10 ನಿಮಿಷದಲ್ಲಿ ಸೊಳ್ಳೆಯಿಂದ ಹರಡುವ ರೋಗವನ್ನು ಪತ್ತೆ ಹೆಚ್ಚುವ ದಂಪತಿಗಳ ಸಾಧನ

ಸೊಳ್ಳೆಗಳು ಅತಿಯಾಗಿರುವ ಪ್ರದೇಶಗಳಲ್ಲಿ ಹರಡುವ ಮಲೇರಿಯಾ ಚಿಕನ್ ಗುನ್ಯಾದಂತಹ ರೋಗಗಳು ಅಧಿಕವಾಗಿದ್ದು, ಇದರಿಂದ ಜನರನ್ನು ರಕ್ಷಿಸಲು ಮತ್ತು 10 ನಿಮಿಷಗಳಲ್ಲಿ ರೋಗವನ್ನು ನಿರ್ಣಯಿಸಲು ಸಾಧ್ಯವಾಗುವಂತ ಅಮೆರೋಲೈಟ್ ಬಯೋಟಿಕ್ ತಂತ್ರಜ್ಞಾನವನ್ನು ಡಾ. ಬಿನಿತಾ ತುಂಗಾ ಹಾಗೂ ಡಾ ರಾಶೆಬಾರಿ ತುಂಗಾ ಅವರು ಆವಿಷ್ಕರಿಸಿದ್ದಾರೆ.

10 ನಿಮಿಷದಲ್ಲಿ ಸೊಳ್ಳೆಯಿಂದ ಹರಡುವ ರೋಗವನ್ನು ಪತ್ತೆ ಹೆಚ್ಚುವ ದಂಪತಿಗಳ ಸಾಧನ

Monday March 30, 2020,

3 min Read

ಸೊಳ್ಳೆ ವಿಶ್ವದ ಅತ್ಯಂತ ಮಾರಕ ಕೀಟ ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ನಂಬುತ್ತಾರೆ, “ಸೊಳ್ಳೆ ನೂರು ವರ್ಷಗಳಲ್ಲಿ ಶಾರ್ಕ್ ಕೊಲ್ಲುವುದಕ್ಕಿಂತ ಒಂದೇ ದಿನದಲ್ಲಿ ಹೆಚ್ಚು ಜನರನ್ನು ಕೊಲ್ಲುತ್ತದೆ,” ಎಂದು ಅವರು ಅಭಿಪ್ರಾಯಪಡುತ್ತಾರೆ ಮತ್ತು ಎಲ್ಲೆಡೆ ಸೊಳ್ಳೆಯಿಂದ ಹರಡುವ ರೋಗಗಳ ಬಗ್ಗೆ ಅನೇಕ ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದಾರೆ.


ಗ್ರಾಮೀಣ ಭಾರತದಲ್ಲಿ, ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಯಿಂದ ಹರಡುವ ರೋಗಗಳಿಂದ ಅನೇಕ ಜನರು ಬಳಲುತ್ತಿದ್ದಾರೆ. ಆದಾಗ್ಯೂ, ರಕ್ತ, ಮೂತ್ರಕ್ಕೆ ಸಂಬಂಧಿಸಿದ ಪರೀಕ್ಷಾ ಫಲಿತಾಂಶಗಳು ನಗರದ ಆಸ್ಪತ್ರೆ ಅಥವಾ ರೋಗನಿರ್ಣಯ ಪ್ರಯೋಗಾಲಯದಿಂದ ಬಂದ ನಂತರವೇ ರೋಗವನ್ನು ಪತ್ತೆ ಮಾಡಬಹುದು.


ಮೂರು ರೋಗಗಳಲ್ಲಿ ಒಂದು ರೋಗವನ್ನು ಅಂದರೆ ಡೆಂಗೂವನ್ನು ಮಾತ್ರ ಪರೀಕ್ಷಿಸುವ ಸಾಧ್ಯತೆಗಳಿವೆ. ಇನ್ನುಳಿದಂತೆ ಮಲೇರಿಯಾ ಮತ್ತು ಚಿಕೂನ್‌ಗುನ್ಯಾವನ್ನು ಪರೀಕ್ಷಿಸಲು ತುಂಬಾ ಸಮಯ ಕಾಯುಬೇಕಾಗಿರುವುದಲ್ಲದೆ, 5,000 ರೂ. ಪಾವತಿಸಬೇಕಾಗುತ್ತದೆ.


ಬೆಂಗಳೂರು ಮೂಲದ ಹೆಲ್ತ್‌ಕೇರ್ ಸ್ಟಾರ್ಟ್ಅಪ್ ಅಮೆಲಿಯೊರೇಟ್ ಬಯೋಟೆಕ್‌ನ ಸಿಟಿಒ ಮತ್ತು ಸಹ-ಸಂಸ್ಥಾಪಕಿ ಡಾ.ಬಿನಿತಾ ಶ್ರೀವಾಸ್ತವ ತುಂಗಾ ಹೇಳುವಂತೆ, ಇಂತಹ ಪತ್ತೆಯಾಗದ ಕೊಇನ್ಫೆಕ್ಷನ್ ಮತ್ತು ತಪ್ಪಾದ ರೋಗನಿರ್ಣಯ, ವಿಳಂಬವಾದ ಚಿಕಿತ್ಸೆ ಇವೆಲ್ಲವೂ ರೋಗಿಯ ಮೇಲೆ ಆರ್ಥಿಕ ಹೊರೆಯನ್ನು ಹೊರಿಸುತ್ತದೆ.


ಚಿನ್ನದ ವಿಭಾಗದಲ್ಲಿ ಬೆಂಗಳೂರು ಮೂಲದ ವೈದ್ಯರಾದ ಬಿನಿತಾ ಎಸ್ ತುಂಗಾ ಮತ್ತು ರಾಶ್‌ಬೆಹರಿ ತುಂಗಾ 20 ಲಕ್ಷ ರೂ. ಬಹುಮಾನವನ್ನು ಇನ್ಫೋಸಿಸ್ ನ ಸುಧಾಮೂರ್ತಿ ಮತ್ತು ನಂದನ್ ನಿಲೇಕಣಿ ಅವರಿಂದ ಪಡೆದುಕೊಳ್ಳುತ್ತಿರುವುದು.



ರೋಗ ನಿರ್ಣಯ ಸಾಧನ

ಬಿನಿತಾ ಅವರ ಪತಿ ಮತ್ತು ಸಹ-ಸಂಸ್ಥಾಪಕ ಡಾ.ರಾಶ್‌ಬೆಹರಿ ತುಂಗಾ ಅವರೊಂದಿಗೆ 2016 ರಿಂದ ಸಂಭಾವ್ಯ ಪರ್ಯಾಯ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾವನ್ನು ತಮ್ಮ ಆರಂಭಿಕ ಹಂತಗಳಲ್ಲಿ ಯಶಸ್ವಿಯಾಗಿ ಪತ್ತೆ ಮಾಡುವ ಸಾಧನವನ್ನು ಇವರು ಕಂಡುಹಿಡಿದಿದ್ದಾರೆ.


ನಿಖರವಾಗಿ ಹೇಳುವುದಾದರೆ, ರೋಗಲಕ್ಷಣಗಳನ್ನು ಪ್ರದರ್ಶಿಸಿದ ಮೊದಲ ದಿನದಂದು ಸಾಧನವು ಎಲ್ಲಾ ಮೂರು ರೋಗಗಳನ್ನು 10 ನಿಮಿಷಗಳಲ್ಲಿ ಪತ್ತೆ ಮಾಡುತ್ತದೆ.


ಬಿನಿತಾ ಪ್ರಕಾರ, ಗ್ರಾಮೀಣ ಜನಸಂಖ್ಯೆ ಮತ್ತು ದೂರಸ್ಥ ಆರೋಗ್ಯ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ, ಇದನ್ನು ಅಗ್ಗವಾಗಿಸುವುದು ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡುವುದು ಅವರ ಗುರಿಯಾಗಿದೆ.


"ಸಾಧನವನ್ನು ಬಳಸಲು ಒಬ್ಬರಿಗೆ ಯಾವುದೇ ನಿರ್ದಿಷ್ಟ ಉಪಕರಣಗಳು ಅಥವಾ ತರಬೇತಿ ಪಡೆದ ತಂತ್ರಜ್ಞರ ಅಗತ್ಯವಿಲ್ಲ. ಶೀಘ್ರದಲ್ಲೇ ಮಾರುಕಟ್ಟೆಗೆ ಪ್ರವೇಶಿಸಲು ನಾವು ಆಶಿಸುತ್ತೇವೆ ಮತ್ತು ಎಲ್ಲಾ ಮೂರು ಕಾಯಿಲೆಗಳ ಪರೀಕ್ಷೆಯ ಬೆಲೆ ಕೇವಲ 600 ರೂ ಆಗಿದೆ, ಈ ಎಲ್ಲ ಪರೀಕ್ಷೆಗಳ ಸಾಂಪ್ರದಾಯಿಕ ಬೆಲೆ 4 ರಿಂದ 5 ಸಾವಿರವಿದೆ,” ಎಂದು ಅವರು ವಿವರಿಸುತ್ತಾರೆ.


ಸಹ-ಸಂಸ್ಥಾಪಕರನ್ನು ಇತ್ತೀಚೆಗೆ ಐಟಿ ದಿಗ್ಗಜ ಇನ್ಫೋಸಿಸ್ ಫೌಂಡೇಶನ್ ಗುರುತಿಸಿದೆ. ಆರೊಹನ್ ಸೋಷಿಯಲ್ ಇನ್ನೋವೇಶನ್ ಅವಾರ್ಡ್ಸ್ನಲ್ಲಿ ಪ್ರಸ್ತುತ ಕ್ಲಿನಿಕಲ್ ಮೌಲ್ಯಮಾಪನ ಹಂತದಲ್ಲಿರುವ ಅಶೂರ್ಡ್ ಹೆಸರಿನ ಅವರ ಸಾಧನವು ಚಿನ್ನದ ವಿಭಾಗದಲ್ಲಿ 20 ಲಕ್ಷ ರೂ ಮೌಲ್ಯದ ಬಹುಮಾನವನ್ನು ಪಡೆದಿದೆ. ಪ್ರಸ್ತುತ ಈ ಕೆಲಸವು ಹಲವಾರು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.


ತ್ವರಿತ ರೋಗನಿರ್ಣಯದ ಕಿಟ್‌ಗಳಾದ ಎಲಿಸಾ ಮತ್ತು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ನಂತಹ ತಂತ್ರಗಳು ಸೊಳ್ಳೆಯಿಂದ ಹರಡುವ ರೋಗಗಳನ್ನು ಪತ್ತೆಹಚ್ಚುವ ಪ್ರಸ್ತುತ ವಿಧಾನಗಳ ಕ್ಷೇತ್ರದಲ್ಲಿ ಈ ಬೆಳವಣಿಗೆ ಗಮನಾರ್ಹವಾಗಿದೆ.


"ಇವುಗಳಿಗೆ ಅತ್ಯಾಧುನಿಕ ಉಪಕರಣಗಳು ಮತ್ತು ಲ್ಯಾಬ್ ಸೌಲಭ್ಯಗಳು ಬೇಕಾಗುತ್ತವೆ," ಎಂದು ಬಿನಿತಾ ವಿವರಿಸುತ್ತಾರೆ.

ಆರಂಭದ ದಿನಗಳು ಮತ್ತು ಅಡೆತಡೆಗಳು

ಸೊಳ್ಳೆಯಿಂದ ಹರಡುವ ರೋಗಗಳನ್ನು ನಿಭಾಯಿಸಬಲ್ಲ ಪರಿಕರಗಳ ಅಗತ್ಯವು ತಾವು ಕಾಲೇಜಿನಲ್ಲಿದ್ದಾಗ ಬಿನಿತಾ ತಮ್ಮ 11 ವರ್ಷದ ಸೋದರ ಸೊಸೆಯನ್ನು ಡೆಂಗ್ಯೂ ಜ್ವರದಲ್ಲಿ ಕಳೆದುಕೊಂಡಾಗ ಅರ್ಥವಾಯಿತು.


"ಇದೆ ತರ ಇನ್ನೂ ಎರಡು ರೀತಿಯ ಪ್ರಕರಣಗಳು ಸಂಭವಿಸಿದವು, ಆರಂಭಿಕ ಹಂತದ ರೋಗನಿರ್ಣಯವು ಸಂಭವಿಸದ ಕಾರಣ ನಾನು ನನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡೆ," ಎಂದು ಅವರು ನೆನಪಿಸಿಕೊಳ್ಳುತ್ತಾರೆ.


ಬಿನಿತಾ ಮತ್ತು ರಾಶ್‌ಬೆಹಾರಿ ಇಬ್ಬರ ಈ ನವೋದ್ಯಮದ ಪ್ರಯಾಣವು ಸವಾಲುಗಳಿಲ್ಲದೆ ಇರಲಿಲ್ಲ, ವಿಶೇಷವಾಗಿ ಆರೋಗ್ಯ ಮತ್ತು ರೋಗನಿರ್ಣಯದ ಪರಿಹಾರಗಳು ಸದಾ ಹೊಸತನವನ್ನು ಹೊಂದಿರುವುದರಿಂದ ಹೆಚ್ಚಿನ ಆರೋಗ್ಯ ಮತ್ತು ಸಾಮಾಜಿಕ ಉದ್ಯಮಿಗಳಂತೆ, ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ತಮ್ಮ ಉತ್ಪನ್ನಗಳಲ್ಲಿ ಆಸಕ್ತಿಯನ್ನು ತೋರಿಸುವುದು ಮತ್ತು ಅಳವಡಿಸಿಕೊಳ್ಳುವುದು ಸುಲಭವಾಗಿರಲಿಲ್ಲ.


"ಒಂದು ಭೇಟಿಯಲ್ಲಿಯೇ ರೋಗವನ್ನು ಪತ್ತೆಹಚ್ಚಬಹುದು ಮತ್ತು ಹೆಚ್ಚು ಮುಖ್ಯವಾಗಿ, ಚಿಕಿತ್ಸೆಯನ್ನು ಈಗಿನಿಂದಲೇ ಪ್ರಾರಂಭಿಸಬಹುದು ಎಂದು ನಾವು ಅವರಿಗೆ ಹೇಳುತ್ತೇವೆ," ಎಂದು ಬಿನಿತಾ ಹೇಳುತ್ತಾರೆ. ಈಗ ಪ್ರಸ್ತುತ ಆರೋಗ್ಯ ಕೇಂದ್ರಗಳು, ರೋಗನಿರ್ಣಯ ಮತ್ತು ರೋಗಶಾಸ್ತ್ರ ಪ್ರಯೋಗಾಲಯಗಳು ಮತ್ತು ವೈದ್ಯರನ್ನು ಇವರು ಭೇಟಿಮಾಡುತ್ತಿದ್ದಾರೆ.


ಸ್ಟೇಮ್ ಕ್ಷೇತ್ರದಲ್ಲಿ ಮಹಿಳೆ

ಬಿನಿತಾ ಬಾಲ್ಯದಿಂದಲೇ ಎಸ್‌ಟಿಇಎಂ ವಿಷಯಗಳ ಬಗ್ಗೆ ತಮಗೆ ಇರುವ ಆಸಕ್ತಿಯನ್ನು ನೆನಪಿಸಿಕೊಳ್ಳುತ್ತಾರೆ. ಆಕೆಯ ತಂದೆ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ನ ಅಗ್ರಸ್ಥಾನದಲ್ಲಿದ್ದರು ಮತ್ತು ಅವರ ಐಐಟಿ-ಬಾಂಬೆಯ ಪದವೀಧರರಾದ ಸಹೋದರರಿಂದಲೂ ಅವರು ಸ್ಫೂರ್ತಿ ಪಡೆದಿದ್ದರು.


ಐಐಟಿ ಖರಗ್‌ಪುರದಲ್ಲಿ ವ್ಯಾಸಂಗ ಮಾಡಿ ಸೆಲ್ ಮತ್ತು ಮೊಲಿಕ್ಯೂಲರ್ ಬಯಾಲಜಿಯಲ್ಲಿ ಪಿಎಚ್‌ಡಿ ಹೊಂದಿದ ಬಿನಿತಾ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದಾಗ ಮದುವೆಯಾಗುವುದೋ ಅಥವಾ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದೋ ಎಂಬ ಗೊಂದಲದಲ್ಲಿದ್ದರು.


ಆದಾಗ್ಯೂ, ಅವರು ಸಂಶೋಧನೆಯನ್ನು ಮುಂದುವರಿಸಲು ನಿರ್ಧರಿಸಿದರು ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಸದೆ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಪ್ರಾರಂಭಿಸಿದರು. ನಂತರ ಎರಡು ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಆಹ್ವಾನವನ್ನು ಸ್ವೀಕರಿಸಿದರು ಎಂದು ಬನಿತಾ ನೆನಪಿಸಿಕೊಳ್ಳುತ್ತಾರೆ.


ಅವರು 2004 ರಲ್ಲಿ ಹೈದರಾಬಾದ್‌ನಲ್ಲಿ ತಮ್ಮ ಮೊದಲ ಕೆಲಸವನ್ನು ಪ್ರಾರಂಭಿಸಿದರು, ಮತ್ತು ವೃತ್ತಿಪರ ಜಗತ್ತು ತನ್ನದೇ ಆದ ಸವಾಲುಗಳೊಂದಿಗೆ ಕೂಡಿತ್ತು. "ನಾನು ಉತ್ತಮ ಸಂಸ್ಥೆಯಿಂದ ಪಿಎಚ್‌ಡಿ ಪದವಿ ಪಡೆದಿದ್ದರೂ ಸಹ ಮಹಿಳೆಯರಿಗೆ ಉನ್ನತ ಸ್ಥಾನವನ್ನು ನೀಡುವ ವಿಷಯದಲ್ಲಿ ಸ್ವೀಕಾರಾರ್ಹತೆ ಕಡಿಮೆ."


"ಮಹಿಳೆಯು ಈ ರೀತಿಯ ವಾತಾವರಣದಲ್ಲಿ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ತನ್ನದೇ ಆದ ನಿರ್ಧಾರಗಳಲ್ಲಿ ದೃಢವಾಗಿರುವುದು ಮತ್ತು ಅವಳು ಅಷ್ಟೇ ಸಮರ್ಥಳೆಂದು ತೋರಿಸಲು ನಿಜವಾಗಿಯೂ ಶ್ರಮಿಸುವುದು," ಎಂದು ಅವರು ಹೇಳುತ್ತಾರೆ.


ಅವರ ಜೀವನ ಮತ್ತು ಕಲಿಕೆಯ ಮಂತ್ರವೆಂದರೆ ಯಾವಾಗಲೂ "ಹಸಿವಿನಿಂದಿರುವುದು ಮತ್ತು ಮೂರ್ಖರಾಗಿರುವುದು". ಅಂತೆಯೇ, ಯುವಜನಾಂಗ ಮತ್ತು ಮಹತ್ವಾಕಾಂಕ್ಷಿ ವಿಜ್ಞಾನಿಗಳು ಸಮಾಜಕ್ಕೆ ಮುಖ್ಯವಾದುದನ್ನು ಸರಿಯಾದ ಉದ್ದೇಶದೊಂದಿಗೆ ಮಾಡಬೇಕು ಎಂದು ಬಿನಿತಾ ಒತ್ತಾಯಿಸುತ್ತಾರೆ.