ಅಂದೊಮ್ಮೆ ವಲಸೆ ಕಾರ್ಮಿಕನಾಗಿದ್ದ 24ರ ಹರೆಯದ ಈ ವ್ಯಕ್ತಿ ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದುಕೊಡುವ ಮೂಲಕ ತನ್ನಂಥವರಿಗೀಗ ನೇರವಾಗುತ್ತಿದ್ದಾರೆ

2017 ರಲ್ಲಿ ನರೇಶ್ ಸಿಜಾಪತಿ ಅವರಿಂದ ಶುರುವಾದ ಪನಾಹ್ ಸಂಸ್ಥೆಯು, ಸರ್ಕಾರಿ ಯೋಜನೆ ಹಾಗೂ ಗುರುತಿನ ದಾಖಲೆಗಳಿಗೆ ಸಂಬಂಧಪಟ್ಟಂತೆ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದೆ.

ಅಂದೊಮ್ಮೆ ವಲಸೆ ಕಾರ್ಮಿಕನಾಗಿದ್ದ 24ರ ಹರೆಯದ ಈ ವ್ಯಕ್ತಿ ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದುಕೊಡುವ ಮೂಲಕ ತನ್ನಂಥವರಿಗೀಗ ನೇರವಾಗುತ್ತಿದ್ದಾರೆ

Wednesday August 21, 2019,

2 min Read

ಇಂದಿನ ದಿನಮಾನದಲ್ಲಿ ಎಲ್ಲೇ ಯಾವುದೇ ಕೆಲಸವಾಗಬೇಕಾದಲ್ಲಿ ಗುರುತಿನ ಪುರುವೆಯಾಗಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆಗಳು ಬಹುತೇಕ ಕಡ್ಡಾಯವಾಗಿವೆ.


ಇದಾಗಲೇ ಎಲ್ಲಾ ದಾಖಲೆಪತ್ರಗಳುಳ್ಳವರಿಗೆ ಯಾವ ತೊಂದರೆಯೂ ಇಲ್ಲ, ಆದರೆ ಯಾವುದೂ ಇಲ್ಲದ, ಹೊಸದಾದ ಜಾಗವೊಂದಕ್ಕೆ ವಸಲೆಬರುವ ಕಾರ್ಮಿಕರಿಗೆ ಇವೆಲ್ಲವನ್ನು ಅಲ್ಲಿದ್ದುಕೊಂಡು ಇವುಗಳನ್ನು ಮಾಡಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ.


ಕೆಲಸವನ್ನು ಹುಡುಕುತ್ತಾ ಅಹಮದಾಬಾದಿಗೆ ಬಂದಿದ್ದ ಕ್ರಾಂತಿ ಬೆನ್ ಅವರಿಗೆ ಇದೇ ಸಮಸ್ಯೆ ಎದುರಾಗಿತ್ತು. ತಮ್ಮ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ದುರುದೃಷ್ಟವಶಾತ್ ಯಾವುದೇ ಕೆಲಸ ಸಿಗದಾಯಿತು. ಅದೇನೂ ಉಪಯೋಗಕ್ಕೆ ಬರುವುದಿಲ್ಲ ಎಂದುಕೊಂಡು ತಮ್ಮ ವೋಟರ್ ಐಡಿಯನ್ನು ಆಕೆ ಊರಲ್ಲೇ ಬಿಟ್ಟು ಬಂದಿದ್ದಳು.


ನರೇಶ್ ಸಿಜಾಪತಿ ( ಚಿತ್ರ : ದಿ ಲಾಜಿಕಲ್ ಇಂಡಿಯನ್)


24ರ ಹರೆಯದ ನರೇಶ್ ಸಿಜಾಪತಿ ಉರಫ್ ನರೇಶ್, ಕ್ರಾಂತಿ ಬೆನ್ ರಂತಹ ಅನೇಕರಿಗೆ ಪ್ಯಾನ್, ಅಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ತೆರೆದುಕೊಡುವುದರಲ್ಲಿ ಸಹಾಯ ಮಾಡುತ್ತಿದ್ದಾರೆ‌. ಹೆಸರಿಗೆ ಕೇವಲ 40 ರೂಪಾಯಿಗಳ ಹಣವನ್ನು ಮಾತ್ರ ಪಡೆಯುತ್ತಾರೆ.


ನರೇಶ್ ಮಾಡುತ್ತಿರುವ ಈ ಒಳ್ಳೆಯ ಕೆಲಸದ ಬಗ್ಗೆ ಕ್ರಾಂತಿ ಬೆನ್

ಎಫರ್ಟ್ಸ್ ಫಾರ್ ಗುಡ್ ಜೊತೆಗೆ ಮಾತನಾಡುತ್ತಾ


“ಒಂದು ವೇಳೆ ನರೇಶ್ ಭಾಯ್ ನನ್ನ ಸಹಾಯಕ್ಕೆ ಬಾರದೆ ಇದ್ದಿದ್ದರೆ ನಾನಿನ್ನೂ ನಿರುದ್ಯೋಗಿಯಾಗಿಯೆ ಉಳಿದಿರುತ್ತಿದ್ದೆ. ಅವರೇ ನನ್ನ ಅಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಎಲ್ಲವನ್ನೂ ಕೆಲವೇ ದಿನದಲ್ಲಿ ಮಾಡಿಕೊಟ್ಟಿದ್ದಾರೆ. ಜೊತೆಗೆ ನಾನು ಅರ್ಹಳಾಗಿದ್ದ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ (ಪಿಎಂ- ಎಸ್‌ವೈಎಂ) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಯಂತಹ ಸರ್ಕಾರಿ ಯೋಜನೆಗಳ ಬಗ್ಗೆಯೂ ಅವರು ನನಗೆ ಮಾಹಿತಿ ನೀಡಿದರು. ಅಲ್ಲದೇ ಅವುಗಳನ್ನೆಲ್ಲಾ ದೊರಕಿಸಿಕೊಟ್ಟರು. ದೇವರು ಅವರನ್ನು ಚೆನ್ನಾಗಿಟ್ಟಿರಲಿ”


ವಲಸೆ ಕಾರ್ಮಿಕನಾಗಿ ಆ ನಗರದಲ್ಲಿ ತಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳಿಂದ ಬೇಸತ್ತ ನರೇಶ್, ತನ್ನಂತವರಿಗೆ ಹೀಗೆ ಆಗಬಾರದೆಂದು 2017 ರಲ್ಲಿ ಪನಾಹ್ ಸಂಸ್ಥೆಯನ್ನು ಶುರುಮಾಡಿದರು. ಒಂದು ಮೊಬೈಲ್ ವ್ಯಾನಿನ ಮೂಲಕವೇ ಈ ಕೆಲಸವನ್ನು ಮಾಡುತ್ತಿರುವ ನರೇಶ್ ಅವರ ವ್ಯಾನಿಗೆ ನರೇಶ್ ಭಯ್ಯಾ ಕಿ ವ್ಯಾನ್ ಎಂದೇ ಹೆಸರು. ಅಹಮದಾಬಾದಿನಲ್ಲಿ ಒಟ್ಟು 23 ಗುಂಪು ನಾಯಕರುಗಳಿದ್ದು, ಇದುವರೆಗೂ ಸುಮಾರು 600 ಜನರ ದಾಖಲೆಪತ್ರಗಳನ್ನು ಮಾಡಿಕೊಟ್ಟಿದ್ದಾರೆ. ಈ ವ್ಯಾನಿನೊಳಗೆ ಇಬ್ಬರು ಆಪರೇಟರ್ ಗಳಿದ್ದು, ಅವರಲ್ಲೊಬ್ಬ ಮಹಿಳೆ ಆಟೋರಿಕ್ಷಾದಲ್ಲಿ ಕುಳಿತು ಅದನ್ನು ನಿರ್ವಹಿಸುತ್ತಾರೆ.


ನರೇಶ್ ಭಾಯ್ ಕೀ ವ್ಯಾನ್ (ಚಿತ್ರ: ಇಡೆಕ್ಸ್ ಲೈವ್ )


ಈ ವಿಶಿಷ್ಟವಾದ ಉಪಕ್ರಮದ ಬಗ್ಗೆ ಮಾತನಾಡುತ್ತಾ


“ನಗರದ ಎಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ಎಸ್‌.ಬಿ.ಐ ಕಿಯೋಸ್ಕ್ಗಳು ​​ಹೆಚ್ಚಿನ ಜನರನ್ನು ಬ್ಯಾಂಕಿಂಗ್ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಿರುವುದನ್ನು ನಾನು ಗಮನಿಸುತ್ತಿದ್ದೆ. ಅದೇ ಸಮಯದಲ್ಲಿ, ಡಿಜಿಟಲ್ ಇಂಡಿಯಾ ಉಪಕ್ರಮದಿಂದಾಗಿ, ಜನರಿಗೆ ತಮ್ಮ ದಾಖಲೆಪತ್ರಗಳನ್ನು ಮಾಡಿಕೊಡಲು ಸಣ್ಣ ಪ್ರಮಾಣದ ತಾತ್ಕಾಲಿಕ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು”


ಜನರಿಗೆ ತಮ್ಮ ದಾಖಲೆಪತ್ರಗಳ ವಿಷಯದಲ್ಲಿ ಸಹಾಯ ಮಾಡಲು ಪನಾಹ್ ಸಂಸ್ಥೆಯು ಯುಐಡಿಎಐ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.


ತಮ್ಮ ಇತರೆ ಯೋಜನೆ-ಉಪಕ್ರಮಗಳ ಬಗ್ಗೆ ದಿ ಲಾಜಿಕಲ್ ಇಂಡಿಯನ್ ಪತ್ರಿಕೆ ಜೊತೆ ಮಾತನಾಡಿದ ನರೇಶ್


"ಕಾರ್ಮಿಕ ಸಂಪನ್ಮೂಲ ಮತ್ತು ಸಹಕಾರಿ ಕೇಂದ್ರದ ಮೂಲಕ, ಪನಾಹ್ ಸಂಸ್ಥೆಯು, ಕಾರ್ಮಿಕರಿಗೆ ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುತ್ತಿದೆ. ನಾವು ಕಾರ್ಮಿಕರಿಗಾಗಿ “ಸ್ವ-ಸಹಾಯ” ಗುಂಪುಗಳನ್ನು ಮಾಡಲು ಯೋಜಿಸುತ್ತಿದ್ದೇವೆ. ನೇಮಕಗೊಂಡ ಗುಂಪಿನ ನಾಯಕರುಗಳು ಕಾರ್ಮಿಕರನ್ನು ನಿರ್ವಹಣೆಗೆ, ಮತ್ತವರ ಸಮಸ್ಯೆಗಳ ನಿವಾರಣೆಗೆ ಸದಾ ಸಿದ್ಧರಿರುತ್ತಾರೆ” ಎಂದಿದ್ದಾರೆ


ಪನಾಹ್ ಸಂಸ್ಥೆಯು ವಲಸೆ ಕಾರ್ಮಿಕರಿಗಾಗಿ ಕೈಗೆಟುಕುವ ಕೇಂದ್ರವಾಗಿ ಹೊರಹೊಮ್ಮಬೇಕಾಗಿ ನರೇಶ್ ಬಯಸುತ್ತಾರೆ.