ಮನೆ ಬಿಟ್ಟು ಹೋದ ಮೀರುತ್‌ನ ಯುವತಿ ಪಿಸಿಎಸ್‌ ಅಧಿಕಾರಿಯಾಗಿ ಹಿಂದುರಿಗಿದ ಕತೆ

ಮದುವೆ ಬೇಡ ಎಂದು ಮನೆಬಿಟ್ಟು ಹೋಗಿದ್ದ ಸಂಜು ರಾಣಿ ವರ್ಮಾ ಎಂಬ ಯುವತಿ 7 ವರ್ಷಗಳ ನಂತರ ಪಿಸಿಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮನೆಗೆ ಮರಳಿದ್ದಾರೆ.

ಮನೆ ಬಿಟ್ಟು ಹೋದ ಮೀರುತ್‌ನ ಯುವತಿ ಪಿಸಿಎಸ್‌ ಅಧಿಕಾರಿಯಾಗಿ ಹಿಂದುರಿಗಿದ ಕತೆ

Thursday September 17, 2020,

1 min Read

ಭಾರತದ ಹಲವು ಯುವತಿಯರು ಮದುವೆಯ ಕಾರಣದಿಂದ ತಮ್ಮ ಉನ್ನತ ಶಿಕ್ಷಣ, ಕನಸುಗಳನ್ನು ಬಿಟ್ಟು ಬದುಕುತ್ತಿರುವುದು ಹಲವು ರಾಜ್ಯಗಳಲ್ಲಿ ಕಂಡು ಬರುವ ಸಾಮಾನ್ಯ ಸಂಗತಿಯಾಗಿದೆ.


ಕೆಲವೆ ಕೆಲವರು ಇಂತಹ ಬಲವಂತಕ್ಕೆ ಮಣಿಯದೆ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುತ್ತಾರೆ.


ಅಂಥವರಲ್ಲಿ ಒಬ್ಬರು ಮೀರುತ್‌ನ ಸಂಜು ರಾಣಿ ವರ್ಮಾ. ಅವರು ತಮ್ಮ ಕನಸನ್ನು ಬೆನ್ನೆತ್ತಿ ಅದನ್ನು ನನಸಾಗಿಸಿಕೊಂಡವರು. 2013 ರಲ್ಲಿ ಸಂಜು ಅವರ ತಾಯಿ ನಿಧನರಾದ ನಂತರ ಮನೆ ಬಿಟ್ಟು ಹೋಗಲು ನಿರ್ಧರಿಸಿದರು. ಆಗ ಇವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದರು.


ಆಗ ಅವರ ಕುಟುಂಬ ಮದುವೆ ಆಗುವಂತೆ ಅವರ ಮೇಲೆ ಒತ್ತಡ ಹೇರುತ್ತಿತ್ತು, ಆದರೆ ಸಂಜು ತನ್ನ ಕನಸುಗಳನ್ನು ಬಿಟ್ಟುಕೊಡಲಿಲ್ಲ. ಶಿಕ್ಷಣ ಎಷ್ಟು ಮುಖ್ಯ ಎಂದು ಅವರ ಕುಟುಂಬಕ್ಕೆ ತಿಳಿಸಲು ಪ್ರಯತ್ನಪಟ್ಟರು ಯಾವುದು ಫಲಿಸದೆ ಮನೆ ತೊರೆಯಬೇಕಾದ ಅನಿವಾರ್ಯತೆ ಎದುರಾಯಿತು.

ಸಂಜು ರಾಣಿ ವರ್ಮಾ (ಚಿತ್ರಕೃಪೆ: ನ್ಯೂಸ್‌18)


“ಆವತ್ತು (2013) ನಾನು ನನ್ನ ಮನೆಯನ್ನು ಮಾತ್ರ ಬಿಡಲಿಲ್ಲ, ದೆಹಲಿ ವಿಶ್ವವಿದ್ಯಾಲಯದ ನನ್ನ ಸ್ನಾತಕೋತ್ತರ ಶಿಕ್ಷಣವನ್ನು ತೊರೆದೆ. ನನ್ನ ಬಳಿ ಹಣವಿರಲಿಲ್ಲ. ನಾನೊಂದು ರೂಮ್‌ ಬಾಡಿಗೆ ತೆಗೆದುಕೊಂಡು, ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದೆ. ಖಾಸಗಿ ಶಾಲೆಯಲ್ಲಿ ಅರೆ ಕಾಲಿಕ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದೆ. ಅದರ ಜತೆಗೆ ನಾಗರಿಕ ಸೇವೆಗಳ ಪರೀಕ್ಷೆಗೂ ತಯಾರಿ ನಡೆಸಿದ್ದೆ,” ಎಂದರು ಸಂಜು, ವರದಿ ದಿ ಲಾಜಿಕಲ್‌ ಇಂಡಿಯನ್‌.


ಯುಪಿಪಿಎಸ್‌ಸಿ 2018ರ ಪರೀಕ್ಷೆಯ ಫಲಿತಾಂಶ ಕಳೆದ ವಾರ ಪ್ರಕಟವಾಗಿದೆ, ಸಂಜು ಅದರಲ್ಲಿ ತೇರ್ಗಡೆ ಹೊಂದಿದ್ದಾರೆ. ಆದರೂ ಅವರಿಗೆ ಸಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಡಿವಿಸಿನಲ್‌ ಮ್ಯಾಜಿಸ್ಟ್ರೆಟ್‌ ಆಗಬೇಕೆಂಬ ಕನಸಿದೆ.


ನ್ಯೂಸ್‌ 18 ಪ್ರಕಾರ ಮುಂಚೆ ತನಗೆ ಬೆಂಬಲ ನೀಡದಿದ್ದರೂ ಸಂಜು ತನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಇಚ್ಛಿಸಿದ್ದಾರೆ.


ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ನಂಬಬೇಕು, ಮದುವೆಯೆ ಕೊನೆಯಲ್ಲ ಎಂಬ ಯೋಚನೆ ಬರಬೇಕು ಎನ್ನುತ್ತಾರೆ.