ಹಿಂದೊಮ್ಮೆ ಹಿಂಸಾ ಮಾರ್ಗದಲ್ಲಿ ನಡೆದವ ಈಗ ಅಸ್ಸಾಂ ಜನರಿಗೆ ಒಳ್ಳೆ ಕೆಲಸದಿಂದ ಆಸರೆಯಾಗುತ್ತಿದ್ದಾನೆ

ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ನ ಮಾಜಿ ಉಗ್ರಗಾಮಿ ಮತ್ತು ದಿಬ್ರುಘರ್ ಜಿಲ್ಲೆಯ ಟಿಂಗ್‌ಖಾಂಗ್ ಪಟ್ಟಣದ ನಿವಾಸಿ ಮೋನಿ ಮಾನಿಕ್ ಗೊಗೊಯ್ ಅವರು ರಾಜ್ಯದ ಮೊದಲ ದೊಡ್ಡ-ಬಜೆಟ್ ನ ಪರಿಸರ-ಪ್ರವಾಸೋದ್ಯಮ ಯೋಜನೆಯಾದ ಸಾಸೋನಿ-ಮೆರ್ಬಿಲ್ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ.

4th Dec 2019
  • +0
Share on
close
  • +0
Share on
close
Share on
close

ಮಾಜಿ ಉಗ್ರಗಾಮಿ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಜೀವನದಲ್ಲಿ ದೊರೆತ ಎರಡನೇ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಅಸ್ಸಾಂನ ಯುನೈಟೆಡ್ ಲಿಬರೇಶನ್ ಫ್ರಂಟ್ (ಉಲ್ಫಾ) ಯ ಮಾಜಿ ಸದಸ್ಯ ಮತ್ತು ಅಸ್ಸಾಂನ ದಿಬ್ರುಘರ್ ಜಿಲ್ಲೆಯ ಟಿಂಗ್ಖಾಂಗ್ ಪಟ್ಟಣದ ನಿವಾಸಿ ಮೋನಿ ಮಾನಿಕ್ ಗೊಗೊಯ್, ಈಗ ವಿವಿಧ ಒಳ್ಳೆಯ ಕೆಲಸಗಳನ್ನು ಮಾಡುವ ಸಕ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.


ಅವರು ಒಐಎಲ್ ಭಾರತದ ಎಲ್ಲಾ ಸಿಎಸ್ಆರ್ ಯೋಜನೆಗಳ ಪ್ರತಿನಿಧಿಯಾಗಿದ್ದು, ಇದು ಹಲವಾರು ಸ್ವ-ಸಹಾಯ ಗುಂಪುಗಳ ರಚನೆಗೆ ಕಾರಣವಾಗಿದ್ದು ಮಾತ್ರವಲ್ಲದೆ ಅದು ಸಾವಿರಾರು ಕುಟುಂಬಗಳಿಗೆ ಸಹಾಯ ಕೂಡ ಮಾಡಿದೆ.


ಮೋನಿ ಮಾಣಿಕ್ ಗೊಗೊಯ್ (ಚಿತ್ರಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)
ಪ್ರಸ್ತುತ, ಮೋಹಿಯು ಸಾಸೋನಿ-ಮೆರ್ಬಿಲ್ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ, ಇದು ರಾಜ್ಯದ ಮೊದಲ ದೊಡ್ಡ-ಬಜೆಟ್ ನ ಪರಿಸರ-ಪ್ರವಾಸೋದ್ಯಮ ಯೋಜನೆಯಾಗಿದ್ದು, ಇದು ನಹರ್ಕಟಿಯಾದ ಸಸೋನಿಯ ಮೆರ್ಬಿಲ್ ಸರೋವರದ ಸುತ್ತ ಕೇಂದ್ರೀಕೃತವಾದ ಯೋಜನೆಯಾಗಿದೆ. ಈ ಯೋಜನೆಯು ಸಾರ್ವಜನಿಕ ಸಭೆಯಲ್ಲಿ ಗ್ರಾಮಸ್ಥರು ಮೋನಿಗೆ ಮಾಡಿದ ಮನವಿಯ ಪ್ರತಿಫಲವಾಗಿದೆ ಎನ್ನುತ್ತಾರೆ.


50 ವರ್ಷದ ಮೋನಿ ಅವರು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ ಹಾಗೂ ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ತರುವ ಕುರಿತು ಉಪನ್ಯಾಸಗಳನ್ನು ನೀಡುತ್ತಾರೆ.


ಉಲ್ಫಾದಲ್ಲಿ ತಮ್ಮ ದಿನಗಳ ಬಗ್ಗೆ ಮಾತನಾಡಿದ ಅವರು,


ನಾನು ಯಾವತ್ತೂ ಯಾರ ಮೇಲೂ ಗುಂಡಿನ ದಾಳಿ ನಡೆಸಿಲ್ಲ. ಗನ್ ಬಳಸುವ ಅಧಿಕಾರ ನಿಮಗೆ ಇದೇ ಎಂದ ಮಾತ್ರಕ್ಕೆ, ನೀವು ಅದನ್ನು ಬಲಸಲೇಬೇಕೆಂಬ ಅರ್ಥವಲ್ಲ” ಎಂದು ಹೇಳಿದ್ದಾರೆ, ವರದಿ ಇಂಡಿಯನ್ ಎಕ್ಸ್‌ಪ್ರೆಸ್.


ಉದಾಹರಣೆಗೆ, 2005 ರಲ್ಲಿ, ಅವರು ನಹರಾಣಿಯಲ್ಲಿ ಸರ್ಕಾರ ನಡೆಸುವ ಆರೋಗ್ಯ ಕೇಂದ್ರವನ್ನು ಸುಧಾರಿಸಲು ಹಣವನ್ನು ಸಂಗ್ರಹಿಸಿದ್ದರು.


ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮೋನಿ,


ಅಲ್ಲಿ ವಿದ್ಯುತ್ ಇರಲಿಲ್ಲ, ಹಾಸಿಗೆಗಳಿರಲಿಲ್ಲ, ಕೊಠಡಿಗಳಿರಲಿಲ್ಲ ಮತ್ತು ನೀರು ಸರಬರಾಜು ಸಹ ಇರಲಿಲ್ಲ. ಇದರ ಬಗ್ಗೆ ಏನಾದರೂ ಮಾಡಲು ಗ್ರಾಮಸ್ಥರು ನನ್ನನ್ನು ಕೇಳಿಕೊಂಡರು. ಇದರ ಪುನರಾಭಿವೃದ್ಧಿಗಾಗಿ, ಗ್ರಾಮಸ್ಥರು ಕೂಡ ಕೊಡುಗೆ ನೀಡಿದರು, ಕೆಲವರು ಹಾಸಿಗೆಗಳನ್ನು ನೀಡಿದರು, ಕೆಲವರು ವಿಶ್ರಾಂತಿ ಮಂಟಪಗಳನ್ನು ನಿರ್ಮಿಸಿದರು,” ಎಂದು ಹೇಳಿದರು.


(ಚಿತ್ರಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)


ಇದಲ್ಲದೆ, ಅವರು ಟಿಂಗ್ಖಾಂಗ್ ಕಲಾ ಕೇಂದ್ರವನ್ನೂ ಪ್ರಾರಂಭಿಸಿದರು, ಅಲ್ಲಿ ಮಕ್ಕಳು ಹಾಡುಗಾರಿಕೆ, ನೃತ್ಯ ಮತ್ತು ಚಿತ್ರಕಲೆ ಕಲಿಯಬಹುದು. ಪ್ರಸ್ತುತ, ಈ ಶಾಲೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳು ಇದ್ದು, ಸ್ಥಳೀಯರಿಗೆ ಹಾಡುಗಳನ್ನು ಪ್ರದರ್ಶಿಸಲು, ನಾಟಕ ಕಲಿಯಲು ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಇದು ಸಾಂಸ್ಕೃತಿಕ ವೇದಿಕೆಯನ್ನು ಸಹ ಒದಗಿಸುತ್ತದೆ ಎಂದು ಮೆಟ್ರೊ ಸಾಗಾ ವರದಿ ಮಾಡಿದೆ.


ಮೋನಿಗೆ ಸಾಮಾಜಿಕ ಸೇವೆಯ ಮೇಲಿನ ಪ್ರೀತಿಯ ಹಿಂದಿನ ಕಾರಣ ಅವರು ಬಾಲ್ಯದಿಂದಲೇ ಬಡತನಕ್ಕೆ ಸಾಕ್ಷಿಯಾಗಿದ್ದುದಾಗಿದೆ. ಅವರ ತಾಯಿ ಕುಟುಂಬವನ್ನು ಪೋಷಿಸಲು ಬೀದಿಗಳಲ್ಲಿ ಭಿಕ್ಷೆ ಬೇಡಬೇಕಾದ ಪರಿಸ್ಥಿತಿಯಿತ್ತು.


ಅವರು 1987 ರಲ್ಲಿ ಉಲ್ಫಾಗೆ ಸೇರಿದರು, ಆದರೆ ಅವರು ಮಹಾತ್ಮಗಾಂಧಿಯವರ ಅನುಯಾಯಿಗಳಾಗಿದ್ದರಿಂದ ಶಸ್ತ್ರಾಸ್ತ್ರಗಳ ಬದಲಿಗೆ ಕಾನೂನುಬದ್ಧವಾಗಿ ಹೋರಾಡಲು ನಿರ್ಧರಿಸಿದರು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.
  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India