ಕೊರೊನಾವೈರಸ್: 50 ನಿಮಿಷಗಳಲ್ಲಿ ಕೋವಿಡ್-19 ಪತ್ತೆ ಹಚ್ಚಿ ಫಲಿತಾಂಶಗಳನ್ನು ನೀಡುವ ಹೊಸ ಪೋರ್ಟಬಲ್ ಪರೀಕ್ಷಾ ಸಾಧನ

ಯುಕೆ ವಿಶ್ವವಿದ್ಯಾನಿಲಯದ ಸಂಶೋಧಕರು ಸುಲಭವಾಗಿ ಸಾಗಿಸಬಹುದಾದ ಸ್ಮಾರ್ಟ್‌ಫೋನ್ ಆಧಾರಿತ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು ಗಂಟಲಿನ ಸ್ವ್ಯಾಬ್ನಿಂದ (ಪರೀಕ್ಷೆ) ಅನುವಂಶಿಕ ವಸ್ತುಗಳನ್ನು ಅನುಕ್ರಮಗೊಳಿಸುವ ಮೂಲಕ ಕೇವಲ 50 ನಿಮಿಷಗಳಲ್ಲಿ ಕೊರೊನಾವೈರಸ್ ಇರುವಿಕೆಯನ್ನು ಪತ್ತೆ ಮಾಡುತ್ತದೆ.

ಕೊರೊನಾವೈರಸ್: 50 ನಿಮಿಷಗಳಲ್ಲಿ ಕೋವಿಡ್-19 ಪತ್ತೆ ಹಚ್ಚಿ ಫಲಿತಾಂಶಗಳನ್ನು ನೀಡುವ ಹೊಸ ಪೋರ್ಟಬಲ್ ಪರೀಕ್ಷಾ ಸಾಧನ

Saturday March 28, 2020,

2 min Read

ಯುಕೆ ಸಂಶೋಧಕರು ವಿನ್ಯಾಸಗೊಳಿಸಿರುವ ಸ್ಮಾರ್ಟ್‌ಫೋನ್ ಆಧಾರಿತ ಸುಲಭವಾಗಿ ಸಾಗಿಸಬಹುದಾದ ಕೊರೊನಾವೈರಸ್ ಪರೀಕ್ಷಾ ಸಾಧನ, ಗಂಟಲಿನ ಸ್ವಾಬ್ ಪರೀಕ್ಷೆ ನಂತರ ಕೇವಲ 50 ನಿಮಿಷಗಳಲ್ಲಿ ಕೋವಿಡ್-19 ಫಲಿತಾಂಶಗಳನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.


ಬಹುತೇಕ ಪ್ರಸ್ತುತ ಪರೀಕ್ಷೆಗಳ ಫಲಿತಾಂಶಗಳನ್ನು ಒದಗಿಸಲು 24-48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಏಕೆಂದರೆ ಅವುಗಳನ್ನು ಲ್ಯಾಬ್‌ಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಯುಕೆ ಯ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಗಮನಿಸಿದ್ದಾರೆ ಇದಲ್ಲದೆ ಎರಡೇ ವಾರಗಳಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಯ ಸಿಬ್ಬಂದಿ ವರ್ಗವನ್ನು ಪರೀಕ್ಷಿಸಲು ಪರೀಕ್ಷೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.




ಹೊಸ ಅಣುಗಳ ಪರೀಕ್ಷೆಯನ್ನು ಒಂದೇ ಸಮಯದಲ್ಲಿ 16 ಮಾದರಿಗಳನ್ನು ಪ್ರಕ್ರಿಯೆಗೊಳಿಸಲು ಬಳಸಬಹುದು - ಅಥವಾ ಲ್ಯಾಬ್ ಆಧಾರಿತ ಪತ್ತೆ ಯಂತ್ರವನ್ನು ಬಳಸಿದ್ದಲ್ಲಿ 384 ಮಾದರಿಗಳವರೆಗೆ ಪ್ರಕ್ರಿಯೆಗೊಳಿಸಬಹುದೆಂದು ಹೇಳಿದ್ದಾರೆ.


“ಈ ಪರೀಕ್ಷಾ ಸಾಧನದ ಉದ್ದೇಶವು ಸ್ವಯಂ-ಪ್ರತ್ಯೇಕವಾಗಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಸಾಧ್ಯವಾದಷ್ಟು ಬೇಗ ಕೆಲಸಕ್ಕೆ ಮರಳಲು ಸಹಾಯಮಾಡುವುದಾಗಿದೆ ಮತ್ತು ಕೆಲಸದಲ್ಲಿರುವವರು ವೈರಸ್ ಹರಡದಿರುವಂತೆ ಇದು ಖಚಿತಪಡಿಸುತ್ತದೆ ಎಂದು ಯುಇಎ ಸಂಶೋಧಕರು ಹೇಳಿದ್ದಾರೆ.


"ಈ ಕಲ್ಪನೆಯ ಹಿಂದಿರುವ ಯೋಚನೆಯೆಂದರೆ, ನಾವು ಎನ್‌ಎಚ್‌ಎಸ್ ಸಿಬ್ಬಂದಿಯನ್ನು ಹೆಚ್ಚು ಬೇಗನೆ ಪರೀಕ್ಷಿಸಬೇಕಾಗಿದೆ, ಏಕೆಂದರೆ ಅವರು ಆರೋಗ್ಯವಾಗಿದ್ದರೆ ಕೆಲಸದಲ್ಲಿ ಉಳಿಯಬಹುದು, ಇಲ್ಲವೇ ತುಂಬಾ ದುರ್ಬಲರಾಗಿ ರೋಗಿಗಳಾಗುವ ಅಪಾಯವಿದ್ದಲ್ಲಿ ಮನೆಗೆ ಹೋಗಬಹುದು," ಎಂದು ಈ ತಿಂಗಳ ಆರಂಭದಲ್ಲಿ ಸಾಧನದ ಕೆಲಸ ಪ್ರಾರಂಭಿಸಿದ ಯುಇಈ ಯ ನಾರ್ವಿಚ್ ಮೆಡಿಕಲ್ ಶಾಲೆಯ ಪ್ರಮುಖ ಸಂಶೋಧಕ ಜಸ್ಟಿನ್ ಒ'ಗ್ರಾಡಿ ಹೇಳಿದರು.


"ನಾವು ಈ ರೋಗವನ್ನು ಶೀಘ್ರವಾಗಿ ಮುಕ್ತಿಗೊಳಿಸಲು ಬಯಸುತ್ತೇವೆ, ಮತ್ತು ಇದನ್ನು ಎರಡು ವಾರಗಳಲ್ಲಿ ರಾಷ್ಟ್ರದಲ್ಲಿರುವ ಎಲ್ಲ ಆಸ್ಪತ್ರೆಗಳಿಗೆ ತಲುಪಿಸಬಹುದೆಂದು ಭಾವಿಸುತ್ತೇವೆ," ಎಂದು ಒ'ಗ್ರಾಡಿ ಹೇಳಿದರು.


ಕೋವಿಡ್-19 ಇರುವಿಕೆಯನ್ನು ಕಂಡುಹಿಡಿಯಲು ಪರೀಕ್ಷಾ ಕಿಟ್ ತ್ವರಿತ ಮೂರು ನಿಮಿಷಗಳ ಆರ್ ಎನ್ ಎ ಹೊರತೆಗೆಯುವಿಕೆಯನ್ನು ಗಂಟಲಿನ ಸ್ವ್ಯಾಬ್ ಮಾದರಿಯಿಂದ ಬಳಸಿಕೊಂಡು ಅನುವಂಶಿಕ ಭೌತಿಕ ವಸ್ತುಗಳನ್ನು (ಆರ್ ಎನ್ ಎ) ಅನುಕ್ರಮಗೊಳಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.


"ಈ ಸಾಧನವು ಬಳಸಲು ಸರಳವಾಗಿದ್ದು, ಇದನ್ನು ಅರೆ-ನುರಿತ ಆರೋಗ್ಯ ವೃತ್ತಿಪರರು ಬಳಸಬಹುದು," ಎಂದು ಒ'ಗ್ರಾಡಿ ಹೇಳಿದ್ದಾರೆ.

"ಇದು ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಹೆಚ್ಚುವರಿ ಸಾಮರ್ಥ್ಯವನ್ನು ಒದಗಿಸಬಹುದೆಂದು ನಾವು ಭಾವಿಸುತ್ತೇವೆ ಏಕೆಂದರೆ ಖಂಡಿತವಾಗಿಯೂ ಕೋವಿಡ್-19 ಯಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಮಾತ್ರ ಸ್ವಯಂ-ಪ್ರತ್ಯೇಕಗೊಳ್ಳುವ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ನಂತರ ಸೋಂಕು ಇಲ್ಲವೆಂದು ಖಾತ್ರಿಯಾದರೆ ವೈದ್ಯರು ಸಾಧ್ಯವಾದಷ್ಟು ಬೇಗ ಕೆಲಸಕ್ಕೆ ಮರಳಲು ಇದು ಸಹಾಯ ಮಾಡುತ್ತದೆ," ಎಂದು ಒ'ಗ್ರಾಡಿ ಹೇಳಿದರು.