ದೇಶದ ಮೊದಲ 6 ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಸ್ಥಾನ

ಒಟ್ಟು 141 ನಗರಗಳಿಗೆ ಶ್ರೇಯಾಂಕ ನೀಡಲಾಗಿದ್ದು, ಅದರಲ್ಲಿ 6 ಕ್ಕೆ 5-ಸ್ಟಾರ್‌ ಸಿಕ್ಕರೆ, 65 ಕ್ಕೆ 3-ಸ್ಟಾರ್‌ ಮತ್ತು ಉಳಿದ 70 ನಗರಗಳಿಗೆ 1-ಸ್ಟಾರ್‌ ಶ್ರೇಯಾಂಕ ಲಭಿಸಿದೆ.

ದೇಶದ ಮೊದಲ 6 ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಸ್ಥಾನ

Wednesday May 20, 2020,

1 min Read

ಮಂಗಳವಾರ ತ್ಯಾಜ್ಯ ನಿರ್ವಹಣೆಗಾಗಿ ನಗರಗಳಿಗೆ ಶ್ರೇಯಾಂಕಗಳನ್ನು ಘೋಷಿಸಿದ ಸರ್ಕಾರ, ಮೈಸೂರು ಸೇರಿದಂತೆ ರಾಜಕೋಟ್‌, ಮುಂಬೈ, ಅಂಬಿಕಾಪುರ್‌, ಇಂದೋರ್‌ ನಗರಗಳಿಗೆ 5 ಸ್ಟಾರ್‌ ರೇಟಿಂಗ್‌ ನೀಡಿದ್ದು, ಕೊರೊನಾವೈರಸ್‌ ಮಾಹಾಮಾರಿಯ ಹೋರಾಟದಲ್ಲಿ ಸ್ವಚ್ಛ ಭಾರತ ಅಭಿಯಾನವು ದೊಡ್ಡ ಶಕ್ತಿಯಾಗಿ ಉಪಯೋಗಕ್ಕೆ ಬಂದಿದೆ ಎಂದರು.


ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ನಗರಗಳ ಶ್ರೇಯಾಂಕಗಳನ್ನು ಪ್ರಕಟಿಸಿದರು.


ಒಟ್ಟು 141 ನಗರಗಳಿಗೆ ಶ್ರೇಯಾಂಕ ನೀಡಲಾಗಿದ್ದು, ಅದರಲ್ಲಿ 6 ಕ್ಕೆ 5-ಸ್ಟಾರ್‌ ಸಿಕ್ಕರೆ, 65 ಕ್ಕೆ 3-ಸ್ಟಾರ್‌ ಮತ್ತು ಉಳಿದ 70 ನಗರಗಳಿಗೆ 1-ಸ್ಟಾರ್‌ ಶ್ರೇಯಾಂಕ ಲಭಿಸಿದೆ.


ನವದೆಹಲಿ, ಹರಿಯಾಣದ ಕರ್ನಾಲ್; ಆಂಧ್ರಪ್ರದೇಶದ ತಿರುಪತಿ ಮತ್ತು ವಿಜಯವಾಡ; ಚಂಡೀಗಡ; ಛತ್ತೀಸಘರ್‌ ನ ಭಿಲೈ ನಗರ; ಗುಜರಾತ್‌ನ ಅಹಮದಾಬಾದ್; ಮಧ್ಯ ಪ್ರದೇಶದ ಭೋಪಾಲ್; ಮತ್ತು ಜಾರ್ಖಂಡ್‌ನ ಜಮ್ಶೆದ್ಪುರ್‌ 3-ಸ್ಟಾರ್ ರೇಟಿಂಗ್‌ ಪಡೆದುಕೊಂಡಿವೆ.


ದೆಹಲಿ ಕಂಟೋನ್ಮೆಂಟ್, ರೋಹ್ಟಕ್ (ಹರಿಯಾಣ); ಗ್ವಾಲಿಯರ್, ಮಹೇಶ್ವರ್‌, ಖಾಂಡ್ವಾ, ಬದ್ನವಾರ್ ಮತ್ತು ಹಾಥೋಡ್ (ಮಧ್ಯ ಪ್ರದೇಶದ 5 ನಗರಗಳು); ಮತ್ತು ಗುಜರಾತ್‌ನ ವಡೋದರಾ, ಭಾವನಗರ ಮತ್ತು ವ್ಯಾರಾ ನಗರಗಳಿಗೆ 1-ಸ್ಟಾರ್‌ ರೇಟಿಂಗ್‌ ಲಭಿಸಿದೆ.


ಕೋವಿಡ್-19‌ ಬಿಕ್ಕಟ್ಟಿನಿಂದ ಘನ ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆ ಈಗ ಅರಿವಾಗಿದೆ ಎಂದರು ಪುರಿ.


ಸ್ಟಾರ್‌ ರೇಟಿಂಗ್ ಸಮೀಕ್ಷೆಗೆ 1,435 ನಗರಗಳು ಅರ್ಜಿ ಸಲ್ಲಿಸಿದ್ದವು ಎಂದು ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ತಿಳಿಸಿದ್ದಾರೆ.


ಸಮೀಕ್ಷೆಗಾಗಿ 1.19 ಕೋಟಿ ನಾಗರೀಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಮತ್ತು 10 ಲಕ್ಷಕ್ಕೂ ಹೆಚ್ಚಿನ ಚಿತ್ರಗಳನ್ನು ಪರಾಮರ್ಶಿಸಿದ್ದಾರೆ. ಅಲ್ಲದೆ 1,210 ಕ್ಷೇತ್ರ ಮೌಲ್ಯಮಾಪಕರು 5,175 ಘನ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಬೇಟಿ ನೀಡಿದ್ದಾರೆ.


ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸರ್ಕಾರ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಿದ್ದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.

“ಕೋವಿಡ್‌-19 ಪರಿಸ್ಥಿತಿಯನ್ನು ಎದುರಿಸಲು ಇದು (ಸ್ವಚ್ಛ ಭಾರತ ಅಭಿಯಾನ) ತುಂಬಾ ಸಹಕಾರಿಯಾಗಿದೆ,” ಎಂದರು ಪುರಿ.