38 ವರ್ಷದ ಈ ಸಾಮಾಜಿಕ ಕಾರ್ಯಕರ್ತೆ ಗುಜರಾತ್‌ನ ಅರೆ-ಶುಷ್ಕ ಪ್ರದೇಶಗಳಲ್ಲಿನ ಸರೋವರಗಳನ್ನು ಪುನರುಜ್ಜೀವನಗೊಳಿಸಿ, ಗ್ರಾಮಸ್ಥರಿಗೆ ಹೊಸ ಜೀವನವನ್ನು ರೂಪಿಸಿಕೊಡುತ್ತಿದ್ದಾರೆ

ವಿಮುಕ್ತ ಸಮುದಾಯ ಸಮರ್ಥನ್ ಮಂಚ್ (ವಿಎಸ್ಎಸ್ಎಂ) ನ ಸಂಸ್ಥಾಪಕಿ ಹಾಗೂ ಟ್ರಸ್ಟೀ ಆದ ಮಿತ್ತಲ್ ಪಟೇಲ್ ಅಲೆಮಾರಿ ಸಮುದಾಯ ಹಾಗೂ ವಿಮುಕ್ತ ಸಮುದಾಯದವರಿಗೆ ಶಕ್ತಿ ತುಂಬುವ ಹಾಗೂ ಭಾರತದ ನೀರಿನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

38 ವರ್ಷದ ಈ ಸಾಮಾಜಿಕ ಕಾರ್ಯಕರ್ತೆ ಗುಜರಾತ್‌ನ ಅರೆ-ಶುಷ್ಕ ಪ್ರದೇಶಗಳಲ್ಲಿನ ಸರೋವರಗಳನ್ನು ಪುನರುಜ್ಜೀವನಗೊಳಿಸಿ, ಗ್ರಾಮಸ್ಥರಿಗೆ ಹೊಸ ಜೀವನವನ್ನು ರೂಪಿಸಿಕೊಡುತ್ತಿದ್ದಾರೆ

Wednesday July 31, 2019,

2 min Read

ನೀರಿನ ಬಿಕ್ಕಟ್ಟು ಹೆಚ್ಚಿ, ನೀರು ಖಾಲಿಯಾಗಿ ಜಲಮೂಲವು ಅಂಚಿನಲ್ಲಿರುವ ದೇಶಗಳಲ್ಲಿ ಭಾರತವು ಒಂದು. ಇರುವ ಕೆರೆ, ನದಿಗಳು ಎಂದೋ ಕಲುಷಿತಗೊಂಡಿವೆ ಅಥವ ಅತಿಕ್ರಮಣಗೊಂಡಿವೆ. ಭಾರತದ ನಗರಗಳಿಗೆ ಮುಂದಿನ ದಿನಗಳಲ್ಲಿ ಇನ್ಯಾವುದೇ ಜಲ ಮೂಲಗಳಿಲ್ಲ.


ನಾವು ಮಾತನಾಡುತ್ತಿರುವಂತೆ ಈ ಸಮಸ್ಯೆಯನ್ನು ನಿಭಾಯಿಸಲು ಸರಕಾರಗಳು, ಎನ್.ಜಿ.ಓ. ಗಳು ಹಾಗೂ ಸಂಘ ಸಂಸ್ಥೆಗಳು ಹಲವು ಕ್ರಮಗಳನ್ನು ತಗೆದುಕೊಂಡಿವೆ.


ವಿಮುಕ್ತ ಸಮುದಾಯ ಸಮರ್ಥನ್ ಮಂಚ್ (ವಿಎಸ್ಎಸ್ಎಂ) ನ ಸಂಸ್ಥಾಪಕಿ ಹಾಗೂ ಟ್ರಸ್ಟೀ 38 ವರ್ಷದ ಮಿತ್ತಲ್ ಪಟೇಲ್, ಅಲೆಮಾರಿ ಹಾಗೂ ವಿಮುಕ್ತ ಸಮುದಾಯದವರಿಗೆ ಸಹಾಯ ಮಾಡುವಂತಹವರಲ್ಲಿ ಒಬ್ಬರು.


q

ಮಿತ್ತಲ್ ಪಟೇಲ್(ಚಿತ್ರ: ಯೂಟ್ಯೂಬ್)



ಇಲ್ಲಿಯವರೆಗೆ, ಮಿತ್ತಲ್ ನೇತೃತ್ವದ ಸಂಘಟನೆಯು ಗುಜರಾತ್‌ನ ಬನಸ್ಕಂಥದ 45 ಹಳ್ಳಿಗಳ 87 ಗ್ರಾಮ ಸರೋವರಗಳನ್ನು ಯಶಸ್ವಿಯಾಗಿ ಆಳವಾಗಿಸಿದೆ.


ನ್ಯೂಸ್ 18 ನೊಂದಿಗಿನ ಸಂದರ್ಶನದಲ್ಲಿ, ಅವರು,


"ನಾನು ಬನಸ್ಕಂಥ ಹಳ್ಳಿಗಳಲ್ಲಿ ಸಮುದಾಯಗಳ ಜೊತೆಗೆ ಕೆಲಸ ಮಾಡುತ್ತಿದ್ದೇನಾದರೂ, ಅವರು ಹೇಗೆ ತಮ್ಮ ಸಾಂಪ್ರದಾಯಿಕ ಜಲ ರಕ್ಷಣಾ ಅಭ್ಯಾಸವನ್ನು ಕಡೆಗಣಿಸಿದ್ದರು ಹಾಗೂ ಅದರಿಂದ ಅಂತರ್ಜಲ ಹೇಗೆ ಕ್ಷೀಣಿಸಿತು ಎಂಬುದನ್ನು ಕಂಡಿದ್ದೇನೆ. ಹಲವಾರು ಹಳ್ಳಿಗಳಲ್ಲಿ ರೈತರು ನೀರಿಗಾಗಿ 1,100 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸುತ್ತಿದ್ದರು. ನಂತರ ಜಲ ಸಂರಕ್ಷಣೆಯ ಸಲುವಾಗಿ ನಾನು ಸ್ಥಳೀಯರನ್ನು ಭೇಟಿಯಾಗತೊಡಗಿದೆ. ಮೊದಮೊದಲು ಅಂತರ್ಜಲ ಸಿಗುತ್ತಿತಾದ್ದರಿಂದ ಯಾರು ಅಷ್ಟು ಆಸಕ್ತಿ ತೋರಿಸಲಿಲ್ಲ. ಆದರೆ ನಾವು ಅವರನ್ನು ಸಂವೇದನಾಶೀಲರನ್ನಾಗಿ ಮಾಡುವ ಪ್ರಯತ್ನ ಬಿಡಲಿಲ್ಲ ಹಾಗೂ ಕೆರೆ ಆಳಗೊಳಿಸುವ ನಮ್ಮ ಕಾರ್ಯವನ್ನು ತಾರದ್ ತಾಲೂಕಿನ ಅಸೋದಾರ್ ಎಂಬ ಹಳ್ಳಿಯಿಂದ ಶುರುಮಾಡಿದೆವು."


ಮಿತ್ತಲ್ ಅವರ ಕೆರೆ ಉಳಿಸುವ ಅನ್ವೇಷಣಾ ಕಾರ್ಯ 2015 ರಲ್ಲಿ ಯಾವಾಗ ಅವರು ಸಮಸ್ಯೆಗಳನ್ನು ಪರಿಹರಿಸಲು ತಾವೇ ಮುಂದಾದರೋ ಆಗ ಆರಂಭಗೊಂಡಿತು.


ಆದಾಗ್ಯೂ ಕೇವಲ ಜಲಸಂರಕ್ಷಣೆ ಅಷ್ಟೇ ಅವರ ಕಾರ್ಯವಾಗಿರಲಿಲ್ಲ. ಅವರು ವಂಚಿತ ಹಾಗೂ ವಿಮುಕ್ತ ಸಮುದಾಯದವರಿಗೆ ಸಹಾಯ ಮಾಡಲು ಬಯಸಿದ್ದರು. ಹಳ್ಳಿಗರಿಗೆ ಜಲ ಸಂರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಿದ ಮಿತ್ತಲ್, ಅಲ್ಲಿನ ವಂಚಿತ ಸಮುದಾತಗಳಿಗೆ ಸಹಾಯ ಮಾಡಿ ಎಂದು ಅವರಿಗೆ ಕೇಳಿ ಕೊಂಡರು, ಅವರು ಸಹ ಒಪ್ಪಿಕೊಂಡರು.


q

ಕೆರೆಗಾಗಿ ಪ್ರದೇಶವನ್ನು ಅಣಿಗೊಳಿಸುತ್ತಿರುವುದು. (ಚಿತ್ರ: ವಿಎಸ್ಎಸ್ಎಂ ಭಾರತ)


ಜಲ ಸಂರಕ್ಷಣೆಯ ಕೆಲಸ ಮಾಡುತ್ತಿದ್ದ ಹಳ್ಳಿಯವರು ಅದರ ಜೊತೆಗೆ ವಂಚಿತ ಹಾಗೂ ವಿಮುಕ್ತ ಸಮುದಾಯದ ಜನರನ್ನು ಮುಖ್ಯವಾಹಿನಿಯ ಜೊತೆ ಸಂಪರ್ಕ ಕಲ್ಪಿಸಿ ಸಂಯೋಜಿಸುವ ಕಾರ್ಯವನ್ನೂ ಮಾಡಿದರು.


ಯೋಜನೆಯ ಅಂಗವಾಗಿ, ಮಿತ್ತಲ್ ತಮ್ಮ ಸಂಸ್ಥೆಯ ವತಿಯಿಂದ ಜೆಸಿಬಿ ಗಳನ್ನು ಒದಗಿಸಿದರೆ ಹಳ್ಳಿಯವರು ಟ್ರ್ಯಾಕ್ಟರ್ ಮೂಲಕ ಮಣ್ಣನ್ನು ಹೊರಹಾಕುವ ಹಾಗೂ ಇನ್ನುಳಿದ ಖರ್ಚನ್ನು ನೋಡಿಕೊಂಡರು.


ಅಂತಹ ಒಂದು ಕೆರೆ ಪುನರುಜ್ಜೀವನ ಕಾರ್ಯದಲ್ಲಿ ಮಿತ್ತಲ್, ಹಳ್ಳಿಗರೊಂದಿಗೆ ಸೇರಿ ಕಳೆಯನ್ನು ಹಾಗೂ ಗಂಡೋ ಬಾವಲ್ (ಅಕೇಶಿಯ ನಿಲೋಟೆಸಿಯ) ಕಾಡು ಮರಗಳನ್ನು ತೆರವುಗೊಳಿಸಲು ಬಯಸಿದರು ಹಾಗೂ ಅದೇ ಸಮಯದಲ್ಲಿ ಯಾವುದೇ ಮರಗಳಿಗೆ ಹಾನಿಯಾಗದಂತೆ ನೋಡಿಕೊಂಡರು.

q

ಗುಜರಾತ್ ನಲ್ಲಿ ಗಿಡ ನೆಡುವ ಕಾರ್ಯವನ್ನು ಮುನ್ನಡೆಸುತ್ತ. (ಚಿತ್ರ: ವಿಎಸ್ಎಸ್ಎಂ ಭಾರತ)


ಜೆಸಿಬಿಗಳಿಂದ ಕೆರೆಯಿಂದ ಹೊರ ತೆಗೆದ ಹೂಳನ್ನು ತಮ್ಮ ಹೊಲಗಳಿಗೆ ಹಾಕಿಕೊಳ್ಳಲು ರೈತರಿಗೆ ನೀಡಲಾಯಿತು. ಪ್ಲಸ್ ಅಪ್ರೋಚ್‌ ನ ಪ್ರಕಾರ, ಕೆರೆಯ ನೀರು ಹಿಡಿದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚು ಮಾಡಲಿಕ್ಕಾಗಿ ಇನ್ನಷ್ಟು ಆಳಕ್ಕೆ ತೋಡಲಾಯಿತು.


"ಕೆರೆಗಳಿಗೆ ನೀರು ಕುಡಿಯಲು ಜಾನುವಾರುಗಳು ಅಥವ ಪ್ರಾಣಿಗಳು ಬಂದು, ಅದರಲ್ಲಿ ಬಿದ್ದು ಬಿಡುತ್ತಿದ್ದವು, ಅದಕ್ಕಾಗಿ ಕೆರೆಯ ಏರಿಯನ್ನು ಒಂದು ನಿರ್ಧಿಷ್ಟ ಮಟ್ಟಕ್ಕೆ ಏರಿಸಲಾಯಿತು".


ಈಗೀಗ ಹಲವು ಹಳ್ಳಿಯ ಜನರು ಮಿತ್ತಲ್ ಅವರ ಸಂಸ್ಥೆಗೆ ಸಹಾಯ ನೀಡುತ್ತಿದ್ದಾರೆ. ಬನಸ್ಕಾಂತ ಜಿಲ್ಲೆಯ, ಕನ್ಕ್ರೆಜ್ ತಾಲೂಕಿನ ಅದ್ಗಮ್ ಹಳ್ಳಿಯ ಓರ್ವ ನಿವಾಸಿಗಳು


"ಪಟೇಲ ರೊಂದಿಗೆ ಸೇರಿ ಕೆರೆ ಪುನರುಜ್ಜೀವನಗೊಳಿಸಿದ ನಂತರ ನೂರು ಜನ ರೈತರಿಗೆ ವ್ಯವಸಾಯಕ್ಕೆ ನೀರು ಸಿಗುತ್ತಿದೆ ಮತ್ತು ಈಗ ಮಳೆಯ ಕೊರತೆ ಕಂಡರೂ ನಮಗೆ ನೀರಿನ ತೊಂದರೆ ಕಾಣಿಸುತ್ತಿಲ್ಲ" ಎಂದರು.


ಈಗ ಮಿತ್ತಲ್, ಕೆರೆ ಪುನರುಜ್ಜೀವನಗೊಳಿಸುವುದು ಮತ್ತು ಸಮುದಾಯಗಳಿಗೆ ಶಕ್ತಿ ತುಂಬುವ ಕಾರ್ಯದ ನಂತರ ಯುವಕರಿಗೆ, ಹಳ್ಳಿಗಳಿಗೆ ಸಹಾಯ ಮಾಡುವುದಕ್ಕಾಗಿ ಪ್ರೇರಣೆ ನೀಡುತ್ತಿದ್ದಾರೆ.