ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನು ಆಕರ್ಷಿಸಿದ ಒಡಿಶಾದ 9 ನೇ ತರಗತಿ ವಿದ್ಯಾರ್ಥಿ ತಯಾರಿಸಿದ ‘ಸ್ಮಾರ್ಟ್’ ವಾಟರ್ ವಿತರಣ ಯಂತ್ರ

ಪಿ ಬಿಸ್ವಾನಾಥ ಪತ್ರ ಕುಡಿಯುವ ನೀರಿನ ಸಂರಕ್ಷಣೆಗೆ ಸಹಾಯ ಮಾಡುವ ಸ್ಮಾರ್ಟ್ ವಾಟರ್ ವಿತರಣ ಯಂತ್ರವನ್ನು ನಿರ್ಮಿಸಿದ್ದಾನೆ.

ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನು ಆಕರ್ಷಿಸಿದ ಒಡಿಶಾದ 9 ನೇ ತರಗತಿ ವಿದ್ಯಾರ್ಥಿ ತಯಾರಿಸಿದ ‘ಸ್ಮಾರ್ಟ್’ ವಾಟರ್ ವಿತರಣ ಯಂತ್ರ

Tuesday December 17, 2019,

2 min Read

ಹವಾಮಾನ ಬದಲಾವಣೆ ಮತ್ತು ನೀರಿನ ಸಂಪನ್ಮೂಲಗಳು ಕ್ಷೀಣಿಸುತ್ತಿರುವುದರಿಂದ ಅಗ್ನಿಯ ಅವಘಡಗಳು ಇತ್ತೀಚೆಗೆ ಹೆಚ್ಚುತ್ತಿವೆ. ಆದರೆ ಈ ಯುವ ವಿದ್ಯಾರ್ಥಿಯು ನವೀನ ಮತ್ತು “ಸ್ಮಾರ್ಟ್” ನೀರಿನ ವಿತರಣ ಯಂತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ನೀರನ್ನು ಸಂರಕ್ಷಿಸಲು ಹೊಸ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.


ರಷ್ಯಾದ ಸೋಚಿಯಲ್ಲಿ ನಡೆದ ಡೀಪ್ ಟೆಕ್ನಾಲಜಿ ಎಜುಕೇಶನ್ ಪ್ರೋಗ್ರಾಂನ ಅಂಗವಾಗಿ ಒಡಿಶಾದ ಬೆರ್ಹಾಂಪುರದ 9 ನೇ ತರಗತಿ ವಿದ್ಯಾರ್ಥಿ ಪಿ ಬಿಸ್ವಾನಾಥ್ ಪತ್ರಾ ಅವರು ಈ ಯಂತ್ರವನ್ನು ತಯಾರಿಸಿದ್ದಾರೆ. ಈ ಕಾರ್ಯಕ್ರಮವು ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಸಹಯೋಗದೊಂದಿಗೆ ನಡೆದಿತ್ತು, ವರದಿ ಎನ್ ಡಿ ಟಿವಿ.


ಶೈಕ್ಷಣಿಕ ಕೇಂದ್ರ ಸಿರಿಯಸ್(SIRIUS) ಆಯೋಜಿಸಿದ್ದ ಈ ಕಾರ್ಯಕ್ರಮವು ನವೆಂಬರ್ 28 ರಿಂದ ಡಿಸೆಂಬರ್ 8 ರವರೆಗೆ ನಡೆದಿದೆ ಮತ್ತು ಇದರಲ್ಲಿ ಒಟ್ಟು 50 ಮಂದಿ ಭಾಗವಹಿಸಿದ್ದರು, ಇದರಲ್ಲಿ ಭಾರತದ 25 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.


ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾದುತ್ತಿರುವ ಬಿಸ್ವಾನಾಥ ಪತ್ರ. (ಚಿತ್ರ ಕೃಪೆ: ದಿ ಹಿಂದೂ)




ಸ್ಮಾರ್ಟ್ ವಾಟರ್ ವಿತರಣ ಯಂತ್ರವು ನೀರಿನ ಹರಿವನ್ನು ನಿಯಂತ್ರಿಸುವ ಎಲೆಕ್ಟ್ರಾನಿಕ್ ಕಾರ್ಯವಿಧಾನವಾಗಿದ್ದು, ಇದು ಸಾಂಪ್ರದಾಯಿಕ ನೀರಿನ ಮೀಟರ್ ನ ಬದಲಿಗೆ ಬಳಸಬಹುದಾಗಿದೆ. ಇದು ಸಮಾನ ವಿತರಣೆಗಾಗಿ ಅಧಿಕಾರಿಗಳಿಗೆ ನೀರಿನ ಪೂರೈಕೆಯ ನಿಯಂತ್ರಣವನ್ನು ಒದಗಿಸುತ್ತದೆ. ಮೂಲಮಾದರಿಯ ಬೆಲೆ ಕೇವಲ 2,000 ರೂ ಆಗಿದೆ ಇದರ ಮುಖ್ಯ ತಯಾರಿಕಾ ಅಂಶಗಳೆಂದರೆ ಸುಲಭವಾಗಿ ಲಭ್ಯವಿರುವ ಮೈಕ್ರೊಪ್ರೊಸೆಸರ್, ಸೊಲೆನಾಯ್ಡ್ ಕವಾಟ ಮತ್ತು ಫ್ಲೋ ಸೆನ್ಸಾರ್‌ ಗಳು, ವರದಿ ದಿ ಹಿಂದೂ.


ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಟ್ವಿಟ್ಟರ್ನಲ್ಲಿ 2000 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ವೀಡಿಯೊದಲ್ಲಿ, ಭಾಷಾಂತರಕಾರರ ಸಹಾಯದಿಂದ ಬಿಸ್ವಾನಾಥ್ ತನ್ನ ಆವಿಷ್ಕಾರವನ್ನು ವಿವರಿಸುವುದನ್ನು ಕಾಣಬಹುದು.


ಮುಖ್ಯಮಂತ್ರಿ ತಮ್ಮ ಟ್ವಿಟ್ಟರ್ ನಲ್ಲಿ ಹೀಗೆ ಬರೆದಿದ್ದಾರೆ,


"ರಷ್ಯಾದ ಸೋಚಿಯಲ್ಲಿ ಡೀಪ್ ಟೆಕ್ನಾಲಜಿ ಎಜುಕೇಶನ್ ಪ್ರೋಗ್ರಾಂನ ಭಾಗವಾಗಿದ್ದ ಬೆರ್ಹಾಂಪುರದ ಒಂಬತ್ತನೇ ತರಗತಿ ವಿದ್ಯಾರ್ಥಿ ಪಿ ಬಿಸ್ವಾನಾಥ್ ಪತ್ರಾ ಅವರಿಗೆ ಶುಭಾಶಯಗಳು. ಅವರ ನವೀನ ನೀರಿನ ವಿತರಣ ಯಂತ್ರವು ನೀರಿನ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ .ಅವರ ಈ ಹೊಸತನವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಶ್ಲಾಘಿಸಿದ್ದಾರೆ.”


ಬಿಸ್ವಾನಾಥ್ ಅವರ ಆವಿಷ್ಕಾರವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ಪ್ರಶಂಸೆಯನ್ನು ಕೂಡ ಪಡೆದಿದೆ.


ಯುವ ಸಂಶೋಧಕ ಒಡಿಶಾ ಟಿವಿ ಜೊತೆ ಮಾತನಾಡುತ್ತ, “ರಷ್ಯಾದ ಅಧ್ಯಕ್ಷರನ್ನು ಭೇಟಿಯಾಗಿದ್ದು ತುಂಬಾ ಸಂತೋಷದ ಕ್ಷಣವಾಗಿತ್ತು. ಏಕೆಂದರೆ ಅವರು ಭಾರತದೊಂದಿಗೆ ಪರಮಾಣು ಇಂಧನ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತಿದ್ದಾರೆ. ನನ್ನಂತಹ ವಿದ್ಯಾರ್ಥಿಗಳು ಪರಮಾಣು ಇಂಧನ ಕ್ಷೇತ್ರದಲ್ಲಿ ಆಸಕ್ತಿ ವಹಿಸುತ್ತಿರುವುದನ್ನು ನೋಡಿದ ಪುಟಿನ್, ಉಭಯ ದೇಶಗಳ ನಡುವಿನ ಇಂತಹ ಬಾಂಧವ್ಯ ಮುಂದುವರಿಯಬೇಕು ಎಂದಿದ್ದಾರೆ,” ಎಂದರು.


ಭಾಗವಹಿಸಿದವರು ಐಟಿ ಡೇಟಾ ಮತ್ತು ಅನಾಲಿಟಿಕ್ಸ್, ಕ್ಲೀನ್ ಎನರ್ಜಿ, ಬಯೋಟೆಕ್, ಫಾರ್ಮಾ, ಕ್ಲೀನ್ ಎನರ್ಜಿ, ಮತ್ತು ರಿಮೋಟ್ ಅರ್ಥ್ ಸೆನ್ಸಿಂಗ್ ಮತ್ತು ಡ್ರೋನ್ಸ್ ಮತ್ತು ರೊಬೊಟಿಕ್ಸ್ ಮುಂತಾದ ವಿಭಾಗಗಳ ಅಡಿಯಲ್ಲಿ ಹೊಸ ಆವಿಷ್ಕಾರಗಳ ಬಗ್ಗೆ ಚರ್ಚಿಸಿದರು ವರದಿ ಎನ್ ಡಿ ಟಿವಿ.