ಮಳೆಯಲ್ಲಿ 7 ಗಂಟೆ ನಿಂತು ತೆರೆದ ಗುಂಡಿಯ ಬಗ್ಗೆ ವಾಹನಗಳಿಗೆ ಎಚ್ಚರಿಕೆ ನೀಡಿದ ಮುಂಬೈನ ಹೂ ಮಾರಾಟಗಾರ್ತಿ

ಹೂವಿನ ವ್ಯಾಪಾರಿ ಕಾಂತಾ ಮೂರ್ತಿ ಅವರು ಅಗಸ್ಟ್‌ 4 ರಂದು ಹೆಚ್ಚಿನ ನೀರು ಇಂಗಿ ಹೋಗಲೆಂದು ಗುಂಡಿಯ ಮುಚ್ಚಳವನ್ನು ತೆರೆದು, ಅದರ ಮುಂದೆಯೆ 7 ಗಂಟೆ ನಿಂತು ಮುಂಬರುವ ವಾಹನಗಳಿಗೆ ಎಚ್ಚರಿಕೆ ನೀಡಿದರು.

ಮಳೆಯಲ್ಲಿ 7 ಗಂಟೆ ನಿಂತು ತೆರೆದ ಗುಂಡಿಯ ಬಗ್ಗೆ ವಾಹನಗಳಿಗೆ ಎಚ್ಚರಿಕೆ ನೀಡಿದ ಮುಂಬೈನ ಹೂ ಮಾರಾಟಗಾರ್ತಿ

Thursday August 13, 2020,

2 min Read

ಮುಂಬೈ ನಗರ ಮತ್ತೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ತತ್ತರಿಸಿದೆ. ಕಳೆದ ವಾರ ಅಲ್ಲಿ 47 ವರ್ಷದಲ್ಲೆ ಅತಿ ಹೆಚ್ಚು ಮಳೆಯಾಗಿ, ಎಲ್ಲೆಂದರಲ್ಲಿ ನೀರು ಬಂದು ಈಗಾಗಲೇ ಕೊರೊನಾ ಸಂಕಷ್ಟ ಎದುರಿಸುತ್ತಿರುವ ಜನರ ಜೀವನವನ್ನು ಮತ್ತಷ್ಟು ದುರ್ಬರಗೊಳಿಸಿದೆ.


ಕಾಂತಾ ಮೂರ್ತಿ (ಚಿತ್ರಕೃಪೆ: ಎಎನ್‌ಐ)


ಕೆಲವು ವರ್ಷಗಳ ಹಿಂದೆ ಇಂತಹದೆ ಪರಿಸ್ಥಿಯಲ್ಲಿ ದೀಪಕ ಅಮ್ರಾಪುರ್ಕರ್‌ ಎಂಬ ವೈದ್ಯರೊಬ್ಬರು ಎಲ್ಫಿನಸ್ಟೊನ್‌ ಜಂಕ್ಷನ್‌ನ ಗುಂಡಿಯಲ್ಲಿ ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಎರಡು ದಿನಗಳ ನಂತರ ಅವರ ದೇಹ ವೊರ್ಲಿ ಬಳಿಯ ಸಾಗರದಲ್ಲಿ ಸಿಕ್ಕಿತ್ತು.


ಆ ಕರಾಳ ಘಟನೆಯ ನೆನಪಿನ್ನು ಹಸಿವಾಗಲೆ ಹೂವಿನ ವ್ಯಾಪಾರಿ ಕಾಂತಾ ಮೂರ್ತಿ ಅವರು ಅಗಸ್ಟ್‌ 4 ರಂದು ಹೆಚ್ಚಿನ ನೀರು ಇಂಗಿ ಹೋಗಲೆಂದು ಗುಂಡಿಯ ಮುಚ್ಚಳವನ್ನು ತೆರೆದು, ಅದರ ಮುಂದೆಯೆ 7 ಗಂಟೆ ನಿಂತು ಮುಂಬರುವ ವಾಹನಗಳಿಗೆ ಎಚ್ಚರಿಕೆ ನೀಡಿದರು.

“ನಾನು ಹೂವು ಮಾರಿ ಜೀವನ ನಡೆಸುತ್ತಿದ್ದೆನೆ ಮತ್ತು ನನ್ನ 3 ಮಕ್ಕಳನ್ನು ಓದಿಸುತ್ತಿದ್ದೆನೆ. ನನ್ನ ಇತರ 5 ಮಕ್ಕಳು ಮದುವೆಯಾಗಿದ್ದಾರೆ ಮತ್ತು ನಮ್ಮ ಮನೆಯಲ್ಲಿ ನಾನೊಬ್ಬಳೆ ದುಡಿಯುವವಳು. ರೈಲ್ವೆ ಅಪಘಾತಕ್ಕೆ ಒಳಗಾಗಿ ನನ್ನ ಪತಿಯು ಅಂಗವಿಕಲರಾಗಿದ್ದಾರೆ,” ಎಂದು ಕಾಂತಾ ಮೂರ್ತಿಯವರು ಎಎನ್‌ಐಗೆ ಹೇಳಿದರು.


“ಅಗಸ್ಟ್‌ 4 ರಂದು ಭಾರೀ ಮಳೆಯಿಂದ ನಗರದಲ್ಲಿ ಎಲ್ಲೆಲ್ಲೂ ನೀರಿತ್ತು, ಜನರಿಗೆ ತುಂಬಾ ತೊಂದರೆಯಾಗಿತ್ತು. ಒಂದಷ್ಟು ವಾಹನಗಳು ನೀರಿನಲ್ಲಿ ತೆಲುತ್ತಿದ್ದವು ಮತ್ತು ನನ್ನ ಮನೆಯಲ್ಲಿರುವ ಎಲ್ಲ ವಸ್ತುಗಳು ಕಾಣೆಯಾಗಿದ್ದವು. ಹಾಗಾಗಿ ನಾನು ರೋಡಿಗೆ ಬಂದು ನೀರು ಹೋಗಲು ಗುಂಡಿಯನ್ನು ತೆರೆದೆ,” ಎಂದರು ಅವರು.

ಈ ಮಹಿಳೆ ಬರುತ್ತಿರುವ ವಾಹನಗಳಿಗೆ ಸನ್ನೆ ಮಾಡುತ್ತಾ ಗುಂಡಿಯ ಬಳಿ 7 ಗಂಟೆಯವರೆಗೂ ನಿಂತಿದ್ದಾರೆ. ಇದೆಲ್ಲದರ ನಡುವೆ ತಮ್ಮ ಮಕ್ಕಳ ಶಿಕ್ಷಣಕ್ಕೆಂದು ಕೂಡಿಟ್ಟ 10 ಸಾವಿರ ರೂ.ಯನ್ನು ಕಳೆದುಕೊಂಡಿದ್ದಾರೆ.


ಮಹಿಳೆಯ ಈ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮಾರನೇ ದಿನ ಬೃಹನ್‌ಮುಂಬೈ ಮುನ್ಸಿಪಾಲ್‌ ಕಾರ್ಪೊರೆಷನ್‌ ಗುಂಡಿ ಏಕೆ ತೆಗೆದಿರೆಂದು ಬಯ್ದಿದ್ದಾರೆ.

“ನಾನು ರಸ್ತೆ ಮಧ್ಯೆ ನೀರಿನಲ್ಲಿ ಏಳು ಗಂಟೆಗಳ ಕಾಲ ನಿಂತಿದ್ದೆ, ಹಲವರು ನನಗೆ ಸಲಾಂ ಹೊಡೆದರು. ಕೆಲವರು ಕೊಡೆ ನೀಡಿದರೆ, ಪೊಲೀಸರು ನನ್ನನ್ನು ಪ್ರೋತ್ಸಾಹಿಸಿದರು. ಜನರು ಬಿಎಮ್‌ಸಿ ಗೆ ಫೋನ್‌ ಮಾಡಿದರು, ಆದರೆ ಯಾರೂ ಬರಲಿಲ್ಲ. ಮುಂದಿನ ದಿನ ಕೆಲವು ಅಧಿಕಾರಗಳು ಬಂದು ಗುಂಡಿಯ ಮುಚ್ಚಳ ತೆಗೆದಿದ್ದಕ್ಕೆ ನನ್ನನ್ನು ಬಯ್ದರು,” ಎಂದರು ಅವರು, ವರದಿ ಹಿಂದೂಸ್ತಾನ್‌ ಟೈಮ್ಸ್‌.