ಕೋವಿಡ್‌-19 ಪರೀಕ್ಷೆ ನಡೆಸಲು ಅಗ್ಗದ ಟೆಸ್ಟ್‌ ಕಿಟ್ ಹೇಗೆ ತಯಾರಿಸಿತು ಮೈಲ್ಯಾಬ್‌?

ಮಹಿಳಾ ವಿಜ್ಞಾನಿ ಮಿನಾಲ್‌ ದೊಖಾವ್‌ ತಾವು ಗರ್ಭಿಣಿಯಾಗಿದ್ದಾಗಲೂ, ಕೋವಿಡ್‌-19 ಟೆಸ್ಟ್‌ ಕಿಟ್‌ ತಯಾರಿಸಲು “ಮೈಲ್ಯಾಬ್”‌ ತಂಡವನ್ನು ಮುನ್ನಡೆಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಕೋವಿಡ್‌-19 ಪರೀಕ್ಷೆ ನಡೆಸಲು ಅಗ್ಗದ ಟೆಸ್ಟ್‌ ಕಿಟ್ ಹೇಗೆ ತಯಾರಿಸಿತು ಮೈಲ್ಯಾಬ್‌?

Tuesday April 07, 2020,

2 min Read

ಹೊಸ ಕೊರೊನಾ ವೈರಸ್‌ ಹಬ್ಬುವಿಕೆಯನ್ನು ತಡೆಯಲು ಭಾರತ ಹೋರಾಡುತ್ತಿದೆ. ಅದಕ್ಕೆ ಔಷಧಿ ಕಂಡುಹಿಡಿಯಲು ಆರೋಗ್ಯ ಸಿಬ್ಬಂದಿ, ವಿಜ್ಞಾನಿಗಳು ಹಾಗೂ ವೈದ್ಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.


ಪುಣೆ ಮೂಲದ ಆಣ್ವಿಕ ರೋಗನಿರ್ಣಯ ನವೋದ್ಯಮ ಮೈಲ್ಯಾಂಗ್‌, ರೋಗವನ್ನು ಎದುರಿಸುವಲ್ಲಿ ಒಂದು ಹೊಸ ಮೈಲಿಗಲ್ಲನ್ನು ಮುಟ್ಟಿದೆ. ಈ ಸೂಕ್ಷ್ಮ ರೋಗವನ್ನು ಕಂಡುಹಿಡಿಯಲು ಸಂಸ್ಥೆಯು, ಮೈಲ್ಯಾಬ್‌ ಪ್ಯಾಥೋಡಿಟೆಕ್ಟ್‌ ಕೋವಿಡ್‌-19 ಕ್ವಾಲಿಟೇಟೀವ್‌ ಪಿಸಿಆರ್‌ ಕಿಟ್‌ ತಯಾರಿಸಿ, ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯಿಂದ ಮಾನ್ಯತೆಯನ್ನೂ ಪಡೆದಿದೆ.


ಮೈಲ್ಯಾಬ್‌ ತಂಡ

ವೈರಾಲಜಿಸ್ಟ್ ಮತ್ತು ಮೈಲಾಬ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥರಾದ ಮಿನಾಲ್ ದಖಾವ್ ಭೋಸಲೆಯವರ ನೇತೃತ್ವದ 10 ವಿಜ್ಞಾನಿಗಳ ತಂಡ ಈ ಮೈಲಿಗಲ್ಲು ಸಾಧಿಸಲು ಕಳೆದ ಆರು ವಾರಗಳ ಕಾಲ ಕೆಲಸ ಮಾಡಿದೆ.


ಸಮಯಕ್ಕೆ ಸರಿಯಾಗಿ ಕಿಟ್ ಅನ್ನು ಅಭಿವೃದ್ಧಿಪಡಿಸಲು ತಂಡದೊಟ್ಟಿಗೆ ಅದರ ಮುಖ್ಯಸ್ಥೆ ಮಿನಾಲ್ ದಖಾವೆ ಅವರು ತಮ್ಮ ಜೀವನದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಈ ಯೋಜನೆಗೆ ತಮ್ಮನ್ನು ಅರ್ಪಿಸಿಕೊಂಡರು.


ಬಿಬಿಸಿ ಪ್ರಕಾರ, ಮಿನಾಲ್ ಕೋವಿಡ್‌-19 ಟೆಸ್ಟ್‌ ಕಿಟ್‌ ತಯಾರಿಸಲು ಫೆಬ್ರವರಿಯಲ್ಲಿ ಆರಂಭಿಸಿದ್ದರು. ಅದೂ ಸಹ ಗರ್ಭದಾರಣೆಯ ತೊಂದರೆಯಿಂದ ಆಸ್ಪತ್ರೆ ಸೇರಿ ಡಿಶ್ಚಾರ್ಜ್‌ ಆದ ಕೆಲವೇ ದಿವಸಗಳಲ್ಲಿ.


ತಮ್ಮ ದೇಶ ತೊಂದರೆಗೀಡಾಗಿರುವ ಈ ಸಮಯದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ಅವರು ಕಿಟ್‌ ತಯಾರಿಸುವಲ್ಲಿ ಯಶಸ್ವಿಯಾದರು. ತಮ್ಮ ಮಗುವಿಗೆ ಜನ್ಮ ನೀಡುವ ಒಂದು ದಿನ ಮೊದಲು ಕಿಟ್‌ ಕೆಲಸವನ್ನು ಪೂರ್ಣಗೊಳಿಸಿ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಿದರು.


ಸದ್ಯ ಚೇತರಿಸಿಕೊಳ್ಳುತ್ತಿರುವ ಮಿನಾಲ್, ಆಸ್ಪತ್ರೆಗೆ ಕರೆದೊಯ್ಯುವ ಒಂದು ಗಂಟೆ ಮೊದಲು ವಾಣಿಜ್ಯ ಅನುಮೋದನೆಗಾಗಿ ಸಿಡಿಎಸ್‌ಸಿಒಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.


ಈ ಹೋರಾಟದಲ್ಲಿ ಕೊರೊನಾವೈರಸ್ ಎದುರಿಸಲು ತಂಡವು ಭಾರತಕ್ಕೆ ಸಹಾಯ ಮಾಡಿದ್ದಲ್ಲದೆ, ಅವರ ಕಠಿಣ ಪರಿಶ್ರಮ ಮತ್ತು ಉತ್ಸಾಹವು ನವೋದ್ಯಮದ ಪರಿಸರ ವ್ಯವಸ್ಥೆಯನ್ನು ವಿಸ್ಮಯಗೊಳಿಸಿತು.


ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ (ಎಂ ಮತ್ತು ಎಂ) ನ ಮಾಜಿ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಬಯೋಕಾನ್ ಅಧ್ಯಕ್ಷರಾದ ಕಿರಣ್ ಮಜುಂದಾರ್-ಶಾ ಅವರು ಮಿನಾಲ್ ಅವರ ಶ್ಲಾಘನೀಯ ಕೆಲಸಕ್ಕಾಗಿ ಟ್ವಿಟರ್‌ನಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.


ಅಗ್ಗದ ಮತ್ತು ಸಮಯ ಉಳಿತಾಯ ಮಾಡುವ ಕಿಟ್

ಮೈಲಾಬ್-ಅಭಿವೃದ್ಧಿಪಡಿಸಿದ ‘ಮೇಡ್ ಇನ್ ಇಂಡಿಯಾ’ ಪರೀಕ್ಷಾ ಕಿಟ್‌ಗಳು ಆಮದು ಮಾಡಿದ ಕಿಟ್‌ಗಳಿಗಿಂತ ಭಿನ್ನವಾಗಿ, ಎರಡೂವರೆ ಗಂಟೆಗಳಲ್ಲಿ ರೋಗನಿರ್ಣಯ ಮಾಡುವ ಸಾಮರ್ಥ್ಯವನ್ನು ಹೊಂದಿವೆ, ಆಮದು ಮಾಡಿಕೊಂಡ ಕಿಟ್‌ಗಳು ಏಳು ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ.


ಭಾರತ ಸರ್ಕಾರವು ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌ನಿಂದ ಆರ್‌ಟಿ-ಪಿಸಿಆರ್ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕ್ರಮವು ಸರ್ಕಾರವು ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಶೀಯ ವಿಮಾನಯಾನ ಸಂಸ್ಥೆಗಳಿಗಾಗುವ ಸರಬರಾಜು ತೊಂದರೆಗಳನ್ನು ತಪ್ಪಿಸುತ್ತದೆ.


ಮೈಲಾಬ್ ಪ್ಯಾಥೊ ಡಿಟೆಕ್ಟ್ ಕೋವಿಡ್‌-19 ಗುಣಾತ್ಮಕವಾಗಿ ಹೋಲಿಸಿದರೆ ಪಿಸಿಆರ್ ಕಿಟ್‌ನ ಪ್ರಸ್ತುತ ಖರೀದಿ ವೆಚ್ಚದ ನಾಲ್ಕನೇ ಒಂದು ಭಾಗದಷ್ಟು ವೆಚ್ಚವಾಗಲಿದೆ ಎಂದು ಸಂಸ್ಥೆ ಹೇಳಿದೆ.


ಬಿಬಿಸಿ ವರದಿಯ ಪ್ರಕಾರ, ವಿದೇಶಿ ಕಿಟ್‌ಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಬೆಲೆಯದ್ದಾಗಿದೆ. ಭಾರತ ಅಭಿವೃದ್ಧಿಪಡಿಸಿದ ಟೆಸ್ಟ್ ಕಿಟ್‌ಗೆ ಕೇವಲ 1,200 ರೂ. ಆದರೆ, ಸರ್ಕಾರವು ಹೊರದೇಶದಿಂದ ಆಮದು ಮಾಡಿಕೊಳ್ಳುವ ಕಿಟ್‌ಗಳ ಬೆಲೆ 4,500 ರೂ. ಇದೆ.


ವಾಣಿಜ್ಯ ಅನುಮೋದನೆ ಪಡೆದ ನಂತರ, ಸ್ಟಾರ್ಟ್ಅಪ್ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಅದರ ಕೋವಿಡ್‌-19 ಪರೀಕ್ಷಾ ಕಿಟ್‌ಗಳ ವಿತರಣೆಯನ್ನು ವೇಗಗೊಳಿಸಲು ಇತ್ತೀಚೆಗೆ ಸೀರಮ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಮತ್ತು ಎಪಿ ಗ್ಲೋಬಲ್ ಅಧ್ಯಕ್ಷ ಅಭಿಜಿತ್ ಪವಾರ್ ಅವರೊಂದಿಗಿನ ಸಹಭಾಗಿತ್ವವನ್ನು ಘೋಷಿಸಿತು.