರೆ ಅವರೆಲ್ಲಾ ಇವರ ಮಾತು ಕೇಳಿ ಅಪಹಾಸ್ಯ ಮಾಡಿದರು.


“ಈ ವನವನ್ನು ನಿರ್ಮಿಸುವುದಾಗಿ ಹೇಳಿದಾಗ ನನ್ನ ನೆರೆಹೊರೆಯವರು ಮತ್ತು ಜನರೆಲ್ಲಾ ನನ್ನನ್ನು ಹುಚ್ಚನೆಂದು ಕರೆದರು" ಎಂದು ಸಂಪತ್ರಾವ್ ನೆನಪಿಸಿಕೊಳ್ಳುತ್ತಾರೆ.


ಆ ಬಳಿಕ, ಮರಗಳನ್ನು ನೆಡುವಲ್ಲಿ ಸಂಪತ್ರಾವ್ ಅವರಿಗೆ ಸಹಾಯ ಮಾಡಲು ನೂರಾರು ವಿದ್ಯಾರ್ಥಿಗಳು ಮುಂದೆ ಬಂದರು. "ನಾವು ಮಣ್ಣನ್ನು ಆಳವಾಗಿ ಅಗೆದು, ಸಸ್ಯಯನ್ನು ಮಣ್ಣಿನ ತಳಕ್ಕೆ ಇರಿಸಿದ ನಂತರ, ಗೊಬ್ಬರದೊಂದಿಗೆ ಬೆರೆಸಿದ ಮಣ್ಣಿನ ಪದರುಗಳಿಂದ ತಗ್ಗು ತುಂಬಿಸುತ್ತೇವೆ" ಎಂದು ಅವರು ವಿವರಿಸುತ್ತಾರೆ.


ಇದಷ್ಟೇ ಅಲ್ಲದೆ, ಬಾಲೆವಾಡಿ ಸುತ್ತಮುತ್ತಲಿನ- ಎ.ಎಸ್.ಸಿ ಮಹಾವಿದ್ಯಾಲಯ, ಮಾಥುಬಾಯ್ ಯಾಂತ್ರಿಕ ಮಹಾವಿದ್ಯಾಲಯ, ಆದರ್ಶ ಪ್ರೌಢಶಾಲೆ ಹಾಗೂ ಪಂಡಿತ್ ವಿಷ್ಣು ದಿಗಂಬರ್ ಪ್ರೌಢಶಾಲೆ ಸೇರಿದಂತೆ ಅನೇಕ ಶಾಲಾ ಕಾಲೇಜುಗಳು ಸಂಪತ್ರಾವ್ ಅವರಿಗೆ ನೆರವಾಗಿವೆ.


ಹುತಾತ್ಮರಿಗಾಗಿ ಒಂದು ‘ಎವರ್ಗ್ರೀನ್ ಸ್ಮಾರಕ’ವನ್ನು ನಿರ್ಮಿಸಬೇಕೆಂಬ ಕನಸು ನನಸಾದ ಮೇಲೆ, ಸಂಪತ್ರಾವ್ ಅಲ್ಲಿನ ಒಟ್ಟು 1,475 ಮರಗಳಿಗೆ ಸ್ವಾತಂತ್ರ್ಯ ಹೋರಾಟಗಾರ ಹೆಸರುಗಳನ್ನು ಇಟ್ಟರು. ಇದರ ಜೊತೆಗೆ ಶಾಲಾ ಪ್ರವಾಸದ ನಿಮಿತ್ತ ಇಲ್ಲಿಗೆ ಬರುವ ಮಕ್ಕಳಿಗಾಗಿ ಒಂದು ಬಯಲು ಚಂದ್ರಾಂಗಣವನ್ನು ನಿರ್ಮಿಸಿ, ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆನ್ನುವುದು ಸಂಪತ್ರಾವ್ ಅವರ ಆಶಯ‌.


ಮುಳ್ಳಿನ ಹಾದಿ


ಕ

ಸುಭಿಕ್ಷವಾಗಿ ಬೆಳೆದುನಿಂತ ಕ್ರಾಂತಿವನದ ಮರಗಳು

ಸಂಪತ್ರಾವ್ ಬೆಳೆಸಿದ ಮರಗಳ ಜಾಗವು ಸರ್ಕಾರಕ್ಕೆ ಸೇರಿದದುರಿಂದ, 1998ರಲ್ಲಿ ಜಿಲ್ಲಾಡಳಿತವು ಆ ಜಾಗವನ್ನು ತನ್ನ ಅಧೀನಕ್ಕೆ ತೆದೆದುಕೊಳ್ಳುವುದಾಗಿ ಸುತ್ತೋಲೆಯನ್ನು ಹೊರಡಿಸಿತ್ತು. “ನಾನು ಈ ಸರ್ಕಾರಿ ಜಾಗದಲ್ಲಿ ನನ್ನ ಇಷ್ಟದ ಕೆಲಸಕ್ಕೆ ಬಳಿಸಬಾರದಿತ್ತು, ನಿಜ. ಆದರೆ, ಮುಂದೊಂದು ದಿನವಾದರೂ ಸರ್ಕಾರ ಈ ಕೆಲಸಕ್ಕೆ ಅನುಮೋದನೆ ನೀಡಿ ಮುಂದುವರೆಸುಕೊಂಡು ಹೋಗಬೇಕೆನ್ನುವುದೇ ನನ್ನ ಆಕಾಂಕ್ಷೆಯಾಗಿತ್ತು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಈ ಮರಗಳನ್ನೆಲ್ಲಾ ಕಡಿದುರುಳಿಸಿತು.”


ಈ ದುರ್ಘಟನೆಯ ನಂತರವೂ ಸಂಪತ್ರಾವ್ ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಮರಳಗಳನ್ನೆಲ್ಲಾ ಕಡಿದ ಆ ಜಾಗದ ಮೇಲೆ ಆಸೆ ಬಿಟ್ಟು, ತನ್ನದೇ ಕಬ್ಬಿನ ಹೊಲದಲ್ಲಿ ಮರಗಳನ್ನು ಬೆಳೆಸಲು ನಿರ್ಧರಿಸಿದರು. ಆದರೆ ಕುಂಟುಂಬದವರೂ, ಸ್ನೇಹಿತರೂ ಇದಕ್ಕೆ ಅಷ್ಟು ಸುಲಭವಾಗಿ ಒಪ್ಪಲಿಲ್ಲ‌. ಏಕೆಂದರೆ ಆ ಕಬ್ಬಿನ ಹೊಲವೊಂದೇ ಅವರ ಅದಾಯಕ್ಕೆ ಮೂಲವಾಗಿತ್ತು. ಯಾವುದಕ್ಕೂ ಚಿಂತಿಸದ ಸಂಪತ್ರಾವ್ ತಮ್ಮ ಇಷ್ಟದಂತಯೇ ಮುನ್ನಡೆದರು.


“ಇದಾದ ನಂತರ, ನಾನು ಮತ್ತು ನನ್ನ ಮಗ ವೈಭವ್ ಕಬ್ಬಿನ ಹೊಲದ ನಡುವೆ ಅಲ್ಲಲ್ಲಿ, ಮತ್ತದರ ಸುತ್ತಮುತ್ತಲೂ ಸಸ್ಯಗಳನ್ನು ನೆಡಲು ಶುರುಮಾಡಿದೆವು. ನಮ್ಮ ಕೆಲಸವೆಲ್ಲಾ ಸರಾಗವಾಗಿ ಸಾಗುತ್ತಿದ್ದಂತೆ ಬೆಳೆಗೆ ಹೆಚ್ಚೆಚ್ಚು ನೀರು ಬೇಕಾದ್ದರಿಂದ ಜಮೀನಿನಲ್ಲಿ ಬಾವಿ ತೋಡಲಿಕ್ಕೆ ನಿರ್ಧರಿಸಿದೆವು. ಆದರೆ, ಅದೇ ಸಮಯದಲ್ಲಿ ವೈಭವ್ ಅಪಘಾತಕ್ಕೀಡಾಗಿ ತೀರಿಕೊಂಡ,” ಎಂದು ಸಂಪತ್ರಾವ್ ಕಣ್ಣೀರಾಗುತ್ತಾರೆ.


ಸಂಪತ್ರಾವ್ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದು ಅತಿಶಯೋಕ್ತಿಯಲ್ಲ. ಅನಿರೀಕ್ಷಿತ ದುರಂತದ ನಂತರವೂ, ಅವರು 700 ವಿದ್ಯಾರ್ಥಿಗಳ, ಕೆಲ ಕ್ರಿಯಾಶೀಲ ಸ್ವಯಂಸೇವಕರ ಸಹಾಯದಿಂದ ನೀಲಗಿರಿ ಮತ್ತು ಟೆಕ್ಟೋನಾ ಮರಗಳನ್ನು ನೆಡುವ ಮೂಲಕ ಕ್ರಾಂತಿವನವನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದ್ದಾರೆ.


ಪ್ರೇರಣೆಗೆ ಕೊನೆಯಿಲ್ಲದ ಆಗರ


q

ಸಂಪತ್ರಾವ್ ಪವಾರ್ ಅವರು ‘ಎವರ್ಗ್ರೀನ್' ಸ್ಮಾರಕವನ್ನು ನಿರ್ಮಿಸುವಲ್ಲಿ ನೀಡಿದ ಅನುಪಮ ಕೊಡುಗೆಗಾಗಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ


ಸಂಪತ್ರಾವ್ ಅವರಂತಹ ಜನ ಅತಿ ವಿರಳವೆಂದೇ ಹೇಳಬೇಕು. ದೇಶದ ಹುತಾತ್ಮರಿಗಾಗಿ ಸ್ಮಾರಕವನ್ನು ನಿರ್ಮಿಸುವ ತಮ್ಮ ಧ್ಯೇಯವನ್ನು ಸಾಧಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟರು. ಅವರ ದಾರಿಗೆ ಬಂದ ಅಡೆತಡೆಗಳು, ಅಸಮ್ಮತಿಯ ಅಸಹ್ಯಕರ ನಿಂದನೆಗಳು ಇವುಗಳೆಲ್ಲದರ ಹೊರತಾಗಿಯೂ, ಅವರು ಹೆದರದೆ ಮುನ್ನಡೆದರು. ಈ ಕೆಲಸವೆಲ್ಲಾ ಕಷ್ಟಕರವೆಂದು ಸಂಪತ್ರಾವ್ ಯಾವತ್ತೂ ಅಂದುಕೊಂಡಿಲ್ಲ. “ಇದೆಲ್ಲವೂ ಪ್ರಯಾಸಕರವೆಂದು ನನಗೆ ಯಾವತ್ತೂ ಅನಿಸಲಿಲ್ಲ. ಅಷ್ಟಕ್ಕೂ, ಇದೆಲಾ ನನ್ನ ಕರ್ತವ್ಯವೆಂದೇ ನಾನು ಭಾವಿಸಿದ್ದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಬಲಿದಾನಗಳ ಎದುರು ನನ್ನ ಈ ಕೆಲಸ ಏನೂ ಅಲ್ಲ,” ಎನ್ನುತ್ತಾರೆ ಸಂಪತ್ ರಾವ್ ನಗುತ್ತಾ.

  • +0
Share on
close
  • +0
Share on
close
Share on
close

Our Partner Events

Hustle across India